ಜೂನ್ 21 ಖಂಡಗ್ರಾಸ ಸೂರ್ಯಗ್ರಹಣ: ಮನುಕುಲಕ್ಕೆ ಮಾರಕವೇ? ಇಲ್ಲಿದೆ ಭವಿಷ್ಯ

ಗ್ರಹಣವನ್ನು ಸಾಮಾನ್ಯವಾಗಿ ಪ್ರಮುಖ ಖಗೋಳ ಘಟನೆಯಾಗಿ ನೋಡಲಾಗುತ್ತದೆ. ಆದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ದ್ವಾದಶ ರಾಶಿಗಳ ಮೇಲೆ ಮತ್ತು ಜಗತ್ತಿಗೆ ಇದರಿಂದ ಏನಾದರೂ ಕಂಟಕವಿದೆಯೇ ಎಂದು ಜ್ಯೋತಿಷಿಗಳು ತಮ್ಮದೇ ಧಾಟಿಯಲ್ಲಿ ವಿವರಣೆಯನ್ನು ನೀಡುತ್ತಾರೆ.

Recommended Video

      ಪೆನಂಬ್ರಲ್ ಚಂದ್ರಗ್ರಹಣದಿಂದ ಯಾವ ರಾಶಿಗಳಿಗೆ ಶುಭ..?ಅಶುಭ..? | Lunar Eclipse | Oneindia Kannada

      ಇದೇ ಬರುವ ಭಾನುವಾರದಂದು (ಜೂನ್ 21) ಸೂರ್ಯ ಗ್ರಹಣ ಸಂಭವಿಸಲಿದೆ. ಬೆಳಗ್ಗೆ 9.15ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದ್ದು ಮಧ್ಯಾಹ್ನ 3.03ರವರೆಗೆ ಇರಲಿದೆ. ದೆಹಲಿ ಸೇರಿದಂತೆ, ಉತ್ತರ ಭಾರತದ ಕೆಲವು ಕಡೆ ಈ ಕಂಕಣ ಸೂರ್ಯ ಗ್ರಹಣ ಗೋಚರಿಸಲಿದೆ.

      ಕಟಕ ರಾಶಿ, ಪುನರ್ವಸು ನಕ್ಷತ್ರದಲ್ಲಿ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಯುರೋಪ್ ನ ಕೆಲವು ಭಾಗ, ಉತ್ತರ ಆಸ್ಟ್ರೇಲಿಯಾ, ಪೆಸಿಫಿಕ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸಂಪೂರ್ಣವಾಗಿ ಗೋಚರಿಸಲಿದೆ.

      ಗ್ರಹಣದ ಅವಧಿಯಲ್ಲಿ ಜಪತಪಗಳನ್ನು ಮಾಡುವುದು ಸೂಕ್ತ ಎಂದಿರುವ ಖ್ಯಾತ ಜ್ಯೋತಿಷಿ, ಪಂಡಿತ್ ಎಸ್.ಪಿ.ಟಾಟಾ ಅವರು, ಮುಂಬರುವ ಸೂರ್ಯ ಗ್ರಹಣದ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದಾರೆ.

      ನಕಾರಾತ್ಮಕ ಪರಿಣಾಮಗಳು ಇರುವುದು ಸಹಜ

      ನಕಾರಾತ್ಮಕ ಪರಿಣಾಮಗಳು ಇರುವುದು ಸಹಜ

      ಗ್ರಹಣ ಎಂದರೆ ಸಾಕು, ಮಾಧ್ಯಮಗಳು ಮತ್ತು ಜ್ಯೋತಿಷಿಗಳು ಇದನ್ನು ವರ್ಣರಂಜಿತವಾಗಿ ತೋರಿಸುತ್ತಾ, ಅನಾವಶ್ಯಕವಾಗಿ ಸಮಾಜದಲ್ಲಿ ಭಯ ಬಿತ್ತುವ ಕೆಲಸವನ್ನು ಮಾಡುತ್ತಾರೆ. ಗ್ರಹಣದ ವೇಳೆ ಕೆಲವು ನಕಾರಾತ್ಮಕ ಪರಿಣಾಮಗಳು ಇರುವುದು ಸಹಜ, ಆದರೆ, ಯಾವುದೇ ದುರಂತಗಳು ಸಂಭವಿಸುವುದಿಲ್ಲ ಎಂದು ಪಂಡಿತ್ ಟಾಟಾ ಅಭಿಪ್ರಾಯ ಪಟ್ಟಿದ್ದಾರೆ.

      ಪ್ರಕೃತಿ ವಿಕೋಪ ಉಂಟಾಗುತ್ತದೆ ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು

      ಪ್ರಕೃತಿ ವಿಕೋಪ ಉಂಟಾಗುತ್ತದೆ ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು

      ಹಿಂದೆ ಹಲವು ಬಾರಿ ಗ್ರಹಣದ ವೇಳೆ ಮತ್ತು ಆನಂತರ ಪ್ರಕೃತಿ ವಿಕೋಪ ಉಂಟಾಗುತ್ತದೆ ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಆದರೆ, ನಮ್ಮ ದೇಶದಲ್ಲಿ ಅಂತದ್ದೇನೂ ಆಗಿಲ್ಲ. ಹಿಂದೊಮ್ಮೆ ಪುಷ್ಯ ನಕ್ಷತ್ರದಲ್ಲಿ ಹುಟ್ಟಿದವರಿಗೆ ಗ್ರಹಣದಿಂದ ಭಾರೀ ತೊಂದರೆಯಾಗಲಿದೆ ಎನ್ನುವ ಭವಿಷ್ಯವಾಣಿಯನ್ನು ಹೇಳಲಾಗಿತ್ತು. ನಾನು ಅದೇ ನಕ್ಷತ್ರದವನು, ನನಗೇನೂ ಆಗಿಲ್ಲ ಎಂದು ಪಂಡಿತರು ಹೇಳಿದ್ದಾರೆ.

      ಧಾರ್ಮಿಕ ಕೆಲಸಗಳು ಬೇಗನೇ ಫಲ ನೀಡುತ್ತದೆ

      ಧಾರ್ಮಿಕ ಕೆಲಸಗಳು ಬೇಗನೇ ಫಲ ನೀಡುತ್ತದೆ

      ಆದರೆ, ಗ್ರಹಣದ ಸಮಯದಲ್ಲಿ ಜಪತಪ, ಹೋಮಗಳನ್ನು ಮಾಡಿದರೆ ಉತ್ತಮ. ಈ ವೇಳೆಯಲ್ಲಿನ ಧಾರ್ಮಿಕ ಕೆಲಸಗಳು ಬೇಗನೇ ಫಲ ನೀಡುತ್ತದೆ ಎನ್ನುವುದು ನಂಬಿಕೆ. ಗ್ರಹಣದ ವೇಳೆ ಸೂರ್ಯನನ್ನು ಬರೀಕಣ್ಣಿನಿಂದ ನೋಡಬಾರದು. ಈ ಸೂರ್ಯಗ್ರಹಣದಿಂದ ಜಗತ್ತಿನಲ್ಲಿ ಯಾವುದೇ ಪ್ರಕೃತಿ ವಿಕೋಪ ಉಂಟಾಗುವುದಿಲ್ಲ ಎಂದು ಪಂಡಿತ್ ಟಾಟಾ ಹೇಳಿದ್ದಾರೆ.

      ಪಂಡಿತ್ ಎಸ್.ಪಿ.ಟಾಟಾ

      ಪಂಡಿತ್ ಎಸ್.ಪಿ.ಟಾಟಾ

      ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಗ್ರಹಣವು ನಾವಿರುವ ಜಾಗದಲ್ಲಿ ಗೋಚರಿಸುತ್ತಿದೋ ಅದನ್ನು ಮಾತ್ರ ಅನುಸರಿಸಿದರೆ ಸಾಕು. ಮುಂಬರುವ ಸೂರ್ಯಗ್ರಹಣ ದೇಶದ ಎಲ್ಲಾ ಭಾಗದಲ್ಲಿ ಗೋಚರಿಸುವುದಿಲ್ಲ. ಈ ಗ್ರಹಣದಿಂದ ಯಾರಿಗೂ ಏನೂ ತೊಂದರೆಯಿಲ್ಲ, ಜಗತ್ತಿಗೂ ಕಂಟಕವಿಲ್ಲ ಎಂದು ಪಂಡಿತ್ ಎಸ್.ಪಿ.ಟಾಟಾ ಅಭಿಪ್ರಾಯ ಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+