Jupiter Direct in Aries: ಮೇಷ ರಾಶಿಯಲ್ಲಿ ಗುರು ನೇರ: ಮೇ ತಿಂಗಳವರೆಗೆ ಈ 3 ರಾಶಿಯವರಿಗೆ ಸುವರ್ಣ ಯುಗ...
ಹುದ್ದೆಯಲ್ಲಿ ನಿಮ್ಮ ಶ್ರಮವನ್ನು ಗುರಿತಿಸಲಾಗುವುದು. ನೀವು ಆಂದುಕೊಂಡ ಕಾರ್ಯಗಳು ನಿಮ್ಮ ಶ್ರಮದಿಂದ ಪೂರ್ಣಗೊಳ್ಳಲಿವೆ. ಇದರ ಪ್ರತಿಫಲವನ್ನೂ ನೀವು ಪಡೆಯುವಿರಿ. ನವಗ್ರಹಗಳಲ್ಲಿ ಗುರು ದೇವನನ್ನು ಶುಭ ಗ್ರಹವೆಂದು ಪರಿಗಣಿಸಲಾಗಿದೆ. ಈ ಗುರು ದೇವ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯಾಗಿದ್ದಾನೆ. ಅಲ್ಲದೆ ಈ ಗುರು ಗ್ರಹ ರಾಶಿಯನ್ನು ಬದಲಾಯಿಸಲು 1 ವರ್ಷದ ಅವಧಿಯನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಗ್ರಹವು ಡಿಸೆಂಬರ್ 31 ರಂದು ವಕ್ರ ನಿವೃತಿಯನ್ನು ಪಡೆದಿದೆ. ಅದರೆ ಅದು ನೇರವಾಗಿ ಸಂಚರಿಸಲು ಆರಂಭಿಸಿದೆ.
ವಕ್ರ ಸ್ಥಾನದಲ್ಲಿರುವ ಗ್ರಹಗಳಿಂದ ಉತ್ತಮ ಫಲಿತಾಂಶಗಳು ವಿಳಂಬವಾಗುತ್ತವೆ. ಗುರು ವಕ್ರ ಸ್ಥಾನದಿಂದ ನೇರವಾಗಿ ಸಂಚಾರ ಮಾಡಲು ಶುರು ಮಾಡುತ್ತಿದ್ದಂತೆ ಅದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಆದರೆ ಇದು 3 ರಾಶಿಯವರಿಗೆ ತುಂಬಾ ಒಳ್ಳೆಯದು.
ವಿಶೇಷವಾಗಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ. ಮೇ ತಿಂಗಳವರೆಗೆ ಮೇಷ ರಾಶಿಯಲ್ಲಿ ಗುರು ನೇರದಿಂದ ಯಾವ ರಾಶಿಚಕ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈಗ ನೋಡೋಣ.

ಮೇಷ ರಾಶಿ
ಮೇಷ ರಾಶಿಯ ಮೊದಲ ಮನೆಯಲ್ಲಿ ಗುರು ವಕ್ರ ನಿವಾರ್ತಿ ಪಡೆದಿದೆ. ಮೇಷ ರಾಶಿಯವರಿಗೆ ಇದು ತುಂಬಾ ಒಳ್ಳೆಯದು. ಜೀವನದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುವಿರಿ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ.
ಆದರೆ ನೀವು ಸುಮ್ಮನಿರಬೇಡ. ಲಾಭದಾಯಕ ಹುದ್ದೆಗಳತ್ತ ನಿಮ್ಮ ಗಮನ ಹರಿಸಿ. ಈ ಸಮಯದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುವರು. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ತಂದೆ ಮತ್ತು ಗುರುಗಳ ಸಂಪೂರ್ಣ ಬೆಂಬಲವು ಇನ್ನು ಮುಂದೆ ನಿಮ್ಮೊಂದಿಗುತ್ತದೆ.

ವೃಷಭ ರಾಶಿ
ವೃಷಭ ರಾಶಿಯ 12 ನೇ ಮನೆಯಲ್ಲಿ ಗುರು ವಕ್ರ ನಿವೃತಿಯನ್ನು ಹೊಂದಿದೆ. ಹೀಗಾಗಿ ವೃಷಭ ರಾಶಿಯವರಿಗೆ ವಿದೇಶಿ ಕಂಪನಿಗಳಿಂದ ಹಣದ ಲಾಭ ದೊರೆಯಲಿದೆ. ನೀವು ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ, ಹೊಸ ಮನೆ, ವಾಹನ ಇತ್ಯಾದಿಗಳನ್ನು ಖರೀದಿಸುವ ನಿಮ್ಮ ಕನಸು ನನಸಾಗುತ್ತದೆ.
ಕುಟುಂಬ ಸದಸ್ಯರ ನಡುವಿನ ಸಂಬಂಧವು ಬಲಗೊಳ್ಳುತ್ತದೆ. ಬಹಳ ದಿನಗಳಿಂದ ಬಂಧುಮಿತ್ರರೊಂದಿಗಿನ ಕಲಹಗಳು ಅಂತ್ಯವಾಗುತ್ತವೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ. ಕೆಲಸದಲ್ಲಿನ ನಿಮ್ಮ ಶ್ರಮವನ್ನು ಗುರುತಿಸಲಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯೂ ಸಮಯದಲ್ಲಿ ಸುಧಾರಣೆ ಕಾಣಲಿದೆ.

ಸಿಂಹ ರಾಶಿ
ಸಿಂಹ ರಾಶಿಯ 9ನೇ ಮನೆಯಲ್ಲಿ ಗುರು ವಕ್ರ ನಿವರ್ತಿ ಪಡೆಯಲಿದೆ. ಗುರುವು ಭಾಗ್ಯದ ಮನೆಯಲ್ಲಿ ಇರುವುದರಿಂದ ಭಾಗ್ಯದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಸುದೀರ್ಘ ಹೋರಾಟ ಕೊನೆಗೊಳ್ಳುತ್ತದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ.
ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಲಿದೆ. ಇದೇ ಸಂದರ್ಭದಲ್ಲಿ ನೀವು ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮುಖ್ಯವಾಗಿ ಮಾನಸಿಕ ಧೈರ್ಯ ಹೆಚ್ಚುತ್ತದೆ. ಈ ಧೈರ್ಯದಿಂದ ನೀವು ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತೀರಿ.
ಹುದ್ದೆಯಲ್ಲಿ ನಿಮ್ಮ ಶ್ರಮವನ್ನು ಗುರಿತಿಸಲಾಗುವುದು. ನೀವು ಆಂದುಕೊಂಡ ಕಾರ್ಯಗಳು ನಿಮ್ಮ ಶ್ರಮದಿಂದ ಪೂರ್ಣಗೊಳ್ಳಲಿವೆ. ಇದರ ಪ್ರತಿಫಲವನ್ನೂ ನೀವು ಪಡೆಯುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications