ಇನ್ನೊಂದೇ ದಿನ ಈ ರಾಶಿಯವರ ಹೆಗಲೇರುವುದು ಅದೃಷ್ಟ : ಧನ ಲಾಭ, ವಾಹನ ಖರೀದಿ ಯೋಗ
ಪ್ರತಿಯೊಂದು ಗ್ರಹಗಳು ನಿರ್ದಿಷ್ಟ ಅವಧಿಗೆ ಅನುಸಾರವಾಗಿ ತಮ್ಮ ನಡೆಯನ್ನು ಬದಲಿಸುತ್ತವೆ. ಅಂದರೆ ರಾಶಿ ನಕ್ಷತ್ರವನ್ನು ಬದಲಿಸುತ್ತವೆ. ಕೆಲವೊಮ್ಮೆ ಹಿಮ್ಮುಖ ಚಲನೆ ಆರಂಭಿಸುತ್ತದೆ. ಇನ್ನು ಕೆಲವೊಮ್ಮೆ ಅಸ್ತವಾದರೆ ಮತ್ತೊಮ್ಮೆ ಉದಯವಾಗುತ್ತದೆ. ಈ ರೀತಿ ಗ್ರಹಗಳ ಚಲನೆಯಲ್ಲಿ ಆಗುವ ಎಲ್ಲಾ ಬದಲಾವಣೆಗಳು ಪ್ರತಿಯೊಂದು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ಅದೃಷ್ಟವಾದರೆ ಇನ್ನು ಕೆಲವು ರಾಶಿಯವರಿಗೆ ದುರಾದೃಷ್ಟವನ್ನು ತರಬಹುದು.
ಧನಿಷ್ಠ ನಕ್ಷತ್ರಕ್ಕೆ ಚಂದ್ರನ ಚಲನೆ
ಶ್ರಾವಣ ನಕ್ಷತ್ರದಲ್ಲಿರುವ ಚಂದ್ರ ನಾಳೆ ಅಂದರೆ ಆಗಸ್ಟ್ 27ಕ್ಕೆ ಧನಿಷ್ಠ ನಕ್ಷತ್ರಕ್ಕೆ ಕಾಲಿಡುತ್ತಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಈ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಮಾನಸಿಕ ಶಾಂತಿಯನ್ನು ನೀಡುವುದರ ಜೊತೆಗೆ ಬೌದ್ಧಿಕ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ. ಸಂಪತ್ತನ್ನು ಹೆಚ್ಚಿಸಲು ಇದು ದಾರಿ ಮಾಡಿ ಕೊಡುವುದು. ಚಂದ್ರನ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಬಹುದು. ಹಾಗಿದ್ದರೆ ಚಂದ್ರನ ನಕ್ಷತ್ರ ಬದಲಾವಣೆ ಯಾವ ರಾಶಿಯವರಿಗೆ ಶುಭ ಫಲವನ್ನು ನೀಡುತ್ತದೆ ಎನ್ನುವುದನ್ನು ನೋಡೋಣ.

ಈ ರಾಶಿಯವರಿಗೆ ಸಿಗುವುದು ಶುಭ ಪರಿಣಾಮ
ವೃಷಭ ರಾಶಿ (Taurus): ಚಂದ್ರನ ಸಂಚಾರ ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚಿನ ಪ್ರಯೋಜನ ನೀಡುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಇದ್ದಕ್ಕಿದ್ದಂತೆ ನಿಮ್ಮ ಸಂಪತ್ತು ಹೆಚ್ಚಾಗುವುದು. ಬಹಳ ದಿನಗಳಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ವಿದೇಶಿ ವ್ಯವಹಾರಗಳಿಂದ ಉತ್ತಮ ಲಾಭ ಸಿಗುವುದು. ಹಣದ ಹರಿವು ಹೆಚ್ಚಾಗುವುದು. ಹಣ ಗಳಿಕೆಗೆ ಹೊಸ ಅವಕಾಶ ಸಿಗುವುದು. ಹೊಸ ಕೆಲಸ ಆರಂಭಿಸಬೇಕು ಅಂದುಕೊಂಡವರಿಗೆ ಇದು ಸರಿಯಾದ ಸಮಯ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಮಾನಸಿಕ ಒತ್ತಡದಿಂದ ಮುಕ್ತಿ ಸಿಗುವುದು. ಮಾಡುವ ಕೆಲವು ಪ್ರಯತ್ನಗಳಲ್ಲಿ ಗಮನಾರ್ಹ ಯಶಸ್ಸು ಸಿಗುವುದು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗುವುದು.
ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ ಚಂದ್ರನ ಸಂಚಾರವು ಹೆಚ್ಚು ಪ್ರಯೋಜನಕಾರಿಯಾಗಿರುವುದು. ಪ್ರೇಮ ಜೀವನವು ಸಂತೋಷದಿಂದ ತುಂಬಿರುವುದು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳುವುದು. ಮನೆಯಲ್ಲಿ ಮದುವೆ ಮಾತುಕತೆ ನಡೆಯುವುದು. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಹೊಸ ಉದ್ಯಮಕ್ಕೆ ಕೈ ಹಾಕಬಹುದು. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಜಯ ಸಿಗುವುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಬಾಕಿ ಕೆಲಸಗಳು ಪೂರ್ಣಗೊಳ್ಳುವುದು. ಹೊಸ ಕೆಲಸಕ್ಕೆ ಪ್ರಯತ್ನಿಸುವವರಿಗೆ ಜಯ ಸಿಗುವುದು.
ಕನ್ಯಾ ರಾಶಿ (Virgo): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ದೊಡ್ಡ ಮಟ್ಟದ ಲಾಭವಾಗುವುದು. ಹೂಡಿಕೆಗಳು ಉತ್ತಮ ಹಣವನ್ನು ಗಳಿಸಲು ಸಹಾಯ ಮಾಡುವುದು. ಸಂಪತ್ತು ಹೆಚ್ಚಾಗುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗುವುದು. ಕಚೇರಿಯಲ್ಲಿ ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಸಂತೋಷಗೊಳ್ಳುವರು. ಮಾಡುವ ಪ್ರತಿಯೊಂದು ಪ್ರಯತ್ನಕ್ಕೆ ಪೋಷಕರಿಂದ ಬೆಂಬಲ ಸಿಗುವುದು. ಆರೋಗ್ಯವು ಉತ್ತಮವಾಗಿರುವುದು. ಆದಾಯದ ಮೂಲ ಹೆಚ್ಚುವುದು. ಸ್ನೇಹಿತರ ಬೆಂಬಲ ಇರುವುದು. ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು. ವಾಹನ ಖರೀದಿ ಯೋಗವೂ ಇದೆ.
ಮಕರ ರಾಶಿ (Capricorn): ಚಂದ್ರನ ಸಂಚಾರವು ನಿಮ್ಮ ಸಂತೋಷವನ್ನು ಹೆಚ್ಚಿಸುವುದು. ಬಾಕಿ ಕೆಲಸಗಳು ಪೂರ್ಣಗೊಳ್ಳುವುದು. ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ನಾಯಕತ್ವದ ಗುಣಗಳು ಸುಧಾರಿಸುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಕುಟುಂಬ ಜೀವನದಲ್ಲಿ ಸಂತೋಷವು ಮೇಲುಗೈ ಸಾಧಿಸುವುದು. ಈ ಸಮಯದಲ್ಲಿ ಇತರರ ಮಾತುಗಳನ್ನು ತಾಳ್ಮೆಯಿಂದ ಕೇಳುವುದು ಪ್ರಯೋಜನಕಾರಿಯಾಗಿರುವುದು. ಬೇರೆಯವರ ಮಾತಿನ ಮೇಲೆಯೂ ನಿಮ್ಮ ನಿರ್ಧಾರ ನಿಂತಿರಬಹುದು. ವ್ಯವಹಾರ ನಿರ್ಧಾರಗಳು ಯಶಸ್ವಿಯಾಗುವುದು. ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸಬಹುದು.


Click it and Unblock the Notifications
