• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!

By ಅನಿಲ್ ಆಚಾರ್
|
   ಬಾಬಾ ವಂಗಾ, ನಿಗೂಢ ಮಹಿಳೆಯ 2019ರ ಕುತೂಹಲಕಾರಿ ಭವಿಷ್ಯ | Oneindia Kannada

   ಆಕೆ ನಿಗೂಢ ಮಹಿಳೆ. ಹೆಸರು ಬಾಬಾ ವಂಗಾ. ಆಕೆ ನುಡಿದ ಭವಿಷ್ಯಗಳು ಭಯಾನಕವಾಗಿವೆ. ಹಾಗೂ ಅವುಗಳೆಲ್ಲ ಹಾಗೇ ನಿಜವಾಗಿವೆ. ಐಎಸ್ ಐಎಸ್ ಉಗ್ರ ಸಂಘಟನೆ ಪ್ರವರ್ಧನಮಾನಕ್ಕೆ ಬರುತ್ತದೆ, ಅಮೆರಿಕದ ಮೇಲೆ ಆದ 9/11 ದಾಳಿ, ಬ್ರೆಕ್ಸಿಟ್ ಸೇರಿದಂತೆ ಆ ಮಹಿಳೆ ನುಡಿದಿದ್ದ ಭವಿಷ್ಯಗಳು ಒಂದೇ ಎರಡೆ?

   1996ರಲ್ಲೇ ಈ ಮಹಿಳೆ ಸ್ತನ ಕ್ಯಾನ್ಸರ್ ಗೆ ಬಲಿಯಾಗಿದ್ದರೂ 51ನೇ ಶತಮಾನದವರೆಗೂ ಏನೇನು ಸಂಭವಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆಕೆ ಪ್ರಕಾರ, 51ನೇ ಶತಮಾನವು ಈ ಬ್ರಹ್ಮಾಂಡದ ಅಂತ್ಯ. ಅದಿರಲಿ, ಈ ವರ್ಷ 2019ನೇ ಇಸವಿಗೆ ಸಂಬಂಧಿಸಿದಂತೆ ಆಕೆ ಹೇಳಿದ ಭವಿಷ್ಯ ಏನು ಗೊತ್ತಾ?

   ನಿಜವಾಗಲಿದೆಯೇ ಕಣ್ಣು ಕಾಣದ ಮುದುಕಿ ನುಡಿದಿರುವ 2018ರ ಭವಿಷ್ಯ?

   ಇಡೀ ವರ್ಷ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸುತ್ತವಂತೆ. ಆರ್ಥಿಕ ಸಂಕಷ್ಟಗಳು ಭಾರೀ ದೊಡ್ಡ ಪ್ರಮಾಣದಲ್ಲಿ ಎದುರಾಗುತ್ತವಂತೆ. ಇನ್ನು ಪ್ರಪಂಚದ ಅತಿ ದೊಡ್ಡ ಶಕ್ತಿ ಎಂದು ಪರಿಗಣಿಸುವ ಎರಡು ದೇಶಗಳ ನಾಯಕರ ಜೀವಕ್ಕೆ ಅಪಾಯವಿದೆಯಂತೆ. ಬಾಬಾ ವಂಗಾ ಪ್ರಕಾರ, ರಷ್ಯಾದ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ರ ರಕ್ಷಣೆಗೆ ಇರುವ ತಂಡವೇ ವರ್ಷದ 12 ತಿಂಗಳ ಒಳಗಾಗಿ ಅವರನ್ನು ಕೊಲ್ಲಲು ಯತ್ನಿಸುತ್ತದಂತೆ.

   ಫಿಡೆಲ್ ಕ್ಯಾಸ್ಟ್ರೊ ನೀಡಿದ ಸಲಹೆ ಪಾಲಿಸುತ್ತಿರುವ ಪುಟಿನ್

   ಫಿಡೆಲ್ ಕ್ಯಾಸ್ಟ್ರೊ ನೀಡಿದ ಸಲಹೆ ಪಾಲಿಸುತ್ತಿರುವ ಪುಟಿನ್

   ತನ್ನ ಮೇಲೆ ನಾಲ್ಕು ಹತ್ಯಾಯತ್ನಗಳು ನಡೆದಿವೆ ಎಂದು ಸ್ವತಃ ಪುಟಿನ್ ಮಾಹಿತಿ ಬಯಲು ಮಾಡಿದ್ದರು. ಕಾವಲಿಗಾಗಿ ಸದಾ ಇರುವ ಶಸ್ತ್ರಸಜ್ಜಿತ ತಂಡದಿಂದ ಇಂಥ ಪ್ರಯತ್ನ ವಿಫಲವಾಗಿದೆ. ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೊ ಮೇಲೆ ಐವತ್ತಕ್ಕೂ ಹೆಚ್ಚು ಬಾರಿ ಹತ್ಯಾ ಯತ್ನಗಳು ನಡೆದಿದ್ದವು. ಅಂಥದ್ದರಿಂದ ತಪ್ಪಿಸಿಕೊಂಡಿದ್ದ ಕ್ಯಾಸ್ಟ್ರೊ ಅವರು, ದಾಳಿಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಪುಟಿನ್ ಗೆ ಸಲಹೆ ನೀಡಿದ್ದರಂತೆ. "ಅವರು ನನಗೆ ಹೇಳಿದ್ದರು. 'ನಾನಿನ್ನೂ ಬದುಕಿದ್ದೇನೆ ಏಕೆ ಗೊತ್ತಾ?' ನಾನು ಕೇಳಿದೆ ಏಕೆ? 'ಏಕೆಂದರೆ ನನ್ನ ರಕ್ಷಣೆ ವಿಚಾರದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುತ್ತೀನಿ' ಎಂಬುದಾಗಿ ತಿಳಿಸಿದ್ದರು" ಎಂದು ಪುಟಿನ್ ಹೇಳಿಕೊಂಡಿದ್ದಾರೆ.

   ಡೊನಾಲ್ಡ್ ಟ್ರಂಪ್ ಗೆ ನಿಗೂಢವಾದ ಕಾಯಿಲೆ ಕಾಣಿಸಿಕೊಳ್ಳುತ್ತದೆ

   ಡೊನಾಲ್ಡ್ ಟ್ರಂಪ್ ಗೆ ನಿಗೂಢವಾದ ಕಾಯಿಲೆ ಕಾಣಿಸಿಕೊಳ್ಳುತ್ತದೆ

   ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗೂಢವಾದ ಕಾಯಿಲೆಯಿಂದ ಬಳಲುತ್ತಾರೆ. ಕಿವಿ ಕೇಳಿಸದಿರುವುದು ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳು ಎದುರಿಸುತ್ತಾರೆ ಎಂದು ವಂಗಾ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕ್ಯೂಬಾ ಹಾಗೂ ಚೀನಾದಲ್ಲಿರುವ ಅಮೆರಿಕದ ಅಧಿಕಾರಿಗಳಿಗೆ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಅಂಥ ಅನುಭವಗಳಾಗಿವೆ. ಅಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪತ್ತೆ ಹಚ್ಚಲಾಗದಂಥ ಕಾಯಿಲೆಗಳು ಬರುತ್ತವೆ. ಅದರಿಂದ ಅವರ ಜೀವಕ್ಕೆ ಅಪಾಯ ಇದೆ ಅಂತ ಅಲ್ಲವೆ? ಇದು ಬಾಬಾ ವಂಗಾ ಹೇಳಿದ ಭವಿಷ್ಯ.

   ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ

   ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ

   ಯುರೋಪಿಯನ್ ಒಕ್ಕೂಟದಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಳ್ಳಲಿದೆ ಎಂಬ ಬಗ್ಗೆ ಆಕೆ ಭವಿಷ್ಯ ನುಡಿದಿದ್ದಾರೆ. ರಷ್ಯಾ ದೇಶದಲ್ಲಿ ಆಕಾಶಕಾಯವೊಂದು ಭಾರೀ ಅನಾಹುತ ಸೃಷ್ಟಿಸಲಿದೆಯಂತೆ. ಬೆನು ಆಕಾಶಕಾಯದಿಂದ ಬಾಹ್ಯಾಕಾಶ ದೂಳು ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಸಂಗ್ರಹ ಮಾಡಿತ್ತು ನಾಸಾ. ಅದರ ಪ್ರಕಾರ, ಆ ಆಕಾಶಕಾಯದಿಂದ ಸದ್ಯಕ್ಕೆ ಭೂಮಿಗೆ ಯಾವುದೇ ಅಪಾಯವಿಲ್ಲ. ಆದರೆ ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ 2019ರಲ್ಲಿ ರಷ್ಯಾದಲ್ಲಿ ಆಕಾಶಕಾಯವೊಂದು ಅನಾಹುತ ಸೃಷ್ಟಿಸಲಿದೆ. ಒಟ್ಟಿನಲ್ಲಿ ಅದೇನು ಕಾದಿದೆಯೋ?

   ಯಾರು ಈ ಬಾಬಾ ವಂಗಾ?

   ಯಾರು ಈ ಬಾಬಾ ವಂಗಾ?

   ಬಾಬಾ ವಂಗಾ ಹುಟ್ಟಿದ್ದು ಮೆಸಿಡೋನಿಯಾ ಸ್ಟ್ರುಮಿಕಾದ ಪಂದೆವಾ ಡಿಮಿಟ್ರೋವಾದಲ್ಲಿ. ತನ್ನ ಹನ್ನೆರಡನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. ಕೆಲ ಕಾಲ ಆಕೆ ನಾಪತ್ತೆಯಾಗಿದ್ದರು. ಆ ನಂತರ ಪತ್ತೆಯಾದ ಮೇಲೆ ಮೊದಲ ಬಾರಿಗೆ ಭವಿಷ್ಯ ನುಡಿದರು. ಎರಡನೇ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಆಕೆಯ ಹೀಲಿಂಗ್ ಮೂಲಕ ಹೆಸರು ಗಳಿಸಿದರು. ಹಲವು ರಾಷ್ಟ್ರಗಳ ನಾಯಕರು ಆಕೆಯನ್ನು ಭೇಟಿ ಮಾಡಿದ್ದರು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ಭಯೋತ್ಪಾದನಾ ದಾಳಿಯು ಆಕೆ ನುಡಿದ ಭವಿಷ್ಯಗಳ ಪೈಕಿಯೇ ಹೆಚ್ಚು ಚಾಲ್ತಿಗೆ ಬಂದಿತು. ಭೀಕರ, ಭೀಕರ! ಅಮೆರಿಕದ ಮೇಲೆ ಲೋಕದ ಹಕ್ಕಿಗಳ ದಾಳಿಗಳಾಗುತ್ತವೆ. ತೋಳಗಳು ಕೂಗಿಡುತ್ತವೆ, ಅಮಾಯಕರ ರಕ್ತ ಹರಿಯುತ್ತದೆ" ಎಂದು ಹೇಳಿದ್ದರು ವಂಗಾ.

   English summary
   Baba Vanga, the blind mystic who many claimed predicted the rise of ISIS, 9/11 and Brexit, envisioned a series of disasters to take place during 2019, including a European economic collapse, Donald Trump falling ill and Russia being hit by a meteorite.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X