ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತೀಶ್‌ ದೆಹಲಿ ಖಾಸಗಿ ಭೇಟಿ: ಸಂಪುಟ ವಿಸ್ತರಣೆ ಊಹಾಪೋಹ ಸೃಷ್ಟಿ

|
Google Oneindia Kannada News

ನವದೆಹಲಿ, ಜೂ.21: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

2019 ರಲ್ಲಿ ಪ್ರಧಾನಿ ಮೋದಿ ಎರಡನೇ ಅವಧಿಯ ಆಡಳಿತ ಪ್ರಾರಂಭಿಸಿದಾಗ ನಿತೀಶ್ ಕುಮಾರ್ ನಿರೀಕ್ಷೆಯ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಜನತಾದಳ ಒಕ್ಕೂಟ (ಜೆಡಿಯು) ಸಂಪುಟದಿಂದ ಹೊರಗುಳಿದಿತ್ತು.

ಕೇಂದ್ರ ಸಂಪುಟ ವಿಸ್ತರಣೆ: ರಾಜ್ಯದ ಈ ಇಬ್ಬರು ಸಂಸದರ ಸೇರ್ಪಡೆ ಖಚಿತಕೇಂದ್ರ ಸಂಪುಟ ವಿಸ್ತರಣೆ: ರಾಜ್ಯದ ಈ ಇಬ್ಬರು ಸಂಸದರ ಸೇರ್ಪಡೆ ಖಚಿತ

ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಸಾಧ್ಯತೆ ಬಗ್ಗೆ ನಡೆಯುತ್ತಿರುವ ಚರ್ಚೆಯು ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದಾರೆಯೇ ಎಂಬ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಇದು ಖಾಸಗಿ ಭೇಟಿ ಎಂದು ಮೂಲಗಳು ಹೇಳಿದೆ.

Nitish Kumars Private Visit To Delhi Adds To Cabinet Expansion Buzz

ನಿತೀಶ್ ಕುಮಾರ್‌ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಲಿದ್ದಾರೆ ಎಂಬ ಸುದ್ದಿಯಿದೆ. ಇತ್ತೀಚೆಗೆ ಜೆಡಿಯು ಮುಖಂಡ ಆರ್‌ಸಿಪಿ ಸಿಂಗ್, ''ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾಗಿರುವ ನಮ್ಮ ಪಕ್ಷಕ್ಕೆ ಸಂಪುಟದಲ್ಲಿ ಸರಿಯಾದ ಪ್ರಾತಿನಿಧ್ಯ ನೀಡಬೇಕು,'' ಎಂದು ಆಗ್ರಹಿಸಿದ್ದರು.

ಜೆಡಿಯು ಲೋಕಸಭೆಯಲ್ಲಿ 16 ಸಂಸದರನ್ನು ಹೊಂದಿದೆ. ಚಿರಾಗ್ ಪಾಸ್ವಾನ್ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಯಲ್ಲಿನ ವಿಭಜನೆಯು ಕ್ಯಾಬಿನೆಟ್ ಹುದ್ದೆಯ ಭರವಸೆಯ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗಿದೆ.

ಎಲ್‌ಜೆಪಿಯಲ್ಲಿ ದಂಗೆಗೆ ನೇತೃತ್ವ ವಹಿಸಿ ತನ್ನನ್ನು ಎಲ್‌ಜೆಪಿಯ ಹೊಸ ಮುಖ್ಯಸ್ಥರಾಗಿ ಘೋಷಿಸಿದ ಚಿರಾಗ್ ಪಾಸ್ವಾನ್ ಚಿಕ್ಕಪ್ಪ ಪಶುಪತಿ ಪರಾಸ್, ''ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸೇರಲು ಸಿದ್ಧನಾಗಿದ್ದೇನೆ,'' ಎಂದು ಗುರುವಾರ ಘೋಷಿಸಿದ್ದಾರೆ.

"ನಾನು ಕೇಂದ್ರ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ನಾನು ಸಂಸದೀಯ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ," ಎಂದು 71 ವರ್ಷದ ಬಿಹಾರದ ರಾಜಕಾರಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಲ್‌ಜೆಪಿ ವಿಭಜನೆಯಲ್ಲಿ ನಿತೀಶ್ ಕುಮಾರ್ ಮತ್ತು ಬಿಜೆಪಿ ವಹಿಸಿದ ಪಾತ್ರವು ಅನೇಕರಿಗೆ ಆಶ್ಚರ್ಯ ಉಂಟು ಮಾಡಿದೆ. ಚಿರಾಗ್ ಪಾಸ್ವಾನ್ ತಂದೆ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದಾಗಿ ಖಾಲಿಯಾಗಿದ್ದ ಹುದ್ದೆಗೆ ಚಿರಾಗ್ ಪಾಸ್ವಾನ್‌ರನ್ನು ಬದಲಿಯಾಗಿ ಪರಿಗಣಿಸಲಾಗಿದೆ ಎಂದು ಕೂಡಾ ಹೇಳಲಾಗಿತ್ತು ಎಂದು ಹೇಳಲಾಗಿದೆ. ಆದರೆ ನಿತೀಶ್ ಕುಮಾರ್‌ ನಿರಾಕರಣೆ ಆ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

(ಒನ್‌ಇಂಡಿಯಾ ಸುದ್ದಿ)

English summary
Bihar Chief Minister Nitish Kumar is likely to meet with Prime Minister Narendra Modi in Delhi amid reports that he expects a slot in the Union Cabinet for his party. This Private Visit speculation suggests more at a time PM Modi's cabinet expansion is in the works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X