Planetary Transit: ದೀಪಾವಳಿಗೂ ಮುನ್ನ ಈ ರಾಶಿಯವರಗೆ ಕೋಟ್ಯಾಧಿಪತಿ ಯೋಗ; ಬಡತನದಿಂದ ಮುಕ್ತಿ, ಸುಖ ಸಮೃದ್ದಿಯ ಕಾಲ
ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ವಿಶೇಷವಾಗಿ ಮಹತ್ವದ್ದಾಗಿದೆ. ಈ ಎರಡು ತಿಂಗಳಿನಲ್ಲಿ ಆಗುವ ಗ್ರಹ ಸಂಚಾರ 12 ರಾಶಿಯವರ ಮೇಲೆ ಪರಿಣಾಮ ಬೀರುವುದು. ಈ ವರ್ಷ ನವೆಂಬರ್ 8ಕ್ಕೆ ದೀಪಾವಳಿ ಆಚರಿಸಲಾಗುವುದು. ಅದಕ್ಕೂ ಮುನ್ನ ದೀಪಾವಳಿಗೂ ಮುನ್ನ ಬರುವ ಈ ದಿನಗಳು ಕೆಲವು ರಾಶಿಯವರ ವೃತ್ತಿ ಜೀವನ, ವ್ಯವಹಾರದಲ್ಲಿ ದೊಡ್ಡ ಯಶಸ್ಸಿಗೆ ಕಾರಣವಾಗಬಹುದು. ಆದಾಯ ಹೆಚ್ಚಾಗುವುದರ ಮೂಲಕ ಆರ್ಥಿಕ ಸ್ಥಿತಿ ಸುಧಾರಿಸಬಹುದು.
ದೀಪಾವಳಿಗೂ ಮುನ್ನ ಅದೃಷ್ಟ ಪಡೆಯುವ ರಾಶಿಗಳು:
ವೃಷಭ ರಾಶಿ (Taurus) :
ವೃಷಭ ರಾಶಿಯವರಿಗೆ ಮುಂದಿನ ದಿನಗಳು ಹೊಸ ಭರವಸೆಯನ್ನು ಹೊತ್ತು ತರುವುದು. ಕಚೇರಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಈ ಹೊಸ ಜವಾಬ್ದಾರಿ ಭವಿಷ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಕಾರಣವಾಗುವುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರ ನಿರೀಕ್ಷೆ ಕೊನೆಯಾಗುವುದು. ನಿಮ್ಮ ಮನಸ್ಸಿನ ಆಸೆಯಂತೆ ಕೆಲಸ ಸಿಗುವುದು. ವ್ಯವಹಾರದಲ್ಲಿರುವವರಿಗೆ ವ್ಯವಹಾರ ವಿಸ್ತರಣೆಗೆ ಹೊಸ ಅವಕಾಶ ಸಿಗುವುದು. ಹೊಸ ಪ್ರಾಜೆಕ್ಟ್‌ಗಳು ಕೈ ಸೇರುವುದು. ಆದಾಯ ಹೆಚ್ಚಾಗುವ ಅವಕಾಶಗಳು ಹೆಚ್ಚಿದೆ. ಹಾಗಂತ ಬೇಕಾ ಬಿಟ್ಟಿ ಖರ್ಚು ಮಾಡದೆ ಹುಷಾರಾಗಿರುವುದು ಒಳ್ಳೆಯದು. ಉಳಿತಾಯ ಮಾಡುವುದಕ್ಕೆ ಇದು ಸರಿಯಾದ ಸಮಯ. ದೀಪಾವಳಿಯ ಹೊತ್ತಿದೆ ಆರ್ಥಿಕವಾಗಿ ಹೆಚ್ಚು ಸದೃಢರಾಗಿರುವಿರಿ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಒಲಿಯುವುದು ಸಿರಿವಂತಿಕೆ ಭಾಗ್ಯ.

ಮಿಥುನ ರಾಶಿ (Gemini) :
ವೃತ್ತಿಜೀವನದ ದೃಷ್ಟಿಯಿಂದ ನೋಡುವುದಾದರೆ ಮಿಥುನ ರಾಶಿಯವರಿಗೆ ಈ ಅವಧಿ ತುಂಬಾ ಪ್ರಯೋಜನಕಾರಿಯಾಗಿರುವುದು. ಕಚೇರಿಯಲ್ಲಿ ನಿಮ್ಮ ಪ್ರತಿಭೆಗೆ ಕೆಲಸಕ್ಕೆ ಬೆಲೆ ಸಿಗುವುದು. ಮೇಲಧಿಕಾರಿಗಳು ಮತ್ತು ಹಿರಿಯರಿಂದ ನೀವು ಮಾಡುವ ಕೆಲಸಕ್ಕೆ ಬೆಂಬಲ ಸಿಗುವುದು. ಹೊಸ ಜನರನ್ನು ಭೇಟಿ ಮಾಡುವ ಅವಕಾಶವಿದೆ. ಈ ಭೇಟಿ ಭವಿಷ್ಯದಲ್ಲಿ ಲಾಭ ಪಡೆಯುವುದಕ್ಕೆ ದಾರಿಯಾಗುವುದು. ಉದ್ಯಮಿಗಳಿಗೆ ಹೊಸ ಅವಕಾಶಗಳ ಮೂಲಕ ಹೊಸ ಆದಾಯದ ಮೂಲಗಳು ಕೂಡಾ ಹುಟ್ಟಿಕೊಳ್ಳುವುದು. ಆತುರದ ನಿರ್ಧಾರಕ್ಕೆ ಕೈ ಹಾಕಬೇಡಿ. ಸಿಕ್ಕಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.
ಸಿಂಹ ರಾಶಿ (Leo) :
ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಅಕ್ಟೋಬರ್‌ನಲ್ಲಿ ಸಿಂಹ ರಾಶಿಯವರ ಜೀವನದಲ್ಲಿ ಬಹಳ ಮುಖ್ಯ ಬದಲಾವಣೆಯಾಗುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಹೊಸ ಜವಾಬ್ದಾರಿಗಳು ಹೆಗಲೇರುವುದು. ಆರಂಭದಲ್ಲಿ ಒತ್ತಡ ಉಂಟಾದರೂ ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಏರಲು ಸಹಾಯವಾಗುವುದು. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಸಿಗುವುದು. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ನಿಮಗೆ ತುಂಬಾ ಅವಕಾಶಗಳು ಸಿಗುವುದು. ಈ ಅವಕಾಶಗಳು ಸಾಧನೆಯಾಗಿ ಬದಲಾಗಬೇಕಾದರೆ ಕಠಿಣ ಪರಿಶ್ರಮ ಹಾಕಲೇಬೇಕು. ಸರಿಯಾದ ಯೋಜನೆ ಮೂಲಕ ಹೆಜ್ಜೆ ಇಡಲೇ ಬೇಕು.
ತುಲಾ ರಾಶಿ (Libra):
ಶುಕ್ರನ ಅನುಕೂಲಕರ ಸ್ಥಾನ ಮತ್ತು ಪ್ರಭಾವದಿಂದಾಗಿ ಉತ್ತಮ ಅವಕಾಶಗಳು ಸಿಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ವ್ಯವಹಾರದಲ್ಲಿ ಲಾಭವಾಗುವುದು. ತುಂಬಾ ಸಮಯದಿಂದ ಹೊರಗೆ ಉಳಿದಿರುವ ಹಣ ಟೈಮ್‌ನಲ್ಲಿ ಕೈ ಸೇರುವುದು. ಸಾಲದಿಂದ ಮುಕ್ತಿ ಸಿಗುವುದು. ಮನೆ ಖರೀದಿ ಕನಸು ನನಸಾಗುವುದು. ಆಸ್ತಿಯ ಮೇಲೆಯೂ ಹೂಡಿಕೆ ಮಾಡಬಹುದು. ಹೊಸ ಕೆಲಸ ಸಿಗುವುದು. ಹೊಸ ಉದ್ಯಮ ಶುರು ಮಾಡುವುದಕ್ಕೂ ಸಮಯ ಸೂಕ್ತವಾಗಿದೆ.
ಧನು ರಾಶಿ (Sagittarius) :
ಧನು ರಾಶಿಯವರ ಮನಸ್ಸಿನ ಆಸೆ ದೀಪಾವಳಿಗೂ ಮುನ್ನವೇ ನೆರವೇರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಿವ ಮೂಲಕ ಪ್ರಗತಿಯಾಗುವುದು. ಉದ್ಯಮಿಗಳು ಲಾಭ ಗಳಿಸಬಹುದು.ವಿದೇಶ ಪ್ರಯಾಣದ ಯೋಗವಿದೆ. ಆದಾಯ ಹೆಚ್ಚಾಗುವುದು. ಜೊತೆಗೆ ಖರ್ಚುಗಳ ಮೇಲೂ ನಿಗಾ ಇರಲಿ.
ಗ್ರಹ ಸಂಚಾರಗಳ ಪ್ರಭಾವದ ಕಾರಣದಿಂದ ಈ ಐದು ರಾಶಿಯವರಿಗೆ ಸಮಯ ಅನುಕೂಲಕರವಾಗಿರಬಹುದು ಎನ್ನುವುದು ಜ್ಯೋತಿಷ್ಯ ನಂಬಿಕೆ ಮತ್ತು ಲೆಕ್ಕಾಚಾರ. ಆದರೂ, ಹಣಕಾಸಿನ ನಿರ್ಧಾರಗಳಲ್ಲಿ ನಿಮ್ಮ ಪರಿಸ್ಥಿತಿ, ಸಂದರ್ಭ, ಯೋಜನೆ ಮತ್ತು ಸಲಹೆಯನ್ನು ಗಣನೆಗೆ ತೆಗೆದುಕೊಂಡು ಹೆಜ್ಜೆ ಇರುವುದು ಸೂಕ್ತ.


Click it and Unblock the Notifications
