ಮೀನ ರಾಶಿಗೆ ಭರ್ಜರಿ ಫಲ ನೀಡಲು ಬಂದ ಗುರು!
ರಾಶಿಚಕ್ರದಲ್ಲಿ ಕಡೆಯದಾಗಿ ಬರುವ ಮೀನ ರಾಶಿಯವರಿಗೆ ಸ್ವಲ್ಪ ಸಮಾಧಾನ ಜಾಸ್ತಿಯೇ. ಏಕೆಂದರೆ ಈಗಾಗಲೇ ತಮ್ಮ ರಾಶಿಯ ಗುರುಫಲ ಕಾಯ್ದವರಿಗೆ ಸಿಹಿಸುದ್ದಿನೇ ಇದೆ. ಕಡೆಗೂ ಗುರುಬಲದ ಫಲಕ್ಕಾಗಿ ಕಾಯ್ದಿದ್ದಕ್ಕೂ ಸಮಾಧಾನ ಪಟ್ಟುಕೊಳ್ಳಬಹುದು ಸಾಮೇರ ಭಕ್ತರು.
ಈ ಹಿಂದೆ ಷಷ್ಟಮ ಸ್ಥಾನದಲ್ಲಿ ಅಂದರೆ 6ನೇ ಸ್ಥಾನದಲ್ಲಿದ್ದುಕೊಂಡು ಹೆಚ್ಚಿನ ಪ್ರಮಾಣದ ತೊಂದರೆಗಳನ್ನೇ ನೀಡಿದ್ದ ಗುರುವಿಗೆ 9ನೇ ಸ್ಥಾನದಲ್ಲಿದ್ದ ಶನಿಯೂ ಕೂಡ ಸಾಥ್ ನೀಡಿದ್ದ. ಹೀಗಾಗಿ ಜೀವನದಲ್ಲಿ ಇಳಿತಗಳನ್ನೇ ಕಂಡ ಮೀನ ರಾಶಿಯವರಿಗೀಗ ಶುಭ ಸಮಯ. [ಮೀನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮೊಟ್ಟ ಮೊದಲು ಹಣದ ಇಕ್ಕಟ್ಟಿನಲ್ಲಿ ಇದ್ದವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಾಯ ಸಿಗುವಂಥ ಸಾಧ್ಯತೆಗಳೇ ಹೆಚ್ಚು. ಉದಾಹರಣೆಗೆ ಬ್ಯಾಂಕಿನಲ್ಲಿ ಮತ್ತು ಸರಕಾರಗಳಿಂದ ಆರ್ಥಿಕ ಸಹಾಯ ಪಡೆದುಕೊಳ್ಳಬೇಕೆಂದವರು ಈಗ ಚೆಕ್ ಪಡೆದುಕೊಳ್ಳಬಹುದು. ಏಕೆಂದರೆ ಅಂಥ ಸಂದರ್ಭಗಳು ಈಗ ಸಲೀಸಾಗಿ ಕಾರ್ಯಾನೂಕೂಲವಾಗುತ್ತವೆ.
ಮೀನ ರಾಶಿಯವರಿಗೆ ಗುರುವು ಯಾವ ರೀತಿ ಸಹಾಯ ಮಾಡಲಿದ್ದಾನೆ, ಈ ರಾಶಿಯವರು ಯಾವ ರೀತಿ ಲಾಭ ಪಡೆಯಬಹುದು, ಏನನ್ನು ಮಾಡಿದರೆ ಕಷ್ಟದ ದಿನಗಳನ್ನು ದೂರ ತಳ್ಳಬಹುದು, ಏನನ್ನು ಕಟ್ಟುನಿಟ್ಟಾಗಿ ಮಾಡಬಾರದು ಎಂಬುದನ್ನು ಮುಂದೆ ವಿವರಿಸಲಾಗಿದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

ಮನಸ್ಸಿನ ನೆಮ್ಮದಿಗಾಗಿ ಭಕ್ತಿ, ಆಧ್ಯಾತ್ಮ
ದೇಹಾರೋಗ್ಯದಲ್ಲಿ ಹೆಚ್ಚಿನ ಪ್ರಮಾಣದ ಹುಮ್ಮಸ್ಸು ಬಂದು ದೈವಭಕ್ತಿಯೆಡೆಗೆ ಮನಸ್ಸು ಮಾಡಿ ಆಧ್ಯಾತ್ಮದ ಕಡೆಗೂ ಗಮನ ಕೊಟ್ಟವರಿಗೆ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಜೊತೆಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗ ಅನುಕೂಲಕರ ಸಮಯ. ಮತ್ತು ಒಳ್ಳೆಯ ನಿರ್ಧಾರಗಳೆ ಜೀವನದಲ್ಲಿ ಮುಂದಿನ ಏಳ್ಗೆಗೆ ಸಹಾಯ ಮತ್ತು ಸಹಕಾರಿಯಾಗುತ್ತವೆ ಮೀನ ರಾಶಿಯವರಿಗೆ.

ಈ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿ
ಅರಿಷಿಣ ಕೊಂಬು ಕಟ್ಟಿಕೊಳ್ಳುವುದು ಯಾವಾಗ ಎಂದು ಮನಸ್ಸಿಗೆ ಹಚ್ಚಿಕೊಂಡು ಕುಳಿತವರು ಈ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿ. ಏಕೆಂದರೆ ಗುರುಬಲ ಬಂದಿದೆ ಹಣಬಲನೂ ಬರುತ್ತದೆ. ಸಂಸಾರ ಸುಖವನ್ನೂ ಅನುಭವಿಸುವ ಯೋಗವಿದು ಮೀನದವರಿಗೆ.

ಶ್ರೀರಾಮನಂಥ ಮುದ್ದಾದ ಮಗು ನಿರೀಕ್ಷಿಸಿ
ಮದುವೆಯಾಗಿ ತೊಟ್ಟಿಲು ತೂಗಲು ಕಾಯುತ್ತಿರುವವರು ಈಗ ತೊಟ್ಟಿಲಿಡಲು ಜಾಗೆ ಗುರ್ತಿಸಿಕೊಳ್ಳಿ. ಗುರು ಸಂತಾನಕಾರಕನಾಗಿರುವುದರಿಂದ ಶ್ರೀರಾಮನಂಥ ಮಗು ಹುಟ್ಟಲಿ ಎಂದು ಹರಕೆ ಹೊತ್ತವರಿಗೆ ತೊಟ್ಟಿಲು ತೂಗುವ ಭಾಗ್ಯ. ಇದಕ್ಕಾಗಿ ಮೀನ ರಾಶಿಯವರು ಸಂತಸಪಟ್ಟುಕೊಳ್ಳಬೇಕು. ಕಡೆಗೂ ದೇವರು ಗುರುವಿನ ರೂಪದಲ್ಲಿ ಬಂದು ಹರಕೆ ತೀರಿಸಿದನಲ್ಲ ಎಂದು.

ಹೆಚ್ಚಿನ ಲಾಭಕ್ಕಾಗಿ ಸ್ಟಾಕ್ ತರಿಸಿಟ್ಟುಕೊಳ್ಳಿ
ವ್ಯವಹಾರದಲ್ಲಿ ಇದ್ದವರು ಹೆಚ್ಚಿನ ಪ್ರಮಾಣದ ಲಾಭದ ಮುಖವನ್ನು ನೋಡುವದರಿಂದ ಸ್ಟಾಕ್ ತರಿಸಿಕೊಳ್ಳಬಹುದು. ಆದರೆ ಎಲ್ಲವೂ ಒಂದನೇ ನಂಬರ್ ನಿಂದ ವ್ಯವಹಾರ ಮಾಡಬೇಡಿ. 2ನೇ ನಂಬರ್ ನಿಂದ ಮಾಡಿದರೆ, ಗುರುವು ಫಲ ನೀಡಲು ಬರುವುದೇ ಇಲ್ಲ. ಏಕೆಂದರೆ ಶನಿ ಬೇರೆ ಮೀನ ರಾಶಿಯವರಿಗೆ ನವಮ ಸ್ಥಾನದಲ್ಲಿದ್ದು ಎಲ್ಲವೂ ನೋಡುತ್ತಿರುತ್ತಾನೆ. ಜೊತೆಗೆ ಅವನು ಏನೂ ಶುಭ ಫಲಗಳನ್ನು ನೀಡುತ್ತಿಲ್ಲ. ಹೀಗಿದ್ದಾಗ ಗುರು ಬಂದು ಶುಭಫಲ ನೀಡುವಾಗ ಅನ್ಯಾಯದ ಕೆಲಸ ಮಾಡಿಕೊಂಡು ಕೆಲಸ ಕೆಡಿಸಿಕೊಳ್ಳಬಾರದು.

ಕಷ್ಟ ತಡೆದುಕೊಳ್ಳುವ ಶಕ್ತಿ ಗುರು ನೀಡಲಿದ್ದಾನೆ
ಕೌಟುಂಬಿಕ ತೊಂದರೆಗಳನ್ನು ಈಗಾಗಲೇ ಶನಿ ನೀಡುತ್ತಿದ್ದಾನೆ. ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಈಗ ಗುರುವು ಕೊಡಲಿದ್ದಾನೆ. ಹೀಗಾಗಿ ಗುರುಬಲದ ಸಮಯದಲ್ಲಿ ವ್ಯಾಪಾರಿಗಳು ಅಪ್ಪಿತಪ್ಪಿಯೂ ಸರಕಾರಕ್ಕೆ ಮತ್ತು ಜನಕ್ಕೆ ಮೋಸ ಮಾಡುವಂತಹ ವ್ಯವಹಾರ ಮಾಡುವಂತಿಲ್ಲ.

ಗುರು ಒಳಿತುಕೆಡಕನ್ನು ಗಮನಿಸುತ್ತಿರುತ್ತಾನೆ
ಸರಕಾರಿ ಸೇವೆಯಲ್ಲಿರುವ ಮೀನ ರಾಶಿಯವರಿಗೆ ಇಷ್ಟು ದಿನ ತೊಂದರೆ ಇತ್ತು ಎಂದು ಟೇಬಲ್ ಕೆಳಗೆ ಕೈ ಚಾಚುತ್ತಿದ್ದರೆ ಈಗ ಕೈ ಬಿಡಬೇಕು. ಇಲ್ಲಾಂದ್ರೆ ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಗುರುಬಲ ಕೇವಲ ಒಳ್ಳೆಯದಷ್ಟನ್ನೇ ಮಾಡಿದರೂ, ಕೇಡು ಮಾಡಿದ್ದನ್ನು, ಕೆಟ್ಟ ಗುಣಗಳನ್ನು ಗಮನಿಸಿ ಒಳ್ಳೆಯದನ್ನು ಮಾಡಲು ಹಿಂದೆ ಮುಂದೆ ನೋಡುತ್ತದೆ.

ಹಣ ದುಪ್ಪಟ್ಟು ಮಾಡಲು ಸ್ವಲ್ಪ ಯೋಚಿಸಿ
ಹಣದ ಹರಿವು ಸ್ವಲ್ಪ ಹೆಚ್ಚಳವಾಗುವುದರಿಂದ ಹಣವನ್ನು ಸಂಗ್ರಹಿಸಿಕೊಳ್ಳಬೇಕು. ಅಥವಾ ಒಳ್ಳೆಯ ವ್ಯವಹಾರದಲ್ಲಿ ತೊಡಗಿಸಿಕೊಂಡು ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಮೀನ ರಾಶಿಯವರು ಈಗ.

ಕೆಂಗಣ್ಣು ಬೀರುತ್ತಿದ್ದವರೂ ಮುಗುಳ್ನಗೆ ಬೀರುತ್ತಾರೆ
ಈ ರಾಶಿಯ ಉದ್ಯೋಗಸ್ಥರಿಗೆ ಈಗ ಶುಭ ಸಮಯ. ಕಚೇರಿಯಲ್ಲಿ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಈಗ ಸಲುಗೆ, ಸ್ನೇಹ ಬೆಳೆಸಿಕೊಳ್ಳಬಹುದು. ಇಷ್ಟು ದಿನ ಕೆಂಗಣ್ಣಿನಿಂದ ನೋಡುತ್ತಿದ್ದವರು ಈಗ ಮುಗುಳ್ನಗೆ ಬೀರುತ್ತ ಮಾತನಾಡಿಸಲಾರಂಭಿಸುತ್ತಾರೆ. ಇನ್ನು ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಒಬ್ಬರೇ ಕುಳಿತುಕೊಂಡು ಚೆಸ್ ಆಟ ಆಡಿ.

ಗುರುಬಲದ ಫಲವನ್ನು ಸಾಮೇರಿಗೆ ತಿಳಿಸಿ
ಕೆಲವರು ಶನಿಯ ಪ್ರಭಾವದಿಂದ ದೇಹಕ್ಕೆ ತೊಂದರೆ ಕೊಡುವುದಿಲ್ಲವಾದರೂ ಮಾನಸಿಕ ತೊಂದರೆ ಕೊಡಲು ಆರಂಭಿಸುತ್ತಾರೆ. ಒಟ್ಟಿನಲ್ಲಿ ಗುರುಬಲದಿಂದ ಸಂತಸಗೊಂಡಿರುವ ಮೀನ ರಾಶಿಯವರು ಇನ್ನೊಂದು ವರ್ಷ ಗುರುಬಲದ ಫಲವನ್ನು ಓದಿಕೊಂಡು ಪಡೆದುಕೊಂಡ ಫಲಗಳನ್ನು ನೆನಪಿಟ್ಟು ತಿಳಿಸಿ ಸಾಮೇರಿಗೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications