Lucky Number: ಈ ದಿನಾಂಕದಲ್ಲಿ ಜನಿಸಿದವರಿಗೆ ಧನಯೋಗ ; ಈ ವಾರ ಸಿಗುವುದು ಜಾಕ್‌ಪಾಟ್

Lucky Number: ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಂದು ಸಂಖ್ಯೆಗೂ ವಿಶೇಷ ಮಹತ್ವವಿದೆ. ಒಬ್ಬ ವ್ಯಕ್ತಿಯ ಮೂಲಾಂಕವನ್ನು ಅವರ ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಸಂಖ್ಯೆಯೂ ಒಂದೊಂದು ಗ್ರಹಗಳ ಜೊತೆ ಸಂಬಂಧ ಹೊಂದಿರುತ್ತದೆ. ಜ್ಯೋತಿಷ್ಯದಲ್ಲಿ ರಾಶಿಗೆ ಅನುಸಾರವಾಗಿ ಭವಿಷ್ಯ ಹೇಳಿದರೆ ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದ ಆಧಾರದ ಮೇಲೆ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ.

ಸಂಖ್ಯೆ 1 (ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರು)

ನಿಮ್ಮ ಮನಸ್ಸಿನ ಮಾತನ್ನು ಸ್ಪಷ್ಟವಾಗಿ ಹೇಳುವಿರಿ. ಇಡೀ ವಾರ ಶಾಂತಿ ಇರುವುದು. ನಿಮ್ಮ ಅದ್ಭುತ ಗುಣಗಳು ಬೆಳಕಿಗೆ ಬರುತ್ತವೆ. ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ಆಸ್ತಿ ಖರೀದಿಸುವಿರಿ. ಜೀವನದ ಪ್ರೀತಿ, ಸಂತೋಷ ಹೆಚ್ಚಾಗುವುದು. ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಗಳು.

Lucky Number Person Born On This Date Will Be Lucky In This Week As per Numer Lucky Date Of Birth

ಸಂಖ್ಯೆ 2 (ಯಾವುದೇ ತಿಂಗಳ 2, 11, 20, 29 ರಂದು ಜನಿಸಿದವರು)

ಈ ವಾರ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕಷ್ಟದ ಸಮಸಯ ಕಳೆಯುವುದು. ನಿಮ್ಮ ಕೆಲಸದಿಂದ ಎಲ್ಲರೂ ಪ್ರಭಾವಿತರಾಗುವರು. ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ. ಇಡೀ ವಾರ ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿ ಕಳೆಯುವುದು. ಲಾಭದಾಯಕ ವಾರದವಾಗಿರುವುದು.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದವರು)

ಇದು ಸಂಪೂರ್ಣವಾಗಿ ಅನುಕೂಲಕರ ವಾರವಾಗಿರುವುದು. ಮೇಲಾಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಇದ್ದರೂ ಸಕಾರಾತ್ಮಕ ಆಶಾವಾದಿ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವಿರಿ. ಮಾತುಕತೆ ನಡೆಸಲು ಇದು ಅದ್ಭುತ ಸಮಯ. ಕೆಲವು ರಹಸ್ಯ ಅಹಿತಕರವಾಗಿದ್ದರೂ, ಅಂತಿಮವಾಗಿ ಸಮಸ್ಯೆ ಪರಿಹಾರವಾಗುವುದು.ಮನಸ್ಸಿನ ಶಾಂತಿ ಹೆಚ್ಚಾಗುವುದು. ವಾರಾಂತ್ಯವು ಕೆಲಸ ಹೆಚ್ಚಾಗುವುದು.

ಸಂಖ್ಯೆ 4 (ಯಾವುದೇ ತಿಂಗಳ 4, 13, 22, 31 ರಂದು ಜನಿಸಿದವರು)

ಕುಟುಂಬ ಸದಸ್ಯರಿಗೆ ನೀಡಿದ ಭರವಸೆ ಈಡೇರುವುದು. ಶುಕ್ರ ಮತ್ತು ಮಂಗಳನ ಅನುಕೂಲಕರ ಸ್ಥಾನ ಮನಸ್ಸಿನ ಹೊರೆಯನ್ನು ಕಡಿಮೆ ಮಾಡುವುದು. ಹೊಸ ಆರಂಭಕ್ಕೆ ಇದು ಸೂಕ್ತವಾದ ವಾರ. ಇತರರನ್ನು ದೂಷಿಸುವ ಬದಲು ನಿಮ್ಮ ಕೆಲಸ ಮೇಲೆ ನಂಬಿಕೆ ಇಟ್ಟುಕೊಳ್ಳಿ.

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದನು)

ಹಣಕ್ಕಿಂತ ಖ್ಯಾತಿಯ ಮೇಲೆ ಹೆಚ್ಚು ಗಮನ ಹರಿಸುವಿರಿ. ಆದರೂ ನೀವು ಬಯಸಿದ ಖ್ಯಾತಿ ಸಿಗುತ್ತದೆ ಎನ್ನುವುದು ಸಾಧ್ಯವಿಲ್ಲ. ಉತ್ಸಾಹ ಕಳೆದುಕೊಳ್ಳಬೇಡಿ. ಕುಟುಂಬದೊಂದಿಗೆ ಸಣ್ಣ ಪ್ರವಾಸಗಳು ಅಥವಾ ದೇಶೀಯ ಪ್ರವಾಸಕ್ಕೆ ಹೋಗಬಹುದು. ಕಚೇರಿಯಲ್ಲಿ ಏಕಾಗ್ರತೆಯಿಂದ ಕೆಲಸ ಮಾಡಿ. ನಿಮ್ಮ ಗಮನವನ್ನು ಬೇರೆಡೆಗೆ ಹರಿಯಲು ಬಿಡಬೇಡಿ.

ಸಂಖ್ಯೆ 6 (ಯಾವುದೇ ತಿಂಗಳ 6, 15, 24 ರಂದು ಜನಿಸಿದವರು)

ವೃತ್ತಿಜೀವನದಲ್ಲಿ ಹೊಸ ಅವಕಾಶ ಬಾಗಿಲು ತಟ್ಟುತ್ತದೆ. ಬರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ಅವಕಾಶವು ಪ್ರಸ್ತುತ ನಿಮ್ಮ ಆರ್ಥಿಕ ನಿರೀಕ್ಷೆಗಳಿಗೆ ಹೊಂದಿಕೆಯಾಗದಿದ್ದರೂ, ಮುಂದುವರಿಯುವುದು ಒಳ್ಳೆಯದು. ಏಕೆಂದರೆ ದೀರ್ಘಾವಧಿಯಲ್ಲಿ ಇದು ಹೆಚ್ಚಿನ ಪ್ರಯೋಜನ ನೀಡುವುದು. ಈ ಅವಕಾಶ ಬಿಟ್ಟರೆ ಮತ್ತೆ ಇಂಥ ಅವಕಾಶ ಸಿಗದಿರಬಹುದು.

ಸಂಖ್ಯೆ 7 (ಯಾವುದೇ ತಿಂಗಳ 7, 16, 25 ರಂದು ಜನಿಸಿದವರು)

ನಿಮ್ಮ ಪ್ರತಿಭೆಯಿಂದ ಬೇರೆಯವರು ಪ್ರಭಾವಿತರಾಗುವರು. ಮಹಿಳೆಯರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಸಂಯಮವನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವ ಮೊದಲು ಸಲಹೆಗಾರರು ಮತ್ತು ಪಾಲುದಾರರೊಂದಿಗೆ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.

ಸಂಖ್ಯೆ 8 (ಯಾವುದೇ ತಿಂಗಳ 8, 17, 26 ರಂದು ಜನಿಸಿದವರು)

ನಿಮ್ಮ ಆಶಾವಾದಿ ದೃಷ್ಟಿಕೋನದಿಂದ ಪರಿಸ್ಥಿತಿ ಸುಧಾರಿಸುವುದು. ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಈ ವಾರ ಸಂತೋಷದಿಂದ ಕೂಡಿರುವುದು. ಕೆಲಸದ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗುವುದು. ಇತರರು ನಿಮ್ಮ ಖ್ಯಾತಿ ಕುಗ್ಗಿಸಲು ಪ್ರಯತ್ನಿಸಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದವರು)

ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುವುದು. ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬದಲ್ಲಿ ನಿಮ್ಮ ಬಗ್ಗೆ ಸುಳ್ಳು ಹರಡುವ ಸ್ನೇಹಿತರ ಬಗ್ಗೆ ಜಾಗರೂಕರಾಗಿರಿ. ಕರಿಯರ್ ದೃಷ್ಟಿಯಿಂದ ನೋಡುವುದಾದರೆ ಇದು ಉತ್ತಮ ವಾರ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚನೆ ಮಾಡಿ. ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+