• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ತಾನೇ ಸಿಎಂ ಆಗಿದ್ದಾರೆ, ಅಶುಭ ನುಡಿಯಲಾರೆ: ಕೋಡಿಶ್ರೀಗಳ ಭವಿಷ್ಯದ ಅರ್ಥವೇನು?

|
Google Oneindia Kannada News

ಸಾಮಾನ್ಯವಾಗಿ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದರು ಎಂದರೆ ಜಾತಕ/ಜ್ಯೋತಿಷ್ಯ ನಂಬುವರ ಕಿವಿ ನೆಟ್ಟಗಾಗುತ್ತದೆ. ತಾಳೇಗರಿ ಆಧಾರಿತ ಇವರ ಭವಿಷ್ಯಕ್ಕೆ ಎಲ್ಲಿಲ್ಲದ ಡಿಮಾಂಡ್.

ಕೋಲಾರದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೋಡಿಮಠದ ಶ್ರೀಗಳು ಕೊರೊನಾ, ರಾಜ್ಯ ರಾಜಕೀಯ, ನೈಸರ್ಗಿಕ ಪ್ರಕೋಪ, ದೇಶದ ಆಗುಹೋಗಿನ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಜೊತೆಗೆ, ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಬಗ್ಗೆ ನುಡಿದ ಭವಿಷ್ಯವನ್ನು ಅವಲೋಕಿಸಿದರೆ, ಹೆಚ್ಚುದಿನ ಅವರು ಸಿಎಂ ಆಗಿರುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದೆ.

 ಕೋಡಿಮಠ ಶ್ರೀ ಭವಿಷ್ಯ: ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಅವಘಡ! ಕೋಡಿಮಠ ಶ್ರೀ ಭವಿಷ್ಯ: ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಅವಘಡ!

ಈಗಾಗಲೇ ಜುಲೈ ತಿಂಗಳಲ್ಲಿ ಉತ್ತರ ಕನ್ನಡದ ಶಿರಸಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು, ನವೆಂಬರ್ ನಿಂದ ಮುಂದಿನ ಸಂಕ್ರಾಂತಿಯವರೆಗೆ ದೇಶ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಬಹುದು ಎಂದು ಹೇಳಿದ್ದರು.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಈಚಲು ಬೆಟ್ಟದಲ್ಲಿ ಭೂದೇವಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಂದೆ ಹೆಚ್ಚು ಮಳೆಯಾಗಲಿದ್ದು, ಜಲಪ್ರಳಯ ಉಂಟಾಗಲಿದೆ'' ಎಂದು ಭವಿಷ್ಯ ನುಡಿದಿದ್ದರು.

ಆಗಸ್ಟ್‌ 2021ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?ಆಗಸ್ಟ್‌ 2021ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?

 ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ

ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ

"ಈ ಸಂವತ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ. ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಾಗಲಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುವುದಿಲ್ಲ,'' ಎಂದಿದ್ದರು. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಭಾಗದಲ್ಲಿ ಅತಿವೃಷ್ಟಿ ಎದುರಾಗಿರುವುದು ಗೊತ್ತೇ ಇದೆ.

 ಕೊರೊನಾ ಹಾವಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಕೋಡಿಶ್ರೀಗಳ ಭವಿಷ್ಯ

ಕೊರೊನಾ ಹಾವಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಕೋಡಿಶ್ರೀಗಳ ಭವಿಷ್ಯ

ಕೋಲಾರದಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಶಿರಸಿಯಲ್ಲಿ ನುಡಿದ ಭವಿಷ್ಯವನ್ನು ಬಹುತೇಕ ಪುನರುಚ್ಚಿಸಿದ್ದಾರೆ. "ರೋಗ ಕಾಯಿಲೆಗಳು ಹೆಚ್ಚಾಗಲಿದೆ, ಕಾರ್ತಿಕದವರೆಗೆ ಮಳೆ ಇರುತ್ತದೆ. ರಾಜ್ಯ ರಾಜಕಾರಣದ ಬಗ್ಗೆ ನಿಧಾನವಾಗಿ ಉತ್ತರಿಸುತ್ತೇನೆ, ಒಂದೇ ಬಾರಿ ಎಲ್ಲವನ್ನೂ ಹೇಳುವುದು ಬೇಡ. ಕೊರೊನಾ ಹಾವಳಿ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ"ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆ ಮೂಲಕ, ಕೊರೊನಾ ಅಲೆ ಮತ್ತೆ ವಕ್ಕರಿಸಿಕೊಳ್ಳಲಿದೆಯೇ ಎನ್ನುವ ಭೀತಿ ಆರಂಭವಾಗಿದೆ.

 ಕುಂಭದಲಿ ಗುರುಬರಲು ತುಂಬೋ ಕೆರೆಕಟ್ಟೆ, ಕಾರ್ತಿಕದ ವರೆಗೆ ಮಳೆ ಇರಲಿದೆ

ಕುಂಭದಲಿ ಗುರುಬರಲು ತುಂಬೋ ಕೆರೆಕಟ್ಟೆ, ಕಾರ್ತಿಕದ ವರೆಗೆ ಮಳೆ ಇರಲಿದೆ

"ರಾಜ್ಯ ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ. ದೈವಕೃಪೆ ಇದ್ದರೆ ಬೊಮ್ಮಾಯಿಯವರಿಗೆ ಒಳ್ಳೆಯದಾಗುತ್ತದೆ. ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ. ಜ್ಯೋತಿಷ್ಯ ಬೇರೆ, ಗುರುಪೀಠದಿಂದ ನುಡಿಯುವ ಮಾತು ಬೇರೆ. ಪೀಠಕ್ಕೆ ಅಗೌರವ ಆಗಬಾರದು, ಹೇಳಿದ್ದು ಸತ್ಯವಾಗಬೇಕು. ಕುಂಭದಲಿ ಗುರುಬರಲು ತುಂಬೋ ಕೆರೆಕಟ್ಟೆ, ಹಾಗಾಗಿ, ಕಾರ್ತಿಕದ ವರೆಗೆ ಮಳೆ ಇರಲಿದೆ"ಎಂದು ಕೋಡಿಶ್ರೀಗಳು ಹೇಳಿದ್ದಾರೆ.

  ಕಾಂಗ್ರೆಸ್ ಪಾರ್ಟಿ ಸೇರೋಕೆ ಅಪ್ಪ ಮಗನ ಲಾಬಿ ಜೋರಾಗಿದೆ | Oneindia Kannada
   ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ

  ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ

  "ರಾಜ್ಯ ರಾಜಕೀಯದ ಬಗ್ಗೆ ಹೇಳುವುದು ತುಂಬಾ ಇದೆ, ಆಷಾಢ ಮಾಸ ಕಳಿಯಲಿ ಎಲ್ಲವನ್ನೂ ಹೇಳುತ್ತೇನೆ. ಆಷಾಢದಲ್ಲಿ ಅಶುಭ ನುಡಿಯಬಾರದು, ಇನ್ನು ಸ್ವಲ್ಪದಿನ ಕಳೆದರೆ ಶ್ರಾವಣ ಮಾಸ ಬರುತ್ತದೆ. ಆಗ ಎಲ್ಲವನ್ನೂ ಹೇಳುತ್ತೇನೆ.

  ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಸನ್ಯಾಸಿಯೊಬ್ಬನ ಎದುರು ಹಾದು ಓಡಿಹೋಗಿತ್ತು. ಜಿಂಕೆಯ ಬಗ್ಗೆ ಸನ್ಯಾಸಿಯಲ್ಲಿ ಬೇಟೆಗಾರ ಕೇಳಿದಾಗ ಸನ್ಯಾಸಿ ದ್ವಂದ್ವದಲ್ಲಿ ಸಿಲುಕಿದ್ದರು. ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾವಿಗೆ ಕಾರಣವಾದಂತಾಗುತ್ತದೆ, ಹೇಳದಿದ್ದರೆ ಸುಳ್ಳು ನುಡಿದಂತಾಗುತ್ತದೆ ಎಂದು ಶಿರಸಿಯಲ್ಲಿ ಶ್ರೀಗಳು ಹೇಳಿದ್ದರು.

  English summary
  Kodimutt Seer Prediction In Kolar About CM Bommai, State Politics And Corona. Know More,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X