Lucky Zodiac Sign : ಈ ರಾಶಿಯ ಹೆಣ್ಣನ್ನು ಮದುವೆಯಾಗುತ್ತಲೇ ಪತಿಗೆ ಒಲಿಯುವುದು ಅದೃಷ್ಟ; ಕಾಲಿಟ್ಟ ಮನೆಯಲ್ಲಿ ಉಕ್ಕಿ ಹರಿಯುವುದು

Lucky Zodiac Sign : ಜ್ಯೋತಿಷ್ಯದಲ್ಲಿ ಜನ್ಮದಿನಕ್ಕೂ ರಾಶಿ ಮತ್ತು ನಕ್ಷತ್ರಕ್ಕೂ ಬಹಳ ಸಂಬಂಧವಿದೆ. ವ್ಯಕ್ತಿಯ ಜೀವನ, ಸಮೃದ್ಧಿ, ಅದೃಷ್ಟ ಇತ್ಯಾದಿ ಆತನ ಜನ್ಮ ರಾಶಿಯನ್ನು ಅವಲಂಬಿಸಿರುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ. ಇದೇ ರೀತಿ, ವೈವಾಹಿಕ ಜೀವನದಲ್ಲೂ ಸಂಗಾತಿಯ ರಾಶಿ ಮತ್ತು ನಕ್ಷತ್ರ ಗಂಡನ ಪ್ರಗತಿ ಮತ್ತು ಸಮೃದ್ದಿಗೆ ಪೂರಕವಾಗಿರುತ್ತದೆಯಂತೆ. ಕೆಲವು ನಿರ್ದಿಷ್ಟ ರಾಶಿ ಮತ್ತು ದಿನದಂದು ಹುಟ್ಟಿರುವ ಹುಡುಗಿಯರು ಗಂಡನ ಪಾಲಿಗೆ ಅದೃಷ್ಟ ಲಕ್ಷ್ಮಿ ಆಗುತ್ತಾರಂತೆ. ಇವರ ಕೈಹಿಡಿದರೆ ಜೀವನ ಪೂರ್ತಿ ಸುಖ, ಸಂತೋಷ ಮತ್ತು ಸಮೃದ್ಧಿ ಮನೆಯಲ್ಲಿರುತ್ತಂತೆ. ಹೀಗಂತ ಹೇಳುತ್ತೇ ಜ್ಯೋತಿಷ್ಯ. ವಿಶೇಷವಾಗಿ ಗಂಡನ ಸಮೃದ್ದಿಗೆ ಕಾರಣವಾಗೋ ಪತ್ನಿಯರ ರಾಶಿ, ನಕ್ಷತ್ರಗಳು ಯಾವುವು ಎಂದು ತಿಳಿಯೋಣ.

Lucky Zodiac Sign Women Born Under Six Zodiac Bring Great Luck Success Financial Growth To Husband

ಮೇಷ ರಾಶಿ (Aries):

ಈ ರಾಶಿಯ ಹುಡುಗಿಯರು ಕ್ರಿಯಾಶೀಲರೂ ಹಾಗೂ ಶಕ್ತಿವಂತರೂ ಆಗಿರುತ್ತಾರೆ. ಇವರಲ್ಲಿ ಸಹಜ ನಾಯಕತ್ವ ಗುಣಗಳಿರುತ್ತವೆ. ಗಂಡ ತನ್ನ ಗುರಿ ಮುಟ್ಟುವಲ್ಲಿ ಇವರು ಗಂಡನಿಗೆ ಸ್ಪೂರ್ತಿಯಾಗುತ್ತಾರೆ. ಪತಿರಾಯರಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ರಾಶಿಯವರು ನೆರವಾಗುತ್ತಾರೆ. ಇವರ ಕೈ ಹಿಡಿದರೆ ಯಶಸ್ಸು ಪಕ್ಕಾ ಎನ್ನುತ್ತದೆ ಜ್ಯೋತಿಷ್ಯ. ಇವರು ಸಾಹಸ ಪ್ರವೃತ್ತಿಯ ಮಹಿಳೆಯರಾಗಿರುತ್ತಾರೆ. ಹಾಗಾಗಿ ಇವರ ಕೈಹಿಡಿದ ಗಂಡನಿಗೆ ಜೀವನದಲ್ಲಿ ಹಲವು ಅವಕಾಶಗಳು ಸಿಗುತ್ತದೆ.

ವೃಷಭ ರಾಶಿ (Taurus) :

ವೃಷಭ ರಾಶಿಯಲ್ಲಿ ಹುಟ್ಟಿದ ಪತ್ನಿಯರು ಸಹಜವಾಗಿ ಬುದ್ದಿವಂತರಾಗಿರುತ್ತಾರೆ. ಸ್ಥಿರತೆ, ಸಹನೆ ಮತ್ತು ವಾಸ್ತವಕ್ಕೆ ಹತ್ತಿರವಾಗಿ ಬದುಕುವುದು ಇವರ ಹೆಚ್ಚುಗಾರಿಕೆ. ಸರಳತೆ ಬಯಸುವ ಈ ಮಹಿಳೆಯರು, ಸಂಬಂಧಕ್ಕೆ ಭದ್ರ ಬುನಾದಿ ಹಾಕುತ್ತಾರೆ. ಇವರ ಕೈ ಹಿಡಿದರೆ ಹಣಕಾಸು ಸ್ಥಿರತೆ ಮತ್ತು ಬಹುಕಾಲದ ಯಶಸ್ಸು ಪಕ್ಕಾ ಎನ್ನುತ್ತದೆ ಜ್ಯೋತಿಷ್ಯ. ವೃಷಭ ರಾಶಿಯ ಮಹಿಳೆಯರ ಮೇಲೆ ಸುಲಭವಾಗಿ ಅವಲಂಬನೆಯಾಗಬಹುದು.

ಸಿಂಹ ರಾಶಿ (Leo):

ಈ ರಾಶಿಯಲ್ಲಿ ಹುಟ್ಟಿದವರು ಬುದ್ದಿವಂತರು. ಸನ್ನಿವೇಶಕ್ಕೆ ತಕ್ಕ ಒಗ್ಗುವಂತವರು. ಇವರ ಸಂವಹನ ಕಲೆ ಶ್ಲಾಘನೀಯ. ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ಯಾವುದೇ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಾರೆ. ಇದು ಪತಿಯ ಯಶಸ್ಸು, ಜೀವನ ಸಮೃದ್ದಿಗೆ ಕಾರಣವಾಗುತ್ತದೆ. ಇವರಿಗೆ ಸಂಬಂಧಗಳಲ್ಲಿ ಹೆಚ್ಚಿನ ಕುತೂಹಲ ಇರುತ್ತದೆ. ಗಂಡನ ಸಾಧನೆಗೆ ಇವರೇ ಸ್ಪೂರ್ತಿ ಆಗುತ್ತಾರೆ.

ಕಟಕ ರಾಶಿ (Cancer):

ಕಟಕ ರಾಶಿಯ ಮಹಿಳೆಯರು ಭಾವನೆಗಳಿಗೆ ಹೆಚ್ಚು ಒತ್ತು ಕೊಡ್ತಾರಂತೆ. ಇವರದ್ದು ತುಂಬಾ ಕೇರಿಂಗ್‌ ನೇಚರ್‌. ಪ್ರೇಮ ಜೀವನದಲ್ಲಿ ತುಂಬಾ ಸೌಹಾರ್ದಯುತ ಬಾಂಧವ್ಯ ಹೊಂದಲು ಇಷ್ಟ ಪಡುತ್ತಾರೆ. ಇದೇ ಗುಣ ಅವರ ಪತಿರಾಯರ ಯಶಸ್ಸಿಗೆ ಕಾರಣವಾಗುತ್ತದೆ. ಗಂಡನ ವೃತ್ತಿಜೀವನ ಹಾಗೂ ವಯುಕ್ತಿಕ ಜೀವನದ ಯಶಸ್ಸಿನಲ್ಲೂ ಕಟಕ ರಾಶಿಯ ಮಹಿಳೆಯರ ಕೊಡುಗೆಗಳು ದೊಡ್ಡದಿರುತ್ತದೆ.

ಕನ್ಯಾ ರಾಶಿ (Virgo) :

ಈ ರಾಶಿಯ ಮಹಿಳೆಯರು ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚಿನ ಮಹತ್ವ ಕೊಡುತ್ತಾರೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ಇವರ ಕಲೆ ಗಂಡನ ಯಶಸ್ಸಿಗೆ ಮೂಲ ಕಾರಣವಾಗುತ್ತದೆ. ಇವರು ಗಂಡನ ಜೀವನದ ಅತಿದೊಡ್ಡ ಆಸ್ತಿಯಾಗುತ್ತಾರೆ. ಗಂಡನಿಗೆ ಸ್ಪಷ್ಟ ಸಲಹೆ ಕೊಡ್ತಾರೆ. ಅವನಿಗೆ ಬೆಂಬಲವಾಗಿರ್ತಾರೆ. ಮನೆ ಚೊಕ್ಕಟವಾಗಿ, ವ್ಯವಸ್ಥಿತವಾಗಿಡ್ತಾರೆ. ಇದೇ ಗಂಡನ ಪ್ರಗತಿಗೆ ಕಾರಣವಾಗುತ್ತದೆ.

Lucky Zodiac Sign ತುಲಾ ರಾಶಿ (Libra):

ತುಲಾ ರಾಶಿಯ ಮಹಿಳೆಯರು ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವಲ್ಲಿ ಎತ್ತಿದ ಕೈ. ಈ ರಾಶಿಯವರು ನೋಡಲು ಸುಂದರವಾಗಿರುತ್ತಾರೆ. ಸಮಸ್ಯೆ ಬಗೆಹರಿಸುವಲ್ಲಿ ನೈಪುಣ್ಯತೆ, ಸಂಬಂದದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಅವರ ಹೊಣೆಗಾರಿಕೆ, ಗಂಡನಿಗೆ ಅತಿದೊಡ್ಡ ಶಕ್ತಿ ನೀಡುತ್ತದೆ. ಇಂಥಹ ಮಹಿಳೆಯರು ಗಂಡನ ಸಮೃದ್ಧಿಗೆ ಕಾರಣರಾಗುತ್ತಾರೆ.

ಧನು ರಾಶಿ (Sagittarius):

ಈ ರಾಶಿಯವರು ಸಾಹಸ ಪ್ರಿಯರು. ತುಂಬಾ ದೂರದೃಷ್ಟಿ ಇವರಿಗಿರುತ್ತದೆ. ಸಕಾರಾತ್ಮಕ ಯೋಚನೆ (positive news) , ಉತ್ಸಾಹ ಇವರ ಪ್ಲಸ್‌ ಪಾಯಿಂಟ್‌. ಗಂಡನಿಗೆ ಹೊಸ ಅವಕಾಶ ಕಲ್ಪಿಸುವಲ್ಲಿಯೂ ಇವರ ಕೊಡುಗೆ ದೊಡ್ಡದು. ಪ್ರಗತಿ ಮತ್ತು ಯಶಸ್ಸು ಒಂದೇ ಗತಿಯಲ್ಲಿ ಓಡುವಲ್ಲಿ ಈ ರಾಶಿಯವರು ನೆರವಾಗುತ್ತಾರೆ. ಗಂಡ ತನ್ನ ಗುರಿ ತಲುಪುವಲ್ಲಿ ಧನು ರಾಶಿಯ ಮಹಿಳೆಯರ ಪಾತ್ರ ದೊಡ್ಡದಿರುತ್ತದೆ.

ಮಕರ ರಾಶಿ (Capricorn):

ಈ ರಾಶಿಯ ಮಹಿಳೆಯರು ಶಿಸ್ತಿಗೆ ಹೆಸರಾಗಿರುತ್ತಾರೆ. ವಾಸ್ತವಕ್ಕೆ ಹತ್ತಿರದಲ್ಲಿ ಜೀವನ (life) ಮಾಡುತ್ತಾರೆ. ಯಾವಾಗಲೂ ದೊಡ್ಡ ಗುರಿ ಇಟ್ಟುಕೊಳ್ಳುತ್ತಾರೆ. ಇವರು ಶ್ರಮಜೀವಿಗಳೂ ಆಗಿರುತ್ತಾರೆ. ಈ ರಾಶಿಯ ಹೆಣ್ಣನ್ನು ಮದುವೆಯಾಗುವ ಗಂಡಿನ ಕೈ ಹಿಡಿಯುವುದು ಅದೃಷ್ಟ. ಪತಿಯ ಪತ್ರಿ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲುವ ಗುಣವಿರುವ ಈ ರಾಶಿಯವರು ಪತಿಯ ಯಶಸ್ಸಿನಲ್ಲಿ ದೊಡ್ಡ ಪಾಲು ಹೊಂದಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+