Rahu Ketu Gochara: ಮುಂದಿನ 18 ತಿಂಗಳು ಈ ರಾಶಿಯವರಿಗೆ ಧನಯೋಗ: ಕೈ ಹಿಡಿಯುತ್ತೆ ಅದೃಷ್ಟ

Rahu Ketu Gochara: ಡಿಸೆಂಬರ್ 2026ರಲ್ಲಿ ಅಂದರೆ ಒಂದೂವರೆ ವರ್ಷದ ನಂತರ ರಾಹು ಮತ್ತು ಕೇತು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ಎರಡೂ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಹದಿನೆಂಟು ತಿಂಗಳು ಅಂದರೆ ಒಂದೂವರೆ ವರ್ಷ ತೆಗೆದುಕೊಳ್ಳುತ್ತವೆ. ಹಾಗಾಗಿ ಇವರ ಸಂಚಾರ ಪ್ರಭಾವ ಕೂಡಾ ಒಂದೂವರೆ ವರ್ಷಗಳವರೆಗೆ ಇರುವುದು. ಈ ಗ್ರಹಗಳ ಸಂಚಾರವು ಎಲ್ಲಾ 12 ರಾಶಿಯವರ ಜೀವನದಲ್ಲಿ ಕಾಣಿಸುವುದು. ಆರ್ಥಿಕ, ವೃತ್ತಿ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಸಂಬಂಧಗಳು ಮತ್ತು ಚಿಂತನೆ ಸೇರಿದಂತೆ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಲಾವಣೆಗಳಾಗುವುದು.

ಹಿಮ್ಮುಖವಾಗಿಯೇ ಚಲಿಸುವ ಗ್ರಹಗಳು

ಡಿಸೆಂಬರ್ 5, 2026ಕ್ಕೆ ರಾಹು ಮತ್ತು ಕೇತು ತಮ್ಮ ರಾಶಿಯನ್ನು ಬದಲಾಯಿಸುತ್ತಾರೆ. ರಾಹು ಕುಂಭ ರಾಶಿಯಿಂದ ಮಕರ ರಾಶಿಗೆ ಮತ್ತು ಕೇತು ಸಿಂಹ ರಾಶಿಯಿಂದ ಕರ್ಕ ರಾಶಿಗೆ ಪ್ರವೇಶ ಮಾಡುತ್ತಾರೆ. ಈ ಎರಡೂ ಗ್ರಹಗಳೂ ಯಾವತ್ತೂ ವಿರುದ್ದ ದಿಕ್ಕಿನಲ್ಲಿ ಅಂದರೆ ಹಿಮ್ಮುಖವಾಗಿಯೇ ಚಲಿಸುವುದು. ಈ ಎರಡು ಗ್ರಹಗಳು ಮುಂದಿನ 18 ತಿಂಗಳುಗಳ ಕಾಲ, ಅಂದರೆ ಜೂನ್ 24, 2028 ರವರೆಗೆ ಮಕರ ಮತ್ತು ಕರ್ಕಾಟಕ ರಾಶಿಯಲ್ಲಿಯೇ ಇರುವುದು.

Rahu Ketu Gochara

ಡಿಸೆಂಬರ್ ನಿಂದ ರಾಹು ಬೆಳಗುವನು 3 ರಾಶಿಯವರ ಅದೃಷ್ಟ

ಮೇಷ ರಾಶಿ (Aries): ಮೇಷ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದೆ. ಆದರೆ ರಾಹುವಿನ ಸಂಚಾರವು ಕೆಲವು ಹೊಸ ಮತ್ತು ಭರವಸೆಯ ವೃತ್ತಿ ಅವಕಾಶಗಳನ್ನು ತರಬಹುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಇತರ ಆಸ್ತಿ ವ್ಯವಹಾರಗಳು ಕೂಡಾ ಪ್ರಯೋಜನ ತರುವುದು. ಸಾಲದಿಂದ ಪರಿಹಾರ ಸಿಗುವುದು. ಹಣಕಾಸಿನ ಕೊರತೆ ಕಾಡುವುದಿಲ್ಲ.

ಕನ್ಯಾ ರಾಶಿ (Virgo): ಕನ್ಯಾ ರಾಶಿಯವರ ಜೀವನದಲ್ಲಿನ ಸಮಸ್ಯೆಗಳು ಕಡಿಮೆಯಾಗುವುದು. ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ. ಆರೋಗ್ಯವು ಉತ್ತಮವಾಗಿರುವುದು. ಚರ್ಮದ ಸಮಸ್ಯೆಗಳು ಬಗೆಹರಿಯಬಹುದು.

ಧನು ರಾಶಿ (Sagittarius): ರಾಹು ಸಂಚಾರವು ಧನು ರಾಶಿಯವರಿಗೆ ಗಮನಾರ್ಹ ವ್ಯಾಪಾರ ಲಾಭಗಳನ್ನು ತರಬಹುದು. ಹೊಸ ಉದ್ಯಮ ಅಥವಾ ಅಥವಾ ಕೆಲಸ ಆರಂಭಿಸಲು ಬಯಸುವವರು ಈ ಸಮಯದಲ್ಲಿ ಪ್ರಯತ್ನ ಮಾಡಿದರೆ ಹಣಕಾಸು ಲಾಭವಾಗುವುದು. ಇತರ ಅಗತ್ಯ ಸಂಪನ್ಮೂಲಗಳು ಕೂಡಾ ಒಲಿಯುವುದು. ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವುದು.

ಈ 3 ರಾಶಿಯವರ ಮೇಲಿರುವುದು ಕೇತುವಿನ ಆಶೀರ್ವಾದ

ವೃಷಭ ರಾಶಿ (Taurus): ಕೇತು ವೃಷಭ ರಾಶಿಯವರಿಗೆ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಿದ್ದಾನೆ. ನೀವು ಕಾಯುತ್ತಿದ್ದ ವೃತ್ತಿಜೀವನದ ಯಶಸ್ಸು ಈ ಅವಧಿಯಲ್ಲಿ ಸಿಗುವುದು. ನಿಮ್ಮ ಹಿಂದಿನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಈಗ ಸಿಗುವುದು. ನಿಮ್ಮ ಆದಾಯವೂ ಹೆಚ್ಚಾಗುವುದು. ಹೊಸ ಮೂಲಗಳಿಂದ ಹಣ ಹರಿದು ಬರುವುದು. ಅದೃಷ್ಟ ಕೈ ಹಿಡಿಯುವುದು.

ಮಿಥುನ ರಾಶಿ (Gemini): ಮಿಥುನ ರಾಶಿಯವರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕೆಲವರಿಗೆ ಹೊಸ ಕೆಲಸ ಸಿಗಬಹುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಕೆಲಸದ ಹೊರೆ ಸ್ವಲ್ಪ ಕಡಿಮೆಯಾಗಬಹುದು.

ತುಲಾ ರಾಶಿ (Libra): ಡಿಸೆಂಬರ್ ತಿಂಗಳಿನಿಂದ ತುಲಾ ರಾಶಿಯವರಿಗೆ ಸಿಗುವುದು ಅದೃಷ್ಟದ ಸಾಥ್.‌ ಭವಿಷ್ಯದಲ್ಲಿ ಪ್ರಯೋಜನಗಳನ್ನು ನೀಡುವ ಮಹತ್ವದ ಹೂಡಿಕೆಯನ್ನು ಮಾಡಬಹುದು. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+