Get Updates
Get notified of breaking news, exclusive insights, and must-see stories!

Jupiter Transition: ಗುರು ಬಲದಿಂದ ಏಪ್ರಿಲ್ 6ರಿಂದ ಶುಭ ಫಲ ಪಡೆಯುವ 5 ರಾಶಿಗಳಿವು

ಇದೇ ಏಪ್ರಿಲ್ 6ನೇ ತಾರೀಕಿನಿಂದ ಈ 5 ರಾಶಿಗಳವರ ಜೀವನದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಆದ್ದರಿಂದ ಗೋಚಾರದ ಮೂಲಕ ಶುಭ ಫಲವನ್ನು ಕಾಣಲಿದ್ದಾರೆ. ಇನ್ನು ಒಂದು ವರ್ಷ, ಅಂದರೆ ಏಪ್ರಿಲ್ 13, 2022ರ ತನಕ ಗುರು ಗ್ರಹವು ಕುಂಭ ರಾಶಿಯಲ್ಲಿ ಸಂಚರಿಸಲಿದೆ.

ಈ ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 21, 2021ರಲ್ಲಿ ಮಕರ ರಾಶಿಯಲ್ಲೇ ಮತ್ತೆ ಸಂಚಾರ ಮಾಡುತ್ತದೆ. ಉಳಿದಂತೆ ಹತ್ತು ತಿಂಗಳು ನೆಮ್ಮದಿ ನೀಡುತ್ತದೆ. ನೆನಪಿನಲ್ಲಿಡಿ, ಇದು ಗೋಚಾರದ ಶುಭ ಫಲ. ದಶಾ- ಭುಕ್ತಿ ಉತ್ತಮವಾಗಿದ್ದಲ್ಲಿ ಇನ್ನೂ ಉತ್ತಮ ಫಲ ಅನುಭವಕ್ಕೆ ಬರಲಿದೆ.

ಆದರೆ, ಕುಂಭ, ಮೀನ, ಕರ್ಕಾಟಕ, ಕನ್ಯಾ ಹಾಗೂ ವೃಶ್ಚಿಕ ರಾಶಿಯವರು ಈ ಅವಧಿಯಲ್ಲಿ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಗಿ ಕರ್ಕಾಟಕ ರಾಶಿಯವರು ಆರೋಗ್ಯ ವಿಚಾರದಲ್ಲಿ ಹಾಗೂ ಕಾನೂನು ವ್ಯಾಜ್ಯಗಳಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಕಡಲೇಕಾಳು ಧಾನ್ಯವನ್ನು ದಾನ ಮಾಡಿದರೆ ಉತ್ತಮ. ಗುರು ಗ್ರಹ ಆರಾಧನೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.

ಇನ್ನು ಶುಭ ಫಲ ಪಡೆಯುವ ಆ 5 ರಾಶಿಗಳು ಯಾವುವು, ಈ ರಾಶಿಗಳವರಿಗೆ ಸಿಗುವ ಶುಭ ಫಲಗಳೇನು ಎಂಬ ಬಗ್ಗೆ ತುಂಬ ಸಂಕ್ಷಿಪ್ತವಾಗಿ ತಿಳಿಸಿಕೊಡಲಿದೆ. ಮಕರ ರಾಶಿಯಿಂದ ಆರಂಭವಾಗುತ್ತದೆ. ಆ ನಂತರ ತುಲಾ, ಸಿಂಹ, ಮಿಥುನ ಹಾಗೂ ಮೇಷ ರಾಶಿಯವರಿಗೆ ಬಿರು ಬಿಸಿಲಿನ ಮಧ್ಯೆ ಸ್ವಲ್ಪ ತಂಗಾಳಿ ಬೀಸಿದ ಅನುಭವ ಆಗುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಏನು ಶುಭ ಫಲ ಎಂಬುದನ್ನು ನೋಡೋಣ.

 ಮಕರ: ಹಣಕಾಸು ಆದಾಯದಲ್ಲಿ ಹೆಚ್ಚಳ

ಮಕರ: ಹಣಕಾಸು ಆದಾಯದಲ್ಲಿ ಹೆಚ್ಚಳ

ಸಾಡೇಸಾತ್ ಪ್ರಭಾವದಲ್ಲಿ ಇರುವ ಮಕರ ರಾಶಿಯವರಿಗೆ ಇಷ್ಟು ಸಮಯ ಜನ್ಮರಾಶಿಯಲ್ಲಿ ಗುರು ಇತ್ತು. ಈಗ ಕುಂಭ ರಾಶಿಗೆ ಗುರು ಪ್ರವೇಶಿಸುವುದರಿಂದ ಹಣಕಾಸು ಆದಾಯದಲ್ಲಿ ಹೆಚ್ಚಳ ಕಾಣಿಸುತ್ತದೆ. ಅದಾಯ ಮೂಲಗಳು ಹೆಚ್ಚಲಿವೆ. ಮಾತಿಗೆ ಸಂಬಂಧಿಸಿದ ಉದ್ಯೋಗಗಳನ್ನು ಮಾಡುವವರಿಗೆ ಬಡ್ತಿ, ವೇತನ ಹೆಚ್ಚಳದ ಯೋಗ ಇದೆ. ಅಷ್ಟೇ ಅಲ್ಲ, ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಮಯ ಆಗಲಿದೆ. ಇನ್ನು ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಔಷಧೋಪಚಾರ ದೊರೆಯಲಿದೆ. ಮುಖ್ಯವಾಗಿ ಅನಗತ್ಯವಾದ ಚಿಂತೆಗಳು ಸ್ವಲ್ಪ ಮಟ್ಟಿಗೆ ದೂರ ಆಗಲಿದೆ.

 ತುಲಾ: ವಾಹನ ಖರೀದಿ ಆಸೆ ಈಡೇರಲಿದೆ

ತುಲಾ: ವಾಹನ ಖರೀದಿ ಆಸೆ ಈಡೇರಲಿದೆ

ತುಲಾ ರಾಶಿಯವರಿಗೆ ಐದನೇ ಮನೆಗೆ ಗುರು ಪ್ರವೇಶ ಆಗುವುದರಿಂದ ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳಿಬರಲಿದೆ. ಸಂತಾನಕ್ಕಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿರುವವರಿಗೆ ಚಿಕಿತ್ಸೆ ಫಲ ನೀಡುತ್ತದೆ. ಇನ್ನು ಬಹುಕಾಲದಿಂದ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಆಸೆ ಈಡೇರುತ್ತದೆ. ಮನಸ್ತಾಪ ಆಗಿ, ದೂರ ಹೋದ ಸ್ನೇಹಿತರು ಮತ್ತೆ ಹತ್ತಿರ ಆಗಲಿದ್ದಾರೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಈಗ ಗುರುತಿಸಲಾಗುತ್ತದೆ. ವಿದೇಶ ಪ್ರಯಾಣ ಯೋಗಗಳು ಸಹ ಇವೆ. ನಾಲಗೆ ಮೇಲೆ ಹಿಡಿತ ಇರಿಸಿಕೊಳ್ಳಿ. ಹಾಗೂ ಗುರುವಾರದಂದು ಮಾಂಸ ಸೇವನೆ ಮಾಡಬೇಡಿ.

 ಸಿಂಹ ರಾಶಿಗೆ ಗುರು ಪ್ರವೇಶದಿಂದ ಆಗುವ ಲಾಭವೇನು?

ಸಿಂಹ ರಾಶಿಗೆ ಗುರು ಪ್ರವೇಶದಿಂದ ಆಗುವ ಲಾಭವೇನು?

ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಗುರು ಪ್ರವೇಶ ಆಗುವುದರಿಂದ ಕುಟುಂಬದಲ್ಲಿ ಶಾಂತಿ- ಸೌಹಾರ್ದ ಹೆಚ್ಚಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಇನ್ನು ಪ್ರೇಮಿಗಳ ಮಧ್ಯೆ ಬಾಂಧವ್ಯ ಗಟ್ಟಿ ಆಗುತ್ತದೆ. ಪಾರ್ಟನರ್​ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ. ಹೊಸ ಸಂಪರ್ಕದಿಂದ ಪ್ರಭಾವ ಹೆಚ್ಚಾಗಲಿದೆ. ಶತ್ರುಗಳ ಕಾಟ ಕಡಿಮೆ ಆಗಲಿದೆ. ಇಷ್ಟು ಸಮಯ ನಿಮ್ಮನ್ನು ಕಾಡುತ್ತಿದ್ದ ಆತಂಕವು ದೂರವಾಗಲಿದ್ದು, ಅನಿರೀಕ್ಷಿತವಾದ ಧನಾಗಮ ಆಗಲಿದೆ. ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉತ್ತಮ ಸ್ಥಾನಮಾನ ಲಭಿಸಲಿದೆ.

 ಮಿಥುನ ರಾಶಿಗೆ ಗುರು ಗ್ರಹದಿಂದ ಆಗುವ ಲಾಭ

ಮಿಥುನ ರಾಶಿಗೆ ಗುರು ಗ್ರಹದಿಂದ ಆಗುವ ಲಾಭ

ಶನಿ ಹಾಗೂ ಗುರು ಎರಡೂ ಗ್ರಹಗಳು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿದ್ದು ಬಹಳ ಕಷ್ಟ ಪಟ್ಟಿರುತ್ತೀರಿ. ಈಗ ಒಂಬತ್ತನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕವಾದ ಬದಲಾವಣೆ ಕಾಣಿಸಿಕೊಳ್ಳಲಿದೆ. ಪಿತ್ರಾರ್ಜಿತವಾದ ಆಸ್ತಿ ಬರಬೇಕಾಗಿದ್ದಲ್ಲಿ ಅದು ಬರಲಿದೆ. ಮನೆ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಮಾತಿಗೆ ಗೌರವ ದೊರೆಯಲಿದೆ. ತಂದೆಯ ಜತೆಗೆ ಮನಸ್ತಾಪ ಆಗಿದ್ದಲ್ಲಿ ಅದು ಸರಿಹೋಗಲಿದೆ. ಉದ್ಯೋಗಸ್ಥರಿಗೆ ಕೆಲಸದ ನಿಮಿತ್ತವಾಗಿ ವಿದೇಶ ಪ್ರಯಾಣ ಮಾಡುವಂಥ ಯೋಗ ದೊರೆಯಲಿದೆ. ಆದರೆ ಶನೈಶ್ಚರ ಆರಾಧನೆ ಮಾಡಿ.

 ಮೇಷ ರಾಶಿಗೆ ಗುರುಗ್ರಹದಿಂದ ಆಗುವ ಲಾಭವೇನು?

ಮೇಷ ರಾಶಿಗೆ ಗುರುಗ್ರಹದಿಂದ ಆಗುವ ಲಾಭವೇನು?

ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹ ಪ್ರವೇಶ ಆಗಲಿದೆ. ಇದರಿಂದ ನಿಮ್ಮ ಆದಾಯ ಮೂಲದ ಮೂಲಕ ಬರುವ ಹಣದ ಹರಿವು ಜಾಸ್ತಿ ಆಗಲಿದೆ. ವ್ಯಾಪಾರಸ್ಥರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಇನ್ನು ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳು ನಿಮಗೆ ಗೋಚರ ಆಗಲಿದೆ. ಭೂಮಿ, ಮನೆ ಖರೀದಿ ವ್ಯವಹಾರಗಳು ಅರ್ಧಕ್ಕೆ ನಿಂತಿದ್ದಲ್ಲಿ ಅಥವಾ ಅಡೆತಡೆಗಳು ಆಗುತ್ತಿದ್ದಲ್ಲಿ ಈಗ ಸಲೀಸಾಗಿ ಮುಗಿಯುತ್ತದೆ. ಹಣಕಾಸಿನ ಅನುಕೂಲ ಕೂಡ ಒದಗಿಬರುತ್ತದೆ. ಹಿರಿಯರ ಮೂಲಕ ನಿಮಗೆ ಅನಿರೀಕ್ಷಿತವಾಗಿ ಹಣಕಾಸು ಬರುವ ಯೋಗ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಿ.

'ಶ್ರೀ ಪಂಚಮುಖಿ ಜ್ಯೋತಿಷ್ಯo - ಪಂಡಿತ್: ಶ್ರೀ ಗಣೇಶಕುಮಾರ್

ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ-ಪುರುಷ - ಆಕರ್ಷಣೆ , ದಾಂಪತ್ಯ, ಪ್ರೇಮವಿಚಾರ , ಮಾನಸಿಕ, ಗೃಹಶಾಂತಿ, ಆರೋಗ್ಯ, ಹಣಕಾಸು, ಮಾಟಭಾದೆ, ಶತ್ರುಕಾಟ, ಅಲ್ಲದೇ ರಾಜಯೋಗವಶಗಳು, ಅಖಂಡಯೋಗವಶಗಳು ಇನ್ನಿತರ ನಿಮ್ಮ ಯಾವುದೇ ಕಠಿಣ, ನಿಗೂಢ ಮತ್ತು ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ದ .
(ಫೋನಿನ ಮೂಲಕ ಪರಿಹಾರ) PH:-9880533337 .
ಮೈಸೂರು ಸರ್ಕಲ್ (ಸಿರಸಿ ವೃತ್ತ) ಚಾಮರಾಜಪೇಟೆ, ಬೆಂಗಳೂರು.'

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+