Jupiter-Venus conjunction 2024: ಮೇಷ ರಾಶಿಯಲ್ಲಿ ಗುರು-ಶುಕ್ರ ಸಂಯೋಗ- ಈ ರಾಶಿಯವರಿಗೆ ಐಶ್ವರ್ಯ, ಸಂಪತ್ತು ಪ್ರಾಪ್ತಿ..
ಸೌರವ್ಯೂಹದಲ್ಲಿ ಗ್ರಹಗಳ ಸಂಚಾರ ನಡೆಯುತ್ತಲೇ ಇರುತ್ತದೆ. ಕೆಲ ಗ್ರಹಗಳು ಕಡಿಮೆ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಇನ್ನೂ ಕೆಲ ಗ್ರಹಗಳು ದೀರ್ಘಕಾಲದ ಸಮಯ ತೆಗೆದುಕೊಂಡು ರಾಶಿಯನ್ನು ಬದಲಾಯಿಸುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳು ನಿರ್ದಿಷ್ಟ ಅಂತರದಲ್ಲಿ ರಾಶಿಯನ್ನು ಬದಲಾಯಿಸುತ್ತವೆ.
ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಾಗುತ್ತವೆ. ಕೆಲವು ಗ್ರಹಗಳ ಸಂಯೋಗವು ಹಲವು ವರ್ಷಗಳ ನಂತರ ಸಂಭವಿಸಬಹುದು. ಆ ನಿಟ್ಟಿನಲ್ಲಿ ಸುಮಾರು 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಗುರು ಮತ್ತು ಶುಕ್ರ ಸಂಯೋಗ ಸಂಭವಿಸುತ್ತದೆ. ಗುರುವನ್ನು ದೇವರ ಗುರು ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಶುಕ್ರನನ್ನು ಅಸುರರ ಒಡೆಯ ಎಂದು ಪರಿಗಣಿಸಲಾಗುತ್ತದೆ. ಈ ಎರಡೂ ಗ್ರಹಗಳು ಶುಭ ಗ್ರಹಗಳಾಗಿವೆ.
ಈ ಗ್ರಹಗಳ ಸಂಯೋಗ 24 ಏಪ್ರಿಲ್ 2024 ರಂದು ಸಂಭವಿಸುತ್ತದೆ. ಈ ಗ್ರಹಗಳ ಸಂಯೋಜನೆಯ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಕೆಲವು ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ಇನ್ನು ಕೆಲವರು ಇದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ಮೇಷ ರಾಶಿ
ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಐತಿಹಾಸಿಕ ಕ್ಷಣ. ಈ ಮಂಗಳಕರ ಸಮಯದಲ್ಲಿ ಎಲ್ಲೆಡೆ ಶ್ರೀರಾಮನನ್ನು ಪೂಜಿಸಲಾಗುತ್ತಿದೆ. ಶ್ರೀರಾಮನ ಆಶೀರ್ವಾದವನ್ನು ಮೇಷ ರಾಶಿಯವರು ಪಡೆಯಲಿದ್ದಾರೆ. ಮೇಷ ರಾಶಿಯ ಮೊದಲ ಮನೆಯಲ್ಲಿ ಗುರು ಶುಕ್ರ ಸಂಯೋಗ ಆಗಲಿದೆ. ಹೀಗಾಗಿ ಈ ರಾಶಿಯವರಿಗೆ ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ವ್ಯಾಪಾರದಲ್ಲಿ ನಿರಂತರವಾಗಿ ಅಧಿಕ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ಕೆಲಸಗಾರರ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಕೆಲವರಿಗೆ ಕಚೇರಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಇದರೊಂದಿಗೆ ದಿಢೀರ್ ಧನಲಾಭ ಪಡೆಯುವ ಸಂಭವವಿದೆ. ವಿವಾಹಿತರು ಸಂತೋಷದ ಜೀವನವನ್ನು ಹೊಂದಿರುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯ 11ನೇ ಮನೆಯಲ್ಲಿ ಗುರು-ಶುಕ್ರ ಸಂಯೋಗ ಸಂಭವಿಸುತ್ತದೆ. ಇದು ಈ ರಾಶಿಚಕ್ರದ ಚಿಹ್ನೆಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವೃತ್ತಿಪರವಾಗಿ ಉತ್ತಮ ಯಶಸ್ಸು ಮತ್ತು ಆರ್ಥಿಕ ಲಾಭ ಸಿಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಕೆಲಸದಲ್ಲಿ ನಿಮ್ಮ ಸಮರ್ಪಣೆಯನ್ನು ನೋಡಿ, ಉನ್ನತ ಅಧಿಕಾರಿಗಳು ನಿಮಗೆ ಬಡ್ತಿ ನೀಡಬಹುದು. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ.
ಕರ್ಕಾಟಕ ರಾಶಿ
ಕರ್ಕಾಟಕದ 10ನೇ ಮನೆಯಲ್ಲಿ ಗುರು-ಶುಕ್ರ ಸಂಯೋಗ ಆಗಲಿದೆ. ಹೀಗಾಗಿ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುತ್ತಾರೆ. ಕೆಲವರಿಗೆ ಹೊಸ ವ್ಯಾಪಾರ ಆರಂಭಿಸುವ ಅವಕಾಶ ಸಿಗಲಿದೆ. ಈ ಹೊಸ ಉದ್ಯಮ ಭವಿಷ್ಯದಲ್ಲಿ ಅನೇಕ ಪ್ರಯೋಜನಗಳನ್ನು ತರುತ್ತದೆ. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಅದು ಸಿಹಿಯಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆಯು ಎಲ್ಲರನ್ನೂ ಆಕರ್ಷಿಸುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications