Mahalakshmi Yoga: ಭಾಗ್ಯ ಬದಲಿಸುವ ಮಹಾಲಕ್ಷ್ಮೀ ಯೋಗ; ಈ ರಾಶಿಯವರಿಗೆ ಒಲಿಯಲಿದೆ ಸಿರಿ, ಸಂಪತ್ತು, ಸಮೃದ್ಧಿ
Mahalakshmi Yoga : ವೈದಿಕ ಜ್ಯೋತಿಷ್ಯದಲ್ಲಿ, ಮಹಾಲಕ್ಷ್ಮಿ ಯೋಗವನ್ನು ಅತ್ಯಂತ ಶುಭ ಯೋಗವೆಂದು ಹೇಳಲಾಗುತ್ತದೆ. ಯಾರ ಜಾತಕದಲ್ಲಿ ಈ ಯೋಗ ಇರುವುದೋ ಅವರು ಅಪಾರ ಸಂಪತ್ತನ್ನು ಗಳಿಸುವ ಅವಕಾಶ ಇರುವುದು. ಸಮಾಜದಲ್ಲಿ ಅವರ ಗೌರವ ಹೆಚ್ಚಾಗುವುದು.
ಮಹಾಲಕ್ಷ್ಮಿ ಯೋಗವು (Mahalakshmi Yoga) ಮಂಗಳ ಮತ್ತು ಚಂದ್ರನ ಸಂಯೋಗದಿಂದ ರೂಪುಗೊಳ್ಳುತ್ತದೆ. ಈ ಶುಭ ಯೋಗವು ಸೆಪ್ಟೆಂಬರ್ 5 ರಂದು ಅಂದರೆ ಜನ್ಮಾಷ್ಟಮಿಯ ಮಾರನೇ ದಿನವೇ ಮಿಥುನ ರಾಶಿಯಲ್ಲಿ ರೂಪುಗೊಳ್ಳುತ್ತದೆ . ಮಂಗಳ ಈಗಾಗಲೇ ಮಿಥುನ ರಾಶಿಯಲ್ಲಿದ್ದು, ಸೆಪ್ಟೆಂಬರ್ 5 ರಂದು ಚಂದ್ರನು ಕೂಡಾ ಅದೇ ರಾಶಿಗೆ ಕಾಲಿಡುತ್ತಾನೆ. ಹೀಗಾಗಿ ಮಿಥುನ ರಾಶಿಯಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗವಾಗುತ್ತದೆ. ಈ ಎರಡು ಗ್ರಹಗಳ ಸಂಯೋಗದಿಂದ ರೂಪುಗೊಂಡ ಮಹಾಲಕ್ಷ್ಮಿ ಯೋಗ ಕೆಲವು ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವುದು.

Mahalakshmi Yoga: ಈ ರಾಶಿಯವರಿಗೆ ಹೆಚ್ಚು ಪ್ರಯೋಜನ
Mahalakshmi Yoga:ಸಿಂಹ ರಾಶಿ (Leo): ಸಿಂಹ ರಾಶಿಯವರಿಗೆ ಮಹಾಲಕ್ಷ್ಮಿ ಯೋಗವು ಪ್ರಯೋಜನಕಾರಿಯಾಗಿರುವುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವುದು. ಬಹಳ ಸಮಯದಿಂದ ಕೈಗೂಡದೇ ಉಳಿದಿರುವ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣವಾಗುವುದು. ಉದ್ಯಮಿಗಳು ದೊಡ್ಡ ಮಟ್ಟದ ಆರ್ಡರ್‌ಗಳನ್ನು ಪಡೆಯುವರು. ಉದ್ಯೋಗದಲ್ಲಿರುವವರ ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ. ಹೊಸ ವ್ಯವಹಾರ ಆರಂಭಿಸುವುದಕ್ಕೆ ಅಥವಾ ಇರುವ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸಮಯ ಅನುಕೂಲಕರವಾಗಿದೆ.
Mahalakshmi Yoga:ಮಿಥುನ ರಾಶಿ (Gemini): ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗವುದು. ಮಿಥುನ ರಾಶಿಯಲ್ಲಿ ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದೆ. ಹಾಗಾಗಿ ಈ ಯೋಗ ಗಣನೀಯ ಪ್ರಯೋಜನ ಮಿಥುನ ರಾಶಿಯವರಿಗೇ ಆಗುವುದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ವ್ಯಕ್ತಿತ್ವವು ಸುಧಾರಿಸುವುದು. ನಿಮ್ಮ ಕೆಲಸಕ್ಕೆ ದೊಡ್ಡ ಮಟ್ಟದ ಪ್ರಶಂಸೆ ಸಿಗುವುದು. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ತುಂಬಾ ಪ್ರಯೋಜನಗಳನ್ನು ನೀಡುವುದು. ಹಠಾತ್ ಆರ್ಥಿಕ ಲಾಭವಾಗುವುದು. ಸಾಲ ಕೊಟ್ಟ ಹಣ ವಾಪಸ್ ಬರುವುದು. ವ್ಯವಹಾರದಲ್ಲಿ ದೊಡ್ಡಮಟ್ಟದ ಲಾಭವಾಗುವುದು.
Mahalakshmi Yoga:ಮಕರ ರಾಶಿ (Capricorn): ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.
ಮಕರ ರಾಶಿಯವರಿಗೆ ಮಹಾಲಕ್ಷ್ಮಿ ಯೋಗವು ತುಸು ಹೆಚ್ಚೇ ಶುಭವಾಗಿರುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು. ಆರ್ಥಿಕ ಲಾಭದ ಹಾದಿಗಳು ತೆರೆದುಕೊಳ್ಳುವುದು. ಹಳೆಯ ಹೂಡಿಕೆಯಿಂದ ಉತ್ತಮ ಲಾಭವಾಗುವುದು. ಹಳೆಯ ಸಾಲಗಳಿಂದ ಮುಕ್ತರಾಗಬಹುದು. ಕೈ ಸೇರದೆ ಉಳಿದಿರುವ ಬಾಕಿ ಹಣ ವಾಪಸ್ ಸಿಗುವುದು. ಹೊಸ ಕೆಲಸವನ್ನು ಆರಂಭಿಸಬಹುದು. ಆಸ್ತಿ ಖರೀದಿ ಯೋಗವಿರುವುದರಿಂದ ಈ ಬಗ್ಗೆ ಯೋಚಿಸಬಹುದು. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಅವಕಾಶ ಸಿಗುವುದು.
Mahalakshmi Yoga: ತುಲಾ ರಾಶಿ (Libra): ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳಬಹುದು. ತುಲಾ ರಾಶಿಯವರಿಗೆ ಮಹಾಲಕ್ಷ್ಮಿ ಯೋಗ ಶುಭವಾಗಿರುವುದು. ಈ ಅವಧಿಯಲ್ಲಿ ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. ನಿಮ್ಮ ನೆಚ್ಚಿನ ಜಾಗದಲ್ಲಿಯೇ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಕೆಲವು ಪ್ರಯತ್ನಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಬಹುದು. ಇಲ್ಲಿಯವರೆಗೆ ಈಡೇರದೆ ಇರುವ ಆಸೆ ಈಡೇರುವ ಸಾಧ್ಯತೆಗಳೂ ಇವೆ. ವಿದೇಶ ಪ್ರಯಾಣಕ್ಕೂ ಶುಭ ಅವಕಾಶಗಳಿವೆ.


Click it and Unblock the Notifications
