ಮಾರ್ಗಶಿರ ಮಾಸದ ವಾರದ ಪಂಚಾಂಗ: ಡಿ.20ರಿಂದ 26

ಮಾರ್ಗಶಿರ ಮಾಸದ ಡಿಸೆಂಬರ್ 20ರಿಂದ 26ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಡಿ.20. ರವಿವಾರ : ರೇವತಿ ನಕ್ಷತ್ರ. ದೇವರ ಕೆಲಸಕ್ಕೆ ಮತ್ತು ಮನೆಯ ತಾರಸಿ ಹಾಕಿಸಲುತ್ತಮ. ದೂರ ಪ್ರಯಾಣದಿಂದ ಸುಖ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

Margashira masa - Dec 20 to 26 : Rahu Kala, Gulika Kala, Yamaganda Kala

ಡಿ.21. ಸೋಮವಾರ : ಅಶ್ವಿನಿ. ವೈಕುಂಠ ಏಕಾದಶಿ. ಗೃಹಪ್ರವೇಶ ವಿಶೇಷವಾಗಿದ್ದರೆ. ಫ್ಯಾಕ್ಟರಿ ಆರಂಭಿಸಲು ಸೂಕ್ತ. ದೂರ ಪ್ರಯಾಣದಿಂದ ನಷ್ಟ. [ವೈಕುಂಠದ ಬಾಗಿಲು ತೆರೆದಿದೆ, ಶ್ರೀನಿವಾಸನ ದರ್ಶನ ಪಡೆಯಿರಿ]

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

Margashira masa - Dec 20 to 26 : Rahu Kala, Gulika Kala, Yamaganda Kala

ಡಿ.22. ಮಂಗಳವಾರ : ಭರಣಿ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಡಿ.23. ಬುಧವಾರ : ಕೃತ್ತಿಕಾ. ರೈತ ದಿನಾಚರಣೆ. ದೂರ ಪ್ರಯಾಣದಿಂದ ಯಶಸ್ಸು.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಡಿ.24. ಗುರುವಾರ : ರೋಹಿಣಿ. ಈದ್ ಮಿಲಾದ್. ಸರಕಾರಿ ರಜೆ. ಜಾಗತಿಕ ಗ್ರಾಹಕರ ದಿನ. ಹೊಸ ವಿದ್ಯಾಭ್ಯಾಸ, ಉದ್ಯೋಗ ಆರಂಭಿಸಲು ಮತ್ತು ಹೊಸ ವ್ಯವಹಾರಕ್ಕೆ ಸೂಕ್ತ ದಿನ. ಕೃಷಿ ಕಾರ್ಯಕ್ಕೆ ಉತ್ತಮ. ದೂರ ಪ್ರಯಾಣದಿಂದ ಹಾನಿ.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಡಿ.25. ಶುಕ್ರವಾರ : ಮೃಗಶಿರಾ ನಕ್ಷತ್ರ. ಹೊಸ್ತಿಲ ಹುಣ್ಣಿಮೆ. ಕ್ರಿಸ್ಮಸ್. ಸರಕಾರಿ ರಜೆ. ಗೃಹೋಪಯೋಗಿ ವಸ್ತು ಮತ್ತು ಹೊಸ ಠೇವಣಿ ಮಾಡಲುತ್ತಮ. ಮನೆ, ಪ್ಲಾಟು ಮತ್ತಿತರ ಕೊಡು-ಕೊಳ್ಳುವಿಕೆಗೆ ಸೂಕ್ತ ದಿನ. ದೂರ ಪ್ರಯಾಣದಿಂದ ಯಶಸ್ಸು.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಡಿ.26. ಶನಿವಾರ : ಆರಿದ್ರಾ ನಕ್ಷತ್ರ. ನಾಲ್ಕನೇ ಶನಿವಾರ. ಬ್ಯಾಂಕ್ ವ್ಯವಹಾರವಿರುವುದಿಲ್ಲ. ಮಾರ್ಗಶಿರ ಮಾಸದ ಕೃಷ್ಣ ಪಕ್ಷ ಆರಂಭ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತ : ರವಿವಾರ, ಸೋಮವಾರ, ಬುಧವಾರ, ಗುರುವಾರ. ಶುಕ್ರವಾರ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಯಾವುದೂ ಇಲ್ಲ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಕೆಲಸ ಕಾರ್ಯ ಮಾಡಿಕೊಳ್ಳದಿರುವುದು ಉತ್ತಮ.

ಈ ವಾರದ ಗ್ರಹಗತಿ : ಸಿಂಹ : ಗುರು. ಕನ್ಯಾ : ರಾಹು+ಮಂಗಳ. ತುಲಾ : ಶುಕ್ರ. ವೃಶ್ಚಿಕ: ನೀಚಶನಿ. ಧನುಸ್ಸು: ಬುಧ+ರವಿ. ಮೀನ : ಕೇತು+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+