ಮಕರ : ಸಾಮಾನ್ಯವಾದ ಮಾಸ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಪುರುಷರು: ಇದು ಸಾಮಾನ್ಯವಾದ ಮಾಸ ಎನ್ನಬಹುದು. ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಾ. ಬಹಳ ಜಾಗರೂಕರಾಗಿರಿ. ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆಗಳನ್ನು ಎದುರಿಸುತ್ತೀರಿ. ದಿನಗಳು ಉರುಳಿದಂತೆ ಬದಲಾವಣೆಗಳು ಕಂಡುಬರುತ್ತವೆ.

ಒತ್ತಡಗಳು ಕಡಿಮೆ ಆಗುತ್ತದೆ. ಉದ್ಯೋಗದಲ್ಲಿ ಬದಲಾವಣೆ ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು. ಕೆಲವರಿಗೆ ಬಯಸದೇ ಇದ್ದರೂ ಉದ್ಯೋಗ ಬದಲಾವಣೆ ಅನಿವಾರ್ಯ ಆಗಬಹುದು. ಆದಾಯಕ್ಕಿಂತ ಖರ್ಚುಗಳು ಹೆಚ್ಚು ಕಾಣುತ್ತಿವೆ.

Capricorn monthly horoscope in Kannada for September 2017

ಅನಿವಾರ್ಯ ಇಲ್ಲದಿದ್ದಲ್ಲಿ ಕೆಲ ಖರೀದಿಗಳನ್ನು ಮುಂದೂಡಿದರೆ ಉತ್ತಮ. ಷೆರು ಮಾರುಕಟ್ಟೆಯಲ್ಲಿ ಲಾಭಕ್ಕಿಂತಲೂ ಹೂಡಿಕೆ ಪ್ರಮಾಣವೇ ಹೆಚ್ಚಾಗಿ ಸಮಸ್ಯೆ ಅನಿಸಬಹುದು. ಕುತ್ತಿಗೆ ನೋವು ಅಥವಾ ಅಶಕ್ತತೆ ಬಾಧೆ ಕಾಡುತ್ತದೆ.

ಸ್ತ್ರೀಯರು: ಗೆಳತಿ ಮಾಡಿದ ತಪ್ಪಿಗೆ ನೀವು ಕಷ್ಟ, ಅವಮಾನ ಇತ್ಯಾದಿ ಅನುಭವಿಸಬೇಕಾಗುತ್ತದೆ. ನಿತ್ಯದ ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಅವಶ್ಯ ಮಾಡಿಕೊಳ್ಳಬೇಕಾದ ಸಮಯ. ನಿಮ್ಮ ಕೆಲ ರೂಢಿಗಳಿಂದಾಗಿ ಕುಟುಂಬ ಸದಸ್ಯರು ಅವಮಾನವನ್ನು ಎದುರಿಸ ಬೇಕಾಗಬಹುದು.

ಮನೆ ಕೆಲಸ ಮಾಡುವಾಗ ತಿಂಗಳ ಮೊದಲ ಹದಿನೈದು ದಿನಗಳು ಹೆಚ್ಚಿನ ಕಷ್ಟ ಅಥವಾ ಪರಿಶ್ರಮದ ಅವಶ್ಯ ಕಾಣಿಸುತ್ತದೆ. ಉದ್ಯೋಗ ಅರಸುತ್ತ ಇರುವವರು ನೀವಾಗಿದ್ದಲ್ಲಿ ಈ ತಿಂಗಳ ಅಂತ್ಯದಲ್ಲಿ ತಕ್ಕ ಉದ್ಯೋಗ ಲಭಿಸುವ ಅವಕಾಶ ಹೆಚ್ಚು ಇದೆ.

ನಿಮ್ಮ ಮಾತೇ ಅಂತಿಮ ಆಗಬೇಕು, ನೀವು ಬಯಸಿದಂತೆ ನಡೆಯಬೇಕು ಎಂದಾದಲ್ಲಿ ಈ ತಿಂಗಳ ಕೊನೆಯ ತನಕ ಸ್ವಲ್ಪ ಕಾಯಬೇಕು. ಕೆಲವರ ಬಗ್ಗೆ ನಿಮ್ಮ ನಿರ್ಧಾರ ತಪ್ಪು ಆಗಿರಬಹುದು, ಮರು ಪರಿಶೀಲಿಸಿ.

ವಿದ್ಯಾರ್ಥಿಗಳು: ನಿಮ್ಮ ಅಧ್ಯಯನವನ್ನು ಆಲಸ್ಯ ಹಾಳು ಮಾಡಲಿದೆ. ನೀವು ಚುರುಕು ಆಗದೇ ಇದ್ದಲ್ಲಿ ಓದುವ ವಿಚಾರದಲ್ಲಿ ಆಸಕ್ತಿ ಕಡಿಮೆ ಆಗಿ, ಅಧ್ಯಾಪಕರಿಂದ ಬೈಗುಳ ಲಭಿಸುತ್ತದೆ.

Lunar Eclipse is on August 7th8th : Watch Video To Know The Procedures

ಪರಿಹಾರ: ಈ ತಿಂಗಳಿನಲ್ಲಿ ಒಮ್ಮೆ ಧರ್ಮಸ್ಥಳದ ಹತ್ತಿರ ಇರುವ ಸೌತಡ್ಕ ಮಹಾ ಗಣಪತಿ ದೇಗುಲಕ್ಕೆ ಹೋಗಿ, ದರ್ಶನ- ಪೂಜೆ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Get the complete month predictions of September 2017. Read monthly horoscope of Capricorn in Kannada. Get free monthly horoscope, astrology and monthly predictions in Kannada.
Please Wait while comments are loading...