Darshan Thoogudeepa: ನಟ ದರ್ಶನ್ ವಿಚಾರದಲ್ಲಿ ನಿಜವಾಯ್ತು ಕೋಡಿಶ್ರೀ ನುಡಿದ ಭವಿಷ್ಯ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಸದ್ಯ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ದರ್ಶನ್‌ಗೆ ಜಾಮೀನು ಕೊಡಲಿಸಲು ಅವರ ಪತ್ನಿ ವಿಜಯಲಕ್ಷ್ಮಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ವೇಳೆ ನಟ ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆ ಎನ್ನುವ ಬಗ್ಗೆ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಈಗ ಯಾವ ಜ್ಯೋತಿಷಿ ನುಡಿದ ಭವಿಷ್ಯವಾಣಿ ನಿಜವಾಗಿದೆ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ. ನಟ ದರ್ಶನ್ ವಿಚಾರದಲ್ಲಿ ಕೋಡಿಶ್ರೀ (ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ) ನುಡಿದ ಭವಿಷ್ಯ ನಿಜವಾಗಿದೆ.
ಹೌದು... ದರ್ಶನ್ ಜೈಲಿನಿಂದ ಹೊರಬರುವುದು ತುಂಬಾ ಕಠಿಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ದರ್ಶನ್‌ಗೆ ಜಾಮೀನು ಸಿಗುವುದು ಸುಲಭವಾಗಿರಲಿಲ್ಲ. ಹೀಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ತನ್ನ ಗಂಡನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಮಾಡಿದ ಪ್ರಯತ್ನ ಒಂದೆರೆಡಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ಪೂಜೆ, ಹೋಮ, ಹವನ ಮಾಡಿಸುವುದು ಮಾತ್ರವಲ್ಲದೆ ಹಲವಾರು ಪ್ರಸಿದ್ಧ ಹಾಗೂ ಶಕ್ತಿ ದೇವಸ್ಥಾನಗಳಿಗೆ ವಿಜಯಲಕ್ಷ್ಮಿ ಭೇಟಿ ನೀಡಿ ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದರು. ಅಲ್ಲದೆ ಅವರ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೂ ಕೂಡ ದರ್ಶನ್ ಬಹುಬೇಗ ಜೈಲಿನಿಂದ ಹೊರಬರಲೆಂದು ಹಲವಾರು ದೇವರಿಗೆ ಪೂಜೆ ಮಾಡಿಸಿದ್ದರು.

ಆದರೂ ಕೂಡ ದರ್ಶನ್ ಜೈಲಿನಿಂದ ಹೊರಬರುವ ಲಕ್ಷಣಗಳು ಕಾಣಿಸಲಿಲ್ಲ. ಹೀಗಾಗಿ ದರ್ಶನ್ ಅವರ ಜಾತಕ ನೋಡಿದಾಗ ದರ್ಶನ್‌ಗೆ ಶನಿ ಕಾಟವಿರುವುದು ಗೊತ್ತಾಗಿತ್ತು. ಅಲ್ಲದೆ ದರ್ಶನ್ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿ ಇಲ್ಲದೇ ಇರುವುದರಿಂದ ಪತ್ನಿ ವಿಜಯಲಕ್ಷ್ಮೀ ಇದಕ್ಕಾಗಿ ಗ್ರಹಗಳ ಶಾಂತಿ ಹೋಮ ಕೂಡ ಮಾಡಿಸಿದ್ದರು. ಆದರೆ ದರ್ಶನ್ ಜೈಲಿನಿಂದ ಯಾವಾಗ ಹೊರಬರುತ್ತಾರೆ ಎನ್ನುವ ಪ್ರಶ್ನೆಗೆ ಯಾರಿಗೂ ಉತ್ತರ ಗೊತ್ತಿರಲಿಲ್ಲ.
ಜಾಮೀನು ಅರ್ಜಿ ಪದೇ ಪದೇ ತಿರಸ್ಕರಿಸಲ್ಪಡುತ್ತಿತ್ತು. ಹೀಗಾಗಿ ಅವರ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳಿಗೆ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಕಾಡತೊಡಗಿತ್ತು. ಈ ವೇಳೆ ಹಲವಾರು ಜ್ಯೋತಿಷಿಗಳು ದರ್ಶನ್ ಬಗ್ಗೆ ಭವಿಷ್ಯ ನುಡಿದಿದ್ದರು. ಆ ಪೈಕಿ ಕೋಡಿಶ್ರೀ ಕೂಡ ಒಬ್ಬರು. ಹಾಗಾದರೆ ಕೋಡಿಶ್ರೀಗಳು ದರ್ಶನ್ ಬಗ್ಗೆ ಹೇಳಿದ್ದೇನು?
ದರ್ಶನ್ ವಿಚಾರದಲ್ಲಿ ನಿಜವಾಯ್ತು ಕೋಡಿಶ್ರೀ ನುಡಿದ ಭವಿಷ್ಯ
ಅಕ್ಟೋಬರ್ 15ರಂದು ಚಿಕ್ಕಬಳ್ಳಾಪುರ ನಗರದ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ನಟ ದರ್ಶನ್ ಬಗ್ಗೆ ಮಾರ್ಮಿಕವಾಗಿ ಭವಿಷ್ಯವನ್ನು ನುಡಿದಿದ್ದರು. ಮಾಡಿದ ಪಾಪವನ್ನು ಅನುಭವಿಸಲೇಬೇಕು ಎಂದು ಶ್ರೀಗಳು ಅಂದು ಹೇಳಿದ್ದರು.
ದರ್ಶನ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಕೋಡಿಶ್ರೀಗಳು, ''ಪುಣ್ಯದ ಕೆಲಸ ಮಾಡಲು ಭಯ ಪಡಬಾರದು. ಆದರೆ ಜನರು ಅದಕ್ಕೆ ಭಯವನ್ನು ಪಡುತ್ತಿದ್ದಾರೆ. ಪಾಪದ ಪಾಷಣ ಕಳೆಯಬೇಕಿದೆ. ಮಾಡಿದ ಕರ್ಮ ಫಲವತ್ತಾದರೆ ಯಾರೇನು ಮಾಡುವರು. ಪಾಪದ ಕೆಲಸ ಮಾಡುವುದಕ್ಕೆ ಹೆದರಬೇಕಿತ್ತು'' ಎಂದು ಶ್ರೀಗಳು ಹೇಳಿದ್ದರು.
ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನೀಡಿದ ಹೇಳಿಕೆ ನಿಜವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕೋಡಿಶ್ರೀಗಳು ಹೇಳಿದಂತೆ ಪಾಪಮಾಡಿದವರು ಶಿಕ್ಷೆ ಅನುಭವಿಸುತ್ತಾರೆ, ಹಾಗೇ ದರ್ಶನ್ ತಪ್ಪು ಮಾಡಿಲ್ಲ ಹೀಗಾಗಿ ಅವರು ಜೈಲಿನಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೋಡಿಶ್ರೀಗಳು ಹೇಳುವ ಭವಿಷ್ಯವಾಣಿಯ ಮೇಲಿನ ನಂಬಿಕೆ ಭಕ್ತರಲ್ಲಿ ಮತ್ತಷ್ಟು ಹೆಚ್ಚಾಗಿದೆ.
ದರ್ಶನ್ ಬಗ್ಗೆ ಕೌಡೇಪಿರ ಲಾಲಸಾಬ ನುಡಿದ ಭವಿಷ್ಯ ನಿಜವಾಯ್ತು
ದರ್ಶನ್ ಜೈಲಿನಲ್ಲಿ ಇರುವಾಗ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ 10ನೇ ವಾರ್ಡಿನಲ್ಲಿ ಕೌಡೇಪಿರ ಲಾಲಸಾಬ ಎಂಬ ದೇವರು ಭವಿಷ್ಯ ನುಡಿದಿದ್ದರು. ಕೌಡೇಪಿರ ಲಾಲಸಾಬ ಮೋಹರಂ ಆಚರಣೆಯ ವೇಳೆ ಮುಸ್ಲಿಂ ಧರ್ಮೀಯರು ಕೂರಿಸುವ ದೇವರಾಗಿದೆ.
ನಟ ದರ್ಶನ್ ಮೂರು ತಿಂಗಳ ನಂತರ ಬಿಡುಗಡೆ ಆಗುತ್ತಾರೆ ಎಂದು ಕೌಡೇಪಿರ ಲಾಲಸಾಬ ಹೇಳಿದ್ದರು. ಇವರ ಭವಿಷ್ಯವಾಣಿಯಂತೆ ದರ್ಶನ್ ಮೂರು ತಿಂಗಳ ಬಳಿಕ ಜೈಲಿನಿಂದ ಹೊರಬಂದಿದ್ದಾರೆ. 2019ರಲ್ಲಿ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದ ಸಮಯದಲ್ಲೂ ಬಿಡುಗಡೆ ಬಗ್ಗೆ ಕೌಡೇಪಿರ ಲಾಲಸಾಬ ದೇವರು ನುಡಿದ ಭವಿಷ್ಯವೂ ನಿಜವಾಗಿತ್ತು. ಇದರಿಂದಾಗಿ ಈಗ ಈ ದೇವರ ಮೇಲೆ ನಂಬಿಕೆ ಹೆಚ್ಚಾಗಿದೆ.
ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಭವಿಷ್ಯ
ಇನ್ನೂ ದರ್ಶನ್ ಅಭಿಮಾನಿಯೊಬ್ಬರು ಪ್ರಸಿದ್ಧ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನದಲ್ಲಿ ದರ್ಶನ್ ಬಿಡುಗಡೆ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆದಿಚುಂಚನಗಿರಿ ಶಾಖ ಮಠದಲ್ಲಿರುವ 800 ವರ್ಷಗಳ ಇತಿಹಾಸನ್ನು ಹೊಂದಿರುವ ಭವ್ಯ ದೇವಾಲಯವಿದೆ. ಇಲ್ಲಿ ದರ್ಶನ್ ಅಭಿಮಾನಿಯೊಬ್ಬರು ಬಿಡುಗಡೆ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಅಭಿಮಾನಿ ಪ್ರಶ್ನೆಗೆ ದೇವಿ ಕಳಸದಲ್ಲಿ ಬರೆದಿದ್ದು ಅವರು ಜೈಲಿನಿಂದ ಹೊರಬರುವುದು ಕಷ್ಟ ಇದೆ ಎಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತುಮಕೂರು ಮೂಕಾಂಬಿಕಾ ದೇವಿ ದೇವಸ್ಥಾನ ಗುರೂಜಿ ನುಡಿದ ಭವಿಷ್ಯ
ಇನ್ನೂ ದರ್ಶನ್ ಅವರ ಬಗ್ಗೆ ತುಮಕೂರು ಜಿಲ್ಲೆಯ ಮೂಕಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಲಕ್ಷ್ಮೀಕಾಂತ ಆಚಾರ್ಯ ಗುರೂಜಿ ಅವರು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ. ತುಮಕೂರಿನ ಚಿನಗ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದರ್ಶನ್ ಅವರ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಗುರೂಜಿ, ಅಶ್ವಯುಜ-ಕಾರ್ತಿಕ ಮಾಸದ ಮಧ್ಯ ಭಾಗ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗಲಿದೆ ಎಂದಿದ್ದರು. ಇನ್ನೂ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗುರೂಜಿ, ಇದು ಶುಭ ಸೂಚನೆಯ ಆರಂಭವಾಗಿದೆ. ದರ್ಶನ್‌ಗೆ ಶ್ರೀ ಮೂಕಾಂಬಿಕಾ ದೇವಿಯ ಆಶೀರ್ವಾದ ಸಿಕ್ಕಿದೆ. ದೇವಿ ನುಡಿದಂತೆ ಕರ್ನಾಟಕ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ ಎಂದು ಹೇಳಿದ್ದಾರೆ.
ಕೋಡಿಶ್ರೀ ಅವರಿಂದ ಮತ್ತೊಂದು ಸ್ಪೋಟಕ ಭವಿಷ್ಯ
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮತ್ತೊಂದು ಭವಿಷ್ಯವನ್ನು ನುಡಿಸಿದ್ದಾರೆ. ರಾಜ್ಯದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ರೈತಾಪಿ ವರ್ಗ ಮತ್ತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಸೊರಬದಲ್ಲಿ ಕಳೆದ ದಿನ (ನ.11) ಏರ್ಪಡಿಸಲಾಗಿದ್ದ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಶ್ರೀಗಳು, 'ಶ್ವಾನಗಳ ದಾಳಿಯಿಂದ ಜನರು ನಿರ್ಭೀತಿಯಿಂದ ಓಡಾಡುವುದು ಕಷ್ಟವಾಗಲಿದೆ. ರೋಗ ರುಜಿನ ವ್ಯಾಪಿಸುವ ಲಕ್ಷಣಗಳು ಇವೆ' ಎಂದಿದ್ದಾರೆ. ಅಲ್ಲದೆ 'ಮಂಗಗಳ ಸಮಸ್ಯೆಗಳೂ ಹೆಚ್ಚಾಗಲಿವೆ. ಇದರಿಂದ ಫಸಲಿನ ಮೇಲೆ ಹಾನಿ ಉಂಟಾಗಲಿದೆ. ರಾಜ್ಯದಲ್ಲಿ ಮತ್ತಷ್ಟು ಮಳೆಯಾಗಲಿದ್ದು, ರೈತರಿಗೆ ಇದು ಆತಂಕದ ವಿಷಯವಾಗಿದ್ದರೂ ಉತ್ತಮ ಇಳುವರಿ ಕೈಸೇರಲಿದೆ' ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications