Navapanchama Yoga : ಶುಭಯೋಗದಿಂದ ಬದಲಾಗಲಿದೆ ಅದೃಷ್ಟ: ಈ 4 ರಾಶಿಯವರಿಗೆ ಹಣ ಮತ್ತು ಬಡ್ತಿ ಭಾಗ್ಯ
ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿರುತ್ತವೆ. ಪ್ರತಿಯೊಂದು ಯೋಗವೂ ಬೇರೆ ಬೇರೆ ಪರಿಣಾಮ, ಪ್ರಭಾವವನ್ನು ಬೀರುತ್ತದೆ. ಹಾಗೆಯೇ ಇವತ್ತು ಬೆಳಿಗ್ಗೆ 10:19 ಕ್ಕೆ ಚಂದ್ರನು ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಚಂದ್ರನ ಸಂಚಾರದಿಂದಾಗಿ ಶುಕ್ರ ಮತ್ತು ಚಂದ್ರನ ನಡುವೆ ನವ ಪಂಚಮ ಯೋಗ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ ಹೇಳಲಾದ ಶುಭ ಯೋಗಗಳಲ್ಲಿ ನವ ಪಂಚಮ ಯೋಗವೂ ಒಂದಾಗಿದೆ.
ತುಲಾ ರಾಶಿಯಲ್ಲಿ ಶುಕ್ರ ಮತ್ತು ಚಂದ್ರನ ಸ್ಥಾನದಿಂದಾಗಿ ಈ ಶುಭ ಯೋಗ ರೂಪುಗೊಳ್ಳುತ್ತಾ ಇದೆ. ನವ ಪಂಚಮ ಯೋಗದಿಂದಾಗಿ, ನಾಲ್ಕು ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳು ಹೆಚ್ಚಾಗುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಗಳಿಸುವರು.

ನವಪಂಚಮ ಯೋಗದಿಂದ ಲಾಭ ಪಡೆಯುವ ರಾಶಿಗಳು
ಮಿಥುನ ರಾಶಿ (Gemini)
ಚಂದ್ರ ಮತ್ತು ಶುಕ್ರನ ನಡುವೆ ನವಪಂಚಮ ಯೋಗವು ರೂಪುಗೊಳ್ಳುವುದರಿಂದ ಮಿಥುನ ರಾಶಿಯವರಿಗೆ ಅನುಕೂಲಕರ ಫಲ ಸಿಗುವುದು. ಚಂದ್ರನು ನಿಮ್ಮ ರಾಶಿಯಲ್ಲಿ ಸಂಚಾರ ಮಾಡುವ ಮೂಲಕ ಶುಕ್ರನೊಂದಿಗೆ ನವಪಂಚಮ ಯೋಗವನ್ನು ರೂಪಿಸುತ್ತಾನೆ. ಇದರ ಫಲವಾಗಿ ನಿಮ್ಮ ವೃತ್ತಿ ಮತ್ತು ಶಿಕ್ಷಣದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ನೀವು ಬಹಳ ಕಾಲದಿಂದ ನಿರೀಕ್ಷಿಸುತ್ತಿರುವ ಬಡ್ತಿ ಸಿಗುವುದು. ಉನ್ನತ ಸ್ಥಾನಕ್ಕೆ ಏರುವ ಭಾಗ್ಯ ಇದೆ. ಸಮಾಜದಲ್ಲಿ ಪ್ರತಿಷ್ಟೆ ಹೆಚ್ಚಾಗುವುದು. ಪ್ರತೀ ಕೆಲಸದಲ್ಲಿ ಅದೃಷ್ಟ ಜೊತೆಗಿರುವುದು. ಈ ಸಮಯದಲ್ಲಿ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರಯೋಜನವಾಗುವುದು.
ಸಿಂಹ ರಾಶಿ (Leo)
ನವಪಂಚಮ ಯೋಗದ ಸಮಯದಲ್ಲಿ, ಚಂದ್ರನು ನಿಮ್ಮ ಹನ್ನೊಂದನೇ ಮನೆಯಲ್ಲಿರುತ್ತಾನೆ. ಇದನ್ನು ಲಾಭದ ಮನೆ ಎಂದು ಕರೆಯಲಾಗುತ್ತದೆ. ಶುಕ್ರನು ನಿಮ್ಮ ಶೌರ್ಯದ ಮನೆಯಲ್ಲಿರುತ್ತಾನೆ. ಈ ಯೋಗವು ಸಿಂಹ ರಾಶಿಯವರಿಗೆ ಹೊಸ ಆದಾಯದ ಮೂಲಗಳನ್ನು ತರಬಹುದು. ಕುಟುಂಬ ಜೀವನವೂ ಅನುಕೂಲಕರವಾಗಿರುವುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು. ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಅದೃಷ್ಟವು ನಿಮ್ಮ ಜೊತೆಗಿರುವುದು. ಸಮಯ ಅನುಕೂಲಕರವಾಗಿರುವುದು. ಬಹಳ ಕಾಲದಿಂದ ನ್ಯಾಯಾಲಯದಲ್ಲಿರುವ ಕೇಸ್ ತೀರ್ಪು ನಿಮ್ಮ ಪರವಾಗಿ ಬರುವುದು. ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆಯೂ ಇದೆ.
ತುಲಾ ರಾಶಿ (Libra)
ನಿಮ್ಮ ರಾಶಿಯ ಅಧಿಪತಿ ಗ್ರಹವಾದ ಶುಕ್ರ ನಿಮ್ಮ ರಾಶಿಯ ಮೊದಲ ಮನೆಯಲ್ಲಿ ನೆಲೆಸಿದ್ದಾನೆ. ಆದರೆ ಚಂದ್ರನು ಸೆಪ್ಟೆಂಬರ್ 5 ರಂದು ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತಾನೆ. ಹೀಗಾಗಿ ನವಪಂಚಮ ಯೋಗ ಸೃಷ್ಟಿಯಾಗುತ್ತಿದೆ. ಈ ಯೋಗದ ಪರಿಣಾಮವಾಗಿ ಅದೃಷ್ಟ ನಿಮ್ಮ ಜೊತೆಗೆ ಇರುವುದು. ಹೊಸ ಕೆಲಸ ಆರಂಭಿಸುವುದಕ್ಕೆ ಸರಿಯಾದ ಸಮಯ. ಕೈ ಹಾಕಿದ ಕೆಲಸಗಳಲ್ಲಿ ಅಭಿವೃದ್ದಿಯಾಗುವುದು. ತುಂಬಾ ದಿನಗಳಿಂದ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವಿರಿ. ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಮಕ್ಕಳ ಸಾಧನೆ ಸಂತೋಷ ತರುವುದು.
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ನವಪಂಚಮ ಯೋಗದ ರಚನೆಯು ಆರ್ಥಿಕವಾಗಿ ಪ್ರಯೋಜನಕಾರಿಯಾಗುವುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವರು. ಅದೃಷ್ಟದಿಂದ ಅನುಕೂಲಕರವಾಗಿರುವುದು. ಕುಂಭ ರಾಶಿಯವರ ಸಾಮಾಜಿಕ ಗೌರವ ಹೆಚ್ಚಾಗುವುದು. ಸಾಲದಿಂದ ಮುಕ್ತಿ ಸಿಗುವುದು. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು. ಹೊಸ ಕೆಲಸ ಅಥವಾ ವ್ಯವಹಾರ ಆರಂಭಿಸುವ ಯೋಚನೆಯಲ್ಲಿರುವವರು ತಮ್ಮ ಯೋಜನೆಗಳನ್ನು ಮುಂದುವರಿಸಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಆರೋಗ್ಯ ಉತ್ತಮವಾಗಿರಬಹುದು.


Click it and Unblock the Notifications
