ನವೆಂಬರ್‌ವರೆಗೆ ಈ 5 ರಾಶಿಯವರಿಗೆ ರಾಜಯೋಗ : ಒಲಿಯುವಳು ಅದೃಷ್ಟ ಲಕ್ಷ್ಮೀ, ಹಣದ ಸುರಿಮಳೆ
Mars Transit Effects ಮಂಗಳ ಅಂದರೆ ಧೈರ್ಯ, ಶೌರ್ಯದ ಸಂಕೇತ. ಭೂಮಿ, ಆಸ್ತಿ, ರಕ್ತ, ಕೋಪ ಮತ್ತು ಉತ್ಸಾಹ ಎಲ್ಲದಕ್ಕೂ ಇವನೇ ಕಾರಣ. ಆದ್ದರಿಂದ, ಮಂಗಳನ ಸಂಚಾರದಲ್ಲಿ ಆಗುವ ಬದಲಾವಣೆಗಳು ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈಗಾಗಲೇ ಮಂಗಳ ಕರ್ಕಾಟಕ ರಾಶಿಯನ್ನು ಪ್ರವೇಶಿಸಿ ಆಗಿದೆ.

ಕರ್ಕಾಟಕ ರಾಶಿಗೆ ಮಂಗಳನ ಸಂಚಾರ (Mars Transit Effects)
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಕರ್ಕಾಟಕ ರಾಶಿಗೆ ಮಂಗಳ ಪ್ರವೇಶವಾದಾಗ ನೆಗೆಟಿವ್ ಪರಿಣಾಮ ಬೀರುವುದೇ ಹೆಚ್ಚು. ಆದರೂ ಕೆಲವೊಂದು ರಾಶಿಯವರಿಗೆ ಮಂಗಳನ ಈ ಸಂಚಾರ ಹೆಚ್ಚು ಅನುಕೂಲಕರವಾಗಿರುವುದು. ಈ ಅವಧಿಯಲ್ಲಿ ರೂಪುಗೊಳ್ಳುವ ರಾಜಯೋಗ ನಾಲ್ಕು ರಾಶಿಯವರ ಸಂತಸದ ಬಾಗಿಲು ತೆರೆಯುವುದು. ಅಂದುಕೊಂಡ ಕೆಲಸ ಸಲೀಸಾಗಿ ನಡೆಯುವುದು.
ಮೇಷ ರಾಶಿ (Aries)
ಕರ್ಕಾಟಕ ರಾಶಿಗೆ ಮಂಗಳ ಪ್ರವೇಶದಿಂದ ಹೆಚ್ಚು ಲಾಭ ಪಡೆಯುವ ರಾಶಿಯೆಂದರೆ ನಿಮ್ಮದೇ. ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚಾಗುವುದು. ಮಂಗಳನ ದೃಷ್ಟಿ ನಾಲ್ಕನೇ ಮನೆಯ ಮೇಲೆ ಬಿದ್ದರೆ ನ್ಯಾಯ ಸಿಗುತ್ತದೆಯಂತೆ. ವ್ಯಾಪಾರ ಮತ್ತು ವ್ಯವಹಾರದಲ್ಲಿಯೂ ಲಾಭವಾಗಬಹುದು. ಮನೆ, ಭೂಮಿ ಅಥವಾ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಕೆಲಸ ಕೈ ಹಿಡಿಯುವುದು. ವಿದ್ಯಾರ್ಥಿಗಳಿಗೆ ಸಮಯ ಹೆಚ್ಚು ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.
ಕರ್ಕಾಟಕ ರಾಶಿ (Cancer)
ಮಂಗಳನ ಈ ಸಂಚಾರ ಕರ್ಕಾಟಕ ರಾಶಿಯವರ ಪಾಲಿಗೆ ಅದೃಷ್ಟವನ್ನು ತರಲಿದೆ. ಅವರ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಾಯವಾಗುವುದು. ಮಂಗಳ ಕರ್ಕಾಟಕ ರಾಶಿಯಲ್ಲಿಯೇ ಸಂಚಾರ ಮಾಡ್ತಾ ಇರುವುದರಿಂದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದು. ಕೆಲಸ ಮಾಡುವ ರೀತಿಯಲ್ಲಿ ಸಣ್ಣ ಬದಲಾವಣೆ ತಂದರೂ ದೊಡ್ಡ ಯಶಸ್ಸು ಸಿಗುವುದು. ಒಟ್ಟಾರೆ ಪ್ರಗತಿಗೆ ಈ ಅವಧಿ ಕಾರಣವಾಗುವುದು. ವೈವಾಹಿಕ ಜೀವನದಲ್ಲೂ ಸುಧಾರಣೆ ಕಾಣುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು.
ಕನ್ಯಾ ರಾಶಿ (Virg)
ಮಂಗಳನ ಸಂಚಾರ ಕನ್ಯಾ ರಾಶಿಯವರ ಪರಿಸ್ಥಿತಿಯನ್ನು ಸುಧಾರಿಸುವುದು. ಹೂಡಿಕೆ ಮಾಡುವುದಕ್ಕೆ ಇದು ಅನುಕೂಲಕರ ಸಮಯ. ಆಮದು-ರಫ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಹೊಸ ಕೆಲಸ ಶುರು ಮಾಡಲು ಸಮಯ ಅನುಕೂಲಕರವಾಗಿದೆ. ವ್ಯವಹಾರ ವಿಸ್ತರಣೆ ಬಗ್ಗೆಯೂ ಯೋಚಿಸಬಹುದು. ನಿಂತು ಹೋಗಿದ್ದ ಕೆಲಸ ಕೂಡಾ ಕೈ ಗೂಡುವುದು. ಹಣದ ಸಮಸ್ಯೆ ನೀಗುವುದು. ನವೆಂಬರ್‌ವರೆಗೆ ಸಮಯ ಅನುಕೂಲಕರವಾಗಿ ಇರೋದ್ರಿಂದ ಹೊಸ ಕೆಲಸ ಶುರು ಮಾಡಬಹುದು.
ವೃಶ್ಚಿಕ ರಾಶಿ (Scorpio)
ಈ ಅವಧಿ ವೃಶ್ಚಿಕ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದು. ಜೀವನದಲ್ಲಿ ಉತ್ತಮ ಬದಲಾವಣೆಗಳಾಗಬಹುದು. ಮಾಡಿದ ಹೂಡಿಕೆಗಳಿಂದ ಲಾಭವಾಗುವುದು.ಆಸ್ತಿ ಗಳಿಸುವ ಮಾರ್ಗ ತೆರೆದುಕೊಳ್ಳುವುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು. ಬಡ್ತಿ ಸಿಗುವುದು. ಆದಾಯ ಹೆಚ್ಚಳಕ್ಕೂ ಅವಕಾಶ ಇದೆ.
ಮೀನ ರಾಶಿ (isces)
ಮಂಗಳ ಗ್ರಹದ ಸಂಚಾರದಲ್ಲಿನ ಬದಲಾವಣೆ ಮೀನ ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗುವುದು. ತಂದೆಯ ಸಹಾಯದಿಂದ ಮನಸ್ಸಿನ ಆಸೆ ಈಡೇರುವುದು. ಕೆಲಸ ಕಾರ್ಯಕ್ಕೆ ಹಿರಿಯರ ಬೆಂಬಲ ಮತ್ತು ಆಶೀರ್ವಾದ ಸಿಗುವುದು. ಸಂಬಂಧದಲ್ಲಿ ಎದ್ದಿದ್ದ ಅಸಮಾಧಾನ ಕೊನೆಯಾಗುವುದು. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಮುಂದುವರಿದರೆ ಕೆಲಸದಲ್ಲಿ ಸಕ್ಸಸ್ ಸಿಗುವುದು. ಮದುವೆ ಮಾತುಕತೆ ನಡೆಯಬಹುದು.
ಜ್ಯೋತಿಷ್ಯ ನಂಬಿಕೆ ಮತ್ತು ಭವಿಷ್ಯವಾಣಿ ಆಧಾರದ ಮೇಲೆ ಈ ಮಾಹಿತಿ ನೀಡಲಾಗಿದೆ. ಜಾತಕ, ರಾಶಿ, ನಕ್ಷತ್ರ ಸ್ಥಾನ, ಪಾದವನ್ನು ಅವಲಂಬಿಸಿ ವೈಯಕ್ತಿಕ ಫಲಿತಾಂಶಗಳು ಬದಲಾಗಬಹುದು.


Click it and Unblock the Notifications
