Gajkesari Yoga 2024: ಗುರು ಚಂದ್ರ ಸಂಯೋಗದಿಂದ ರೂಪುಗೊಂಡ ಗಜಕೇಸರಿ ರಾಜಯೋಗ: ಇಂದಿನಿಂದ ಈ ರಾಶಿಗೆ ಭಾಗ್ಯೋದಯ

ಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ಸಂಚಾರದ ವೇಳೆ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ರಾಶಿಯನ್ನು ಸಂಕ್ರಮಿಸುವಾಗ ಶುಭ ಮತ್ತು ಅಶುಭ ಯೋಗಗಳನ್ನು ರೂಪಗೊಂಡು ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತವೆ. ಆ ರೀತಿಯಲ್ಲಿ ಗುರು ಸದ್ಯ ವೃಷಭ ರಾಶಿಯಲ್ಲಿ ಸಂಚರಿಸುತ್ತಿದೆ.

ಹೀಗಿರುವಾಗ ಜುಲೈ 2ರಂದು ಚಂದ್ರನು ವೃಷಭರಾಶಿಗೆ ಪ್ರವೇಶಿಸಿ ಗುರುವಿನೊಡನೆ ಸೇರುವುದರಿಂದ ಗಜಗೇಸರಿ ರಾಜಯೋಗ ಉಂಟಾಗುತ್ತದೆ. ಸಂಪತ್ತಿನ ಕಾರಕ ಎನಿಸುವ ಶುಕ್ರನ ರಾಶಿಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಂಡಿರುವುದರಿಂದ ಇದರ ಪರಿಣಾಮ ಎಲ್ಲ ರಾಶಿಗಳಲ್ಲೂ ಕಂಡುಬರುತ್ತದೆ.

ಮುಖ್ಯವಾಗಿ ಈ ರಾಜಯೋಗದಿಂದಾಗಿ 3 ರಾಶಿಯವರು ಉತ್ತಮ ಆರ್ಥಿಕ ಲಾಭ ಮತ್ತು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಈಗ ವೃಷಭ ರಾಶಿಯಲ್ಲಿ ಉಂಟಾಗಲಿರುವ ಗಜಗೇಸರಿ ರಾಜಯೋಗದಿಂದ ಯಾರಿಗೆ ಅದೃಷ್ಟ ಒಲಿಯಲಿದೆ ಎಂದು ನೋಡೋಣ.

Jupiter moon make gajkesari rajyog on 02 july 2024 these zodiac signs will be lucky in kannada

ಮೇಷ ರಾಶಿ

ಮೇಷ ರಾಶಿಯ 2ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರೂಪಗೊಳ್ಳುತ್ತದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಬುದ್ಧಿವಂತಿಕೆ ಹೆಚ್ಚಾಗಲಿದೆ. ಧನಲಾಭ ಸಿಗಲಿದೆ. ಆರ್ಥಿಕ ಜೀವನ ವೃದ್ಧಿಯಾಗಲಿದೆ. ಅನೇಕ ಪ್ರಮುಖ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ.

ಕೆಲಸದ ಸ್ಥಳದಲ್ಲಿ ದಕ್ಷತೆ ಹೆಚ್ಚಾಗುತ್ತದೆ. ಸಾಕಷ್ಟು ಹಣ ಗಳಿಸುವ ಅವಕಾಶವಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ನಿಮ್ಮ ಸಂವಹನ ಕೌಶಲ್ಯ ಸುಧಾರಿಸುತ್ತದೆ. ಇದು ಇತರರನ್ನು ಆಕರ್ಷಿಸುತ್ತದೆ.

Jupiter moon make gajkesari rajyog on 02 july 2024 these zodiac signs will be lucky in kannada

ವೃಷಭ ರಾಶಿ

ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಇದು ವೃಷಭ ರಾಶಿಯವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಬಹುಕಾಲದ ಆಸೆಗಳು ಈಡೇರುತ್ತವೆ. ವ್ಯಾಪಾರ ಮತ್ತು ವ್ಯವಹಾರ ಎರಡರಲ್ಲೂ ಲಾಭವನ್ನು ಪಡೆಯುತ್ತೀರಿ.

ಆದಾಯದ ಹೊಸ ಮೂಲಗಳು ಹೊರಹೊಮ್ಮುತ್ತವೆ. ಬಹಳಷ್ಟು ಹಣವನ್ನು ಉಳಿಸಬಹುದು. ಹೊಸ ಜನರ ಪರಿಚಯವಾಗುತ್ತದೆ. ಇದು ಭವಿಷ್ಯದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ.

Jupiter moon make gajkesari rajyog on 02 july 2024 these zodiac signs will be lucky in kannada

ತುಲಾ ರಾಶಿ

ತುಲಾ ರಾಶಿಯ 8ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ಉಂಟಾಗುತ್ತದೆ. ಹೀಗಾಗಿ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಈ ಸಮಯದಲ್ಲಿ ತುಲಾ ರಾಶಿಯವರು ಬಹಳಷ್ಟು ಹಣವನ್ನು ಗಳಿಸುವುದರ ಜೊತೆಗೆ ಹಣವನ್ನು ಉಳಿಸಬಹುದು. ಪರಿಣಾಮವಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಕೆಲವರಿಗೆ ವಿದೇಶ ಪ್ರವಾಸಕ್ಕೆ ಅವಕಾಶ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಬಲಗೊಳ್ಳುತ್ತದೆ. ನೀವು ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಿರಿ. ಅಲ್ಲದೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+