ಕನ್ಯಾ : ಹೆಚ್ಚಿನ ಜವಾಬ್ದಾರಿಗಳು ಹೊರಿಸಲಾಗುತ್ತದೆ

ಪುರುಷರು: ಸಿಕ್ಕಾಪಟ್ಟೆ ಕೆಲಸವಾಗಿ ಯಾವುದು ಮೊದಲು ಮಾಡಬೇಕು, ಯಾವುದು ನಂತರ ಎಂದು ತಿಳಿಯದಷ್ಟು ಕೆಲಸ ಕಾರ್ಯಗಳು ಆಗುತ್ತವೆ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಗಳು ಸಹ ಹೊರಿಸಲಾಗುತ್ತದೆ. ನಿತ್ಯದ ಸ್ಥಳ ಅಲ್ಲದೇ ಉದ್ಯೋಗ ನಿಮಿತ್ತ ಬೇರೆ ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕಾಗಬಹುದು.

ನಿಮ್ಮ ಸಹೋದ್ಯೊಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲು ಪ್ರಯತ್ನಿಸಿ. ಏಕೆಂದರೆ, ಅವರು ಮಾಡಿದ ತಪ್ಪು ನಿಮ್ಮ ಮೇಲೆ ಹಾಕಬಹುದು. ಕೆಲವರಿಗೆ ತಮ್ಮ ಮೇಲಧಿಕಾರಿಗಳು ದಿವ್ಯ ನಿರ್ಲಕ್ಷದಿಂದ ಮಾಡಿದ ತಪ್ಪು, ಎಡವಟ್ಟು ತಲೆ ಮೇಲೆ ಬರುವ ಸಾಧ್ಯತೆಗಳಿವೆ.

Virgo monthly horoscope in Kannada for September 2017

ಎರಡು ವಾರಗಳು ಕಳೆದ ನಂತರ ಉದ್ಯೋಗದಲ್ಲಿ ಬಡ್ತಿ ಅಥವಾ ಸಂಬಳದಲ್ಲಿ ವೃದ್ಧಿ ಇದೆ. ಇನ್ನು ಖರ್ಚಿನ ವಿಚಾರಕ್ಕೆ ಬಂದರೆ ಬೇರೆಯವರು ಮಾಡಿದ ಖರ್ಚುಗಳಿಗೂ ನೀವೇ ಹಣ ಪಾವತಿಸುವ ಸಾಧ್ಯತೆಗಳು ಕಾಣಿಸುತ್ತಿವೆ.

ಸ್ತ್ರೀಯರು: ಸ್ನೇಹಿತರಿಂದ ಅಥವಾ ಸಂಬಂಧಿಗಳಿಂದ ಆರ್ಥಿಕವಾಗಿ ಸಹಾಯ ಆಗಲಿದೆ. ಕಡೇ ಪಕ್ಷ ಸಾಲ ಆದರೂ ಸಿಗಲಿದೆ. ನಿಮ್ಮ ಮಕ್ಕಳ ಆರೋಗ್ಯ ವಿಚಾರದಲ್ಲಿ ಅನಿರೀಕ್ಷಿತ ಖರ್ಚುಗಳು ಬರಲಿದೆ. ಸೌಂದರ್ಯ ವೃಧ್ಧಿಯತ್ತ ಈ ತಿಂಗಳು ಹೆಚ್ಚು ಗಮನ ಇರುತ್ತದೆ.

ವಿವಾಹಿತರಿಗೆ ತವರು ಮನೆಗೆ ಹೊಗುವ ಸುಯೋಗವಿದೆ. ತಂದೆಯಿಂದ ಸಹಾಯ ಹಸ್ತ ಲಭಿಸುತ್ತದೆ. ನಿಮ್ಮ ಕೈ ಅಡುಗೆಗೆ ಈ ತಿಂಗಳು ಸಿಕ್ಕಾಪಟ್ಟೆ ಬೇಡಿಕೆ ಕಾಣಬಹುದು. ಆದರೆ ಈ ತಿಂಗಳು ನೀವು ನಿಮಗೆ ಗೊತ್ತಾಗುವ ಕೆಲ ಗುಟ್ಟುಗಳನ್ನು ರಟ್ಟು ಮಾಡಬಾರದು.

ನೀವು ಅಕಸ್ಮಾತ್ ಎಲ್ಲರಿಗೂ ತಿಳಿಸಿ ಗುಟ್ಟು ರಟ್ಟು ಮಾಡಿದರೆ ಕೆಲ ಪ್ರಮುಖ ವ್ಯಕ್ತಿಗಳ ಭರವಸೆಯನ್ನು ಕಳೆದುಕೊಳ್ಳುತೀರಿ. ಹಾಡು- ಸಂಗೀತದಲ್ಲಿ ಆಸಕ್ತಿ ಮೂಡುತ್ತದೆ. ಸಂಗೀತವನ್ನೇ ವೃತ್ತಿಯಾಗಿ ಸ್ವೀಕರಿಸುವ ಹಂಬಲ ಇರುವವರು ಈ ತಿಂಗಳಿನಲ್ಲಿ ಯಶಸ್ಸು ಕಾಣಬಹುದು.

ವಿದ್ಯಾರ್ಥಿಗಳು: ಪರೀಕ್ಷೆಗಳನ್ನು ಬರೆಯುವುದು ಇದ್ದಲ್ಲಿ ಅಥವಾ ಹೆಚ್ಚಿನ ಅಧ್ಯಯನ ಮಾಡಲು ಯೋಚಿಸುತ್ತಾ ಇದ್ದಲ್ಲಿ ಬಹಳ ಎಚ್ಚರಿಕೆ ಅವಶ್ಯ. ಏಕೆಂದರೆ ಗೊಂದಲಕ್ಕೆ ಒಳಗಾಗಿ ಸಮಸ್ಯೆಗೆ ಸಿಲುಕಿಕೊಳ್ಳಬಹುದು.

ಪರಿಹಾರ: ಸಾಧ್ಯ ಆದಲ್ಲಿ ಸಿಗಂದೂರು ಚೌಡೇಶ್ವರಿ ದರ್ಶನ ಮಾಡಿ ಬನ್ನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+