ವೃಶ್ಚಿಕ : ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಈ ತಿಂಗಳ ಮೊದಲರೆಡು ವಾರಗಳಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಮಯ ಕಾಣಬಹುದು. ಬಡ್ತಿ ಸಹ ಸಿಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಬೇಕಿದ್ದಲ್ಲಿ ಈ ತಿಂಗಳ ಮೊದಲ ಎರಡು ವಾರಗಳ ಒಳಗೆ ಮುಗಿಸಿಕೊಳ್ಳಬೇಕು.

ಸ್ಥಳಾಂತರದ ಸಾಧ್ಯತೆಗಳು ಸಹ ಕಾಣುತ್ತಿವೆ. ಆರ್ಥಿಕವಾಗಿ ಸಮಾಧಾನಕರವಾಗಿ ಇರುತ್ತದೆ. ವ್ಯಾಪಾರ ಮಾಡುವವರಿಗೆ ದುಡ್ಡಿನ ಒಳಹರಿವು ಅಂದುಕೊಂಡ ಪ್ರಮಾಣಕ್ಕಿಂತ ಹೆಚ್ಚು ಬರುತ್ತದೆ. ಇನ್ನು ತಿಂಗಳ ಮಧ್ಯ ಹಾಗೂ ಕೊನೆಯ ಭಾಗಕ್ಕೆ ಸರಿದಂತೆ ಭೂಮಿ ಖರೀದಿಗಾಗಿ ಕೈ ಹಾಕಿ ಕೆಲಸ ಅರ್ಧದಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.

Scorpio monthly horoscope in Kannada for September 2017

ಅದರಲ್ಲಿಯೂ ನೀವು ಖರೀದಿಸಬೇಕು ಎಂದು ಕೈ ಹಾಕಿದ ಜಮೀನಿನ ಕಾಗದದ- ಪತ್ರ ಸರಿ ಇಲ್ಲದೆ ಸಮಸ್ಯೆ ಆಗುತ್ತದೆ. ನಿಮಗೆ ತಪ್ಪು ಮಾಹಿತಿ ಕೊಡಲಾಗುತ್ತದೆ, ಎಚ್ಚರ.

ಸ್ತ್ರೀಯರು: ಕೌಟುಂಬಿಕವಾಗಿ ಉತ್ತಮವಾಗಿರುತ್ತದೆ. ಬಹಳ ಮುಖ್ಯವಾಗಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಲಭಿಸುತ್ತದೆ. ಈ ಹಿಂದೆ ಇದ್ದ ಜಗಳ- ಮನಸ್ತಾಪ ಎಲ್ಲ ಶಮನ ಆಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಪತಿ ಹಾಗೂ ಮಕ್ಕಳ ಸಹಕಾರ ಸಿಗುತ್ತದೆ.

ಬಹು ಮುಖ್ಯವಾದ ಅಥವಾ ದೊಡ್ಡ ಆರೋಗ್ಯ ಸಮಸ್ಯೆ ಎಂದು ಹೇಳುವಂಥ ಯಾವ ದೊಡ್ಡ ಆರೋಗ್ಯ ಸಮಸ್ಯೆಗಳೂ ಬಾರದು. ಹೊಸದೊಂದು ವ್ಯಾಪಾರ ಮಾಡುವ ಮನಸಾಗುತ್ತದೆ. ಅದಕ್ಕಾಗಿ ಹಣದ ಹೂಡಿಕೆ ಮಾಡಲು ನಿಮ್ಮ ಸಹೋದರರ ಸಹಾಯ ಕೇಳುವ ಸಾಧ್ಯತೆಗಳು ಕಾಣಿಸುತ್ತಿವೆ.

ಸಂತಸದ ವಿಚಾರ ಎಂದರೆ ಹಿರಿಯ ವಯಸ್ಸಿನ ಸ್ತ್ರೀಯರಿಗೆ ಮಗ ಬಂಗಾರದ ಆಭರಣ ಕೊಡಿಸುತ್ತಾನೆ. ಕೆಲವರ ಹೊಗಳಿಕೆಗಳಿಗೆ ಅಟ್ಟ ಹತ್ತಬೇಡಿ. ಎಲ್ಲರನ್ನೂ ಕಣ್ಣು ಮುಚ್ಚಿ ನಂಬಬೇಡಿ.

ವಿದ್ಯಾರ್ಥಿಗಳು: ನೀವು ಬಯಸಿದ ವಿದ್ಯಾಲಯಗಳಲ್ಲಿ ಅಥವಾ ಬಯಸಿದ ತರಗತಿಗಳಲ್ಲಿ ಪ್ರವೇಶ ಲಭಿಸುತ್ತದೆ.

Saturn Transition: From Scorpio to Sagittarius | OneIndia Kannada

ಪರಿಹಾರ: ಈ ತಿಂಗಳಿನಲ್ಲಿ ಸಮಯ ಮಾಡಿಕೊಂಡು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿ, ಅಲ್ಲಿ ನದೀ ಸ್ನಾನ ಮಾಡಿ, ದೇವ ದರ್ಶನ ಪಡೆಯಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Get the complete month predictions of September 2017. Read monthly horoscope of Scorpio in Kannada. Get free monthly horoscope, astrology and monthly predictions in Kannada.
Please Wait while comments are loading...