April Monthly Horoscope 2025: ಏಪ್ರಿಲ್ 2025ರ ಮಾಸ ಭವಿಷ್ಯ- ಏಪ್ರಿಲ್‌ನಲ್ಲಿ ಈ ರಾಶಿಗೆ ಸಂಪತ್ತು ಸಮೃದ್ಧಿ ಗುರುಬಲ

ಇಂದು ಏಪ್ರಿಲ್ ತಿಂಗಳು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಲ್ಲಿ ಹಲವಾರು ಗ್ರಹಗಳು ತಮ್ಮ ಸ್ಥಾನ ಬದಲಾಯಿಸಲಿದ್ದು ಅನೇಕ ಯೋಗಗಳು ರೂಪಗೊಳ್ಳಲಿವೆ. ಅಲ್ಲದೆ 06.04.25 ಶ್ರೀರಾಮ ನವಮಿ. 10.04.25ರಂದು ಮಹಾವೀರ ಜಯಂತಿ, 14.04.25ರಂದು ಸೌರಯುಗಾದಿ/ಅಂಬೆಡ್ಕರ್ ಜಯಂತಿ ಇದ್ದು ಸೂರ್ಯ ಮೇಷರಾಶಿಗೆ ಪ್ರವೇಶ ಮಾಡಲಿದ್ದಾನೆ. ಇನ್ನೂ 18.04.25ರಂದು ಗುಡ್ ಫ್ರೈಡೇ ಹಾಗೂ 30.04.25ರಂದು ಅಕ್ಷಯ ತದಿಗೆ/ಬಸವೇಶ್ವರ ಜಯಂತಿ ಇದೆ. ಹಾಗಾದರೆ 01.04.2025 ರಿಂದ 30.04.2025ರವರೆಗೆ ಏಪ್ರಿಲ್ 2025ರ ದ್ವಾದಶ ರಾಶಿಗಳ ಮಾಸ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

Monthly Horoscope For April 2025 Masika Rashi Bhavishya For 12 Zodiac Signs in Kannada

ಮೇಷ ರಾಶಿ:

ಈಗ ನಿಮಗೆ ಗುರುಬಲ ಇನ್ನೂ ಎರಡು ತಿಂಗಳು ಇದ್ದು ಎಲ್ಲ ಕೆಲಸಗಳನ್ನೂ ಶೀಘ್ರವಾಗಿ ಮುಗಿಸಿಕೊಳ್ಳಿ. ಶನಿ ಹನ್ನೆರಡನೇ ಮನೆಗೆ ಬಂದಿರುವುದರಿಂದ ಸಾಡೆಸಾತಿ ಶನಿ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ಯಾವ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಕಷ್ಟು ಯೋಚಿಸಿ ಮುಂದುವರೆಯಿರಿ. ಏರುಪೇರುಗಳು, ಏಳುಬೀಳುಗಳು ಈ ಅವಧಿಯಲ್ಲಿ ಸಾಮಾನ್ಯ.

ಈಗ ಕೇತು ಕೂಡ ಆರನೇ ಮನೆಯಲ್ಲಿ ಮೇ ತನಕ ಇರುವುದರಿಂದ ಹಣಕಾಸಿನ ಹರಿವು ಸಾಕಷ್ಟು ಉತ್ತಮವಾಗಿರುತ್ತದೆ. ಮಾನಸಿಕ ದೈಹಿಕ ಶಕ್ತಿಯು ವೃದ್ಧಿಯಾಗುತ್ತದೆ. ಕೇತು ಧೈರ್ಯ ಸಾಹಸ ಕೆಚ್ಚು ಕೊಡುತ್ತಾನೆ. ಸಾಡೆಸಾತಿ ಪ್ರಾರಂಭದ ಹಂತದಲ್ಲಿ ಇದ್ದೀರಿ. ಎಲ್ಲ ವಿಧದಲ್ಲೂ ಎಚ್ಚರಿಕೆ ಅಗತ್ಯ. ವಾಹನ ಓಡಿಸುವಾಗ ಜಾಗ್ರತೆ ಇರಲಿ. ಆಂಜನೇಯನ ಜಪ ಮಾಡಿ.

Monthly Horoscope For April 2025 Masika Rashi Bhavishya For 12 Zodiac Signs in Kannada

ವೃಷಭ ರಾಶಿ:

ರಾಹು ಲಾಭಸ್ಥಾನದಲ್ಲಿ ಇದ್ದು ಧನಲಾಭ ನಿರಂತರವಾಗಿ ಕೊಡುತ್ತಿದ್ದಾನೆ. ಏನೇ ಹಣಕಾಸಿನ ಏರುಪೇರಾದರೂ ಲಾಭಸ್ಥಾನದ ರಾಹುವಿನಿಂದ ಎಲ್ಲವೂ ಬ್ಯಾಲೆನ್ಸ್ ಆಗುತ್ತಿದೆ. ಶನಿ ಕೂಡ ಲಾಭಸ್ಥಾನಕ್ಕೆ ಬಂದಿರುವುದರಿಂದ ನಿಮಗೆ ಇನ್ನೂ ಹೆಚ್ಚಿನ ಅಭಿವೃದ್ಧಿ, ಧನಲಾಭ ಇದೆ. ಶನಿ ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ಈ ತಿಂಗಳ ಅಂತ್ಯದವರೆಗೂ ನಾಲ್ಕು ಗ್ರಹಗಳು ಲಾಭಸ್ಥಾನದಲ್ಲಿ ಇದ್ದು ನಿಮ್ಮ ಯಶಸ್ಸು ಅಭಿವೃದ್ಧಿಗೆ ಕಾರಣರಾಗುತ್ತಾರೆ.

ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಂಗತಿಗಳು ಜರುಗುತ್ತದೆ. ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಕೌಟುಂಬಿಕ ಸೌಖ್ಯ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ.

Monthly Horoscope For April 2025 Masika Rashi Bhavishya For 12 Zodiac Signs in Kannada

ಮಿಥುನ ರಾಶಿ:

ಶುಭಫಲಗಳನ್ನು ಪಡೆಯಲು ನೀವು ಇನ್ನೂ ಕಾಯಬೇಕು. ಈ ಮಾಸ ಸಹಾ ನಿಮಗೆ ಮಧ್ಯಮವಾಗಿದೆ. ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಆದೆ ಗುರುಬಲ ಶನಿಬಲ ಯಾವುದೂ ಇಲ್ಲ. ಹತ್ತನೇ ಮನೆಯಲ್ಲಿ ಬುಧ, ಶುಕ್ರ ರಾಹು ನಿಮ್ಮ ವೃತ್ತಿಯನ್ನು ಸಂಭಾಳಿಸುತ್ತಾರೆ. ಶನಿ ಕೂಡ ಹತ್ತನೇ ಮನೆಗೆ ಬಂದಿದ್ದಾನೆ. ಇದರಿಂದ ವೃತ್ತಿಯಲ್ಲಿ ಒಳ್ಳೆಯಫಲ ನಿರೀಕ್ಷೆ ಮಾಡಬಹುದು. ಗುರು ಮುಂದೆ 12ನೇ ಮನೆಯಿಂದ ನಿಮ್ಮ ರಾಶೀಗೇ ಬರುತ್ತಾನೆ. ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಆದರೆ ಮುಂದಿನ ದಿನಗಳಲ್ಲಿ ಕೇತು ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಹೆಚ್ಚಿನ ಧನಲಾಭ ಅನುಕೂಲ ಇದೆ.

ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ತಾಯಿಯಿಂದ ಸಹಾಯ ಇದೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಒಳ್ಳೆಯ ದಿನಗಳಿಗಾಗಿ ಇನ್ನೂ ಸ್ವಲ್ಪ ನಿರೀಕ್ಷೆ ಮಾಡಿ. ಶುಕ್ರ ಹಾಗೂ ಬುಧ ಲಾಭಸ್ಥಾನಕ್ಕೆ ಪ್ರವೇಶವಾದಾಗ ಶುಭಫಲಗಳು ಇವೆ. ಈತಿಂಗಳ ೧೪ ರಂದು ಸೂರ್ಯ ಲಾಭಸ್ಥಾನಕ್ಕೆ ಪ್ರವೇಶವಾಗುವುದರಿಂದ ಶುಭಫಲಗಣ್ನು ನಿರೀಕ್ಷಿಸಬಹುದು.

Monthly Horoscope For April 2025 Masika Rashi Bhavishya For 12 Zodiac Signs in Kannada

ಕಟಕ ರಾಶಿ:

ಕೊನೆಗೂ ಅಷ್ಟಮಶನಿಯಿಂದ ಮುಕ್ತಿ ಸಿಕ್ಕಿತು. ಶನಿ ಈಗ ನವಮಸ್ಥಾನಕ್ಕೆ ಬಂದಿದ್ದಾನೆ. ಧರ್ಮದಲ್ಲಿ ಮನಸ್ಸು ನೀಡುತ್ತಾನೆ. ಈಗ ಸಧ್ಯಕ್ಕೆ ನಿಮಗೆ ಗುರುಬಲ ಇದೆ. ಲಾಭಸ್ಥಾನದಲ್ಲಿ ಇರುವ ಗುರು ನೀವು ಮಾಡುವ ಕೆಲಸಕ್ಕೆ ಬರುವ ಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ಯೋಜನೆಗಳು ಫಲಪ್ರದವಾಗುವ ಹಾಗೆ ಮಾಡುತ್ತಾನೆ.. ಮನಸ್ಸಿಗೆ ಆಹ್ಲಾದ ಎನಿಸುತ್ತದೆ.

ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಯಲ್ಲಿ ಶುಕ್ರ ಬುಧ ಇರುವುದು ವಿಹಾರ, ಯಾತ್ರೆ ಸತ್ಸಂಗ, ಧನಲಾಭ ಮುಂತಾದ ಸತ್ಫಲಗಳು ದೊರೆಯುತ್ತದೆ. ಮುಖ್ಯವಾಗಿ ಮುಖ್ಯವಾಗಿ ಅಷ್ಟಮ ಶನಿ ಎಂಬ ಮಹಾನ್ ಕಂಟಕದಿAದ ಹೊರಬಂದಿದ್ದೀರಿ. ಈ ಎರಡೂವರೆ ವರ್ಷಗಳಿಂದ ಬಹಳ ನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಭಾಗ್ಯ ನಿಮ್ಮದು. ನೆಮ್ಮದಿ ಸಮಾಧಾನ ದೊರೆಯಲಿದೆ.

Monthly Horoscope For April 2025 Masika Rashi Bhavishya For 12 Zodiac Signs in Kannada

ಸಿಂಹ ರಾಶಿ:

ನಿಮಗೆ ಈ ಮಾ¸ದಿಂದಲೇ ಅಷ್ಟಮಶನಿಯ ಪ್ರಭಾವ ಪ್ರಾರಂಭ. ಕೊಂಚ ಆತಂಕದ ವಾತಾವರಣ, ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ಏರುಪೇರಿನ ಪರಿಸ್ಥಿತಿ ಎದುರಾಗಬಹುದು. ಮೇ ತನಕ ಗುರುಬಲ ಇಲ್ಲದಿರುವುದರಿಂದ ಯಾವುದೇ ಯೋಜನೆಗಳನ್ನು ಜಾರಿಮಾಡುವಾಗ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಮನೆ ದೇವರ ಪ್ರಾರ್ಥನೆ ಪೂಜೆ ಅವಶ್ಯ. ವಿಷ್ಣು ಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ.

ಬುಧ, ಶುಕ್ರ ರಾಹುವಿನ ಜೊತೆ ಅಷ್ಠಮದಲ್ಲಿ ಇದ್ದಾರೆ. ಅಷ್ಟಮ ರಾಹು ಶುಭಕರನಲ್ಲದಿದ್ದರೂ ಬುಧ ಹಾಗೂ ಶುಕ್ರರ ಯುತಿಯೋಗದಲ್ಲಿ ಇರುವುದರಿಂದ ಕೆಡುಕು ಸಂಭವಿಸದAತೆ ಕಾಪಾಡುತ್ತದೆ. ಆದರೆ ಕೊಂಚ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಉಸಿರಾಟ, ಅಲರ್ಜಿ, ಫಂಗಲ್ ಇನಫೆಕ್ಷನ್, ಬ್ಯಾಕ್ಟೀರಿಯಲ್ ಇನಪೆಕ್ಷನ್ ಬರಬಹುದು. ಆರೋಗ್ಯ ಹಣಕಾಸಿನ ಸ್ಥಿತಿ ಇವೆರಡನ್ನು ಎಚ್ಚರಿಕೆಯಿಂದ ನಿಭಾಯಿಸಿ.

Monthly Horoscope For April 2025 Masika Rashi Bhavishya For 12 Zodiac Signs in Kannada

ಕನ್ಯಾ ರಾಶಿ:

ಈಗ ನಿಮಗೆ ಗುರುಬಲ ಇದೆ. ಆದರೆ ಆರನೇ ಮನೆಯಿಂದ ಶನಿ ಏಳನೇ ಮನೆಗೆ ಪ್ರವೇಶವಾಗುತ್ತಾನೆ. ಶನಿಯ ಬಲ ನಿಮಗೆ ಕಡಿಮೆ ಆಗುತ್ತದೆ. ಏಳನೇ ಮನೆಯ ಶನಿ ಕೆಡುಕಲ್ಲದಿದ್ದರೂ ಉಪಕಾರಿ ಅಲ್ಲ. ಆದರೆ ಮುಂದಿನ ದಿನಗಳಲ್ಲಿ ರಾಹು ಆರನೇ ಮನೆಗೆ ಬಂದು ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತದೆ.

ಆರೋಗ್ಯ ಸುಧಾರಿಸುತ್ತದೆ. ಮುಂದಿನ ದಿನಗಳಲ್ಲಿ ಗುರುವಿನ ಬದಲಾವಣೆ ನಿಮಗೆ ಅಷ್ಟೊಂದು ಶುಭದಾಯಕವಾಗಿಲ್ಲ. ಹಾಗಾಗಿ ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ನಿಂತಲ್ಲೇ ನಿಂತು ಬಿಡುತ್ತದೆ. ಕೌಟುಂಬಿಕ ವಾತಾವರಣ ಕೂಡ ಆಹ್ಲಾದದಾಯಕವಾಗಿರುವುದಿಲ್ಲ. ನಿಮ್ಮ ಮನೆ ದೇವರ ಸ್ಮರಣೆ ದರ್ಶನ ವಿಹಿತ.

Monthly Horoscope For April 2025 Masika Rashi Bhavishya For 12 Zodiac Signs in Kannada

ತುಲಾ ರಾಶಿ:

ಈಗ ನಿಮಗೆ ಗುರು ಅಷ್ಟಮದಲ್ಲಿ ಇದ್ದಾನೆ. ಗುರುಬಲ ಇಲ್ಲದಿರುವುದರಿಂದ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡಬಹುದು. ಆದರೆ ಶನಿ ಪಂಚಮದಿAದ ಷಷ್ಠಕ್ಕೆ ಬಂದಿದ್ದಾನೆ. ಆರನೇ ಮನೆಯೆ ಶನಿ ಬಹಳ ಉಪಕಾರಿ. ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತದೆ. ಕಳೆದ ವರ್ಷದಿಂದ ಬಹಳ ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಆದರೆ ಈಗ ಶನಿಯ ಆರನೇಯ ಪ್ರವೇಶದಿಂದ ಪಂಚಮ ಶನಿಯಿಂದ ಮುಕ್ತಿ ದೊರೆತು ಹಗುರವಾಗುತ್ತೀರಿ. ಹಾಗೂ ಮುಂದಿನ ದಿನಗಳಲ್ಲಿ ಗುರುವಿನ ಭಾಗ್ಯಸ್ಥಾನ ಪ್ರವೇಶದಿಂದ ಸಕಲ ವಿಷಯದಲ್ಲೂ ಶುಭಫಲಗಳು ಸಿಗಲಿದೆ.

ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ಸಹಾ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಎಲ್ಲ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶ ಇದೆ. ಈ ಮಾಸದ ಆರಂಭದಿAದಲೇ ಶುಭಶಕುನಗಳು ಗೋಚರವಾಗುತ್ತದೆ.

Monthly Horoscope For April 2025 Masika Rashi Bhavishya For 12 Zodiac Signs in Kannada

ವೃಶ್ಚಿಕ ರಾಶಿ:

ಈಗ ನಿಮಗೆ ಏಳರಲ್ಲಿ ಗುರು ಹಾಗೂ ಲಾಭಸ್ಥಾನದಲ್ಲಿ ಕೇತು ಇದ್ದು ಬಹಳಷ್ಟು ಶುಭಫಲಗಳನ್ನು ಅನುಭವಿಸುತ್ತಿದ್ದೀರಿ. ಹಣಕಾಸಿನ ಸ್ಥಿತಿ ಕೂಡಾ ಉತ್ತಮವಾಗಿದೆ. ನಿಮ್ಮ ಯೋಜನೆಗಳು ನಿಮ್ಮ ಅನಿಸಿಕೆಯಂತೆ ಫಲಪ್ರದವಾಗುತ್ತಿದೆ. ಐದನೇ ಮನೆಯಲ್ಲಿ ಬುಧ, ಶುಕ್ರ ಇರುವುದು ಕೂಡ ನಿಮಗೆ ಸಾಕಷ್ಟು ಬಲ ನೀಡುತ್ತದೆ. ಯಶಸ್ಸಿನಹಾದಿಯಲ್ಲಿ ಸಾಗುತ್ತಿದ್ದೀರಿ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇದೆ.

ಒಳ್ಳೆಯ ಅವಕಾಶಗಳು ಈಗ ನಿಮಗೆ ಸಿಗುವ ಕಾಲ. ಆದರೆ ಶನಿಯ ಪಂಚಮ ಸ್ಥಾನ ಪ್ರವೇಶದಿಂದ ಸರಾಗ ಜೀವನದಲ್ಲಿ ಕೊಂಚ ಅಡೆತಡೆಗಳು ಎದುರಾಗುತ್ತದೆ. ನಮಗೆ ಕಾಣದಂತೆ ಎಲ್ಲೋ ಹೊಡೆತ ಬೀಳುತ್ತದೆ. ನೀವು ಅಂದುಕೊAಡ ಗುರಿಯನ್ನು ಮುಟ್ಟಲು ತುಂಬಾ ಶ್ರಮ ಹಾಕಬೇಕಾಗುತ್ತದೆ. ಸಂಬAಧಗಳಲ್ಲಿ ಕಿರಿಕಿರಿ ಶುರುವಾಗಬಹುದು. ಸಾಕಷ್ಟು ಖರ್ಚುಗಳು ಇವೆ. ಶನಿ ಸವಾಲುಗಳನ್ನು ಕೊಡುತ್ತಾನೆ, ಹನುಮಾನ್ ಚಾಲೀಸ ಪಠಿಸಿ. ಕುಟುಂಬದವರ ಆರೋಗ್ಯದ ಬಗ್ಗೆಯೂ ಗಮನ ಇರಲಿ.

Monthly Horoscope For April 2025 Masika Rashi Bhavishya For 12 Zodiac Signs in Kannada

ಧನು ರಾಶಿ:

ಈಗ ನಿಮಗೆ ಶನಿ ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಪ್ರವೇಶವಾಗಿದ್ದಾನೆ. ನಾಲ್ಕರ ಶನಿ ಅಷ್ಟೊಂದು ಉಪಕಾರಿ ಅಲ್ಲ. ಗುರು ಕೂಡಾ ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಗುರುಬಲ ಇಲ್ಲದಿರುವುದರಿಂದ ಪ್ರಗತಿ ನಿಂತು ನಿಂತು ಮುಂದೆ ಸಾಗುತ್ತಿದೆ. ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದೀರಿ. ಮಾನಸಿಕ ಕ್ಲೇಶ ಅನುಭವಿಸಿದ್ದೀರಿ. ಯಾವುದನ್ನು ನೀವು ಮರೆತು ಬಿಟ್ಟಿರುತ್ತೀರೋ ಆ ತೊಂದರೆ ಮತ್ತೆ ಮೇಲೇಳಬಹುದು. ಸರಿಯಾದ ವೈದ್ಯರಿಗೆ ತೋರಿಸಿ.

ಧನ್ವಂತರಿ ಜಪ ಮಾಡಿ. ಮುಂದಿನ ದಿನಗಳಲ್ಲಿ ಏಳನೇ ಮನೆಗೆ ಗುರು ಹಾಗೂ ಮೂರನೇ ಮನೆಗೆ ರಾಹು ಪ್ರವೇಶವಾಗುವುದರಿಂದ ಪರಿಸ್ಥಿತಿ ಹತೋಟಿಗೆ ಬಂದು ನೀವು ಎಣಿಸಿದ ಕೆಲಸಕಾರ್ಯಗಳಲ್ಲಿ ಜಯ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಾಲ್ಕರಲ್ಲಿ ಶುಕ್ರ,ಬುಧ ಈ ಮಾಸದ ಕೊನೆಯವರೆಗೂ ಇರುತ್ತಾನೆ.ಇದು ಕೂಡ ಬಹಳ ನಿಮಗೆ ಬೆಂಬ ಕೊಡುತ್ತದೆ. ತಾಯಿ ಅಥವಾ ತಾಯಿ ಸಮಾನರಾದವರಿಂದ ಸಹಾಯ ಇದೆ. ವಿದೇಶ ಯಾತ್ರೆ ಮಾಡಬಯಸುವವರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ. ಕೋರ್ಟು ವ್ಯಾಜ್ಯಗಳಲ್ಲಿ ಜಯ ಸಿಗುತ್ತದೆ.

Monthly Horoscope For April 2025 Masika Rashi Bhavishya For 12 Zodiac Signs in Kannada

ಮಕರ ರಾಶಿ:

ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಒಂದು ಮಹೋನ್ನತ ಅಭಿವೃದ್ಧಿಯನ್ನು ತೋರಿಸುತ್ತಿದೆ. ಇದುವರೆಗೂ ಇದ್ದ ಸಾಡೆಸಾತಿ ಪ್ರಭಾವದಿಂದ ಮುಂಕ್ತಿಹೊAದಿದ್ದೀರಿ. ಮೋಡ ಕಳೆದ ಚಂದ್ರನAತೆ ಪ್ರಕಾಶಿಸುತ್ತೀರಿ. ಏಳುವರ್ಷದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಕಾಲ ಬಂದಿದೆ. ಕೀರ್ತಿ ಯಶಸ್ಸು ನಿಮ್ಮ ಹೆಗಲೇರಲಿದೆ. ನಿಮ್ಮನ್ನು ವಿರೋಧಿಸಿದವರು ಈಗ ನಿಮ್ಮ ಬಳಿಯೇ ಬರುತ್ತಾರೆ.

ಸ್ನೇಹಹಸ್ತ ಚಾಚುತ್ತಾರೆ. ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಯ್ನು ಕಾಣುತ್ತೀರಿ. ಮನಸ್ಸಿಗೆ ಸಂತಸ ಸಿಗಲಿದೆ. ಎಲ್ಲ ಅವಕಾಶಗಳು ನಿಮ್ಮಬಳಿ ಅರಸಿ ಬರುತ್ತದೆ. ಶುಭಶಕುನಗಳು ಈ ಮಾಸ ಪ್ರಾರಂಭದಿAದಲೇ ನಿಮ್ಮ ಅನುಭವಕ್ಕೆ ಬರುತ್ತದೆ.

Monthly Horoscope For April 2025 Masika Rashi Bhavishya For 12 Zodiac Signs in Kannada

ಕುಂಭ ರಾಶಿ:

ಈಗ ಶನಿ ನಿಮ್ಮ ರಾಶಿಯನ್ನು ಬಿಟ್ಟು ಮೀನರಾಶಿಗೆ ಪ್ರವೇಶವಾಗಿದ್ದಾನೆ. ಇದರಿಂದ ಸಾಡೆಸಾತಿ ಶನಿಯ ಮೂರನೇ ಹಂತಕ್ಕೆ ಪ್ರವೇಶ ಮಾಡಿದ್ದೀರಿ. ಇದು ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಸಹಾಯವಾಗಲಿದೆ. ಈಗ ನಿಮಗೆ ಚತುರ್ಥದಲ್ಲಿ ಇರುವ ಗುರುವಿನಿಂದ ಜೀವನದಲ್ಲಿ ಅಡೆತಡೆಗಳು ನಕಾರಾತ್ಮಕ ಸಂಗತಿಗಳೇ ಕಾಣುತ್ತಿವೆ. ಎಲ್ಲ ಕಡೆಯೂ ಹಿನ್ನಡೆ ಅಪಮಾನ ಅನುಭವಿಸುತ್ತಿದ್ದೀರಿ.

ಯಾವ ಕೆಲಸಕ್ಕೆ ಕೈಹಾಕಿದರೂ ಮುಂದುವರೆಯುವುದಿಲ್ಲ. ಕೋರ್ಟು ಕಚೇರಿ ಅಲೆದಾಟ ಧನಹಾನಿ ಮಾನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶ ಮಾಡಿದಾಗ ಕೊಂಚ ಉಸಿರಾಡುವಂತಾಗಿ ಕೆಲವು ಶುಭ ಸೂಚನೆಗಳು ಸಿಗುತ್ತದೆ. ಒತ್ತಡಗಳಿಂದ ದೂರವಾಗುತ್ತೀರಿ. ಕತ್ತಿನ ಮೇಲೆ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ಮುಂದೆ ಗುರುಬಲವೂ ಸಿಗುವವುದರಿದ ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಈ ತಿಂಗಳ ಕೊನೆಯವರೆಗೆ ಎರಡನೇ ಮನೆಯಲ್ಲಿ ಶುಕ್ರ ಬುಧ ಇರುವುದು ನಿಮಗೆ ಶುಭಫಲಗಳನ್ನು ಕೊಡುತ್ತದೆ. ಅವಿವಾಹಿತರು ವಿವಾಹ ಪ್ರಯತ್ನ ಮಾಡಬಹುದು.

Monthly Horoscope For April 2025 Masika Rashi Bhavishya For 12 Zodiac Signs in Kannada

ಮೀನ ರಾಶಿ:

ಈಗ ಸಾಡೆಸಾತಿಯ ಎರಡನೇ ಭಾಗಕ್ಕೆ ಬಂದಿದ್ದೀರಿ. ಇನ್ನೂ ನೀವು ಶನಿಯ ಪ್ರಭಾವದಲ್ಲಿ ಇರುವುದರಿಂದ ಹೆಚ್ಚಿಗೆ ಏನೂ ನಿರೀಕ್ಷೆ ಇಲ್ಲ. ಇದ್ದಂತೆ ನಡೆದುಕೊಂಡು ಹೋದರೆ ಅದೇ ಅದೃಷ್ಟ. ಆರೋಗ್ಯದಲ್ಲಿ ಗಮನ ಇರಲಿ. ಹಣಕಾಸು ಸ್ಥಿತಿತ ಮೇಲೆ ಹಿಡಿತ ಇರಲಿ. ಗುರುಬಲವೂ ಈಗ ಸಧ್ಯಕ್ಕೆ ಇರುವುದಿಲ್ಲ. ಈಗ ಮೂರನೇ ಮನೆಯಲ್ಲಿ ಇರುವ ಗುರು ಅಲ್ಪ ಭಾಗ್ಯಗಳನ್ನು ಕೊಡುತ್ತಾನೆ.

ಕೌಟುಂಬಿಕ ಜೀವನ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ಮುಂದೆ ಕೇತು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ. ಈ ತಿಂಗಳು ಶುಕ್ರ ಹಾಗೂ ಬುಧ ನಿಮ್ಮ ರಾಶಿಯಲ್ಲೇ ಇರುತ್ತಾರೆ. ಹಾಗಾಗಿ ಕೆಲವು ಶುಭಸಂಗತಿಗಳು ನಿಮಗೆ ಸಂತೋಷ ಕೊಡುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಶುಕ್ರ ಬುಧರು ನಿಮ್ಮನ್ನು ಕಾಪಾಡುತ್ತಾರೆ. ಏನೇ ಆದರೂ ಯಾವುದೇ ಕೆಲಸ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ. ಸಹನೆ ಸಮಾಧಾನ ನಿಮ್ಮ ಮಂತ್ರವಾಗಿರಲಿ.

ಶುಭಮಸ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+