ಜ್ಯೋತಿಷ್ಯ: ಜೆಡಿಎಸ್ ಗ್ರಾಫ್ ಮೇಲೇರಿದರೂ ಕುಮಾರಣ್ಣಂಗೆ ಕಷ್ಟದ ದಿನಗಳು

Recommended Video

      ಎಚ್ ಡಿ ಕೆ ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ

      ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಷ್ಟದ ದಿನಗಳು ಮುಂದಿವೆಯಾ? ಆದರೆ ಅವರ ನಿರ್ಧಾರಗಳಿಂದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಅನುಕೂಲಕರ ಸ್ಥಿತಿ ಸೃಷ್ಟಿಯಾಗಲಿದೆಯಾ? ಈ ಎರಡು ಪ್ರಶ್ನೆಗಳಿಗೆ ಹೌದು ಎಂದು ಉತ್ತರ ನೀಡಿದ್ದಾರೆ ಮುಂಬೈನ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ.

      ಅವರು ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದೆ ಓದಿ

      ಈ ಸಲದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡಿದ್ದರೂ ಸಾಮಾನ್ಯ ಜನರ ಸಿಟ್ಟಿಗೂ ಕುಮಾರಸ್ವಾಮಿ ಕಾರಣರಾಗಿದ್ದಾರೆ. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾರಣಕ್ಕೆ ಅವರ ಬಗ್ಗೆ ಅಸಮಾಧಾನವಂತೂ ಇದ್ದೇ ಇದೆ. ಇನ್ನು ತಮ್ಮ ನಿರ್ಧಾರದ ಬಗ್ಗೆ ಕೂಡ ಕುಮಾರಸ್ವಾಮಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಮಾಧಾನ ಇಲ್ಲ.

      ಅವರ ನಿರ್ಧಾರಗಳು ಬಂದಿರುವುದು ಹೊಂದಾಣಿಕೆಯಿಂದ. ಅಂದರೆ ಕಾಂಗ್ರೆಸ್ ಪಕ್ಷದೊಂದಿಗೆ ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಈ ಸಲದ ಬಜೆಟ್ ಮಂಡಿಸಿರುವುದರಿಂದ ಅವರಿಗೆ ಸಮಾಧಾನ ಇಲ್ಲ. ಆದರೆ ಈ ನಿರ್ಧಾರಗಳು ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ಲೆಕ್ಕಾಚಾರ ಅವರದು.

      JDS will perform well in LS polls according tarot card reading

      ಹೌದು, ಪರಿಣಾಮ ಬೀರುವುದು ನಿಜ. ಆದರೆ ಕುಮಾರಸ್ವಾಮಿ ನಿರೀಕ್ಷಿಸಿರುವ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ. ಆದರೆ ಅವರ ಪಕ್ಷ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವುದರಲ್ಲಿ ಯಾವ ಅನುಮಾನವೂ ಇಲ್ಲ.

      ಆದರೆ, ಕುಮಾರಸ್ವಾಮಿ ಅವರ ಪಾಲಿಗೆ ಕಷ್ಟದ ದಿನಗಳು ಮುಂದೆ ಕಾಣುತ್ತಿವೆ. ಇನ್ನು ಕರ್ನಾಟಕದ ಮಟ್ಟಿಗೆ ಲೋಕಸಭೆ ಚುನಾವಣೆ ಫಲಿತಾಂಶದ ಭವಿಷ್ಯ ನೋಡಿದರೆ, ಸ್ಥಾನ ಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯುವ ಎಲ್ಲ ಸಾಧ್ಯತೆ ಗೋಚರಿಸುತ್ತಿದೆ. ಅದರರ್ಥ ಬಿಜೆಪಿಗೆ ಅತಿ ಹೆಚ್ಚು, ಆ ನಂತರ ಜೆಡಿಎಸ್ ಹಾಗೂ ಕೊನೆಯ ಸ್ಥಾನದಲ್ಲಿ ಕಾಂಗ್ರೆಸ್ ನಿಲ್ಲುವುದು ಗೋಚರಿಸುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+