• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 Money and Finance Horoscope: ತುಲಾ- ಮೀನ ಹಣ ಭವಿಷ್ಯ

By ಶ್ರೀ ಶ್ರೀನಿವಾಸ್ ಗುರೂಜಿ
|
Google Oneindia Kannada News

ಬದುಕನ್ನು ಬಂಡಿ ಅಂತ ಕರೆಯುವುದಾದರೆ, ಅದನ್ನು ನಡೆಸುವ ಇಂಧನ ಹಣ. ಆದ್ದರಿಂದ ಹಣದ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಮ್ಮೆಲ್ಲರ ನೆಮ್ಮದಿಯನ್ನು ಹಾಗೂ ಸಂತೋಷವನ್ನು ಕಾಪಾಡುತ್ತದೆ. ಇನ್ನೂ ಕೆಲವು ಸಲ ಹಾಳಾಗದಂತೆ ರಕ್ಷಿಸುತ್ತದೆ, ಹೆಚ್ಚಿಸುತ್ತದೆ. ಆದ್ದರಿಂದ 2021ನೇ ಇಸವಿಯಲ್ಲಿ ತುಲಾದಿಂದ ಮೀನ ರಾಶಿಯವರ ಹಣಕಾಸು ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ಈ ಲೇಖನ ನೀಡಲಾಗುತ್ತಿದೆ.

ಆದರೂ ಪ್ರಮುಖವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಹಾಗೂ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡುವಾಗ ಕಡ್ಡಾಯವಾಗಿ ವೈಯಕ್ತಿಕ ಜಾತಕವನ್ನು ಪರಿಶೀಲನೆ ಮಾಡಿಸಿ. ಆ ನಂತರ ಮುಂದಕ್ಕೆ ಹೆಜ್ಜೆಗಳನ್ನು ಇಡಿ. ನಾನು ಇಲ್ಲಿ ನಿಮಗೆ ತಿಳಿಸುತ್ತಿರುವುದು ಗೋಚಾರದ ಫಲ ಮಾತ್ರ. ನಿಮ್ಮ ದಶಾ- ಭುಕ್ತಿ, ಜನ್ಮ ಜಾತಕ ಯೋಗಾಯೋಗಗಳು ಸಹ ಮುಖ್ಯವಾಗುತ್ತವೆ.

2021 Money, Finance Horoscope: ಮೇಷದಿಂದ ಕನ್ಯಾ ಹಣಕಾಸು ಭವಿಷ್ಯ2021 Money, Finance Horoscope: ಮೇಷದಿಂದ ಕನ್ಯಾ ಹಣಕಾಸು ಭವಿಷ್ಯ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ- ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಬಾಧೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ.

ಜೀವನದಲ್ಲಿ ಜುಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ 5 ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ಮನೆ ವಿಳಾಸ- #37/17 27ನೇ ಅಡ್ಡರಸ್ತೆ, 12ನೇ ಮುಖ್ಯರಸ್ತೆ, 4ನೇ ಬ್ಲಾಕ್, ಜಯನಗರ್, ಬೆಂಗಳೂರು. ಮೊ. 99866 23344.

ತುಲಾ

ತುಲಾ

ವಾಹನ ಖರೀದಿ ಮಾಡುವಾಗ ನಷ್ಟ ಸಂಭವಿಸುವಂಥ ಯೋಗ ಇದೆ. ಆದ್ದರಿಂದ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಆಮಿಷಕ್ಕೆ ಬೀಳದಿರಿ. ಇನ್ನು ಸ್ನೇಹಿತರು ಹೇಳಿದರು ಎಂಬ ಕಾರಣಕ್ಕೆ ಕೆಲವು ವ್ಯವಹಾರಕ್ಕೆ, ಅದರಲ್ಲೂ ನಿಮಗೆ ಹೊಸದಾದ ವ್ಯವಹಾರಕ್ಕೆ ಕೈ ಹಾಕಿ, ಮುಂದುವರಿದಲ್ಲಿ ಬರಬೇಕಾದ ಹಣಕ್ಕೆ ಅಡೆತಡೆ ಎದುರಾಗುತ್ತದೆ. ಆದರೆ ಈ ವರ್ಷ ಸೈಟು, ಮನೆ, ವಾಹನ ಖರೀದಿಸುವ ಯೋಗವಂತೂ ಇದ್ದೇ ಇದೆ. ಅದಕ್ಕಾಗಿ ಹೆಚ್ಚಿನ ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ. ಇನ್ನು ಮಕ್ಕಳು ವಿದೇಶದಲ್ಲಿ ಇದ್ದಲ್ಲಿ ಅಲ್ಲಿಂದ ನಿಮಗೆ ದೊಡ್ಡ ಮೊತ್ತ ಬರಲಿದೆ. ಅದನ್ನು ಹೂಡಿಕೆ ಮಾಡಲಿದ್ದೀರಿ. ಅಥವಾ ಈಗಾಗಲೇ ಮಾಡಿಕೊಂಡಿರುವ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ಬಳಸುವ ಸಾಧ್ಯತೆ ಇದೆ. ತುಂಬ ಅನುಕೂಲಸ್ಥ ಕುಟುಂಬದಿಂದ ವಿವಾಹ ಸಂಬಂಧಗಳು ದೊರೆಯುವ ಅವಕಾಶಗಳಿದ್ದು, ಬೆಳವಣಿಗೆಗೆ ಸಹಕಾರಿ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿದ್ದಲ್ಲಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಇನ್ನು ಪಿತ್ರಾರ್ಜಿತವಾಗಿ ಬರಬಹುದು ಎಂದು ನಿರೀಕ್ಷೆ ಮಾಡಿದ್ದ ಆಸ್ತಿ- ಹಣಕಾಸು ಬರಲಿದೆ. ಭೂಮಿ- ಜಮೀನು, ಮನೆ ಖರೀದಿಯಲ್ಲಿ ಹಣ ಉಳಿತಾಯ ಆಗುವಂಥ ಯೋಗ ಇದೆ.

ವೃಶ್ಚಿಕ

ವೃಶ್ಚಿಕ

ನಿಮ್ಮ ನಂಬಿಕೆ- ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು, ಹಣದ ವಿಚಾರದಲ್ಲಿ ವಂಚನೆ ಮಾಡುವ ಸಾಧ್ಯತೆ ಇದೆ. ಹಾಗಂತ ಇದನ್ನು ಯಾರೋ ಹೊಸಬರು ಮಾಡುತ್ತಾರೆ ಎಂದಲ್ಲ. ಸ್ನೇಹಿತರು- ಸಂಬಂಧಿಕರೇ ನಿಮ್ಮ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ. ಆದರೆ ನಿಮ್ಮ ಹಣದ ಹರಿವಿಗೆ ಏನೂ ಕೊರತೆ ಇರುವುದಿಲ್ಲ. ಇನ್ನು ಕುಟುಂಬದಲ್ಲಿ ಧಾರ್ಮಿಕ ಸಮಾರಂಭಗಳಿಗೆ, ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಖರ್ಚಾಗಲಿದೆ. ಆಸ್ತಿ ಬರಬಹುದು ಎಂಬ ಕಾರಣಕ್ಕೆ ಕಾನೂನು ಹೋರಾಟದಲ್ಲಿ ತೊಡಗಿಕೊಂಡು, ಅದಕ್ಕಾಗಿ ಹಣ ಖರ್ಚಾಗಲಿದೆ. ಈ ವಿಚಾರದಲ್ಲಿ ನಿಮಗೆ ಸಂಪೂರ್ಣ ಲಾಭ ಆಗುವುದಿಲ್ಲ. ಖರ್ಚು ಮಾಡಿದ್ದಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದಿಲ್ಲ. ವಿದೇಶ ಪ್ರಯಾಣದಲ್ಲಿ ಸ್ವಲ್ಪ ಹಿನ್ನಡೆಯಾಗಿ, ನೀವು ನಿರೀಕ್ಷೆ ಮಾಡಿದ್ದ ಆದಾಯವು ಅಂದುಕೊಳ್ಳಂತೆ ಬರುವುದಿಲ್ಲ. ಸೋದರ- ಸೋದರಿಯರ ಮಕ್ಕಳ ವಿವಾಹ ಅಥವಾ ಮತ್ಯಾವುದಾದರೂ ಕಾರಣಕ್ಕೆ ಆಸ್ತಿಯನ್ನು ಮಾರಿ ಅಥವಾ ಉಳಿತಾಯದ ಹಣವನ್ನು ತೆಗೆದು, ಕೊಡಬೇಕಾಗುತ್ತದೆ. ನೀವಾಗಿಯೇ ಹೊಸ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳದಿದ್ದಲ್ಲಿ ಅಷ್ಟರ ಮಟ್ಟಿಗೆ ಉಳಿತಾಯ ಆಗುತ್ತದೆ.

ಧನುಸ್ಸು

ಧನುಸ್ಸು

ನಿಮ್ಮ ಮಾತಿನಿಂದಲೇ ದೊಡ್ಡ ಮೊತ್ತದ ಹಣವನ್ನು ಕೈಯಿಂದ ಕಳೆದುಕೊಳ್ಳಲಿದ್ದೀರಿ ಅಥವಾ ನಿಮ್ಮ ಪಾಲಿಗೆ ಬರಬೇಕಾದ ಹಣವು ಬೇರೆಯವರ ಪಾಲಾಗಲಿದೆ. ಭೂಮಿ ವ್ಯವಹಾರ ಮಾಡುವಾಗ ಲೆಕ್ಕಾಚಾರದಿಂದ ಮಾಡಿ. ಕುಟುಂಬ ಸದಸ್ಯರನ್ನು ನಂಬಿಕೊಂಡು, ಅವರಿಗೆ ಈ ಜವಾಬ್ದಾರಿಯನ್ನು ವಹಿಸದಿರಿ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಅಥವಾ ತಂದೆಯ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಖರ್ಚು ಆಗಲಿದೆ. ನಿಮಗೆ ಆಗಬೇಕಾದ ಬಡ್ತಿ ಅಥವಾ ವೇತನ ಹೆಚ್ಚಳವನ್ನು ಮೇಲಧಿಕಾರಿಗಳು ತಡೆ ಹಿಡಿಯಲಿದ್ದಾರೆ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಸ್ವಲ್ಪ ಸಮಯ ಆ ಪ್ರಯತ್ನವನ್ನು ನಿಲ್ಲಿಸುವುದು ಉತ್ತಮ. ಇನ್ನು ನಿಮ್ಮ ಪ್ರಯತ್ನಕ್ಕೆ ಸಹಾಯ ಮಾಡುವುದಾಗಿ, ಮಧ್ಯವರ್ತಿಗಳು ಹೆಚ್ಚಿನ ದುಡ್ಡಿನ ಬೇಡಿಕೆ ಇಟ್ಟು, ಸಹಾಯ ಮಾಡುವುದಾಗಿ ಹೇಳಿದರು ಎಂಬ ಕಾರಣಕ್ಕೆ ದುಡ್ಡು ನೀಡದಿರಿ. ಇನ್ನು ಹೊಸಬರ ಜತೆಗಿನ ವ್ಯವಹಾರವಂತೂ ಬಿಲ್ ಕುಲ್ ಬೇಡ. ಹೆಚ್ಚಿನ ಬಡ್ಡಿ ಆಸೆ ತೋರಿಸಿದರೂ ಅಥವಾ ಲಾಭ ಸಿಗುತ್ತದೆ ಎಂಬ ಭರವಸೆ ನೀಡಿದರೆಂದು ಹಣ ಹೂಡಿಕೆ ಮಾಡಿದರೆ ಅದು ವಾಪಸ್ ಆಗುವುದಿಲ್ಲ. ಚೀಟಿ ವ್ಯವಹಾರದಿಂದ ದೂರವೇ ಇದ್ದುಬಿಡಿ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಮಕರ

ಮಕರ

ಈ ವರ್ಷ ಹಣಕಾಸು ವಿಚಾರದಲ್ಲಿ ಮಿಶ್ರ ಫಲ ಅನುಭವಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಹಣ ಬರಲಿದೆ. ಆದರೆ ಅದು ನಿಮ್ಮ ಅಗತ್ಯಕ್ಕೆ ಹಾಗೂ ಸಮಯಕ್ಕೆ ಸಿಗುತ್ತದೆಯೇ ಎಂದು ಹೇಳುವುದು ಕಷ್ಟ. ಇನ್ನು ಹಣದ ವಿಚಾರಕ್ಕೇ ಬಂಧುಗಳು, ಸ್ನೇಹಿತರಿಂದ ಅವಮಾನಕ್ಕೆ ಗುರಿ ಆಗಲಿದ್ದೀರಿ. ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಅಗತ್ಯ ಇರುವ ಹಣವನ್ನು ಹೊಂದಿಸುವ ಕಡೆಗೆ ಗಮನ ನೀಡಿ. ಇನ್ನು ವರ್ಷದ ಆರು ತಿಂಗಳು ಆದಾಯ ಹೆಚ್ಚಳ ಆಗಿ ಅಥವಾ ಯಾವುದಾದರೂ ಮೂಲದಿಂದ ಹಣ ಬಂದಲ್ಲಿ ಅದನ್ನು ಕೂಡಿಡುವ ಕಡೆಗೆ ಗಮನ ನೀಡಿ. ತಕ್ಷಣಕ್ಕೆ ಹೂಡಿಕೆ, ಲಾಭ ಎಂದು ಆಲೋಚಿಸದಿರಿ. ನಿಮಗಿಂತ ಹಿರಿಯರು ಹೇಳುವ ಸಲಹೆಗಳನ್ನು ಕೇಳಿಸಿಕೊಂಡು, ಭವಿಷ್ಯದ ಭದ್ರತೆಗೆ ಹಣಕಾಸಿನ ಯೋಜನೆ ರೂಪಿಸಿ. ಇನ್ನು ಉದ್ಯೋಗಸ್ಥರು ಕೆಲಸವನ್ನು ಬಿಟ್ಟು, ಹೊಸ ವ್ಯಾಪಾರ- ವ್ಯವಹಾರ ಎಂದು ಆರಂಭಿಸಿದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಬಡ್ಡಿ ವ್ಯವಹಾರಕ್ಕಂತೂ ಕೈ ಹಾಕಲೇಬೇಡಿ. ಈ ವರ್ಷ ನಿಮಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಇದರ ಪರಿಣಾಮ ಕೆಲಸದ ಮೇಲೆ ಆಗಿ, ನಿರೀಕ್ಷಿತ ಪ್ರಮಾಣದಲ್ಲಿ ವೇತನ ಹೆಚ್ಚಳವನ್ನು ಪಡೆಯುವುದು ಕಷ್ಟವಾಗುತ್ತದೆ. ಆದರೆ ಇದೇ ಕಾರಣಕ್ಕೆ ಆಸಕ್ತಿ ಕಳೆದುಕೊಳ್ಳದಿರಿ.

ಕುಂಭ

ಕುಂಭ

ಖರ್ಚಿನ ಪ್ರಮಾಣದಲ್ಲಿ ವಿಪರೀತ ಹೆಚ್ಚಾಗುತ್ತದೆ. ವಾಹನ ಖರೀದಿ, ಆರೋಗ್ಯ ಹಾಗೂ ಪ್ರಯಾಣದಲ್ಲಿ ಸಮಸ್ಯೆಗಳಾಗಿ ಹಣವನ್ನು ಕೈಯಿಂದ ವಿಪರೀತ ಖರ್ಚು ಮಾಡಲಿದ್ದೀರಿ. ಇನ್ನು ತಾಯಿಯ ಆರೋಗ್ಯಕ್ಕಾಗಿ ಜಾಸ್ತಿ ಖರ್ಚಾಗಲಿದೆ. ಮಧುಮೇಹ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯ ಆಗಿ, ಅದಕ್ಕಾಗಿ ಹಣವನ್ನು ಸಾಲ ಮಾಡಬೇಕಾಗಿ ಬರಬಹುದು. ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು, ಆನ್ ಲೈನ್ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮಗೆ ವಂಚನೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನೀವು ಬಳಸುವ ಗ್ಯಾಜೆಟ್, ಲ್ಯಾಪ್ ಟಾಪ್, ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ದೂರ ಪ್ರಯಾಣ ಮಾಡುವ ವೇಳೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ. ಸಂಬಂಧಿಕರ ಮನೆಗಳಿಗೆ ತೆರಳುವಾಗ ಸಾಧ್ಯವಾದಷ್ಟು ಒಡವೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ. ನಿಮಗೆ ದೃಷ್ಟಿ ದೋಷವೂ ತಗುಲಬಹುದು ಹಾಗೂ ಆ ವಸ್ತುವನ್ನೇ ಕಳೆದುಕೊಳ್ಳ ಬೇಕಾಗಬಹುದು.

ಮೀನ

ಮೀನ

ವ್ಯಾಪಾರ- ವ್ಯವಹಾರ ಮಾಡುವವರಿಗೆ ದೊಡ್ಡ ಲಾಭದ ಅವಕಾಶಗಳು ದೊರೆಯುತ್ತವೆ. ಆದರೆ ಅದು ದೊರೆಯುವುದು ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ. ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನಿಮ್ಮ ವ್ಯಾಪಾರಕ್ಕೆ ಅನುಕೂಲ ಒದಗಿಬರುತ್ತದೆ. ವಾಹನ ಖರೀದಿ, ಮನೆ, ಸೈಟು ಖರೀದಿ ಇತ್ಯಾದಿ ಶುಭ ಫಲಗಳನ್ನು ನೀವು ಕಾಣಲಿದ್ದೀರಿ. ನಿಮ್ಮ ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಹೊಸ ಕಂಪೆನಿ ಅಥವಾ ಸಂಸ್ಥೆಗಳನ್ನು ಆರಂಭಿಸುವ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆ ದೊರೆಯಲಿದೆ. ಇದರ ಜತೆಗೆ ವಿದೇಶ ಪ್ರಯಾಣದ ಅವಕಾಶಗಳು ಕೂಡ ದೊರೆಯಲಿವೆ. ಚಿತ್ರರಂಗದಲ್ಲಿ ನಟರಾಗಿರುವವರು ಈ ವರ್ಷ ಅತಿ ದೊಡ್ಡ ಅವಕಾಶ ದೊರೆಯಲಿದೆ. ಸಂಭಾವನೆಯಲ್ಲಿ ಭಾರೀ ಏರಿಕೆ ಕೂಡ ಆಗಲಿದೆ. ಸಂಗಾತಿಯ ಬೆಂಬಲದ ಮೂಲಕ ಆರಂಭಿಸಿದ ವ್ಯವಹಾರವೊಂದು ಸ್ವಲ್ಪ ನಿಧಾನವಾಗಿಯಾದರೂ ಫಲ ನೀಡಲು ಆರಂಭವಾಗುತ್ತದೆ. ದೀರ್ಘಾವಧಿ ಉಳಿತಾಯ ಹಾಗೂ ಆದಾಯ ಬರುವ ದಾರಿಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನೀವೆಷ್ಟು ಉತ್ಸಾಹ ಹಾಗೂ ಚಟುವಟಿಕೆಯಿಂದ ಇರುತ್ತೀರೋ ಅಷ್ಟು ಪ್ರಮಾಣದಲ್ಲಿ ಈ ವರ್ಷದ ಶುಭ ಫಲವನ್ನು ಪಡೆಯಬಹುದು.

English summary
Money, Finance Horoscope 2021 in Kannada: Read your Finance Horoscope 2021 and know what your planetary positions indicate about money & finance. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X