ಸಿಂಹ : ಮಿಶ್ರ ಫಲಗಳ ಮಾಸ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ನಿಮಗೆ ಇದು ಮಿಶ್ರ ಫಲಗಳ ಮಾಸ. ಉದ್ಯೋಗ ಸ್ಥಳದಲ್ಲಿ ಕೆಲಸದ ಪ್ರಮಾಣ ಬಹಳ ಹೆಚ್ಚು ಇರುತ್ತದೆ. ನಾಲಗೆಗೆ ಲಗಾಮು ಹಾಕಿಕೊಳ್ಳಲೇ ಬೇಕು. ಇನ್ನೂ ಸರಿಯಾಗಿ ಹೇಳಬೇಕು ಎಂದರೆ ಮೌನವಾಗಿದ್ದು ಮಾಡಿ. ಇಲ್ಲದಿದ್ದರೆ ಈ ತಿಂಗಳಿನಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಬಿಡಬೇಕು. ಮೇಲಧಿಕಾರಿಗಳೊಂದಿಗೆ ಅಥವಾ ಸಹೋದ್ಯೊಗಿಗಳೊಂದಿಗೆ ಜಗಳ ಅಥವಾ ಮಾತಿಗೆ ಮಾತು ಬೆಳೆಯದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಜಗಳ ಹೆಚ್ಚಾಗಿ ವಿನಾಕಾರಣ ಮರ್ಯಾದೆ ಕಳೆದುಕೊಂಡು ಬೇಡದ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ.

Leo monthly horoscope in Kannada for September 2017

ಬಹಳ ಮುಖ್ಯವಾದ ಪ್ರಯಾಣಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬರಬಹುದು. ಆರ್ಥಿಕವಾಗಿ ಈ ತಿಂಗಳು ಸಾಮಾನ್ಯವಾಗಿ ಇದೆ. ಆದರೆ ಏನೂ ಯೋಚಿಸದೆ ಖರ್ಚುಗಳನ್ನು ಮಾಡುತ್ತೀರಿ. ಅದರಲ್ಲೂ ಬಾಳಸಂಗಾತಿಗೆ ಐಷಾರಾಮಿ ಕೊಡುಗೆಗಳನ್ನು ಕೊಡಿಸಿ, ಖರ್ಚು ಹೆಚ್ಚು ಮಾಡಿಕೊಳ್ಳುತ್ತೀರಿ. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿ, ಹಣ ಸಂಪಾದನೆ ಮಾಡಿಕೊಳ್ಳುವ ಯೋಗ ಇದೆ .

ಸ್ತ್ರೀಯರು: ನಿಮ್ಮ ಮಕ್ಕಳ ಸಾಧನೆ ಸಂತಸ ತರಲಿದೆ. ಮನೆಯಲ್ಲಿ ಸಹ ಮಕ್ಕಳ ಸಹಕಾರ ಸಿಗಲಿದೆ. ನೀವು ಮಾಡುವ ಕೆಲಸ ತಪ್ಪು ಅಪಾರ್ಥ ಆಗಿ, ಕೌಟುಂಬಿಕವಾಗಿ ಸ್ವಲ್ಪ ಕಲಹ ಉಂಟಾಗುತ್ತದೆ. ಆದುದರಿಂದ ಮನೆಯಲ್ಲಿ ವ್ಯವಹರಿಸುವಾಗ ಎಚ್ಚರ ಹಾಗೂ ಮಾತು ಕಡಿಮೆ ಮಾಡಿ.

ಸ್ವಲ್ಪ ಮಟ್ಟಿಗೆ ಗಂಟಲು ಸಮಸ್ಯೆ ಹೊರತುಪಡಿಸಿದರೆ ಉಳಿದಂತೆ ಆರೋಗ್ಯ ಸಾಮಾನ್ಯವಾಗಿದೆ. ವ್ಯಾಪಾರದಲ್ಲಿ ಬಂದ ಲಾಭ ಬಂಡವಾಳವಾಗಿ ಮತ್ತೆ ಹೊರಟು ಹೋಗುವುದರಿಂದ ಲಾಭ ಅನಿಸುವುದಿಲ್ಲ. ನಿಮ್ಮ ಅಡುಗೆ ರುಚಿಸುತ್ತಿಲ್ಲ ಎಂದು ಅಪಾದನೆ ಮಾಡುತ್ತಾರೆ.

ವಿದ್ಯಾರ್ಥಿಗಳು: ವಿದ್ಯೆ ಮೇಲೆ ಬಹಳ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ಈ ತಿಂಗಳಿನಲ್ಲಿ ಏಕಾಗ್ರತೆಯ ಕೊರತೆ ಆಗುತ್ತದೆ

Uttarpradesh : Shocking Truth Behind Feeding The Tiger | Oneindia Kannada

ಪರಿಹಾರ: ಈ ತಿಂಗಳು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನಲ್ಲಿ ಇಡಗುಂಜಿಗೆ ಹೋಗಿ. ಅಲ್ಲಿ ಮಹಾ ಗಣಪತಿಯ ದರ್ಶನ ಮಾಡಿ ಬಂದರೆ ಅತ್ಯುತ್ತಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Get the complete month predictions of September 2017. Read monthly horoscope of Leo in Kannada. Get free monthly horoscope, astrology and monthly predictions in Kannada.
Please Wait while comments are loading...