Mercury Rise in Pisces: ಮೀನ ರಾಶಿಯಲ್ಲಿ ಬುಧ ಉದಯ: ಈ 3 ರಾಶಿಯವರ ವ್ಯವಹಾರದಲ್ಲಿ ಲಾಭ
ಗ್ರಹಗಳು ಸಂಚಾರ ಮಾಡುವಾಗ ನಿರ್ಧಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಕೆಲ ಗ್ರಹಗಳು ಸಂಚಾರದ ವೇಳೆ ಹಿಮ್ಮುಖವಾಗಬಹುದು, ಜೊತೆಗೆ ಕೆಲ ಬಾರಿ ಅವು ಉದಯಿಸಬಹುದು.
ವೈದಿಕ ಜ್ಯೋತಿಷ್ಯದಲ್ಲಿ ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಈ ಬುಧ ಗ್ರಹ ಬುದ್ಧಿವಂತಿಕೆ, ಮಾತು, ಅಧ್ಯಯನ ಮತ್ತು ವ್ಯವಹಾರದ ಅಂಶವಾಗಿದೆ. ಬುಧ ಗ್ರಹ ಪ್ರತಿ 27 ದಿನಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಬುಧ ಗ್ರಹವೂ ಕಾಲ ಕಾಲಕ್ಕೆ ವಕ್ರ ಸ್ಥಾನದಲ್ಲಿ ಸಂಚಾರ ಮಾಡುತ್ತದೆ. ಜೊತೆಗೆ ಅದು ಕಾಲಕಾಲಕ್ಕೆ ನೈಜ ಸ್ಥಿತಿಯತ್ತ ತಲುಪುತ್ತದೆ. ಇದರ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ.
ಆ ರೀತಿಯಲ್ಲಿ ಪ್ರಸ್ತುತ ಸ್ಥಿತ ಸ್ಥಾನದಲ್ಲಿರುವ ಬುಧ ಗ್ರಹ ಏಪ್ರಿಲ್ 19 ರಂದು ಮೀನ ರಾಶಿಯಲ್ಲಿ ಉದಯಿಸುತ್ತದೆ. ಬುಧ ಈ ರೀತಿ ಉದಯಿಸುವುದರಿಂದ, ಅದರ ಪರಿಣಾಮವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಇದು ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸು ಮತ್ತು ಲಾಭವನ್ನು ತರುತ್ತದೆ. ಹಾಗಾದರೆ ಈಗ ಮೀನ ರಾಶಿಯಲ್ಲಿ ಬುಧ ಉದಯಿಸುವುದರಿಂದ ಯಾರಿಗೆ ಅದೃಷ್ಟ ಒಲಿಯುತ್ತದೆ ಎಂದು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಬುಧ ಉದಯ ಶುಭ ಫಲ ನೀಡಲಿದೆ. ಕರ್ಕಾಟಕ ರಾಶಿಯ 9ನೇ ಮನೆಯಲ್ಲಿ ಬುಧ ಉದಯಿಸುತ್ತದೆ. ಹೀಗಾಗಿ ಈ ರಾಶಿಯವರ ಎಲ್ಲಾ ಬಾಕಿ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನೀವು ಶುಭ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುವಿರಿ. ಅಲ್ಲದೆ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಠಿಣ ಪರಿಶ್ರಮದ ಪ್ರತಿಫಲ ದೊರೆಯಲಿದೆ. ಕೆಲವರಿಗೆ ಬಡ್ತಿ ಮತ್ತು ವೇತನ ಹೆಚ್ಚಳವಾಗಬಹುದು. ಈ ಅವಧಿಯಲ್ಲಿ ನೀವು ಹೆಚ್ಚು ಪ್ರಯಾಣಿಸಬೇಕಾಗಬಹುದು. ಈ ಪ್ರವಾಸಗಳು ಉತ್ತಮ ಆರ್ಥಿಕ ಲಾಭವನ್ನು ತರುತ್ತವೆ.

ಧನು ರಾಶಿ
ಧನು ರಾಶಿಯವರಿಗೆ ಬುಧ ಉದಯ ಆರ್ಥಿಕ ಲಾಭವನ್ನು ನೀಡಲಿದೆ. ಬುಧನು ಧನು ರಾಶಿಯ 4 ನೇ ಮನೆಯಲ್ಲಿ ಉದಯಿಸುತ್ತಾನೆ. ಹೀಗಾಗಿ ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಉದ್ಯಮಿಗಳ ಹೊಸ ಯೋಜನೆಗಳು ಉತ್ತಮ ಯಶಸ್ಸು ಮತ್ತು ಲಾಭವನ್ನು ತರುತ್ತವೆ.
ನೀವು ಭೌತಿಕ ಆನಂದವನ್ನು ಪಡೆಯುತ್ತೀರಿ. ಇದರೊಂದಿಗೆ ಮನೆ, ಹೊಸ ವಾಹನ ಖರೀದಿಗೆ ಅವಕಾಶ ಸಿಗಲಿದೆ. ನೀವು ಇಲ್ಲಿಯವರೆಗೆ ನಿಮ್ಮ ತಾಯಿಯೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ತಾಯಿಯೊಂದಿಗೆ ನಿಮ್ಮ ಸಂಬಂಧವು ಏಪ್ರಿಲ್ 19 ರಿಂದ ಉತ್ತಮವಾಗಿರುತ್ತದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರುವ ಸಾಧ್ಯತೆ ಇದೆ.

ಮಕರ ರಾಶಿ
ಮಕರ ರಾಶಿಯವರಿಗೆ ಬುಧ ಉದಯ ಮಂಗಳಕರವಾಗಿದೆ. ಬುಧ ಗ್ರಹ ಮಕರ ರಾಶಿಯ 3ನೇ ಮನೆಯಲ್ಲಿ ಉದಯಿಸುತ್ತದೆ. ಇದು ಈ ರಾಶಿಗಳ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುತ್ತದೆ. ಪೋಷಕರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನ ಸಂತೋಷ ಮತ್ತು ಶಾಂತಿಯುತವಾಗಿರುತ್ತದೆ. ಈ ಅವಧಿಯಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಒಡಹುಟ್ಟಿದವರಿಂದ ಬೆಂಬಲ ದೊರೆಯುತ್ತದೆ. ವಿದೇಶಿ ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications