ಮೇಷ : ಪ್ರೀತಿ ಗೆಲ್ಲಲು ಮನಸಿನ ಆರೋಗ್ಯವೇ ಸೋಪಾನ

Posted By:
Subscribe to Oneindia Kannada

ಈ ವರ್ಷ ಗುರು, ಶನಿ ಹಾಗೂ ಯುರೇನಸ್ ಸ್ಥಳ ಬದಲಾವಣೆಯಿಂದ ನಿಮಗೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗುತ್ತದೆ. ನಿಮ್ಮ ಗುರಿ ತಲುಪುವ ಹಾದಿ ಸಲೀಸಾಗುತ್ತದೆ. ಆದರೆ ಇಷ್ಟು ದಿನ ಮಜವಾಗಿ ಕಳೆದ ದಿನಗಳು ನೆನಪಿಸಿಕೊಳ್ಳಬೇಕಷ್ಟೇ. ಅಂದರೆ ಗ್ರಹಸ್ಥಿತಿಯನ್ನು ಗಮನಿಸಿದರೆ ನಿಮ್ಮಿಂದ ಕಠಿಣ ಪರಿಶ್ರಮ ಎದುರು ನೋಡುತ್ತಿರುವಂತಿದೆ.

ಗುರು ಗ್ರಹ ನಿಮಗೆ ಅನುಕೂಲಕರವಾದ ಸ್ಥಾನದಲ್ಲಿ ಆಗಸ್ಟ್ 2017ರವರೆಗೆ ಇರುತ್ತದೆ. ಅದರ ಕೃಪಾ ದೃಷ್ಟಿ ಬೀರಿ, ನಿಮ್ಮ ಪ್ರಣಯ ಜೀವನದ ಮೇಲೆ ಆಗುತ್ತದೆ. ಸಂತಸ, ಖುಷಿ ಮತ್ತು ಕ್ರಿಯೇಟಿವಿಟಿಯಿಂದ ಕಂಗೊಳಿಸುತ್ತೀರಿ. ಗುರು ಕನ್ಯಾ ರಾಶಿ ಪ್ರವೇಶಿಸುತ್ತಿದ್ದ ಹಾಗೆ ಬದುಕು ಒಂದಿಷ್ಟು ಗಂಭೀರವಾಗುತ್ತದೆ. ಈಗ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಕು. ಜೀವನಶೈಲಿ ಬದಲಾಗಬೇಕು. ಆದರೆ ಕನ್ಯಾ ರಾಶಿಯ ಗುರು ನಿಮ್ಮ ಬದುಕಿಗೊಂದು ಶಿಸ್ತು ತರುವುದಂತೂ ಸತ್ಯ.

Love and Marriage horoscope 2017 for Aries

ನಿಮ್ಮ ಪ್ರೇಮ ವಿಚಾರ ಒಂದಿಷ್ಟು ಸೂಕ್ಷ್ಮವಾಗುತ್ತದೆ. ಈ ಹಿಂದೆ ಎಂದೂ ಅನುಭವಕ್ಕೆ ಬಾರದ ರೀತಿಯಲ್ಲಿ ಶುಕ್ರ ಗ್ರಹದ ನೆರವು ನಿಮಗೆ ದೊರೆಯುತ್ತದೆ. ಆಗಾಗ ಬೀಸುವ ಚಂಡಮಾರುತವನ್ನು ತಡೆಯುವುದಕ್ಕೆ ನೀವು ಸಫಲರಾಗುತ್ತೀರಿ. ಜೊತೆಗೆ ಈ ವರ್ಷವಿಡೀ ನಿಮ್ಮಲ್ಲೊಂದು ಸಕಾರಾತ್ಮಕ ಚಿಂತನೆ ಕಾಣಿಸಿಕೊಳ್ಳುತ್ತದೆ.

ನಿಮ್ಮ ಪ್ರೀತಿಯ ವ್ಯಕ್ತಿಯ ಹೃದಯ ಗೆಲ್ಲುವುದರಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಮನಸಿನ ಆರೋಗ್ಯ ತುಂಬ ಚೆನ್ನಾಗಿ ಇರುವುದರಿಂದ ಸಂಬಂಧ ಗಟ್ಟಿ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ವರ್ಷದ ಕೊನೆಯಲ್ಲಿ ನೀವಂದುಕೊಂಡ ಸಂಗಾತಿ ಜತೆಗೆ ಬದುಕು ಆರಂಭಿಸುವ ಸಾಧ್ಯತೆ ಇದೆ. ಮನಸಿನ ಮಾತು ಕೇಳಿ, ಅದರಂತೆ ನಡೆಯಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Love and Marriage horoscope 2017 for Aries : During the year 2017, there would be a more sensitive and sensible approach in your love field. Venus would help you to in this area of your life like neve before.
Please Wait while comments are loading...