Rajayoga 2024: ಐದು ರಾಶಿಯವರಿಗೆ ರಾಜಯೋಗ: ಹುಣ್ಣಿಮೆ ನಂತರ ಮುಟ್ಟಿದ್ದೆಲ್ಲಾ ಚಿನ್ನ- ಕೋಡಿಶ್ರೀ ಸ್ಪೋಟಕ ಭವಿಷ್ಯ

ಕೋಡಿಶ್ರೀಗಳು ನವೆಂಬರ್ 15 ಹುಣ್ಣಿಮೆಯ ನಂತರದ ಭವಿಷ್ಯವನ್ನು ನುಡಿದಿದ್ದಾರೆ. ಕೋಡಿಶ್ರೀ ನುಡಿಯುವ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗುತ್ತದೆ. ಅವರು ಹೇಳಿದ ಪ್ರತಿಯೊಂದು ಘಟನೆಗಳು ನಡೆಯುತ್ತವೆ. ಕೋಡಿಶ್ರೀಗಳ ಪ್ರಕಾರ ಐದು ರಾಶಿಯವರಿಗೆ ರಾಜಯೋಗ ಶುರುವಾಗಿದೆ. ಈ ಐದು ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲೂ ಅಧಿಕ ಲಾಭವನ್ನು ಪಡೆಯುತ್ತಾರೆ. ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.

ಹಾಗಾದರೆ ರಾಜಯೋಗ ಇರುವ ರಾಶಿಗಳು ಯಾವುವು? ಯಾವ ಕ್ಷೇತ್ರದಲ್ಲಿ ಅದೃಷ್ಟ ಹೊಂದಿದ್ದಾರೆ? ಯಾವ ಕ್ಷೇತ್ರದಲ್ಲಿ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಕೋಡಿಶ್ರೀ ನುಡಿದ ಭವಿಷ್ಯದಲ್ಲಿ ಏನಿದೆ ಎಂಬುದನ್ನು ಈಗ ತಿಳಿಯೋಣ. ಜೊತೆಗೆ ನವೆಂಬರ್‌ 15 ಹುಣ್ಣಿಮೆಯ ದಿನ ಯಾವೆಲ್ಲಾ ಪರಿಹಾರಗಳನ್ನು ಮಾಡಿದರೆ ಸಂಪೂರ್ಣ ಅದೃಷ್ಟ ನಿಮ್ಮದಾಗುತ್ತದೆ ಎನ್ನುವ ಬಗ್ಗೆ ಕೂಡ ನೋಡೋಣ.

kodi shree swamiji s prediction after full moon of november 15 five zodiac signs have raja yoga

ವೃಷಭ ರಾಶಿ

ಕೋಡಿಶ್ರೀ ಅವರ ಪ್ರಕಾರ ವೃಷಭ ರಾಶಿಯವರಿಗೆ ರಾಜಯೋಗವಿದೆ. ವೃಷಭ ರಾಶಿಯವರು ಅದೃಷ್ಟದ ಪಟ್ಟಿಯಲ್ಲಿ ಇದ್ದಾರೆ. ಹುಣ್ಣಿಮೆಯ ನಂತರ ವೃಷಭ ರಾಶಿಯವರ ಮನೆಗೆ ಅದೃಷ್ಟ ಲಕ್ಷ್ಮೀ ಪ್ರವೇಶ ಮಾಡುತ್ತಾಳೆ. ಆರೋಗ್ಯ ಸಮಸ್ಯೆ, ನಕರಾತ್ಮಕ ಶಕ್ತಿ ಇದ್ದರೆ, ಮನೆಯಲ್ಲಿ ಯಾವುದೇ ರೀತಿಯ ಏಳಿಗೆ ಕಂಡುಬಂದಿಲ್ಲ ಅಂದರೆ ಇದರಿಂದ ಮುಕ್ತರಾಗುವಿರಿ. ಮನೆಯಲ್ಲಿ ಹಣ ತುಂಬಿರಲಿದೆ. ಆರ್ಥಿಕ ಜೀವನ ಅಚ್ಚರಿ ಮೂಡಿಸುವಂತೆ ಬದಲಾಗಲಿದೆ. ಇದಕ್ಕೆ ನೀವು ಕೆಲ ಪರಿಹಾರಗಳನ್ನು ಪಾಲಿಸಬೇಕು. ಆ ಸರಳ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅದನ್ನು ಅನುಸರಿಸಿ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿರುವ ಲಕ್ಷ್ಮೀದೇವಿಯನ್ನು ಮನೆಗೆ ಆಹ್ವಾನಿಸಿ.

kodi shree swamiji s prediction after full moon of november 15 five zodiac signs have raja yoga

ಸಿಂಹ ರಾಶಿ

ಸಿಂಹ ರಾಶಿಯವರಿಗೆ ರಾಜಯೋಗ ಆರಂಭವಾಗಿದೆ. ವಾಹನ ಮತ್ತು ಮನೆ ಖರೀದಿ, ಉದ್ಯೋಗ ಆರಂಭಿಸುವ ಕನಸು ನನಸಾಗಲಿದೆ. ಸಿಂಹ ರಾಶಿಯವರು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ನವೆಂಬರ್‌ 15 ಹುಣ್ಣಿಮೆಯ ನಂತರ ನಿಮ್ಮ ಜೀವನವೇ ಬದಲಾಗಲಿದೆ. ಮನೆ ಖರೀದಿಯ ನಿಮ್ಮ ಕನಸು ನನಸಾಗಲಿದೆ. ಹೊಸ ಉದ್ಯೋಗ ಆರಂಭಿಸಬೇಕು ಅಂದುಕೊಂಡಿದ್ದಲ್ಲಿ ಈ ಸಮಯ ಉತ್ತಮವಾಗಿದೆ. ಸಿಂಹ ರಾಶಿಯವರು ಮುಟ್ಟಿದೆಲ್ಲವೂ ಚಿನ್ನವಾಗಲಿದೆ. ಆದರೆ ಇದಕ್ಕಾಗಿ ಕೆಲ ಪರಿಹಾರಗಳನ್ನು ಪಾಲಿಸಬೇಕು. ಆ ಪರಿಹಾರಗಳನ್ನು ಕೆಳಗೆ ನೀಡಲಾಗಿದೆ. ಅದನ್ನು ಅನುಸರಿಸಿ, ನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.

kodi shree swamiji s prediction after full moon of november 15 five zodiac signs have raja yoga

ಕನ್ಯಾ ರಾಶಿ

ಕನ್ಯಾ ರಾಶಿಯವರು ರಾಜಯೋಗದ ಪಟ್ಟಿಯಲ್ಲಿ ಇದ್ದಾರೆ. ಕನ್ಯಾ ರಾಶಿಯವರು ಉದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ, ಮದುವೆ ವಿಚಾರದಲ್ಲಿ ಸೋಲು ಆಗುತ್ತಿದ್ದರೆ ಈ ಸಮಸ್ಯೆ ದೂರವಾಗಲಿದೆ. ಹುಣ್ಣಿಮೆಯ ನಂತರ ಕನ್ಯಾ ರಾಶಿಯವರ ಮೇಲೆ ಲಕ್ಷ್ಮೀ ದೇವಿ ಆಶೀರ್ವಾದ ಸಿಗಲಿದೆ. ಹುಣ್ಣಿಮೆಯ ನಂತರ ನೀವು ಸಮಸ್ಯೆಗಳಿಂದ ಮುಕ್ತರಾಗುವಿರಿ. ಕೆಲ ಕಾರ್ಯಗಳನ್ನು ಹುಣ್ಣಿಮೆಯಂದು ನಿರ್ವಹಿಸಿದರೆ ಕನ್ಯಾ ರಾಶಿಯವರಿಎ ಎಂದೂ ಕೂಡ ಹಣದ ಸಮಸ್ಯೆ ಎದುರಾಗುವುದಿಲ್ಲ. ಕನ್ಯಾ ರಾಶಿಯವರು ನಿರ್ವಹಿಸಬೇಕಾದ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ.

kodi shree swamiji s prediction after full moon of november 15 five zodiac signs have raja yoga

ಮಕರ ರಾಶಿ

ಕೋಡಿಶ್ರೀ ಅವರ ಪ್ರಕಾರ, ಮಕರ ರಾಶಿಯವರಿಗೂ ರಾಜಯೋಗವಿದೆ. ಹುಣ್ಣಿಮೆಯ ನಂತರ ಅದೃಷ್ಟ ಲಕ್ಷ್ಮೀ ಒಲಿಯುತ್ತಾಳೆ. ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ, ನಾನಾ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಎಲ್ಲಾ ಸಮಸ್ಯೆಗಳೂ ದೂರವಾಗುತ್ತವೆ. ಅದೃಷ್ಟದ ಪಟ್ಟಿಯಲ್ಲಿ ಮಕರ ರಾಶಿಯವರು ಇರುವುದರಿಂದ ಲಕ್ಷ್ಮೀ ದೇವಿ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡುತ್ತಾಳೆ. ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುತ್ತಾಳೆ. ಆದರೆ ಹುಣ್ಣಿಮೆಯಂದು ನೀವು ಕೆಲ ಪರಿಹಾರಗಳನ್ನು ಮಾಡುವುದರಿಂದ ಜೀವನದುದ್ದಕ್ಕೂ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ. ಆ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅದನ್ನು ತಪ್ಪದೇ ಅನುಸರಿಸಿ.

kodi shree swamiji s prediction after full moon of november 15 five zodiac signs have raja yoga

ಕುಂಭ ರಾಶಿ

ಕುಂಭ ರಾಶಿಯವರು ನವೆಂಬರ್‌ 15 ಹುಣ್ಣಿಮೆಯ ನಂತರ ಹಣದ ಕ್ಷೇತ್ರದಲ್ಲಿ ಅಧಿಕ ಲಾಭ ಗಳಿಸುತ್ತಾರೆ. ಹಣದ ಸಮಸ್ಯೆ ದೂರವಾಗುತ್ತವೆ. ಸಾಲ ಸುಳಿಯಲಿದ್ದರೆ, ಹಣದ ನಷ್ಟವಿದ್ದರೆ ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಕುಂಭ ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯಲಿದ್ದಾಳೆ. ಈ ಹುಣ್ಣಿಮೆಯ ದಿನ ಕೆಲವು ಕ್ರಮಗಳನ್ನು ಅನುಸರಿಸಿದ್ದೇ ಆದಲ್ಲಿ ಲಕ್ಷ್ಮೀದೇವಿ ಒಲಿಯುವುದರಲ್ಲಿ ಅನುಮಾನವೇ ಇಲ್ಲ. ಲಕ್ಷ್ಮೀ ದೇವಿ ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತಾಳೆ. ಹೀಗೆ ಕುಂಭ ರಾಶಿಯವರಿಗೆ ರಾಜಯೋಗ ಆರಂಭವಾಗಿದೆ ಎಂದು ಕೋಡಿಶ್ರೀ ಹೇಳಿದ್ದಾರೆ.

ಹೀಗೆ ಮೇಲಿನ ಎಲ್ಲಾ ರಾಶಿಯವರು ರಾಜಯೋಗವನ್ನು ಹೊಂದಿರುವಿರಿ. ಹುಣ್ಣಿಮೆಯ ದಿನ ಕೆಲ ಪರಿಹಾರಗಳನ್ನು ಅನುಸರಿಸಿ. ನೀವು ಹುಣ್ಣಿಮೆಯ ದಿನ ಮಾಡಬೇಕಾದ ಕಾರ್ಯಗಳು ಏನೆಂದರೆ-

* ಹುಣ್ಣಿಮೆಯ ದಿನ ಮನೆಯನ್ನು ಸಂಪೂರ್ಣವಾಗಿ ಉಪ್ಪು ನೀರಿನಿಂದ ಶುದ್ಧಮಾಡಬೇಕು. ನಕರಾತ್ಮಕ ಶಕ್ತಿ ನಾಶ ಮಾಡುವ ಶಕ್ತಿ ಉಪ್ಪಿನಲ್ಲಿ ಅಡಗಿದೆ. ಹೀಗಾಗಿ ಉಪ್ಪು ನೀರಿನಿಂದ ಶುದ್ಧ ಮಾಡಿದರೆ ನಕರಾತ್ಮಕ ಶಕ್ತಿ ದೂರವಾಗುತ್ತದೆ.

*ಹುಣ್ಣಿಮೆಯ ದಿನ ಹಸುವಿಗೆ ಅಥವಾ ಗೋಮಾತೆಗೆ ಆಹಾರ ನೀಡಬೇಕು. ಹಸುವಿಗೆ ಅವಲಕ್ಕಿ, ಬಾಳೆಹಣ್ಣು, ಬೆಲ್ಲಾ ತಿನ್ನಸಬೇಕು. ಅದೃಷ್ಟ ಲಕ್ಷ್ಮಿ ಮನೆ ಬಾಗಿಲಿಗೆ ಬಂದಿದ್ದಾಳೆ. ಈ ಕಾರ್ಯ ಮಾಡುವ ಮೂಲಕ ಆಕೆಯನ್ನು ನೀವು ಮನೆ ಒಳಗೆ ಬರಮಾಡಿಕೊಳ್ಳಿ.

*ಹುಣ್ಣಿಮೆಯ ದಿನ ಮಾಂಸ, ಮದ್ಯಪಾನ, ಧೂಮಪಾನ ಮಾಡಬೇಡಿ. ಹುಣ್ಣಿಮೆಯ ಪವಿತ್ರ ದಿನ ಲಕ್ಷ್ಮಿ ದೇವಿ ಮನೆಗೆ ಆಗಮಿಸುತ್ತಾಳೆ. ಈ ಪವಿತ್ರ ದಿನ ಮನೆ ಸ್ವಚ್ಚವಾಗಿದ್ದರೆ ಲಕ್ಷ್ಮಿ ದೇವಿ ಮನೆಗೆ ಆಗಮಿಸುತ್ತಾಳೆ.

*ಇನ್ನೂ ಹುಣ್ಣಿಮೆಯ ದಿನ ಮನೆಯ ಮುಂದೆ ರಂಗೋಲಿಯನ್ನು ಬಿಡಿಸಬೇಕು. ಇದು ಲಕ್ಷ್ಮೀ ದೇವಿಯನ್ನು ಆಕರ್ಷಿಸುತ್ತದೆ. ಈ ನಾಲ್ಕು ಪರಿಹಾರಗಳನ್ನು ಪಾಲಿಸಿದ್ದೇ ಆದಲ್ಲಿ ಹುಣ್ಣಿಯ ನಂತರ ನಿಮಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ರಾಜಯೋಗದ ಸಂಪೂರ್ಣ ಫಲವನ್ನು ನೀವು ಪಡೆಯುವಿರಿ.

*ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ನಿಮ್ಮ ಮನೆ ದೇವರ ದೇವಸ್ಥಾನಕ್ಕೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡುವುದು ಉತ್ತಮ. ವಾರಕ್ಕೆ ಒಂದು ಬಾರಿಯಾದರೂ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿ ಬರುವುದನ್ನು ರೂಢಿಸಿಕೊಳ್ಳುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಒಳ್ಳೆಯ ಕೆಲಸ ಮಾಡಲು ಹಿಂಜರಿಯಬೇಡಿ. ಕೆಟ್ಟ ಕಾರ್ಯಗಳಿಂದ ದೂರವಿರಿ. ನಿಮ್ಮವರಿಗೆ ಸಹಾಯ ಮಾಡುವ ಮನೋಭಾವ, ಸ್ನೇಹ ಗುಣಗಳನ್ನು ಬೆಳಸಿಕೊಂಡರೆ ನಿಮ್ಮ ಜಾತಕದಲ್ಲಿ ಶತ್ರು ದೋಷ ಕಡಿಮೆಯಾಗುತ್ತದೆ. ಅಗತ್ಯ ಇರುವವರಿಗೆ ದಾನ ಮಾಡಿ, ಗುರು ಹಿರಿಯರ ಆಶೀರ್ವಾದ ಪಡೆಯುವುದು ಜೀವನದಲ್ಲಿ ಕೆಡಕಾಗುವುದನ್ನು ತಪ್ಪಿಸುತ್ತದೆ.

* ಅಲ್ಲದೆ ಮನೆಯ ವಾತಾವರಣ ಚೆನ್ನಾಗಿರಲು ಮನೆಯಲ್ಲಿ ಸ್ವಚ್ಚವಾಗಿಡುವುದು ತುಂಬಾ ಮುಖ್ಯ. ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಹಾಕಿ, ಮನೆಯಲ್ಲಿ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಮನೆಯಲ್ಲಿ ಸೂರ್ಯನ ಕಿರಗಳು ಪ್ರವೇಶಿಸುವುದರಿಂದ ನಿಮ್ಮ ಜೀವನ ಉಜ್ವಲವಾಗುತ್ತದೆ. ಅಲ್ಲದೆ ಮನೆಯಲ್ಲಿ ಹೊಸ ವಾತಾವರಣ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+