Krishna Janmashtami 2023: ಕೃಷ್ಣನಿಗೆ ಇಷ್ಟವಾಗುವ ಯಾವ ವಸ್ತುವಿನಿಂದ ಯಾವ ರಾಶಿಯವರು ಪೂಜೆ ಮಾಡಿದರೆ ಒಳ್ಳೆಯದು
ವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಜನ್ಮದಿನವನ್ನು ಪ್ರತಿ ವರ್ಷ ಜನ್ಮಾಷ್ಟಮಿ ಅಥವಾ ಕೃಷ್ಣ ಜಯಂತಿ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
ಈ ವರ್ಷ ಕೃಷ್ಣ ಜಯಂತಿಯನ್ನು ಇಂದು (ಸೆಪ್ಟೆಂಬರ್ 6) ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡುವುದು ಮತ್ತು ಕೃಷ್ಣನನ್ನು ಪೂಜಿಸುವುದು ಬಹಳ ವಿಶೇಷವಾಗಿದೆ. ಹಿಂದೂ ಧರ್ಮಗ್ರಂಥಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯ ಉಪವಾಸವನ್ನು 'ವ್ರತರಾಜ' ಎಂದು ಉಲ್ಲೇಖಿಸುತ್ತವೆ.
ಈ ದಿನ ಕೃಷ್ಣನಿಗೆ ಇಷ್ಟವಾದ ವಸ್ತುಗಳಿಂದ ಕೃಷ್ಣನನ್ನು ಪೂಜಿಸುವುದರಿಂದ ನೀವು ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ಇದಲ್ಲದೆ ರಾಶಿಯವರು ಸೂಕ್ತವಾದ ವಸ್ತುಗಳಿಂದ ಕೃಷ್ಣನನ್ನು ಪೂಜಿಸುವುದು ನಿಮ್ಮ ಫಲಿತಾಂಶಗಳನ್ನು ದ್ವಿಗುಣಗೊಳಿಸುತ್ತದೆ. ಹಾಗಾದರೆ ಯಾವ ರಾಶಿಯವರು ಕೃಷ್ಣನಿಗೆ ಇಷ್ಟವಾಗುವ ಯಾವ ವಸ್ತುವಿನಿಂದ ಪೂಜಿಸಿದರೆ ಒಳಿತಾಗುತ್ತದೆ ಎಂದು ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಕೃಷ್ಣನಿಗೆ ಸಕ್ಕರೆಯಿಂದ ಪೂಜೆ ಮಾಡಿದರೆ ತುಂಬಾ ಲಾಭವಾಗುತ್ತದೆ. ಹೀಗೆ ಮಾಡುವುದರಿಂದ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ ಮತ್ತು ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ವೃಷಭ ರಾಶಿ
ವೃಷಭ ರಾಶಿಯವರು ಈ ಕೃಷ್ಣ ಜಯಂತಿಯಂದು ಕೃಷ್ಣನಿಗೆ ಬೆಣ್ಣೆ ಹಚ್ಚಿ ಪೂಜಿಸಬೇಕು. ಇದು ನಿಮಗೆ ಶ್ರೀಕೃಷ್ಣನ ಆಶೀರ್ವಾದವನ್ನು ನೀಡುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರು ಕೃಷ್ಣನಿಗೆ ಶುದ್ಧ ತುಪ್ಪ ಮತ್ತು ಹಸುವಿನ ಹಾಲಿನಿಂದ ಮಾಡಿದ ಮೊಸರಿನೊಂದಿಗೆ ಪೂಜಿಸಬಹುದು. ಇದರಿಂದ ನೀವು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಮತ್ತು ವೃತ್ತಿಯಲ್ಲಿ ಅದೃಷ್ಟವನ್ನು ಪಡೆಯುತ್ತೀರಿ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೃಷ್ಣ ಜಯಂತಿಯಂದು ಕುಂಕುಮ ಮಿಶ್ರಿತ ಹಾಲಿನಿಂದ ಭಗವಂತನನ್ನು ಪೂಜಿಸಬೇಕು. ಇದರಿಂದ ನೀವು ಶೀಘ್ರವಾಗಿ ಸಂತಾನ ಭಾಗ್ಯವನ್ನು ಪಡೆಯುತ್ತೀರಿ.

ಸಿಂಹ
ಸಿಂಹ ರಾಶಿಯವರು ಕೃಷ್ಣನಿಗೆ ಸಕ್ಕರೆ ತುಪ್ಪ ಬೆರೆಸಿದ ಪ್ರಸಾದದಿಂದ ಪೂಜಿಸಬೇಕು. ಇದು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯಲು ಸಹಾಯ ಮಾಡುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದೊಂದಿಗೆ ಪೂಜಿಸುವುದು ಶ್ರೇಯಸ್ಕರ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಆಲೋಚನೆಗಳನ್ನು ತರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನದಂದು ಶುದ್ಧ ಹಸುವಿನ ತುಪ್ಪದಿಂದ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಇದರಿಂದ ಅವರು ಎಲ್ಲಾ ರೀತಿಯ ರೋಗಗಳಿಂದ ಮುಕ್ತರಾಗುತ್ತಾರೆ ಮಾತ್ರವಲ್ಲದೆ ಅವರ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಶ್ರೀಕೃಷ್ಣನನ್ನು ಹಾಲಿನಿಂದ ಪೂಜಿಸುವುದರಿಂದ ಅವನ ಅನುಗ್ರಹವನ್ನು ಪಡೆಯಬಹುದು ಮತ್ತು ನಿಮ್ಮ ಜೀವನದಲ್ಲಿ ಎಲ್ಲಾ ಹಣದ ಸಮಸ್ಯೆಗಳು ಕೊನೆಗೊಳ್ಳುತ್ತವೆ.

ಧನು ರಾಶಿ
ಧನು ರಾಶಿಯವರು ಶ್ರೀಕೃಷ್ಣನಿಗೆ ಹಳದಿ ಹಣ್ಣುಗಳು ಮತ್ತು ಹಸುವಿನ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಬೆಲ್ಲದಿಂದ ಮಾಡಿದ ಪಂಚಾಮೃತದಿಂದ ಪೂಜಿಸಬಹುದು. ಇದು ನಿಮ್ಮ ಎಲ್ಲಾ ಶತ್ರುಗಳನ್ನು ಸೋಲಿಸಲು ಸಹಾಯ ಮಾಡುತ್ತದೆ.

ಮಕರ ರಾಶಿ
ಮಕರ ರಾಶಿಯವರು ಶ್ರೀಕೃಷ್ಣನನ್ನು ಗಂಗಾಜಲದಿಂದ ಪೂಜಿಸುವುದು ಮತ್ತು ಸಿಹಿ ವೀಳ್ಯದೆಲೆಗಳನ್ನು ಅರ್ಪಿಸುವುದು ನಿರಂತರ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರು ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಒಣ ಹಣ್ಣುಗಳು ಮತ್ತು ಕೆಂಪು ಸಿಹಿತಿಂಡಿಗಳೊಂದಿಗೆ ಪೂಜೆಯನ್ನು ಮಾಡಬೇಕು. ಇದು ನಿಮಗೆ ಖ್ಯಾತಿಯನ್ನು ತರುತ್ತದೆ.

ಮೀನ ರಾಶಿ
ಮೀನ ರಾಶಿಯವರು ಕೃಷ್ಣನಿಗೆ ತೆಂಗಿನಕಾಯಿಯೊಂದಿಗೆ ಜೇನುತುಪ್ಪ, ಹಾಲು, ತುಪ್ಪ, ಮೊಸರು, ಸಕ್ಕರೆ ಮತ್ತು ಹಾಲಿನ ಸಿಹಿತಿಂಡಿಗಳೊಂದಿಗೆ ಪೂಜಿಸಿದರೆ ನೀವು ಅಪಾರ ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತೀರಿ.












Click it and Unblock the Notifications