ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?
ಸಂಖ್ಯಾಶಾಸ್ತ್ರ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಳ್ಳುತ್ತಲೇ ಇದೆ. ವೈದಿಕ ಜ್ಯೋತಿಷ್ಯಕ್ಕೂ ಸಂಖ್ಯಾಶಾಸ್ತ್ರಕ್ಕೂ ಅಷ್ಟಾಗಿ ತಾಳೆ ಆಗುವುದಿಲ್ಲ. ಅವರು ಹೇಳಿದ್ದನ್ನು ಇವರು ಒಪ್ಪುವುದಿಲ್ಲ. ಇನ್ನು ಇವರು ಹೇಳುವುದು ಜ್ಯೋತಿಷ್ಯವೇ ಅಲ್ಲ ಅನ್ನೋದು ಆ ಗುಂಪಿನವರ ಆಕ್ಷೇಪ. ಆದರೆ ಭಿನ್ನವಾದ ಅಭಿಪ್ರಾಯ- ವಾದ ಆರೋಗ್ಯಕರವಾಗಿದ್ದರೆ ಇರಲಿ, ತೊಂದರೆ ಇಲ್ಲ.
ಆ ಕಾರಣಕ್ಕೆ ಜನರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಆಗಬಾರದು. ಮೂಢನಂಬಿಕೆ ಅನಿಸಿಕೊಳ್ಳಬಾರದು. ತಪ್ಪಾದ ದಾರಿಯ ಕಡೆಗೆ ನಡೆಸಬಾರದು. ಇದೆಲ್ಲ ಇರಲಿ, ಈ ದಿನದ ಲೇಖನದಲ್ಲಿ ಸಂಖ್ಯಾಶಾಸ್ತ್ರಜ್ಞರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಒಟ್ಟು ಮಾಡಿ, ನಿಮ್ಮೆದುರು ಇಡಲಾಗಿದೆ. ಒಪ್ಪುವುದು- ಬಿಡುವುದು ನಂಬಿಕೆಗೆ ಬಿಟ್ಟಿದ್ದು.
ಯಾವುದೇ ವ್ಯಕ್ತಿಗೆ ಹೆಸರು ಇಡುವ ಮುನ್ನ ಅನುಸರಿಸಬೇಕಾದ ನಿಯಮಗಳು ಇವು ಎಂದು ಸಂಖ್ಯಾಶಾಸ್ತ್ರಜ್ಞರು ಕೆಲವು ಸಲಹೆಗಳನ್ನು ನೀಡುತ್ತಾರೆ. ಪ್ರಾಥಮಿಕವಾಗಿ ಅವೆಲ್ಲ ಒಂದು ಥರ ಇರುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ಇಂಥ ನಕ್ಷತ್ರ- ಈ ಪಾದಕ್ಕೆ ಮೊದಲ ಅಕ್ಷರ ಇದೇ ಆಗಿರಬೇಕು ಎಂದು ಹೆಸರು ಇಡುವ ಪದ್ಧತಿಯನ್ನು ಸುತಾರಾಂ ಬೇಡ ಎನ್ನುತ್ತಾರೆ. ಹಾಗಿದ್ದರೆ ಹೆಸರನ್ನು ಹೇಗೆ ಇಡಬೇಕು? ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಸಂಖ್ಯಾಶಾಸ್ತ್ರದ ಬಗ್ಗೆ ಪ್ರಾಥಮಿಕ ಮಾಹಿತಿ
ಯಾವುದೇ ವ್ಯಕ್ತಿಗೆ ಜನ್ಮ ದಿನಾಂಕ (ಬರ್ತ್ ನಂಬರ್) ಹಾಗೂ ಜೀವನ ಪಥದ ಸಂಖ್ಯೆ (ಲೈಫ್ ಪಾಥ್ ಸಂಖ್ಯೆ) ಬಹಳ ಮುಖ್ಯ. ಉದಾಹರಣೆಗೆ 7-9-1984 ರಲ್ಲಿ ಜನಿಸಿದ ವ್ಯಕ್ತಿಯ ಬರ್ತ್ ನಂಬರ್ 7 ಹಾಗೂ ಲೈಫ್ ಪಾಥ್ ಸಂಖ್ಯೆ 2( 7+9+1+9+8+4=38, 3+8=11, 1+1=2) ಆಗುತ್ತದೆ. ಮಾಸ್ಟರ್ ಸಂಖ್ಯೆ ಎಂದು ಕೆಲವು ಸಂಖ್ಯೆಗಳನ್ನು ಕರೆಯಲಾಗುತ್ತದೆ. ಅವುಗಳು ಪ್ರತ್ಯೇಕವಾಗಿ ಪ್ರಭಾವ ಬೀರುತ್ತವೆ. 11 22 33 44 55 66 77 88 99 ಇವುಗಳೆಲ್ಲ ಮಾಸ್ಟರ್ ನಂಬರ್ ಗಳು. ಇನ್ನು ಎರಡು ಸಂಖ್ಯೆ ಬಂದಾಗ ಆ ಸಂಖ್ಯೆಯ ಎರಡು ಗ್ರಹದ ಪ್ರಭಾವ ಇರುತ್ತದೆ. ಈ ಉದಾಹರಣೆಯಲ್ಲಿ 3-ಗುರು, 8-ಶನಿ, 2-ಚಂದ್ರ ಈ ಮೂರರ ಪ್ರಭಾವವೂ ಇರುತ್ತದೆ. ಜತೆಗೆ 11 ಮಾಸ್ಟರ್ ನಂಬರ್ ಕೂಡ ತನ್ನ ಪ್ರಭಾವ ತೋರುತ್ತದೆ. ಮುಖ್ಯವಾಗಿ ಬರ್ತ್ ನಂಬರ್ ಹಾಗೂ ಲೈಫ್ ಪಾಥ್ ಸಂಖ್ಯೆಗೆ ಸೇತುವೆಯಂತೆ ಕೆಲಸ ಮಾಡುವ ಸಂಖ್ಯೆಯಲ್ಲಿ ಹೆಸರಿಡಬೇಕು ಎಂಬುದು ತಜ್ಞರ ಸಲಹೆ.

ಯಾವ ಸಂಖ್ಯೆಗೆ ಯಾವ ಗ್ರಹ ಪ್ರಭಾವ?
ಇನ್ನು ಯಾವ ಸಂಖ್ಯೆ, ಯಾವ ಗ್ರಹವನ್ನು ಸೂಚಿಸುತ್ತದೆ ಎಂಬುದನ್ನೂ ತಿಳಿದುಕೊಳ್ಳಿ. 1- ರವಿ, 2- ಚಂದ್ರ, 3-ಗುರು, 4-ರಾಹು, 5-ಬುಧ, 6-ಶುಕ್ರ, 7-ಕೇತು, 8-ಶನಿ, 9-ಕುಜ ಹೀಗೆ ಒಂದೊಂದು ಗ್ರಹಕ್ಕೆ ಒಂದೊಂದು ಸಂಖ್ಯೆಯನ್ನು ನೀಡಿ, ಜನ್ಮ ದಿನಾಂಕದ ಆಧಾರದಲ್ಲಿ ಆ ವ್ಯಕ್ತಿಯ ಮೇಲೆ ಯಾವ ಗ್ರಹದ ಪ್ರಭಾವ ಇರುತ್ತದೆ ಎಂದು ನಿರ್ಧರಿಸಲಾಗುತ್ತದೆ. ಉದಾಹರಣೆಗೆ: ಯಾವುದೇ ತಿಂಗಳ 1 10 19 28ನೇ ತಾರೀಕು ಹುಟ್ಟಿದವರ ಮೇಲೆ ರವಿಯ ಪ್ರಭಾವ, ಯಾವುದೇ ತಿಂಗಳ 2, 11, 20, 29ನೇ ತಾರೀಕು ಜನಿಸಿದವರ ಮೇಲೆ ಚಂದ್ರನ ಪ್ರಭಾವ ಹೀಗೆ ಗ್ರಹಗಳ ವಿಚಾರ ಪರಿಶೀಲಿಸಬಹುದು. ಇಲ್ಲಿ ಒಂಟಿ ಸಂಖ್ಯೆಯಾದರೆ ಬೀರುವ ಪ್ರಭಾವ ಬೇರೆ, ಎರಡು ಸಂಖ್ಯೆಗಳು ಇದ್ದಲ್ಲಿ ಆಗುವ ಪ್ರಭಾವ ಬೇರೆ (ಉದಾಹರಣೆ 11, 19 ಹೀಗೆ).

ಹೆಸರಿನ ಸಂಖ್ಯೆ ಲೆಕ್ಕ ಹಾಕುವುದು ಹೇಗೆ?
A, J, S= 1, B, K, T= 2, C, L, U= 3, D, M, V= 4, E, N, W= 5, F, O, X= 6, G, P, Y= 7, H, Q, Z= 8, I, R= 9 ಇಂಗ್ಲಿಷಿನ ಯಾವ ಅಕ್ಷರಕ್ಕೆ ಎಷ್ಟು ಸಂಖ್ಯೆ ಎಂದು ಕೊಡಲಾಗಿದೆ. ಇವುಗಳ ಪೈಕಿ ಸಂಖ್ಯೆ 4 ಹಾಗೂ 8ರಿಂದ ಆರಂಭವಾಗುವ ಅಕ್ಷರದಿಂದ ಶುರುವಾಗುವ ಹೆಸರನ್ನು ಇಡದಿರುವುದು ಉತ್ತಮ ಎಂಬುದು ಸಲಹೆ. ಇನ್ನು ಯಾರ ಹೆಸರಲ್ಲಿ A, I, J, Q, Y ಅಕ್ಷರಗಳು ಹೆಚ್ಚು ಬಾರಿ ಪುನರಾವರ್ತನೆ ಆಗಿರುತ್ತದೋ ಅವರು ಅದೃಷ್ಟವಂತರು. A, S, J, O ಅಕ್ಷಗಳಿಂದ ಹೆಸರು ಆರಂಭವಾದರೆ ಅವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಹೀಗೆ ಪ್ರತಿ ಅಕ್ಷರಕ್ಕೆ ಒಂದೊಂದು ಸಂಖ್ಯೆ ಇರುವುದನ್ನು ಹೆಸರಿನ ಎಲ್ಲ ಅಕ್ಷರದ ಜತೆ ಕೂಡಿಸಿದರೆ ಒಂದು ಸಂಖ್ಯೆ ಬರುತ್ತದೆ. ಅದನ್ನು ನೇಮ್ ನಂಬರ್ ಎಂದು ಕರೆಯಲಾಗುತ್ತದೆ. ಆ ಹೆಸರಿನ ಸಂಖ್ಯೆಯು ಹುಟ್ಟಿದ ಸಂಖ್ಯೆ ಹಾಗೂ ಜೀವನ ಪಥದ ಸಂಖ್ಯೆಗೆ ಮಿತ್ರವೋ ಅಲ್ಲವೋ ಪರಿಶೀಲಿಸಬೇಕು. ಹಾಗೊಂದು ವೇಳೆ ಹೊಂದಾಣಿಕೆ ಆಗದಿದ್ದಾಗ ಹೆಸರು ಬದಲಿಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಹೆಸರಿನ ಸಂಖ್ಯೆ ಸರಿಪಡಿಸಿಕೊಳ್ಳಬೇಕು ಅಂತ ಮನಸೋ ಇಚ್ಛೆ ಹಾಗೂ ಅರ್ಥ ನೀಡದ ಅಕ್ಷರಗಳನ್ನು ಸೇರಿಸಿದರೆ ಯಾವ ಪ್ರಯೋಜನವೂ ಇಲ್ಲ.

ದೇವರ ಹೆಸರು ಇಡಬಾರದು ಏಕೆ?
ಇನ್ನು ಇಂಗ್ಲಿಷಿನಲ್ಲಿ ಹೆಸರು ಬರೆದಾಗ ಆ ಅಕ್ಷರಗಳ ಪೈಕಿ ಕೆಲವು ಅಕ್ಷರಗಳು ಸೇರಿ ನಕಾರಾತ್ಮಕ ಅರ್ಥ ಧ್ವನಿಸುವಂತಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಉದಾಹರಣೆಗೆ Anil, Sunil- ಈ ಹೆಸರನ್ನಿಟ್ಟರೆ ಎಂಥ ಉತ್ತಮ ಸ್ಥಿತಿಯಲ್ಲಿ ಇರುವವರೂ ಒಂದು ಹಂತದಲ್ಲಿ 'nil' ಆಗುತ್ತಾರೆ. ಏಕೆಂದರೆ ಹೆಸರೇ ಅದನ್ನು ಸೂಚಿಸುತ್ತಿದೆ. ಅದೇ ರೀತಿ Prasad, Guru Prasad, Hari Prasad ಹೆಸರುಗಳು. ಈ ಹೆಸರಲ್ಲಿ 'sad' ಇದೆ. ಅಂದರೆ ದುಃಖ. Ashwini ಎಂಬ ಹೆಸರಲ್ಲಿ 'Ash' ಇದೆ. ಅಂದರೆ ಬೂದಿ. ಸಕಾರಾತ್ಮಕ ಉದಾಹರಣೆ ಅಂದರೆ Puneeth. ಈ ಹೆಸರಲ್ಲಿ Pun ಇದೆ. ಇವರ ಮಾತಲ್ಲಿ ಅದನ್ನು ಗಮನಿಸಬಹುದು. ಇನ್ನು ದೇವರ ಹೆಸರುಗಳನ್ನು ಇಡುವುದು ಹಿಂದೂ ಧಾರ್ಮಿಕ ನಂಬಿಕ. ಶಿವ, ಶ್ರೀನಿವಾಸ, ಮಂಜುನಾಥ, ಮುರುಘ, ಗಣೇಶ ಹೀಗೆ. ಈ ರೀತಿ ದೇವರ ಹೆಸರನ್ನು ಇಟ್ಟವರಲ್ಲಿ ಆಂತರಿಕ ಬೇಗುದಿ ಜಾಸ್ತಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ಆದ್ದರಿಂದ ಆ ಹೆಸರುಗಳು ದೇವರಿಗೆ ಸೂಕ್ತವೇ ಹೊರತು ಮನುಷ್ಯರಿಂದ ಸಾಧ್ಯವಿಲ್ಲ. ಹಾಗೆ ಹೆಸರು ಇಟ್ಟುಕೊಂಡವರಲ್ಲಿ ಸರಿ-ತಪ್ಪುಗಳ ಬಗ್ಗೆ ಬಹಳ ವಿಶ್ಲೇಷಣೆ, ಗೊಂದಲ, ಆತಂಕ ಇರುತ್ತವೆ Sh ನಿಂದ ಹೆಸರು ಕೊನೆಯಾದವರು ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡುವುದಿಲ್ಲ. ಅಥವಾ ಅವರ ಧ್ವನಿಯನ್ನು ಅಡಗಿಸಲಾಗುತ್ತದೆ. ಉದಾಹರಣೆಗೆ ಸುರೇಶ್, ದಿನೇಶ್, ಮಹೇಶ್, ಹರೀಶ್ ಹೀಗೆ ಎನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications