ಅದೃಷ್ಟ ಸಂಖ್ಯೆ 3: ಸಂಖ್ಯಾಶಾಸ್ತ್ರದ ಪ್ರಕಾರ ಫಲಾಫಲ ಹೇಗಿದೆ?

By: ಜ್ಯೋತಿಮಾ ಮಿಶ್ರಾ, ಬೆಂಗಳೂರು
Subscribe to Oneindia Kannada

ಸಂಖ್ಯಾಶಾಸ್ತ್ರದ ಪ್ರಕಾರ ಭಾಗ್ಯಾಂಕ ಅಥವಾ ಅದೃಷ್ಟ ಸಂಖ್ಯೆಯು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ್ದಾಗಿದೆ. ವೈಯಕ್ತಿಕ ಬದುಕಿನ ಏಳಿಗೆಯಿಂದ ವೃತ್ತಿ ಬದುಕಿನ ಪ್ರಗತಿಯಲ್ಲಿ ಸಂಖ್ಯೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಅದೃಷ್ಟ ಸಂಖ್ಯೆ ಮೂರು(3) ಹೊಂದಿರುವವರ ಫಲಾಫಲಗಳ ಬಗ್ಗೆ ಮುಂದೆ ಓದಿ...

ಅದೃಷ್ಟ ಸಂಖ್ಯೆ 2 ವ್ಯಕ್ತಿಗಳ ಗುಣ, ವೃತ್ತಿ, ಅದೃಷ್ಟದ ವರ್ಷಗಳು

ನಿಮ್ಮ ಅದೃಷ್ಟ ಸಂಖ್ಯೆ ಮೂರು (3) ಎಂದಾದರೆ ಅದರ ಬಗ್ಗೆ ತಿಳಿಯಲಿ ಇದುವೇ ಸರಿಯಾದ ತಾಣ. ಒಂದು ವೇಳೆ ನಿಮಗೆ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂದು ತಿಳಿದಿಲ್ಲವಾದರೆ ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಅದೃಷ್ಟ ಸಂಖ್ಯೆಯನ್ನು ತಿಳಿದುಕೊಳ್ಳಿ

Meta Title: Personality of person with Bhagyank 3, Lucky Number

ಅದೃಷ್ಟ ಸಂಖ್ಯೆ ಮೂರನ್ನು ಹೊಂದಿರುವವರ ಮೇಲೆ ಗುರು ಗ್ರಹದ ಪ್ರಭಾವ ದಟ್ಟವಾಗಿರುತ್ತದೆ. ಹೀಗಾಗಿ ಈ ವ್ಯಕ್ತಿಗಳು ನಿರ್ಣಾಯಕ, ಧಾರ್ಮಿಕ, ಸಾತ್ವಿಕ, ತತ್ವಜ್ಞಾನಿ, ಔಷಧಿಗಾರರು ಅಥವಾ ಸಂಶೋಧಕರಾಗಿರುತ್ತಾರೆ. ಕೆಲವೊಮ್ಮೆ ತಾಮಸಿಕ ಗುಣ ಹೊಂದಿದವರಾಗಿದ್ದು, ಮತ್ತೊಮ್ಮೆ ಘನಗಾಂಭೀರ್ಯ ಸ್ವಭಾವಿಗಳಾಗಿ ಕಾಣಬಹುದು. ಒಟ್ಟಾರೆ, ಪ್ರಶಾಂತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ.

ಅದೃಷ್ಟ ಸಂಖ್ಯೆ 1: ವ್ಯಕ್ತಿತ್ವ, ಅದೃಷ್ಟ ವರ್ಷ, ವಾಸ್ತು ಸಲಹೆ

ಈ ಸಂಖ್ಯೆಯವರ ಗುಣ ಸ್ವಭಾವದ ಪ್ರಕಾರ, ನೀವು ಯಾವುದೇ ವ್ಯಕ್ತಿಗೂ ಹೆದರುವುದಿಲ್ಲ, ನಿಮ್ಮದೇ ಹಾದಿ, ನಿಮ್ಮದೇ ಚಿಂತನೆ, ನಿಮ್ಮದೇ ಸ್ಥಾನಕ್ಕೆ ಬದ್ಧರಾಗಿರುತ್ತೀರಿ. ಆದರೆ, ಯಾರಾದರೂ ನೋವಿನಲ್ಲಿದ್ದರೆ ನೀವು ಸಹಿಸಲಾರರಿ, ನಿಮ್ಮ ಕರುಳು ಚುರುಕ್ ಎನ್ನುತ್ತದೆ. ನೀವು ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವವರಾದರೆ, ಯಶಸ್ಸಿನ ತುದಿಯನ್ನು ಮುಟ್ಟುವುದು ಖಚಿತ.

ಕೆಲವೊಮ್ಮೆ ಹಣದಾಹಿಯಂತೆ ವರ್ತಿಸುವ ನೀವುಗಳು, ನಿಮ್ಮ ಗುರಿ ಮುಟ್ಟಲು ಅಡ್ಡದಾರಿ ಹಿಡಿಯಲು ಕೂಡಾ ಹಿಂಜರಿಯುವುದಿಲ್ಲ. ಒಂದು ವೇಳೆ ನೀವು ಉನ್ನತ ಹುದ್ದೆಯಲ್ಲಿದ್ದರೆ ಸುಲಭವಾಗಿ ಕೈ ಬಿಸಿಯಾದರೂ(ಲಂಚ ಪಡೆದರೂ) ತಪ್ಪಿಸಿಕೊಳ್ಳುತ್ತೀರಿ, ಕೆಳ ಹಂತದ ಹುದ್ದೆಯಲ್ಲಿದ್ದರೆ ಸಿಕ್ಕಿ ಬೀಳುವುದು ಖಂಡಿತ.

ವೃತ್ತಿ: ಶಿಕ್ಷಕ ವೃತ್ತಿ, ಬರಹಗಾರ, ಪೊಲೀಸ್, ವಕೀಲ, ನ್ಯಾಯಾಧೀಶ, ಕ್ಲರ್ಕ್, ಸೆಕ್ರೆಟರಿ, ಜಲಸೇನೆ, ಕಿವಿ, ಮೂಗಿನ ವೈದ್ಯರು, ಎಂಬಿಎ ಸಂಬಂಧಿಸಿದ ವೃತ್ತಿ ಹೊಂದಬಹುದು.

ಉದ್ಯಮ: ಸಂಕಲನ, ಹೋಲ್ ಸೇಲ್ ಉದ್ಯಮ, ಪಾನ್ ಅಂಗಡಿ, ಸಿಹಿ ತಿನಿಸು ಮಾರಾಟ, ಸುಗಂಧ ದ್ರವ್ಯ ಮಾರಾಟ, ಸಿನಿಮಾ ನಿರ್ಮಾಣ, ಭೂ ಖರೀದಿ ಹಾಗೂ ಮಾರಾಟ, ಆಭರಣ ಮಾರಾಟ, ಸರಕು ಸಾಗಾಣೆಯಲ್ಲಿ ತೊಡಗಿಕೊಳ್ಳಬಹುದು. ವಾಗ್ಮಿ, ನಾಯಕತ್ವ ಗುಣವಿರುವುದರಿಂದ ಸ್ವಂತ ಉದ್ಯಮದಲ್ಲೂ ಯಶಸ್ಸು ಕಾಣಬಹುದು.

ಅದೃಷ್ಟ ತರುವ ವರ್ಷಗಳು: ನಿಮ್ಮ ಬದುಕಿನಲ್ಲಿ ನಿಮ್ಮ ಸಂಖ್ಯೆಗೆ ಅನುಗುಣವಾಗಿ 3 ಅಥವಾ 1, 6, 9 ಸಂಖ್ಯೆಗಳು ಎದುರಾದರೆ ಶುಭ. ಅಂದರೆ, ವರ್ಷಗಳ ಸಂಖ್ಯೆಗಳನ್ನು ಕೂಡಿ ಬರುವ ಮೊತ್ತ 3 ಅಥವಾ 1, 6, 9 ಆಗಿದ್ದರೆ ಆ ವರ್ಷ ನಿಮಗೆ ಶುಭಕರವಾಗಿರುತ್ತದೆ.

ನಿಮ್ಮ ಮನೆಯ ಪ್ರವೇಶ ದ್ವಾರ: ಮೂರನೇ ಸಂಖ್ಯೆ ಹೊಂದಿರುವ ವ್ಯಕ್ತಿಗಳ ಮನೆಯ ಮುಖ್ಯದ್ವಾರ ಹೇಗಿರಬೇಕು?-ಮುಖ್ಯವಾದ ಗೇಟು ದಕ್ಷಿಣ ಭಾಗದಲ್ಲಿರಬೇಕು, ಪಶ್ಚಿಮ ಅಥವಾ ಪೂರ್ವ -ಉತ್ತರ (ಉತ್ತರ ಕೋನದಲ್ಲಿ) ಭಾಗದಲ್ಲಿದ್ದರೆ ಅಂಥ ವ್ಯಕ್ತಿ ಹಾಗು ಅವರ ಕುಟುಂಬದವರಿಗೂ ಲಾಭದಾಯಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Read all about the people having Bhagyank 3. According to Numerology, Bhagyank is nothing but your Lucky Number which reflect your personality.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ