ಕೃಷ್ಣಾಷ್ಟಮಿ ನಂತರ ಬದಲಾಗಲಿದೆ ಈ 5 ರಾಶಿಯವರ ಜಾತಕ: ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ!
ಜ್ಯೋತಿಷ್ಯದ ಪ್ರಕಾರ, ಅನುಕೂಲಕರ ಗ್ರಹಗಳ ಚಲನೆ ಮತ್ತು ದೈವಿಕ ಅನುಗ್ರಹವು ಸೇರಿದಾಗ, ಕೆಲವು ರಾಶಿಯವರ ಜಾತಕದಲ್ಲಿ ಅದ್ಭುತ ಯೋಗಗಳು ರೂಪುಗೊಳ್ಳುವುದು. ಅದರಲ್ಲಿಯೂ ಯಾವ ರಾಶಿಯವರ ಮೇಲೆ ಶ್ರೀಕೃಷ್ಣನ ವಿಶೇಷ ಅನುಗ್ರಹವಿರುವುದೋ ಅವರ ಜೀವನದಲ್ಲಿನ ಆರ್ಥಿಕ ತೊಂದರೆಗಳು ನಿವಾರಣೆಯಾಗುವುದು. ಮಾನಸಿಕ ಅಶಾಂತಿ ಮತ್ತು ವೃತ್ತಿಪರ ಅಡೆತಡೆಗಳು ದೂರವಾಗುವುದು. ಮಾಡುವ ಕೆಲಸ ಕಾರ್ಯಗಳಲ್ಲಿ ಶುಭ ಫಲ ಸಿಗುವುದು.
Krishna Janmashtami 2026:ಶ್ರೀಕೃಷ್ಣನ ಅನುಗ್ರಹ ಈ 5 ರಾಶಿಗಳಿಗೆ
ವೃಷಭ ರಾಶಿ (Taurus): ಶ್ರೀಕೃಷ್ಣನಿಗೆ ಹಸುಗಳು ಮತ್ತು ಪ್ರಕೃತಿಯ ಮೇಲೆ ಅಪಾರ ಪ್ರೀತಿ. ಶುಕ್ರ ವೃಷಭ ರಾಶಿಯ ಅಧಿಪತಿ. ಹಾಗಾಗಿ ಈ ರಾಶಿಯವರ ಮೇಲೆ ಶ್ರೀ ಕೃಷ್ಣನ ಆಶೀರ್ವಾದ ಹೆಚ್ಚಾಗಿ ಇರುವುದು. ಈ ವರ್ಷ ವೃಷಭ ರಾಶಿಯವರ ಎಲ್ಲಾ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು. ನಿಂತು ಹೋಗಿರವ ಕೆಲಸಗಳು ಬೇಗನೆ ಪೂರ್ಣಗೊಳ್ಳುವುದು. ಬಹಳ ಸಮಯದಿಂದ ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆ, ವಿವಾದಗಳು ಬಗೆಹರಿಯುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುವುದು.

ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಶ್ರೀಕೃಷ್ಣನ ಆರಾಧನೆಯು ಚಂದ್ರನ ಚಂಚಲ ಸ್ವಭಾವವನ್ನು ಶಾಂತಿಯನ್ನಾಗಿ ಪರಿವರ್ತಿಸುತ್ತದೆ. ನಿರಂತರ ಚಿಂತೆ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುವ ಕರ್ಕಾಟಕ ರಾಶಿಯವರು 2026 ರಲ್ಲಿ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣದ ಸಮಸ್ಯೆ ನಿವಾರಣೆಯಾಗುವುದು.
ಸಿಂಹ ರಾಶಿ (Leo): ಶ್ರೀಕೃಷ್ಣನ ಆಶೀರ್ವಾದವು ಸಿಂಹ ರಾಶಿಯವರ ಮೇಲೂ ಹೆಚ್ಚಾಗಿ ಇರುವುದು. ಇವರರ ಆತ್ಮ ವಿಶ್ವಾಸ ಹೆಚ್ಚಾಗುವುದು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುವುದು. ನಾಯಕತ್ವದ ಜವಾಬ್ದಾರಿಗಳನ್ನು ಪಡೆಯುವರು. ಉದ್ಯಮಿಗಳು ಹೊಸ ಉದ್ಯಮವನ್ನು ಆರಂಭಿಸುವರು. ವ್ಯವಹಾರ ವಿಸ್ತರಿಸುವ ಅವಕಾಶವೂ ಇರುವುದು. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು.
ತುಲಾ ರಾಶಿ (Libra): ಧರ್ಮ ಸ್ಥಾಪಕ ಕೃಷ್ಣನ ಆಶೀರ್ವಾದ ತುಲಾ ರಾಶಿಯವರ ಮೇಲೆ ಯಾವಾಗಳು ಇರುವುದು. ದಾಂಪತ್ಯ ಜೀವನದಲ್ನ ಸುಖ ಹೆಚ್ಚಾಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಹೊಸ ಮನೆ ಅಥವಾ ವಾಹನ ಖರೀದಿ ಯೋಗವಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.
ಧನು ರಾಶಿ (Sagittarius): ಧನು ರಾಶಿಯ ಅಧಿಪತಿ ಗುರು ಗ್ರಹ. ಗುರುವಿನ ಅನುಗ್ರಹ ಮತ್ತು ಶ್ರೀ ಕೃಷ್ಣನ ಅನುಗ್ರಹದಿಂದ ಅತ್ಯುತ್ತಮ ಫಲಿತಾಂಶಗಳು ಸಿಗುವುದು. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬೇಕು ಅಂದುಕೊಂಡವರ ಕನಸು ನನಸಾಗುವುದು. ಉದ್ಯೋಗವೂ ಸಿಗುವುದು. ಹಣ ಗಳಿಸಲು ಉತ್ತಮ ಅವಕಾಶ ಸಿಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.
Krishna Janmashtami 2026:ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಏನು ಮಾಡಬೇಕು ?
ಪ್ರತಿ ಬುಧವಾರ ಅಥವಾ ಗುರುವಾರ 'ಓಂ ನಮೋ ಭಗವತೇ ವಾಸುದೇವಾಯ' ಅಥವಾ 'ಹರೇ ಕೃಷ್ಣ' ಮಹಾಮಂತ್ರವನ್ನು ಪಠಿಸಿ. ಪೂಜಾ ಮಂಟಪದಲ್ಲಿ ಶ್ರೀಕೃಷ್ಣನಿಗೆ ನವಿಲು ಗರಿಗಳು, ಬೆಣ್ಣೆ ಅಥವಾ ತುಳಸಿ ಎಲೆಗಳನ್ನು ಅರ್ಪಿಸುವುದು ಅತ್ಯಂತ ಶುಭ. ಹಸುಗಳಿಗೆ ಹಸಿರು ಹುಲ್ಲು ಅಥವಾ ಬೆಲ್ಲವನ್ನು ತಿನ್ನಿಸುವುದರಿಂದ ಕಷ್ಟಗಳು ದೂರವಾಗುವುದು ಸಂಪತ್ತು ಹೆಚ್ಚಾಗುವುದು.
ಭಕ್ತಿ ಮತ್ತು ಸದಾಚಾರದಿಂದ ಸಂಪೂರ್ಣ ಯಶಸ್ಸು ಸಿಗುವುದ. ಜಾತಕದಲ್ಲಿ ಯೋಗಗಳಿದ್ದರೂ, ನಿಸ್ವಾರ್ಥತೆ ಮತ್ತು ಭಕ್ತಿ ಭಾವದಿಂದ ಬದುಕಿದಾಗ ಮಾತ್ರ ಶ್ರೀಕೃಷ್ಣನ ಸಂಪೂರ್ಣ ಅನುಗ್ರಹ ಸಿಗುವುದು.


Click it and Unblock the Notifications
