ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ugadi Horoscope 2023: ಮೀನ ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಶುಭವೋ? ಅಶುಭವೋ?

ಮೀನ ರಾಶಿಯ ಯುಗಾದಿ ಜಾತಕ 2023: ಮೀನ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

|
Google Oneindia Kannada News

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಮೀನ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ಮೀನ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.

ಇಷ್ಟು ದಿನ ನಿಮ್ಮ ಲಾಭ ಸ್ಥಾನದಲ್ಲಿ ಶನಿ ಇದ್ದನು. ಜನವರಿಗೆ ಶನಿ ಮೀನ ರಾಶಿಯವರ ಹನ್ನೆರಡನೆ ಮನೆಗೆ ಪ್ರವೇಶ ಮಾಡಿ ಆಗಿದೆ. ಸಾಡೇಸಾತ್‌ನ ಮೊದಲ ಹಂತದಲ್ಲಿ ಮೀನರಾಶಿಯವರು ಇದ್ದಾರೆ. ನಿಮಗೆ ಸಾಡೇಸಾತ್ ಪ್ರಾರಂಭವಾಗಿದೆ. ಆದರೆ ಮೀನ ರಾಶಿಯವರನು ಗುರು ಗ್ರಹ ಕಾಪಾಡಲಿದೆ.

Ugadi Horoscope 2023: ಕುಂಭ ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಶುಭವೋ? ಅಶುಭವೋ?Ugadi Horoscope 2023: ಕುಂಭ ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಶುಭವೋ? ಅಶುಭವೋ?

ಎರಡನೇ ಮನೆಗೆ ಹೋಗುವಂತ ಗುರು ನಿಮ್ಮ ಮುಂದೆ ಇರುತ್ತಾನೆ. ನಿಮ್ಮ ಹಿಂದೆ ಶನಿ ಇರುತ್ತಾನೆ. ಮುಂದೆ ಗುರು ಮೀನ ರಾಶಿಯವರನ್ನು ಕೈ ಹಿಡಿದು ನಡೆಸುತ್ತಾನೆ. ದಾರಿ ಗೊತ್ತಿಲ್ಲದ ಸಂದರ್ಭದಲ್ಲಿ ದಾರಿಯನ್ನು ತೋರಿಸುತ್ತಾನೆ. ಶನಿ ಸಾಡೇಸಾತ್ ಶುರುವಾಗಿರುವುದರಿಂದ ನಿಮ್ಮ ಕೆಲಸದಲ್ಲಿ ನಿಧಾನವಾಗುತ್ತದೆ. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗದೇ, ಕೊಟ್ಟ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ತುಂಬಾ ಕೆಲಸದ ಒತ್ತಾಡ ಇರುತ್ತದೆ ಎನ್ನುವಂತ ಸ್ಥಿತಿಗೆ ಮೀನ ರಾಶಿಯವರು ತಲುಪುತ್ತೀರಿ. ಉದ್ಯೋಗ ವಿಚಾರದಲ್ಲಿ ಏನಾದರು ಒಂದು ಭಾದೆ ನಿಮ್ಮನ್ನು ಕಾಡಲಿದೆ.

ಮೀನ: ಆರ್ಥಿಕ ಜೀವನ

ಮೀನ: ಆರ್ಥಿಕ ಜೀವನ

ಈ ವರ್ಷದಲ್ಲಿ ಹಣಕಾಸಿನ ಸಮಸ್ಯೆಗಳು ಆಗುವುದಿಲ್ಲ. ಆದರೆ ಈ ವರ್ಷ ಹಣಕಾಸಿನ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ವರ್ಷ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಯಾರಿಗಾದರೂ ಹಣ ಕೊಟ್ಟರೆ ಅದು ವಾಪಸ್ಸು ಬರುವುದಿಲ್ಲ. ಕೆಲಸದಲ್ಲೂ ಪರಿಶ್ರಮ ಮಾತ್ರ ಇರುತ್ತದೆ. ಅದಕ್ಕೆ ತಕ್ಕಂತೆ ಲಾಭವಾಗುವುದಿಲ್ಲ.

ಆದರೆ ಮೀನ ರಾಶಿಯವರಿಗೆ ಗುರು ಗ್ರಹ ಕೆಲಸದಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಎಲ್ಲರೂ ಮೀನ ರಾಶಿಗೆ ಸಾಡೇಸಾತ್ ಶುರುವಾಯ್ತು ಎಂದು ಆತಂಕವನ್ನು ಪಡುತ್ತಿದ್ದೀರಾ. ಆದರೆ ಮೀನ ರಾಶಿಗೆ ಧನ ಸ್ಥಾನಕ್ಕೆ ಗುರು ಬಂದಿರುವುದರಿಂದ ತುಂಬಾನೇ ಶುಭದಾಯಕ ಸಂದರ್ಭವಾಗಿದೆ. ಗುರು ಎರಡನೇ ಮನೆಯಲ್ಲಿ ಇರುವುದರಿಂದ ಇಷ್ಟು ದಿನ ಯಾರೆಲ್ಲಾ ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೋ, ಯಾರೆಲ್ಲಾ ಸಾಲದಭಾದೆಯಿಂದ ಬಳಲುತ್ತಿದ್ದಿರೋ ಅಂತವರಿಗೆಲ್ಲ ಗುರು ಒಳ್ಳೆಯದನ್ನೇ ಮಾಡುತ್ತಾನೆ. ಅಂದರೆ ಹಣಕಾಸಿ ವಿಚಾರದಲ್ಲಿ ತುಂಬಾ ಅಭಿವೃದ್ಧಿ ಆಗುತ್ತದೆ ಎಂದಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.

ಮೀನ: ವೃತ್ತಿ ಜೀವನ

ಮೀನ: ವೃತ್ತಿ ಜೀವನ

ಈ ವರ್ಷ ಯುಗಾದಿ ನಂತರ ಮೀನ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಆದರೆ ಕೆಲಸ ಬದಲಾಯಿಸಲು ಮುಂದಾಗಬೇಡಿ. ಇರುವ ಕೆಲಸದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಿ. ತುಂಬಾ ಕೆಲಸದ ಒತ್ತಡ ನಿಮಗಿರುತ್ತದೆ. ಆದರೆ ನೀವು ಮಾಡೋ ಕೆಲಸದಲ್ಲಿ ಬರುವ ಆದಾಯದಲ್ಲಿ ಮಾತ್ರ ಬದಲಾವಣೆ ಆಗುವುದಿಲ್ಲ. ಕೆಲಸದಲ್ಲಿ ಒತ್ತಡ ಮಾತ್ರ ಹೆಚ್ಚಾಗುತ್ತದೆ.

ನಿಮ್ಮ ಭಾಗ್ಯ ಸ್ಥಾನಕ್ಕೆ ಶನಿ ದೃಷ್ಟಿ ಇರುವುದರಿಂದ ಅದೃಷ್ಟವೂ ಕೆಲಸ ಮಾಡುವುದಿಲ್ಲ. ಸ್ವಂತ ಉದ್ಯೋಗ ಮಾಡುವಂತವರಿಗೆ ಶ್ರಮಕ್ಕೆ ಸಮನಾಗಿ ಫಲ ಇರುತ್ತದೆ. ಅಂದರೆ ಉಳಿತಾಯ ಮಾಡುವಷ್ಟು ಲಾಭವನ್ನು ನೀವು ಪಡೆಯುವುದಿಲ್ಲ. ಗುರುವಿನ ಅನುಗ್ರಹದಿಂದ ನಿಮಗೆ ಈ ಮಟ್ಟಿನ ಶ್ರಮದ ಫಲ ಸಿಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಸಮಯ ಇದಾಗಿರುತ್ತದೆ.

ಮೀನ: ಕೌಟುಂಬಿಕ ಜೀವನ

ಮೀನ: ಕೌಟುಂಬಿಕ ಜೀವನ

ಮೀನ ರಾಶಿಯವರಿಗೆ ಈ ಹಿಂದೆ ಕುಟುಂಬದಲ್ಲಿ ಇದ್ದ ಸಾಕಷ್ಟು ತೊಂದರೆಗಳು, ಮನಸ್ತಾಪಗಳು, ಕಲಹಗಳು, ತಪ್ಪಾಗಿ ತಿಳಿದುಕೊಳ್ಳುವುದು ಈತರಹದ ಸಮಸ್ಯೆಗಳು ಇತ್ತು. ಆದರೆ ಗುರು ಯಾವಾಗ ಮೇಷ ರಾಶಿಗೆ ಹೋಗುತ್ತಾನೋ ಆಗ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡುತ್ತಾನೆ. ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತಾನೆ.

ಹತ್ತನೆ ಮನೆಯಲ್ಲಿ ಗುರು ದೃಷ್ಟಿ ಇರುವುದರಿಂದ ಕೆಲಸದಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ನಿವಾರಣೆ ಮಾಡುವ ಶಕ್ತಿಯನ್ನು ಗುರು ದಯಪಾಲಿಸುತ್ತಾನೆ. ಭಗವಂತನನ್ನು ತೋರಿಸುವವನೇ ಗುರು. ಹೀಗಾಗಿ ಗುರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ. ನಿಮ್ಮ ಮಾನ ಅಭಿಮಾನಕ್ಕೆ ಕೊರತೆಯಾಗದಂತೆ ಗುರು ಕಾಪಾಡುತ್ತಾನೆ. ಆದರೆ ನವೆಂಬರ್ ವರೆಗೂ ಯಾವ ಸಮಸ್ಯೆಗಳು ಇದ್ದೇ ಇರುತ್ತದೆ.

ಮೀನ: ಶೈಕ್ಷಣಿಕ ಜೀವನ

ಮೀನ: ಶೈಕ್ಷಣಿಕ ಜೀವನ

ನಿಮ್ಮ ಎರಡನೇ ಮನೆಯಲ್ಲಿ ಗುರು ಕುಳಿತಿದೆ. ನಿಮ್ಮ ಪಂಚಮ ಸ್ಥಾನಕ್ಕೆ ಗುರು ದೃಷ್ಟಿ ಇದೆ. ಹೀಗಾಗಿ ಈ ವರ್ಷ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗಳಿಲ್ಲ. ಬರವಣಿಗೆ, ಕಲಿಕೆಗೆ ಗುರು ಸಹಕಾರ ನೀಡುತ್ತಾನೆ. ಗುರು ಚಾಂಡಾಲಯೋಗ ಇರುವುದರಿಂದ ಅಕ್ಟೋಬರ್ ಕಳೆಯುವವರೆಗೂ ಸ್ಪಲ್ಪ ಹಣಕಾಸಿನ ವಿಚಾರದಲ್ಲಿ ತೊಂದರೆಗಳಿರಬಹುದು. ಅಕ್ಟೋಬರ್ ನಂತರ ತುಂಬಾ ಅಭಿವೃದ್ಧಿ ಕಾಣುತ್ತೀರಿ. ಮುಂದಿನ ಆರು ತಿಂಗಳವರೆಗೂ ಕೊಂಚ ಸಮಸ್ಯೆಗಳು ಇರುತ್ತವೆ. ನಂತರ ಶುಭವಾಗಲಿದೆ.

ಮಾತಿನ ವಿಚಾರದಲ್ಲಿ ಜಾಗರೂಕರಾಗಿರಿ. ಯಾವುದೇ ಕಾರಣಕ್ಕೂ ಹೆಚ್ಚು ಮಾತನಾಡಬೇಡಿ. ಮಾತಿನಲ್ಲಿ ಗಮನ ಹರಿಸಿ. ಯಾರಾದರೂ ಏನಾದರೂ ಅಂದರೆ ಅದಕ್ಕೆ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಬೇಡಿ. ಯೋಚನೆ ಮಾಡಿ ಮಾತನಾಡಿ.

ಮೀನ: ಪ್ರೇಮ ಜೀವನ

ಮೀನ: ಪ್ರೇಮ ಜೀವನ

ಮೀನ ರಾಶಿಯವರ ಮೇಲೆ ಗುರು ಬಲವಿರುವುದರಿಂದ ಮನೆಯಲ್ಲಿ ಕೆಲವೊಂದು ಶುಭ ಕಾರ್ಯಗಳು ಆಗುತ್ತವೆ. ಪೂಜೆ ಪುನಸ್ಕಾರಗಳು ಆಗುತ್ತವೆ. ಮದುವೆ ವಯಸ್ಸಿಗೆ ಬಂದಂತವರಿಗೆ ಮದುವೆ ಯೋಗ ಕೂಡಿ ಬರಲಿದೆ. ಸಂತಾನಾಪೇಕ್ಷೆಯಲ್ಲಿರುವವರಿಗೆ ಸಂತಾನ ಭಾಗ್ಯ ಸಿಗಲಿದೆ. ಹೀಗೆ ಹಲವಾರು ಶುಭ ಕಾರ್ಯಗಳು ಮನೆಯಲ್ಲಿ ನಡೆಯುತ್ತವೆ. ಯಾವುದಾದರೂ ಪೂಜೆ ಅಥವಾ ಒಳ್ಳೆ ಕೆಲಸಗಳನ್ನು ಮಾಡುವುದು ಮನೆಯಲ್ಲಿ ಇದ್ದೇ ಇರುತ್ತದೆ. ಮನೆಯಲ್ಲಿ ಪರಸ್ಪರ ನಂಬಿಕೆ, ಪ್ರೀತಿ ವಿಶ್ವಾಸವಿರುತ್ತದೆ. ಹಾಗೇ ಪುಣ್ಯದ ಕಾರ್ಯಗಳನ್ನು ಮಾಡುವ ಸಮಾಧಾನ ಕೂಡ ನಿಮಗಿರುತ್ತದೆ.

ಮೀನ: ಆಸ್ತಿ ಖರೀದಿ

ಮೀನ: ಆಸ್ತಿ ಖರೀದಿ

ಮೀನ ರಾಶಿಯವರು ಆಸ್ತಿ ಖರೀದಿ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಯಾಕೆಂದರೆ ನಿಮ್ಮ ಹಣಕಾಸಿನ ಸ್ಥಿತಿ ಸದ್ಯ ಉತ್ತಮವಾಗಿದ್ದು ಮುಂದೊಂದು ದಿನ ಸಮಸ್ಯೆಗೆ ಸಿಲುಕಬಹುದು. ಹೀಗಾಗಿ ಅವಶ್ಯಕತೆ ಇದ್ದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಉತ್ತಮ. ಯುಗಾದಿ ನಂತರ ನಿಮ್ಮ ಹಣಕಾಸಿ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಆದರೆ ಇದನ್ನು ಖರ್ಚು ಮಾಡುವಾಗ ತುಂಬಾ ಜಾಗರೂಕತೆಯಿಂದ ಇರುವುದು ಮುಖ್ಯವಾಗಿದೆ.

ಮನೆ ಅಥವಾ ಸೈಟ್ ಖರೀದಿ ವೇಳೆ ನೀವು ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ. ಇದರಿಂದ ಈ ಯುಗಾದಿಯಲ್ಲಿ ಬೆಲೆ ಭಾಳುವ ವಸ್ತುಗಳ ಖರೀದಿ ಆಸೆಗಳಿಂದ ದೂರವಿರಿ. ಮೋಸ ಹೋಗುವುದರಿಂದ ಜಾಗರೂಕರಾಗಿರಿ.

ಮೀನ: ಆರೋಗ್ಯ

ಮೀನ: ಆರೋಗ್ಯ

ಮೀನ ರಾಶಿಯವರು ಈ ವರ್ಷ ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಉದ್ಯೋಗ ವಿಚಾರಕ್ಕೆ ಹೆಚ್ಚು ಲಕ್ಷ್ಯ ನೀಡಬೇಕು. ನೀರು ಬದಲಾಗುವುದರಿಂದ, ಟ್ರಾವೆಲ್ ಮಾಡುವುದರಿಂದ ಇನ್ಫೆಕ್ಷನ್ ಆಗಬಹುದು.

ಹೀಗಾಗಿ ಈ ವರ್ಷ ನಿಮ್ಮ ಆರೋಗ್ಯ ಕಡೆಗೆ ನೀವು ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಯಾಕೆಂದರೆ ಕೆಲ ಕಠಿಣ ಆರೋಗ್ಯ ಸಮಸ್ಯೆಗಳೂ ಈ ಸಂದರ್ಭದಲ್ಲಿ ಬರಬಹುದು. ತಿನ್ನೋ ವಿಚಾರದಲ್ಲಿ ಜಾಗರೂಕರಾಗಿರಬೇಕು ಬೊಜ್ಜು ಹೆಚ್ಚಾಗಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಹೊರಗಿನ ಆಹಾರವನ್ನು ತಪ್ಪಿಸಿ.

ಪರಿಹಾರ

ಪರಿಹಾರ

* ಪ್ರತೀ ಶನಿವಾರ ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ದೇವಸ್ಥಾನಕ್ಕೆ ಕೊಡಿ

* ಶುಕ್ರವಾರ ಕಪ್ಪು ಎಳ್ಳು ಇಟ್ಟು ಪೂಜೆ ಮಾಡಿ

*ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.

*ವೃದ್ಧಾಶ್ರಮಕ್ಕೆ ಹೋಗಿ ಹಳದಿ ವಸ್ತ್ರವನ್ನು ದಾನ ಮಾಡಿ

* ಸಂಕಷ್ಟ ಚತುರ್ಥಿ ವ್ರತ ಮಾಡಿ

* ಸೂರ್ಯ, ಮಂಗಳ ಮಂತ್ರವನ್ನು ಪಠಿಸಿ

* ಗುರು ಆರಾಧನೆ ಮಾಡಿ

*ವಯಸ್ಸಾದವರ ಆಶೀರ್ವಾದ ಪಡೆಯಿರಿ.

English summary
Pisces Ugadi Horoscope 2023 in Kannada : Here is the Meena Rashi Shobhakruthi Nama Samvatsara Ugadi Rashi Bhavishya In Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X