Numerology: ಈ ದಿನಾಂಕದಲ್ಲಿ ಜನಿಸಿದವರಿಗೆ ಸರ್ಕಾರಿ ಉದ್ಯೋಗ ಯೋಗ; ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆ!
Numerology: ಪ್ರತಿಯೊಬ್ಬರ ಜೀವನದಲ್ಲಿ ವೃತ್ತಿ ಬಹಳ ಮುಖ್ಯ. ಓದು ಮುಗಿತಾ ಇದ್ದ ಹಾಗೆ ಮುಂದೆ ಯಾವ ಕೆಲಸ ಎನ್ನುವುದೇ ಎಲ್ಲರನ್ನು ಕಾಡುವ ಪ್ರಶ್ನೆ. ಅದೆಷ್ಟೋ ಜನ ಡಿಗ್ರಿ ಪಡೆಯೋದೇ ಒಂದರಲ್ಲಿ ಕೆಲಸ ಮಾಡುವುದೇ ಇನ್ನೊಂದು ಫೀಲ್ಡ್‌ನಲ್ಲಿ. ಕೆಲವರಿಗಂತೂ ಎಷ್ಟೇ ಕಷ್ಟಪಟ್ಟು ಅಧ್ಯಯನ ಮಾಡಿದರೂ, ತಾವು ಬಯಸೋ ಕೆಲಸ ಸಿಗೋದೇ ಇಲ್ಲ.
ಇನ್ನು ಕೆಲವರು ಅನಿರೀಕ್ಷಿತವಾಗಿ ಉನ್ನತ ಹುದ್ದೆಗಳನ್ನು ತಲುಪಿ ಬಿಡ್ತಾರೆ. ಹೀಗೆ ಯಾಕಾಗುತ್ತದೆ ಎಂದು ಯೋಚಿಸಿದರೆ ಇದರ ಹಿಂದೆ ಇರುವುದು ಸಂಖ್ಯಾಶಾಸ್ತ್ರ ಮತ್ತು ಜಾತಕ ಪ್ರಭಾವ. ನಮ್ಮ ಜನ್ಮ ದಿನಾಂಕದ ಆಧಾರದ ಮೇಲೆ, ನಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದಂತೆ. ಯಾವ ರೀತಿಯ ಉದ್ಯೋಗ ಅಥವಾ ವ್ಯವಹಾರದಲ್ಲಿ ನಾವು ಮುಂದುವರೆಯುತ್ತೇವೆ ಎಂಬುದನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹುದಂತೆ.

ಮೂಲಾಂಕ 1
ಯಾವುದೇ ತಿಂಗಳ 1, 10, 19 ಮತ್ತು 28 ನೇ ತಾರೀಕಿನಂದು ಜನಿಸಿದವರ ಮೂಲಾಂಕ 1. ಇದರ ಅಧಿಪತಿ ಸೂರ್ಯ. ಅವರು ಸ್ವಾಭಾವಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಸರ್ಕಾರಿ ಉದ್ಯೋಗಗಳು, ನಾಗರಿಕ ಸೇವೆಗಳು, ಐಎಎಸ್, ಐಪಿಎಸ್ ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಬಹು ದೊಡ್ಡ ಸ್ಥಾನಕ್ಕೆ ಏರುವರು. ಅವರು ಕಂಪನಿಗಳಲ್ಲಿ ವ್ಯವಸ್ಥಾಪಕರು ಮತ್ತು ಸಿಇಒಗಳಾಗಿ ಉನ್ನತ ಹುದ್ದೆಗಳನ್ನು ಸುಲಭವಾಗಿ ಸಂಪಾದಿಸಿಕೊಳ್ಳುತ್ತಾರೆ. ಇತರರಿಗಾಗಿ ಕೆಲಸ ಮಾಡುವುದಕ್ಕಿಂತ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೆಲಸಗಳು ಅವರಿಗೆ ಹೆಚ್ಚು ಸೂಕ್ತವಂತೆ.
ಮೂಲಾಂಕ 2 ಮತ್ತು 3
ಅದೇ ರೀತಿ, 2, 11, 20 ಮತ್ತು 29 ರಂದು ಜನಿಸಿದವರ ಮೂಲಾಂಕ 2. ಅದರ ಅಧಿಪತಿ ಚಂದ್ರ. ಅವರು ತುಂಬಾ ಸೃಜನಶೀಲರು ಮತ್ತು ಸೂಕ್ಷ್ಮ ಮನಸ್ಸಿನವರು. ಅವರು ಬೋಧನೆ, ಸಮಾಲೋಚನೆ, ವೈದ್ಯಕೀಯ ಮತ್ತು ನರ್ಸಿಂಗ್, ಕಲೆ, ಬರವಣಿಗೆ ಮತ್ತು ಮನೋವಿಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶೇಷ ಸೇವೆಗಳನ್ನು ನೀಡ್ತಾರೆ. ಇನ್ನು 3, 12, 21 ಮತ್ತು 30 ರಂದು ಜನಿಸಿದವರು ಗುರುವಿನ ಪ್ರಭಾವದಿಂದ ಹಣಕಾಸು, ಬ್ಯಾಂಕಿಂಗ್, ಕಾನೂನು ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ.
Numerology: ಮೂಲಾಂಕ 4, 5, 6
ಮತ್ತೊಂದೆಡೆ, 4, 5 ಮತ್ತು 6 ಸಂಖ್ಯೆಗಳಲ್ಲಿ ಜನಿಸಿದವರು ತಂತ್ರಜ್ಞಾನ, ವ್ಯವಹಾರ, ಮಾಧ್ಯಮ ಮತ್ತು ವಿನ್ಯಾಸ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ವಿಶೇಷವಾಗಿ 5 ರ ಮೂಲಾಂಕ ಅಂದರೆ 5, 14 ಮತ್ತು 23 ನೇ ತಾರೀಕಿನಲ್ಲಿ ಜನಿಸಿದವರ ಅಧಿಪತಿ ಬುಧ. ಅವರು ಐಟಿ, ಸಾಫ್ಟ್‌ವೇರ್, ಡೇಟಾ ಸೈನ್ಸ್, ಮಾರ್ಕೆಟಿಂಗ್ ಮತ್ತು ಸಂವಹನ ಕ್ಷೇತ್ರಗಳಲ್ಲಿ ತುಂಬಾ ವೇಗವಾಗಿ ಹೆಸರು ಮಾಡ್ತಾರೆ. ಇನ್ನು ಮೂಲಾಂಕ 6 ಇರುವವರು ಫ್ಯಾಷನ್, ಮನರಂಜನೆ, ಸಿನಿಮಾ, ಹೋಟೆಲ್ ನಿರ್ವಹಣೆ ಮತ್ತು ಜೀವನಶೈಲಿಯ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಾರೆ ಎನ್ನಲಾಗಿದೆ.
Numerology: ಮೂಲಾಂಕ 7, 8, 9
7, 8, 9 ಅಥವಾ ಈ ಸಂಖ್ಯೆಗಳ ಸಂಯೋಜನೆಯಲ್ಲಿ ಜನಿಸಿದವರು ಸಂಶೋಧನೆ, ಡೇಟಾ ಅನಾಲಿಸಿಸ್, ಡಿಫೆನ್ಸ್, ಆರ್ಮಿ, ರಿಯಲ್ ಎಸ್ಟೇಟ್ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಜನಪ್ರಿಯರಾಗುತ್ತಾರೆ. ಸಂಖ್ಯೆ 8 ಶನಿ ದೇವರಿಗೆ ಸಂಬಂಧಿಸಿರುವುದರಿಂದ, ಅವರು ಆರಂಭದಲ್ಲಿ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಆದರೆ ಪರಿಶ್ರಮದಿಂದ ಅವರು ಕಬ್ಬಿಣ, ಗಣಿಗಾರಿಕೆ, ಕನ್‌ಸ್ಟ್ರಕ್ಶನ್ ಫೀಲ್ಡ್ನಲ್ಲಿ ಹೆಸರು ಮಾಡುತ್ತಾರೆ. ಅಥವಾ ದೊಡ್ಡ ವ್ಯಾಪಾರ ಸಾಮ್ರಾಜ್ಯಗಳನ್ನು ಕಟ್ಟುತ್ತಾರೆ. ಆರ್ಥಿಕವಾಗಿ ಸ್ಥಿತಿವಂತರಾಗಿರುತ್ತಾರೆ.
ಆದ್ದರಿಂದ, ನಿಮ್ಮ ಮೂಲಾಂಕದ ಶಕ್ತಿಗೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಕೆಲಸದಲ್ಲಿ ತ್ವರಿತ ಯಶಸ್ಸನ್ನು ಸಾಧಿಸಬಹುದು ಎನ್ನುವುದನ್ನು ಸಂಖ್ಯಾ ಶಾಸ್ತ್ರ ಸೂಚಿಸುತ್ತದೆ.


Click it and Unblock the Notifications
