Mars Transit: ತಿಂಗಳಾಂತ್ಯದಲ್ಲಿ ಈ ರಾಶಿಯವರಿಗೆ ಬಂಪರ್‌ ಅವಕಾಶ : ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಕಷ್ಟಕ್ಕೆ ತೆರೆ

Mars Transit 2026: ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವು ಶಕ್ತಿ, ಧೈರ್ಯ, ಸಾಹಸ, ಭೂಮಿ (earth) ಮತ್ತು ಶೌರ್ಯಕ್ಕೆ ಕಾರಣನಾಗುತ್ತಾನೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ 24ರ ಬೆಳಿಗ್ಗೆ 5:50 ಕ್ಕೆ, ಮಂಗಳ ಗ್ರಹವು ಪುಷ್ಯ ನಕ್ಷತ್ರವನ್ನು ಪ್ರವೇಶಿಸುತ್ತದೆ (Mars Transit). ಪುಷ್ಯ ನಕ್ಷತ್ರವನ್ನು ನಕ್ಷತ್ರಗಳ ರಾಜ ಎಂದು ಕರೆಯಲಾಗುತ್ತದೆ. ಶನಿ ಪುಷ್ಯ ನಕ್ಷತ್ರದ ಅಧಿಪತಿ. ತಿಂಗಳ ಕೊನೆಯ ವಾರದಲ್ಲಿ ಅಗ್ನಿ ಅಂಶಕ್ಕೆ ಸೇರಿದ ಮಂಗಳ ಗ್ರಹವು ಶನಿಯ ಅಧಿಪತ್ಯದ ಪುಷ್ಯ ನಕ್ಷತ್ರವನ್ನು ಪ್ರವೇಶಿಸುವುದು. ಇದು ಕೆಲವು ರಾಶಿಯವರಿಗೆ ಅನುಕೂಲಕರ ಫಲವನ್ನು ಕರುಣಿಸುವುದು.

Mars Transit In Pushya Nakshatra Aries Leo Sagittarius Capricorn To Get Big Financial Gain Good Fortune

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ನಕ್ಷತ್ರ ಬದಲಾವಣೆಯೊಂದಿಗೆ, ಮಂಗಳನು 4 ರಾಶಿಯವರ (zodiac signs) ಜೀವನದಲ್ಲಿ ಸುವರ್ಣ ಯುಗ ಆರಂಭವಾಗುವುದಕ್ಕೆ ಕಾರಣನಾಗುತ್ತಾನೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯಾಗುವುದು. ಕೆಲಸದಲ್ಲಿ ಬಡ್ತಿ, ವ್ಯವಹಾರದಲ್ಲಿ ಅಭಿವೃದ್ಧಿಯಾಗಿ ಆರ್ಥಿಕ ಲಾಭ ಹೆಚ್ಚಾಗುವ ನಿರೀಕ್ಷೆಯಿದೆ.

ಈ ರಾಶಿಯವರ ಜೀವನದಲ್ಲಿ ಆರಂಭವಾಗುವುದು ಅದೃಷ್ಟದ ದಿನಗಳು :

ಮೇಷ ರಾಶಿ (Aries): ಮಂಗಳ ಗ್ರಹದ ಸಂಚಾರವು ಮೇಷ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಅನುಕೂಲಕರವಾಗಿರುವುದು. ತುಂಬಾ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಬೇಗನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವ್ಯಾಪಾರ ಮಾಡುವವರಿಗೆ ಹೊಸ ಅವಕಾಶಗಳು ಸಿಗುವುದು. ವ್ಯವಹಾರವನ್ನು ವಿಸ್ತರಿಸುವುದಕ್ಕೂ ಅವಕಾಶ ಸಿಗಬಹುದು. ಆದಾಯದಲ್ಲಿ ಹೆಚ್ಚಳವಾಗುವುದು. ಈ ಮೂಲಕ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆ ಇದೆ. ಹಣ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳು ಬರಬಹುದು. ಆಸ್ತಿ ಖರೀದಿ ಯೋಗ ಕೂಡಿ ಬರುವುದು.

Mars Transit ಸಿಂಹ ರಾಶಿ (Leo) : ಸಿಂಹ ರಾಶಿಯವರಿಗೆ ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳು ಸಿಗುವುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ಹೊಸ ಯೋಜನೆಗಳು ಕೈಗೂಡುವುದು. ಜವಾಬ್ದಾರಿಗಳು ಹೆಚ್ಚಾಗುವದ ಸಾಧ್ಯತೆ ಇದೆ. ನೀವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುವುದು. ನಿಮ್ಮ ಕೆಲಸದ ವೈಖರಿಗೆ ಮೆಚ್ಚುಗೆ ಸಿಗುವುದು. ಬಡ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆರ್ಥಿಕ ಪರಿಸ್ಥಿತಿ ಸದೃಢವಾಗಿ ಇರುವುದು. ಕಷ್ಟಗಳೆಲ್ಲಾ ಕಳೆಯುವ ಕಾಲ.

Mars Transit ಧನು ರಾಶಿ (Sagittarius): ಧನು ರಾಶಿಯವರು ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರ ಸಂಬಳ ಹೆಚ್ಚಾಗುವುದು. ಬಡ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವುದು. ಇಲ್ಲಿಯವರೆಗೆ ಎದುರಿಸಿದ ಕೆಲವು ಸಮಸ್ಯೆಗಳುಗೆ ಶಾಶ್ವತ ಪರಿಹಾರ ಸಿಗುವುದು. ಮಾನಸಿಕ ಒತ್ತಡವೂ ಕಡಿಮೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಮಾಡುವಿರಿ. ಆ ನಿರ್ಧಾರದಿಂದ ಯಶಸ್ಸು ಕೂಡಾ ಸಿಗುವುದು.

ಮಕರ ರಾಶಿ (Capricorn) : ಈ ಮಂಗಳ ಗ್ರಹದ ಸಂಚಾರವು ಮಕರ ರಾಶಿಯವರಿಗೆ ವರದಾನವಾಗಿರುವುದು. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು. ಹೊಸ ಹೂಡಿಕೆಗಳಲ್ಲಿ ಲಾಭ ಗಳಿಸುವ ಸಾಧ್ಯತೆಗಳಿವೆ. ಭೂಮಿ, ಮನೆ ಅಥವಾ ಇತರ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಉದ್ಯೋಗವಿರಿಲಿ, ವ್ಯಾಪಾರವಿರಲಿ ಈ ಅವಧಿಯಲ್ಲಿ ಲಾಭವೇ ಆಗುವುದು. ಆರ್ಥಿಕವಾಗಿ ಮುಂದುವರಿಯಲು ಹೊಸ ಅವಕಾಶಗಳು ಸಿಗುವುದು.

Mars Transit: ಅಶುಭ ಫಲ ನೀಡ್ತಾನಾ?

ಮಂಗಳನ ಪುಷ್ಯ ನಕ್ಷತ್ರಕ್ಕೆ ಪ್ರವೇಶ ಕೆಲವು ರಾಶಿಯವರಿಗೆ ಅಶುಭ ಫಲವನ್ನು ನೀಡುವುದು. ಮಿಥುನ, ತುಲಾ ಮತ್ತು ಮೀನ ರಾಶಿಯವರಿಗೆ ಈ ಅವಧಿ ಪ್ರಯೋಜನಕಾರಿಯಾಗಿರುವುದಿಲ್ಲ. ಈ ಸಮಯದಲ್ಲಿ ಇವರು ಹೆಚ್ಚು ಜಾಗರೂಕರಾಗಿರಬೇಕು. ಕೈಗೆತ್ತಿಕೊಂಡ ಕೆಲಸಗಳಲ್ಲಿ ಹಿನ್ನೆಡೆ ಉಂಟಾಗಬಹುದು. ಯಶಸ್ಸು ಸಿಗುವುದು ತಡವಾಗಬಹುದು. ಯಾರೊಂದಿಗೆ ಮಾತನಾಡುವಾಗಲೂ ಅತ್ಯಂತ ತಾಳ್ಮೆಯಿಂದ ಇರುವುದು ಅವಶ್ಯಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+