Darshan Thoogudeepa: ದರ್ಶನ್ ಜಾಮೀನು ವಿಚಾರದಲ್ಲಿ ಶಾರದಾಂಬ ದೇವಿ ನುಡಿದ ಭವಿಷ್ಯವೇನು...? ಆಗಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಅಲ್ಲದೆ ತಮ್ಮ ಇಚ್ಚೆಯಂತೆ ಬೆಂಗಳೂರಿನಲ್ಲೇ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಜೈಲಿನಿಂದ ಹೊರಬರುವ ಮೊದಲು ಅವರಿಗೆ ಯಾವಾಗ ಜಾಮೀನು ಸಿಗಲಿದೆ ಎಂದು ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಇದರಲ್ಲಿ ಶಾರದಾಂಬ ದೇವಿ ನುಡಿದ ಭವಿಷ್ಯ ಕೂಡ ಒಂದು. ಹಾಗಾದರೆ ಇದು ನಿಜವಾಯ್ತಾ? ಸುಳ್ಳಾಯ್ತಾ? ಶಾರದಾಂಬ ದೇವಿ ನುಡಿದ ಭವಿಷ್ಯವೇನು?
ಎಷ್ಟೇ ಪ್ರಯತ್ನಪಟ್ಟರೂ ದರ್ಶನ್ ಜಾಮೀನು ಸಿಗುವುದು ಸುಲಭವಿರಲಿಲ್ಲ. ಇದಕ್ಕಾಗಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ದರ್ಶನ್ ಯಾವಾಗ ಹೊರ ಬರುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಇದಕ್ಕೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಇದರಲ್ಲಿ ಮೈಸೂರಿನಲ್ಲಿ ಶಾರದಾಂಬ ದೇವಿ ಹೆಸರಿನಲ್ಲಿ ಭವಿಷ್ಯ ಹೇಳುವ ಮಹಿಳೆಯೊಬ್ಬರು ಆಗಸ್ಟ್ ತಿಂಗಳಲ್ಲಿ ನಟ ದರ್ಶನ್‌ಗೆ ಜಾಮೀನು ಸಿಗುವ ಬಗ್ಗೆ ಭವಿಷ್ಯ ಹೇಳಿದ್ದರು.

ದರ್ಶನ್‌ಗೆ ಈಗಲೇ ಜಾಮೀನು ಸಿಗುವುದಿಲ್ಲ, ಅವರ ಟೈಮ್ ಸರಿ ಇಲ್ಲ, ಇನ್ನು ಒಂದೂವರೆ ಎರಡು ತಿಂಗಳ ಒಳಗೆ ಜಾಮೀನು ಸಿಗುತ್ತದೆ ಎಂದು ಹೇಳಿದ್ದರು. ಆತನಿಗೆ ಗ್ರಹಗತಿಗಳು ಸರಿ ಇಲ್ಲ, ಗುರುಬಲ ಇಲ್ಲ ಈಗ ಆತ ಏನೇ ಮಾಡಿದರೂ ಎಲ್ಲಾ ಉಲ್ಟಾ ಆಗುತ್ತದೆ. ಜಾಮೀನು ಸಿಗಲು ಇನ್ನು ಎರಡು ತಿಂಗಳು ಆಗಬಹುದು, ಅಷ್ಟರ ಒಳಗೆ ದರ್ಶನ್ ಹೊರಗಡೆ ಬರ್ತಾರೆ ಎಂದು ಹೇಳಿದ್ದರು. ಇದು ನಾನು ಹೇಳುತ್ತಿಲ್ಲ ನನ್ನ ಬಳಿ ಶಾರದಾಂಬ ದೇವಿ ಹೇಳಿಸುತ್ತಿರುವುದು. ಯಡಿಯೂರಪ್ಪ ವಿಚಾರದಲ್ಲಿ ಕೂಡ ನಾನು ಹೇಳಿದ್ದು ನಿಜವಾಗಿದೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದರು.
ಅಲ್ಲದೆ ಈ ಮಹಿಳೆ, ರಾಜ ರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ವಾಸ್ತುದೋಷ ಇದೆ. ದರ್ಶನ್ ಹೊರಗೆ ಬಂದ ಮೇಲೆ ಅವರಿಗೆ ಕೇಸಿನಲ್ಲಿ ಶಿಕ್ಷೆಯಾಗುತ್ತದಾ ಇಲ್ಲಾ ಕೇಸು ಖುಲಾಸೆಯಾಗುತ್ತದಾ ಎಂದು ಹೇಳುವುದಾಗಿ ಮಹಿಳೆ ತಿಳಿಸಿದ್ದರು.

ನಿಜವಾಯ್ತಾ ಶಾರದಾಂಬ ದೇವಿ ನುಡಿದ ಭವಿಷ್ಯ?
ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆ ಎನ್ನುವುದಕ್ಕೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಕೆಲವರು ಇಂತಹ ತಿಂಗಳಿನಲ್ಲಿ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎಂದರೆ, ಇನ್ನೂ ಕೆಲವರು ಈ ದಿನಾಂಕದ ನಂತರ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದ್ದರು. ಕೆಲವರು ಹೇಳಿದ ಭವಿಷ್ಯ ನಿಜವಾದರೆ ಇನ್ನೂ ಕೆಲವರು ಹೇಳಿದ ಭವಿಷ್ಯ ಸುಳ್ಳಾಗಿದೆ.
ಆದರೆ ಮೈಸೂರಿನಲ್ಲಿ ಶಾರದಾಂಬ ದೇವಿ ಹೆಸರಿನಲ್ಲಿ ಭವಿಷ್ಯ ಹೇಳುವ ಮಹಿಳೆ ಆಗಸ್ಟ್ ತಿಂಗಳಲ್ಲಿ ದರ್ಶನ್ ಒಂದುವರೆ ಹಾಗೂ ಎರಡು ತಿಂಗಳ ಒಳಗೆ ಜೈಲಿನಿಂದ ಹೊರಬರುತ್ತಾರೆ ಎಂದಿದ್ದರು. ಅಕ್ಟೋಬರ್ 30ಕ್ಕೆ ದರ್ಶನ್ ಜೈಲಿನಿಂದ ಹೊರಬಂದಿದ್ದಾರೆ. ಹೀಗಾಗಿ ಇದು ಕೂಡ ನಿಜವಾಗಿದೆ ಎಂದು ಜನ ಹೇಳುತ್ತಿದ್ದಾರೆ.
ದರ್ಶನ್‌ಗೆ ಚಿಕಿತ್ಸೆ ಆರಂಭ
ದರ್ಶನ್‌ಗೆ ಚಿಕಿತ್ಸೆ ಆರಂಭವಾಗಿದೆ. ಆದರೆ ಯಾವಾಗ ಮುಗಿಯುತ್ತದೆ ಎನ್ನುವ ಬಗ್ಗೆ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ದರ್ಶನ್‌ಗೆ ಆರು ವಾರ ಮಾತ್ರ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ಜೊತೆಗೆ ಅವರ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಕೋರ್ಟ್ ಹೇಳಿದೆ. ಇದರಿಂದಾಗಿ ದರ್ಶನ್ ಜೈಲಿನಿಂದ ಹೊರಗೊದ್ದರೂ ಅವರಿಗೆ ಟೆನ್ಶನ್ ತಪ್ಪಿಲ್ಲ. ಅವರು ಚಿಕಿತ್ಸೆ ಬಳಿಕ ಮತ್ತೆ ಜೈಲಿಗೆ ಹೋಗುವ ಸಾಧ್ಯತೆ ಇದೆ. ಆದರೆ ಎಲ್ಲವೂ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ನೀಡುವ ವರದಿ ಮೇಲೆ ನಿರ್ಧರಿತವಾಗಿರುತ್ತದೆ. ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಜ್ಯೋತಿಷಿಗಳು ಹೇಳಿದ ಭವಿಷ್ಯದ ಸರಿ ತಪ್ಪುಗಳ ಲೆಕ್ಕಾಚಾರಗಳು ಜೋರಾಗಿ ನಡೆದಿದೆ. ಕೆಲವರು ಹೇಳಿದ ಭವಿಷ್ಯ ನಿಜವಾಗಿದ್ದು ಜನರಲ್ಲಿ ನಂಬಿಕೆ ಹೆಚ್ಚಾಗಿದೆ.












Click it and Unblock the Notifications