ಸಂಖ್ಯಾಶಾಸ್ತ್ರ: ಧೀರೂಭಾಯಿ ಅಂಬಾನಿ ಹುಟ್ಟಿದ್ದೂ 1ನೇ ತಾರೀಕು

Posted By:
Subscribe to Oneindia Kannada

ನೀವು ಹುಟ್ಟಿದ ದಿನಾಂಕದ ಆಧಾರದಲ್ಲಿ ನಿಮ್ಮ ಗುಣ ಹೇಗೆ, ಬದಲಾಯಿಸಿಕೊಳ್ಳಬೇಕಾದ ನಡವಳಿಕೆ ಯಾವುದು, ಯಾವ ದಿನಾಂಕದಲ್ಲಿ ಹುಟ್ಟಿದವರ ಜತೆಗೆ ನೀವು ಪಾರ್ಟನರ್ ಶಿಪ್ ಬಿಜಿನೆಸ್ ಮಾಡಬಹುದು, ಯಾವ ದಿನ ಹುಟ್ಟಿದವರ ಜೊತೆಗೆ ಮದುವೆಯಾದರೆ ಜೀವನ ಸುಖವಾಗಿರುತ್ತೆ ಅಂತ ಹೇಳ್ತೀವಿ. ಇದರ ಪಾಸಿಟಿವ್ ಹಾಗೂ ನೆಗೆಟಿವ್ ಫಲಿತಾಂಶಗಳು ನಿಮ್ಮ ಹೆಸರಿನ ಸಂಖ್ಯೆಯನ್ನೂ ಅವಲಂಬಿಸಿರುತ್ತದೆ.

ಮೊದಲಿಗೆ ಸಂಖ್ಯೆ 1ರಿಂದ ಆರಂಭಿಸೋಣ. ಯಾವುದೇ ತಿಂಗಳ 1, 10, 19, 28ನೇ ತಾರೀಖು ಹುಟ್ಟಿದವರ ಜನ್ಮ ಸಂಖ್ಯೆ 1 ಆಗುತ್ತದೆ. ಈ ದಿನ ಹುಟ್ಟಿದವರ ಪಾಲಿಗೆ ಅಧಿಪತಿ ಸೂರ್ಯ. ಇವರಲ್ಲಿ ಮ್ಯಾನೇಜ್ ಮೆಂಟ್ ಸ್ಕಿಲ್, ನಾಯಕತ್ವ ಗುಣಗಳು ಚೆನ್ನಾಗಿ ಇರತ್ತೆ. ನಂಬಿಕೆ ಕಳೆದುಕೊಂಡು, ಬೇಗ ಸೋಲೊಪ್ಪುವ ಜಾಯಮಾನದವರಲ್ಲ. ಆದರೆ ತಮ್ಮ ಬಗ್ಗೆ ಹೇಳಿಕೊಳ್ಳುವುದರಲ್ಲಿ ವಿಪರೀತವಾದ ಖುಷಿ ಇವರಿಗೆ.[ಸಂಖ್ಯಾಶಾಸ್ತ್ರ: 2ನೇ ಸಂಖ್ಯೆಯಲ್ಲಿ ಹುಟ್ಟಿದವರ ಮಾತು ಚಂದ]

ಬೇರೆಯವರು ಕೇಳಲಿ ಅನ್ನೋ ಕಾರಣಕ್ಕೆ ಚೆಂದಕ್ಕೆ ಡ್ರೆಸ್ ಮಾಡ್ತಾರೆ. ದುಬಾರಿ ವಸ್ತುಗಳನ್ನು ಖರೀದಿಸ್ತಾರೆ. ಇದೇನು ಚೆನ್ನಾಗಿದೆಯಲ್ಲಾ ಅಂತ ಯಾರಾದರೂ ಕೇಳಿದರೋ ಶುರು, ನಾನು ಗೊತ್ತಲ್ಲ, ಕಡಿಮೆದೂ ಸುಮಾರಾಗಿರೋದೂ ತಗೊಳ್ಳಲ್ಲ ಅಂತ ತಮ್ಮ ಬಗ್ಗೆ ಹೇಳುವುದಕ್ಕೆ ಶುರು ಮಾಡಿಬಿಡ್ತಾರೆ.

ಯಾರನ್ನಾದರೂ ಹಚ್ಚಿಕೊಂಡರೆ ಮುಗೀತು, ತುಂಬ ಪ್ರಾಮಾಣಿಕವಾಗಿ ಅವರ ಬಗ್ಗೆ ಯೋಚಿಸ್ತಾರೆ, ಸಲಹೆ ಕೊಡ್ತಾರೆ, ಅಗತ್ಯ ಬಿದ್ದರೆ ಸಹಾಯವನ್ನು ಮಾಡ್ತಾರೆ. ಇವರು ತುಂಬ ಕ್ರಿಯೇಟಿವ್ ಆದ್ದರಿಂದ ಕಲೆ, ಕ್ರಿಯೇಟಿವ್ ಫೀಲ್ಡ್ ನಲ್ಲೇ ಹೆಚ್ಚಾಗಿ ಮುಂದುವರೀತಾರೆ. ಇವರನ್ನ ಬಹಳ ಅದೃಷ್ಟಶಾಲಿಗಳು ಅಂತಲೇ ಗುರುತಿಸಬಹುದು. ಸರ್ಕಾರದಿಂದ ಬೇರೆ ಜನರಿಂದ ಆಗಬೇಕಾದ ಇವರ ಕೆಲಸಗಳು ತುಂಬ ಸಲೀಸಾಗಿ ಆಗಿಬಿಡುತ್ತೆ.[ಮಕರ ರಾಶಿಗೆ ಶನಿಬಲ, ಗುರುಬಲ ಎರಡೂ ಕೂಡಿಬಂದಿವೆ]

ಆದರೆ, ಇವರಿಗೆ ಆಜ್ಞೆ ಅನುಸರಿಸುವುದು ಬಹಳ ಕಷ್ಟ. ಇವರ ಮನಸ್ಸಿನಲ್ಲಿ ಯಾವುದಾದರೂ ಒಂದು ವಿಷಯ ಕೂತುಬಿಟ್ಟರೆ ಬದಲಾಯಿಸುವುದು ಕಷ್ಟ, ಕಷ್ಟ. ಎಲ್ಲ ಕೆಲಸವನ್ನೂ ನಾನೇ ಮಾಡ್ತೀನಿ ಅಂತ ಹೊರಟುಬಿಡ್ತಾರೆ, ಇನ್ನೊಬ್ಬರಿಗೆ ಕೆಲಸ ವಹಿಸಿದರು ಅಂದರೆ, ಆಗಲೂ ಪದೇಪದೇ ಇವರು ಮೂಗು ತೂರಿಸ್ತಾರೆ.

ಇವರ ಐಡಿಯಾಗಳು ಒರಿಜಿನಲ್ ಆಗಿರ್ತವೆ. ಔಟ್ ಆಫ್ ದ ಬಾಕ್ಸ್ ಅಂತಾರಲ್ಲ ಆ ರೀತಿ ಐಡಿಯಾಗಳನ್ನ ಹೇಳ್ತಾರೆ. ಯಾವುದನ್ನೂ ಬಡಪೆಟ್ಟಿಗೆ ಬಿಡೋ ಆಸಾಮಿಯಲ್ಲ. ಇವರ ಗುರಿಗಳನ್ನ ಕೇಳಿಬಿಟ್ಟರೆ, ಯಾರೂ ಆ ಮಾತನ್ನ ನಂಬೋಕೆ ಸಾಧ್ಯವಿಲ್ಲ. ಆದರೆ ಒಂದಲ್ಲಾ ಒಂದು ದಿನ ಅದನ್ನ ಮಾಡಿ ಮುಗಿಸಿ ಅಚ್ಚರಿ ಮೂಡಿಸ್ತಾರೆ.[ಸಾಡೇಸಾತಿ ಶನಿಕಾಟದೊಂದಿಗೆ ಇನ್ನು ಗುರುಕಾಟ ಧನುಸ್ಸು ರಾಶಿಗೆ]

ಇವರನ್ನ ಸಹಿಸಿಕೊಳ್ಳೋದು ಸ್ವಲ್ಪ ಕಷ್ಟ ಕಣ್ರೀ. ಈ ಜಗತ್ತಿನಲ್ಲಿ ಅವರೊಬ್ಬರನ್ನು ಬಿಟ್ಟು, ಉಳಿದವರೆಲ್ಲ ಕನಿಷ್ಠರಾಗಿಯೇ ಕಾಣ್ತಾರೆ ಇವರಿಗೆ. ಒಂದನೇ ಸಂಖ್ಯೆಯವರಿಗೆ ಕೆಲವು ಸಲಹೆಗಳಿವೆ: ನಿಮ್ಮ ಬಗ್ಗೆ ವಿಪರೀತ ಹೊಗಳಿಕೊಳ್ಳೋದನ್ನ ನಿಲ್ಲಿಸಿ, ಬೇರೆಯವರಿಗೆ ಹೀಗೆ ಇರಬೇಕು ಅಂತ ಒತ್ತಡ ಹೇರಬೇಡಿ, ಎಲ್ಲರ ಗಮನವೂ ಸದಾ ನಿಮ್ಮ ಮೇಲೆ ಇರಲಿ ಅಂತ ವಿಪರೀತ ಪ್ರಯತ್ನಿಸಬೇಡಿ, ಒಂದು ಸಲ ನಿರ್ಧರಿಸಿದ ಮೇಲೆ ಅದರ ಆಗುಹೋಗುಗಳಿಗೆ ನಿಮ್ಮ ಮೇಲೆ ನೀವೇ ಕೋಪ ಮಾಡಿಕೋಬೇಡಿ.

2,3,5,6,8,9ರ ಸಂಖ್ಯೆಯಲ್ಲಿ ಹುಟ್ಟಿದವರು ಒಳ್ಳೆ ಬಿಜಿನೆಸ್ ಪಾರ್ಟನರ್ ಆಗ್ತಾರೆ.

2,3,9ರ ಸಂಖ್ಯೆಯಲ್ಲಿ ಹುಟ್ಟಿದವರ ಜೊತೆ ಮದುವೆಯಾದರೆ ಹೊಂದಾಣಿಕೆ ಚೆನ್ನಾಗಿರತ್ತೆ.

ನಂಬರ್ 1ರಲ್ಲಿ ಹುಟ್ಟಿದವರು- ಧೀರೂಬಾಯಿ ಅಂಬಾನಿ, ಬಿಲ್ ಗೇಟ್ಸ್, ಐಶ್ವರ್ಯಾ ರೈ, ಹೃತಿಕ್ ರೋಷನ್, ಬಿಲ್ ಕ್ಲಿಂಟನ್, ಇಂದಿರಾ ಗಾಂಧಿ.

ಶುಭ ದಿನ: ಭಾನುವಾರ, ಸೋಮವಾರ.
ಶುಭ ಬಣ್ಣ: ಕೇಸರಿ, ಹಳದಿ.
ಶುಭ ದಿನಾಂಕ: 1,2,7
ಶುಭ ರತ್ನ: ರೂಬಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People who are born on 1, 10, 19, 28th of any month, they are ruled by planet Sun. Their nature, characterstics, traits explined here. Compatibility for marriage, business, luky stone also explained in this article.
Please Wait while comments are loading...