ಆಗಸ್ಟ್ 7-8 ಚಂದ್ರಗ್ರಹಣ, ಆಚರಣೆ-ನಿಯಮಗಳೇನು?

By: ಒನ್ಇಂಡಿಯಾ ಕನ್ನಡ ಡೆಸ್ಕ್
Subscribe to Oneindia Kannada

ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯಾದ ಇದೇ ಆಗಸ್ಟ್ 7ರಂದು ಸೋಮವಾರ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಇದೆ.

ಖಗ್ರಾಸ ಚಂದ್ರಗ್ರಹಣ: ತಿರುಪತಿ ದೇವಾಲಯ ಬಂದ್

ಗ್ರಹಣ ಸ್ಪರ್ಶ ರಾತ್ರಿ 10.52

ಗ್ರಹಣ ಮಧ್ಯ ರಾತ್ರಿ 11.50

ಗ್ರಹಣ ಮೋಕ್ಷ ಮಧ್ಯರಾತ್ರಿ 01.49 (8-8-2017)

Lunar Eclipse of the Sturgeon Full Moon

ಅಂದಹಾಗೆ ಸಂಧ್ಯಾಕಾಲದ ನಂತರ ಆಹಾರವನ್ನೂ ಸ್ವೀಕರಿಸಬಾರದು. ರಾತ್ರಿ ಭೋಜನ ನಿಷಿದ್ಧ. ಅಶಕ್ತರು ರಾತ್ರಿ ಏಳು ಗಂಟೆಯವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು. ಆ ನಂತರ ಅವರೂ ಸ್ವೀಕರಿಸಬಾರದು.

ಗ್ರಹಣಕಾಲದಲ್ಲಿ ಮಾಡಲೇಬೇಕಾದದ್ದು

ಗ್ರಹಣದ ಆಚರಣೆ ಶಾಸ್ತ್ರದ ವಚನ ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು.

2017: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

ಗ್ರಹಣದ ಆರಂಭ- ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು.

ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.

ಗ್ರಹಣ ಬಿಟ್ಟ ನಂತರವೇ ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.

"ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ" ಅಂದರೆ, ಎಲ್ಲ ವರ್ಣದವರೂ ಗ್ರಹಣಕಾದಲ್ಲಿ ಮೈಲಿಗೆಯನ್ನು ಆಚರಿಸಬೇಕು.

ಜನನ ಶೌಚವಿರುವವರು, ಮೃತಾಶೌಚವಿರುವವರು ಮತ್ತು ರಜಸ್ವಲೆಯಾದವರೂ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಅವರು ಜಪ, ಪಾರಾಯಣಗಳನ್ನು ಮಾಡಬಾರದು.

ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

ಗ್ರಹಣಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರಸ್ನಾನ ಸರ್ವೋತ್ತಮ

ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು

ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.

Lunar Eclipse is on August 7th-8th : Watch Video To Know The Procedures | Oneindia Kannada

ಗ್ರಹಣ ಕಾಲದಲ್ಲಿ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು. (ಇನ್ನೇನು ಗ್ರಹಣ ಬಿಡುತ್ತದೆ ಎನ್ನುವಾಗ ಮಾಡುವ ದಾನ ಅತೀಶ್ರೇಷ್ಠ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lunar Eclipse of the Sturgeon Full Moon on August 7-8th, 2017. Here is the complete procedure to follow during eclipse.
Please Wait while comments are loading...