Love Horoscope February: ಫೆಬ್ರವರಿ ತಿಂಗಳ ಪ್ರೇಮ ಜಾತಕ 2024: ಈ ರಾಶಿಯವರ ಲವ್ ಸಕ್ಸಸ್....
ಫೆಬ್ರವರಿ ತಿಂಗಳು ಬಂತೆಂದರೆ ಸಾಕು ನಮ್ಮಲ್ಲೇನೋ ಒಂದು ಖುಷಿ. ಯಾಕೆಂದರೆ ಇದನ್ನು ಪ್ರೀತಿಯ ತಿಂಗಳು ಅಂತಲೇ ಕರೆಯಲಾಗುತ್ತದೆ. ಹೌದು.. ನಮ್ಮೆಲ್ಲರಿಗೂ ತಿಳಿದಿರುವಂತೆ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಪ್ರತೀ ವರ್ಷ ಆಚರಿಸಲಾಗುತ್ತದೆ. ಈ ದಿನಕ್ಕಾಗಿ ಹಲವಾರು ಪ್ರೇಮಿಗಳು ಎದುರು ನೋಡುತ್ತಾರೆ. ಅನೇಕ ಪ್ರೇಮಿಗಳು ಈ ದಿನ ತಮ್ಮ ಪ್ರೇಮ ಪ್ರಸ್ತಾಪಕ್ಕಾಗಿ ಕಾತುರದಿಂದ ಕಾಯುತ್ತಾರೆ.
ಆದರೆ ಎಲ್ಲರ ಲವ್ ಸಕ್ಸಸ್ ಆಗುತ್ತದೆ ಎಂದಲ್ಲ. ಕೆಲವರು ತಮ್ಮ ಪ್ರೇಮಿಗಳನ್ನು ಸ್ವೀಕಾರ ಮಾಡಬಹುದು ಮಾಡದೇಯೂ ಇರಬಹುದು. ಆದರೆ ಗ್ರಹಗತಿಗಳು ಉತ್ತಮವಾಗಿದ್ದರೆ ನೀವಂದುಕೊಂಡ ಸಂಗಾತಿ ಅಥವಾ ಪ್ರೇಮಿ ನಿಮ್ಮವರಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತದೆ ಜ್ಯೋತಿಷ್ಯ. ಹಾಗಾದರೆ ಯಾವ ರಾಶಿಯವರು ಈ ಫೆಬ್ರವರಿಯಲ್ಲಿ ಪ್ರೇಮ ಪ್ರಸ್ತಾಪದಿಂದ ಯಶಸ್ವಿಯನ್ನು ಹೊಂದುತ್ತಾರೆ ಎಂದು ಜ್ಯೋತಿಷ್ಯದ ಮೂಲಕ ತಿಳಿಯೋಣ.

ಮೇಷ:
ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ತುಂಬಾ ಅದ್ಭುತವಾಗಿದೆ. ಅವಿವಾಹಿತರಿಗೆ ಹಾಗೂ ಏಕಾಂಗಿಗಳಿಗೆ ತಮ್ಮ ಕನಸಿನ ಸಂಗಾತಿ ಈ ತಿಂಗಳು ಕಾಣಿಸಿಕೊಳ್ಳುತ್ತಾರೆ. ಜ್ಯೋತಿಷ್ಯದಲ್ಲಿ ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ತುಂಬಾ ಮಂಗಳಕರವಾಗಿದೆ. ಮೇಷ ರಾಶಿಯವರು ತಮ್ಮ ಪ್ರೇಮಿಯನ್ನು ಎಷ್ಟು ಪ್ರೀತಿಸುತ್ತಾರೆಂದರೆ, ನೀವು ಬೇರೊಬ್ಬರೊಂದಿಗೆ ಮಾತನಾಡುವಾಗ ಅವರು ಕೆರಳುತ್ತಾರೆ, ನಿಮ್ಮ ಹಳೆಯ ಗೆಳೆಯ ಅಥವಾ ಗೆಳತಿಯ ಪ್ರಸ್ತಾಪದಿಂದ ಕೋಪಗೊಳ್ಳುತ್ತಾರೆ.
ಅವರ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿರುತ್ತದೆ. ನಿಮ್ಮನ್ನು ಅವರು ಸುರಕ್ಷಿತವಾಗಿರಿಸಿಕೊಂಡು ಕಾಪಾಡುತ್ತಾರೆ. ಅವರು ನಿಮ್ಮ ಬಳಿ ಇರುವಾಗ ಅವರ ಬದಲಾಗುತ್ತಿರುವ ಅಭಿವ್ಯಕ್ತಿಗಳು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳಾಗಬಹುದು. ಹೀಗಾಗಿ ಮೇಷ ರಾಶಿಯವರು ಪ್ರೇಮ ಜೀವನದಲ್ಲಿ ಯಶಸ್ಸು ಕಾಣುವರು.

ವೃಷಭ:
ವೃಷಭ ರಾಶಿಯವರು ತುಂಬಾ ನಾಚಿಕೆ ಸ್ವಭಾವದವರು. ಇವರ ಸುತ್ತಲೂ ಯಾವಾಗಲೂ ಸ್ನೇಹಿತರು ಮತ್ತು ಸಂಬಂಧಿಕರು ಇರುತ್ತಾರೆ. ಈ ರಾಶಿಯವರಿಗೆ ಬೇರೆಯವರು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಆದರೆ ಈ ರಾಶಿಯವರು ಮಾತ್ರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ.
ವೃಷಭ ರಾಶಿಯವರು ತಾವಿಷ್ಟಪಡುವವರಿಗೆ ಸಹಾಯ ಹಸ್ತ ಚಾಚಲು ಹಿಂಜರಿಯುವುದಿಲ್ಲ. ಇನ್ನೂ ನಿಮ್ಮನ್ನು ದುಃಖಿಸಲು ಬಯಸುವುದಿಲ್ಲ ಎಂಬುದು ಸ್ಪಷ್ಟ. ಈ ಮೂಲಕ ಅವರು ತಮ್ಮ ಪ್ರೀತಿಯನ್ನು ತಿಳಿಸಲು ಪ್ರಯತ್ನಿಸುತ್ತಾರೆ.

ಮಿಥುನ:
ಮಿಥುನ ರಾಶಿಯವರು ಮುಂದಾಲೋಚನೆಯನ್ನು ಹೆಚ್ಚಾಗಿ ಮಾಡುವರು. ಪ್ರೇಮ ಪ್ರಸ್ತಾಪದಿಂದ ಬೇಸರಗೊಂಡರೆ, ಕೋಪಗೊಂಡರೆ, ಒಪ್ಪದ್ದಿದ್ದರೆ, ತಮ್ಮೊಂದಿಗೆ ಮಾತು ಬಿಟ್ಟರೆ ಎನ್ನುವ ಬಗ್ಗೆ ಯೋಚಿಸುತ್ತಾರೆ. ಈ ರಾಶಿಯವರು ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಬಯಸುವುದಿಲ್ಲ.
ಜೊತೆಗೆ ಇವರು ಇತರರೊಂದಿಗೆ ನೀವು ಹೆಚ್ಚು ಪ್ರಾಮುಖ್ಯತೆ ನೀಡುವುದು ಇಷ್ಟಪಡುವುದಿಲ್ಲ. ಇವರ ಗ್ರಹಗತಿಗಳ ಪ್ರಕಾರ ಈ ತಿಂಗಳು ಇವರು ಪ್ರೇಮ ಪ್ರಸ್ತಾಪವನ್ನು ಮಾಡಬಹುದು. ಆದರೆ ಉತ್ತರ ಏನೇ ಇರಲ್ಲಿ ಅದನ್ನು ಅವರು ಸ್ವೀಕರಿಸಬೇಕಾಗುತ್ತದೆ.

ಕರ್ಕಾಟಕ:
ನಿಮ್ಮ ಪ್ರೀತಿಯನ್ನು ಇತರರೊಂದಿಗೆ ಹೋಲಿಸಲು ಪ್ರಯತ್ನಿಸಬೇಡಿ. ಆಗ ಮಾತ್ರ ನಿಮ್ಮ ನಿರ್ದಿಷ್ಟ ಮಾರ್ಗವು ನಿಮ್ಮ ಮುಂದೆ ಸುಂದರವಾಗಿ ತೆರೆದುಕೊಳ್ಳುತ್ತದೆ. ನಿಮ್ಮ ಪ್ರೇಮಿಯನ್ನು ನಂಬಿರಿ. ಪ್ರೀತಿಯಲ್ಲಿ ನಂಬಿಕೆಯೇ ನಿಮ್ಮ ಆಧಾರ. ವಿಶೇಷವಾಗಿ ನಿಮ್ಮ ಸಂಗಾತಿಯ ಸಂಬಂಧಗಳ ಬಗ್ಗೆ ಅನಗತ್ಯ ಅಸೂಯೆ ತೊಡೆದುಹಾಕಿ.
ಅವರು ನಿಮ್ಮ ಬೆಂಬಲವನ್ನು ಹೊಂದಿದ್ದಾರೆಂದು ತಿಳಿದುಕೊಂಡು ಅವರಿಗೆ ಆರಾಮದಾಯಕವಾಗಿರಲು ಅನುಮತಿಸಿ. ಪರಸ್ಪರರ ಅನ್ಯೂನ್ಯತೆಯ ಮೂಲಕ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ. ತುಂಬು ಮನಸ್ಸಿನಿಂದ ಅವರ ಸ್ವಾತಂತ್ರ್ಯ ಅವರಿಗೆ ನೀಡಿ ಅವರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆಯಿರಿ. ಹಾಗಿದ್ದಾಗ ಮಾತ್ರ ಪ್ರೇಮ ವಿಚಾರದಲ್ಲಿ ಕರ್ಕಾಟಕ ರಾಶಿಯವರು ಯಶಸ್ವಿಯಾಗುತ್ತಾರೆ.

ಸಿಂಹ:
ಪ್ರೇಮದಲ್ಲಿ ಸಿಂಹ ರಾಶಿಯವರು ಅನಿರೀಕ್ಷಿತ ಸವಾಲುಗಳನ್ನು ಎದುರಿಸಬಹುದು. ಹಗೆತನವು ನಿಮ್ಮನ್ನು ಹಿಂಜರಿಯುವಂತೆ ಮಾಡಬಹುದು. ಪ್ರತಿಯೊಂದು ಪ್ರೇಮ ಜೀವನದಲ್ಲಿ ಸವಾಲುಗಳು ಎದುರಾಗುತ್ತವೆ. ಅದನ್ನು ಅರ್ಥೈಸಿಕೊಂಡು ಹೋದರೆ ತುಂಬಾ ಒಳ್ಳೆಯದು.
ಪ್ರೀತಿಯಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ ಆದರೆ ಅದನ್ನು ನೀವು ಎದುರಿಸುವುದಿಲ್ಲ. ಇದು ನಿಮ್ಮ ಪ್ರೇಮಿಯ ಬಗ್ಗೆ ನಿಮಗೆ ಇರುವ ನಿರ್ಲಕ್ಷ್ಯ. ಇಂಥಹ ಸಂದರ್ಭಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುತ್ತದೆ. ನೀವು ಈಗಾಗಲೇ ಪ್ರೀತಿಯಲ್ಲಿ ಬಿದ್ದಿದ್ದೀರಿ. ಭರವಸೆಗಳು ಈಡೇರಿದಾಗ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ವೈವಾಹಿಕ ಜೀವನಕ್ಕೆ ನಂಬಿಕೆಯೇ ಅಡಿಪಾಯ. ಹೀಗಾಗಿ ಸಿಂಹ ರಾಶಿಯವರು ತಮ್ಮ ಪ್ರೇಮ ಜೀವನದಲ್ಲಿ ತಮ್ಮ ಪ್ರೇಮಿಯನ್ನು ಅರ್ಥಮಾಡಿಕೊಳ್ಳಬೇಕು. ಈ ಫೆಬ್ರವರಿ ಸಿಂಹ ರಾಶಿಯವರಿಗೆ ಕೊಂಚ ಕಷ್ಟವಾಗಿರುತ್ತದೆ.

ಕನ್ಯಾ:
ಕನ್ಯಾ ರಾಶಿಯರುವರಿಗೆ ಈ ಫೆಬ್ರವರಿ ತಿಂಗಳು ತುಂಬಾ ಸುಂದರವಾಗಿರುತ್ತದೆ. ನೀವು ಪ್ರೇಮಿಗಳಾಗುವಿರಿ. ನಿಮ್ಮ ಪ್ರೇಮ ಪ್ರಸ್ತಾಪಕ್ಕೆ ನಿಮ್ಮ ಪ್ರೇಮಿ ಗ್ರೀನ್ ಸಿಗ್ನಲ್ ಕೊಡುವ ದಿನ ಇನ್ನೇನು ದೂರವಿಲ್ಲ. ನಿಮ್ಮ ಒಳ್ಳೆಯತನ ನಿಮ್ಮ ಪ್ರೇಮಿಗೆ ಇಷ್ಟವಾಗುತ್ತದೆ. ನೀವಂದುಕೊಂಡ ಸಂಗಾತಿಯನ್ನು ನೀವು ಈ ತಿಂಗಳಲ್ಲಿ ಪಡೆಯುವಿರಿ. ಆದರೆ ನಿಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ತಿಳಿಸಲು ಇದು ಉತ್ತಮವಾದ ಸಮಯವಲ್ಲ. ಹೀಗಾಗಿ ಈ ತಿಂಗಳು ನೀವು ನಿಮ್ಮ ಪ್ರೀತಿಯಲ್ಲಿ ಜಯ ಸಾಧಿಸುವಿರಿ.

ತುಲಾ:
ತುಲಾ ರಾಶಿಯ ಏಕಾಂಗಿಗಳಿಗೆ ಅಥವಾ ಅವಿವಾಹಿತರಿಗೆ ಈ ತಿಂಗಳ ಪ್ರೇಮ ಜಾತಕ ಅದ್ಭುತವಾಗಿದೆ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಮನದಾಳದ ಮಾತುಗಳನ್ನು ಹೇಳಲು ಇದು ಉತ್ತಮವಾದ ಸಮಯ. ಯಾವುದೇ ಕಾರಣಕ್ಕೂ ಈ ತಿಂಗಳು ನಿಮ್ಮ ಮನದ ಮಾತುಗಳನ್ನು ಕಟ್ಟಿಹಾಕಬೇಡಿ. ನಿಮ್ಮ ಪ್ರೇಮ ಪ್ರಸ್ತಾಪಕ್ಕೆ ಫೆ.14 ತುಂಬಾ ಒಳ್ಳೆಯ ದಿನವಾಗಿದೆ.
ನಿಮ್ಮ ಪ್ರೇಮಿಯ ಆಸೆಗಳನ್ನು ಸ್ವೀಕರಿಸಿ. ಅವರ ಜೀವನದ ಗುರಿಗಳನ್ನು ಮುಟ್ಟಲು ನೀವು ಸಹಕರಿಸಿ. ಜೀವನದುದ್ದಕ್ಕೂ ಅವರ ಜೊತೆಯಾಗಿರುವ ಭರವಸೆಯನ್ನು ನೀಡಿ. ನಿಮ್ಮ ಮಾತು, ಗುಣದಿಂದ ನೀವು ಎಲ್ಲವನ್ನೂ ಜಯಿಸಬಹುದು. ಜೊತೆಗೆ ಸ್ವಲ್ಪ ತಾಳ್ಮೆಯು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಫೆಬ್ರವರಿ ತಿಂಗಳು ನಿಮಗೆ ತುಂಬಾ ಒಳ್ಳೆಯದಾಗಿದೆ.

ವೃಶ್ಚಿಕ:
ವೃಶ್ಚಿಕ ರಾಶಿಯವರಿ ಫೆಬ್ರವರಿ ತಿಂಗಳು ಪ್ರೇಮ ಪ್ರಸ್ತಾಪಕ್ಕೆ ತುಂಬಾ ಮಂಗಳಕರವಾಗಿದೆ. ನಿಮ್ಮ ಪ್ರೇಮಿಗೆ ನೀವು ನಿಮ್ಮ ಪ್ರೀತಿಯ ಬಗ್ಗೆ ಹಂಚಿಕೊಳ್ಳಬಹುದು. ಆದರೆ ಇದಕ್ಕೆ ನಿಮಗೆ ನಿಮ್ಮ ಸ್ನೇಹಿತರಿಂದ ಹಾಗೂ ಕುಟುಂಬದಿಂದ ಅಡ್ಡಯಾಗಬಹುದು. ಈ ಬಗ್ಗೆ ನೀವು ಜಾಗರೂಕರಾಗಿರಬೇಕು. ಇದರಿಂದಾಗಿ ನೀವು ಪ್ರೀತಿಯಲ್ಲಿ ಯಶಸ್ಸನ್ನು ಕಾಣದೇ ಇರುವ ಸಾಧ್ಯತೆ ಹೆಚ್ಚಾಗಿದೆ.
ಏಕಾಂಗಿಯಾಗಿರುವ ಅಥವಾ ಅವಿವಾಹಿತರು ತಮ್ಮ ಪ್ರೇಮ ಪ್ರಸ್ತಾಪವನ್ನು ಮುಂದೂಡಬಹುದು. ನಿಮ್ಮ ಜೀವನದ ಬಗ್ಗೆ ಹೊಸ ಕನಸು ಶುರುವಾಗಲಿದೆ. ನೀವಂದುಕೊಂಡ ಸಂಗಾತಿ ನಿಮಗೆ ಸಿಗಲಿದ್ದಾರೆ. ಆದರೆ ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯಿಂದ ನೀವು ನಿಮ್ಮ ಪ್ರೇಮಿಯನ್ನು ತಲುಪದಿರುವುದು ಒಳ್ಳೆಯದು.

ಧನು:
ಧನು ರಾಶಿಯವರಿಗೆ ಈ ತಿಂಗಳು ಅದೃಷ್ಟದ ತಿಂಗಳು. ಹೀಗಾಗಿ ಅವರ ಪ್ರೇಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆಂದು ಖಚಿತವಾಗಿ ಹೇಳಬಹುದು. ಈ ತಿಂಗಳು ಧನು ರಾಶಿಯವರು ಇಷ್ಟಪಟ್ಟ ಪ್ರೇಮಿಗೆ ತಮ್ಮ ಪ್ರೇಮ ಪ್ರಸ್ತಾಪ ಮಾಡಿದರೆ, ಇದರಿಂದ ಅವರ ಪ್ರೇಮಿ ಒಪ್ಪಿಗೆ ನೀಡಿದರೆ ಧನು ರಾಶಿಯವರ ಬಾಳು ಬಂಗಾರವಾಗಿರುತ್ತದೆ.
ಪ್ರೀತಿಯಲ್ಲಿ ನೀವು ಯಾರನ್ನೂ ನೋಯಿಸಲು ಯೋಚಿಸುವುದಿಲ್ಲ. ಅವರಿಗೆ ನೋವಾದರೆ ನೀವು ನೋವು ಅನುಭವಿಸುತ್ತೀರಿ. ಪ್ರೀತಿ ಎಂದರೆ ಪಡೆಯುವುದಲ್ಲ, ಕೊಡುವುದು ಎಂದು ನೀವು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ. ಈ ಮಟ್ಟಿಗೆ ನೀವು ಅವರ ಬಗ್ಗೆ ಕಾಳಜಿ ವಹಿಸಿದರೆ, ಅವರು ನಿಮ್ಮಿಂದ ಎಂದಿಗೂ ದೂರವಾಗರು.

ಮಕರ:
ಫೆಬ್ರವರಿ ತಿಂಗಳ ಪ್ರೇಮ ಜಾತಕ ಮಕರ ರಾಶಿಯವರಿಗೆ ಅಂದುಕೊಂಡಂತಿದೆ. ಮಕರ ರಾಶಿಯ ಅವಿವಾಹಿತರು ಈ ತಿಂಗಳು ತಮ್ಮ ಪ್ರೇಮಿಗೆ ತಮ್ಮ ಮನದಾಳದ ಮಾತುಗಳನ್ನು ತಿಳಿಸಬಹುದು. ನಿಮ್ಮ ಗುಣ, ಕಾಳಜಿ, ಸ್ವಭಾವ ನಿಮ್ಮ ಪ್ರೇಮಿಗ ಖಂಡಿತವಾಗಿಯೂ ಇಷ್ಟವಾಗುತ್ತದೆ. ಅವರು ನಿಮ್ಮನ್ನು ಮೆಚ್ಚಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಮಕರ ರಾಶಿಯವರು ಸಾಹಸ ಪ್ರೀಯರು. ಆರ್ಥಿಕವಾಗಿ ಸದೃಢರಾಗಿರಲು ಬಯಸುತ್ತಾರೆ. ಆ ನಿಟ್ಟಿನಲ್ಲಿ ಶ್ರಮಿಸುತ್ತಾರೆ. ಅದರೊಂದಿಗೆ ಅವರು ತಮ್ಮ ಜೀವನ ಸಂಗಾತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅವರ ಆಯ್ಕೆ ಅವರಿಗೆ ತಕ್ಕಂತಿರುತ್ತದೆ. ಮಕರ ರಾಶಿಯ ಅವಿವಾಹಿತರಲ್ಲಿ ಕೆಲವರು ಕುಟುಂಬಸ್ಥರ ಆಯ್ಕೆಯನ್ನು ತಮ್ಮ ಆಯ್ಕೆಯಾಗಿ ಸ್ವೀಕರಿಸುವ ಗುಣ ಇರುವವರು. ಹೀಗಾಗಿ ಕೆಲ ಬಾರಿ ಎಲ್ಲರ ನಿರ್ಧಾರ ಇವರ ನಿರ್ಧಾರವಾಗಿರುತ್ತದೆ.

ಕುಂಭ:
ಕುಂಭ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಪ್ರೇಮ ಪ್ರಸ್ತಾಪದ ವಿಚಾರದಲ್ಲಿ ಕೊಂಚ ಅಡೆತಡೆಗಳಾಗಬಹುದು. ಆದರೆ ನೀವು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ನಿಮ್ಮ ಪ್ರೀತಿ ನಿಜವಾದಲ್ಲಿ ಅದನ್ನು ತಿಳಿಪಡಿಸಿ. ಆದರೆ ನಿಮ್ಮ ಪ್ರಯತ್ನ ತೊಂದರೆ ನೀಡುವಂತಿರಬಾರದು. ಪ್ರೀತಿಯ ಮಾತು ನಿಮ್ಮ ಬಂಧವನ್ನು ಬಲಪಡಿಸುತ್ತದೆ.
ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯಿರಿ. ನಿಮ್ಮ ಸಂಗಾತಿಗೆ ಅಥವಾ ಪ್ರೇಮಿಗೆ ನಿಮ್ಮ ಬಗ್ಗೆ ಅರ್ಥೈಸಿ. ಅವರಿಗೆ ಇಷ್ಟವಾಗದಂತಹ ಕೆಲಸಗಳನ್ನು ಬಿಟ್ಟುಬಿಡಿ. ಅದರಿಂದ ಮಾತ್ರ ನೀವು ನಿಮ್ಮ ಪ್ರೀತಿಯನ್ನು ಗೆಲ್ಲಲು ಸಾಧ್ಯ. ನಿಮ್ಮ ಸುಖ ಜೀವನಕ್ಕಾಗಿ ಕಾಳಜಿ, ನಂಬಿಕೆ, ವಿಶ್ವಾಸ ತುಂಬಾ ಅತ್ಯಗತ್ಯ.

ಮೀನ:
ಮೀನ ರಾಶಿಯವರಿಗೆ ಫೆಬ್ರವರಿ ತಿಂಗಳು ತುಂಬಾ ಒಳ್ಳೆಯದು. ಅವಿವಾಹಿತ ಅಥವಾ ಏಕಾಂಗಿಯಾಗಿರುವ ಮೀನ ರಾಶಿಯವರು ಪ್ರೀತಿಯಲ್ಲಿ ಬೀಳುವ ಸಮಯವಿದು. ನಿಮ್ಮ ಪ್ರೀತಿಯ ವಿಷಯವನ್ನು ನೀವು ಧೈರ್ಯವಾಗಿ ಪ್ರಸ್ತಾಪ ಮಾಡಬಹುದು. ಆದರೆ ಕೆಲ ವಿಷಯಗಳಲ್ಲಿ ನೀವು ಎಡವಿ ಬೀಳುವ ಸಾಧ್ಯತೆ ಇದೆ.
ನಿಮ್ಮ ಪ್ರೀತಿಯ ವಿಚಾರ ಸ್ನೇಹಿತರ ಮುಂದೆ ಹಂಚಿಕೊಳ್ಳದೇ ಇರುವುದು ಸೂಕ್ತ. ಇದರಿಂದ ನಿಮಗೆ ತೊಂದರೆಗಳಾಗಬಹುದು. ಹೀಗಾಗಿ ಮೊದಲು ನೀವು ನಿಮ್ಮ ಪ್ರೇಮಿಯನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿ ವಿಚಾರ ಅವರೊಂದಿಗೆ ಹಂಚಿಕೊಳ್ಳಿ. ಅವರು ನಿಮ್ಮನ್ನು ಇಷ್ಟಪಡುವ ಸಾಧ್ಯತೆಗಳು ಇವೆ. ಆದರೆ ಕೆಲ ಬಾರಿ ಇಷ್ಟಪಡದೇ ಇದ್ದರೂ ನೀವು ಅದನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕಾರ ಮಾಡುವುದು ಉತ್ತಮ.












Click it and Unblock the Notifications