ಮನೆಯಲ್ಲಿ ಹಾಗಲಕಾಯಿ ಬೆಳೆಸುತ್ತಿದ್ದೀರಾ? ಹಾಗಾದರೆ 4 ವಾಸ್ತು ನಿಯಮಗಳು ತಿಳಿಯಿರಿ

ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ ನಾವು ಮನೆಯಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಅನೇಕ ಜನರು ಮನೆಯಲ್ಲಿ ಸ್ಥಳವಕಾಶ ಸಿಕ್ಕಾಗಲೆಲ್ಲಾ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಆದಾಗ್ಯೂ ಸಸ್ಯಗಳನ್ನು ನಾವು ಆರಿಸುವಾಗ ಕೇವಲ ಆರೋಗ್ಯದ ಪ್ರಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸಸ್ಯಗಳನ್ನು ಬೆಳೆಸುವುದು ಮಾತ್ರವಲ್ಲ ವಾಸ್ತು ಶಾಸ್ತ್ರದ ತತ್ವಗಳನ್ನುಸಹ ನಾವು ಪರಿಗಣಿಸಬೇಕಾಗುತ್ತದೆ ಎಂದು ತಜ್ಞರ ಸಲಹೆಯನ್ನು ನೀಡುತ್ತಾರೆ.

ನಿರ್ದಿಷ್ಟವಾಗಿ ಹೇಳುವುದಾದರೆ ನಾವು ಮನೆಯಲ್ಲಿ ಬೆಳೆಸುವ ಹಾಗಲಕಾಯಿ ಬಳ್ಳಿಯ ಬಗ್ಗೆ ಕೆಲವು ಆಸಕ್ತಿದಾಯಕ ವಾಸ್ತು ಮಾರ್ಗಸೂಚಿಗಳಿವೆ, ಅವು ಯಾವುವು ಎಂದು ತಿಳಿಯಲು ಮುಂದೆ ಓದಿ.

Growing Bitter Gourd at Home

ಹಾಗಲಕಾಯಿಯ ಬಗ್ಗೆ ನಾವು ಯೋಚಿಸಿದಾಗ ಮೊದಲು ಮನಸ್ಸಿಗೆ ಬರುವ ವಿಷಯವೆಂದರೆ ಅದರ ಕಹಿ. ಆದರೂ ಅದರಿಂದ ನಮ್ಮ ಆರೋಗ್ಯಕ್ಕಾಗಿ ಇದು ಅಮೃತವನ್ನು ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಜ್ಯೋತಿಷ್ಯ ಮತ್ತು ವಾಸ್ತು ಸಲಹೆಗಾರರ ​​ಸಲಹೆಯ ಪ್ರಕಾರ ಈ ಸಸ್ಯವನ್ನು ಮನೆಯೊಳಗೆ ಬೆಳೆಸುವ ನಿರ್ದಿಷ್ಟ ಸ್ಥಳದ ಬಗ್ಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕೆಲವು ರೀತಿಯ ಬಳ್ಳಿ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ರೀತಿಯ ಬಳ್ಳಿ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಮನೆಯ ಗೋಡೆಗಳ ಉದ್ದಕ್ಕೂ ಹಾಗಲಕಾಯಿ ಬಳ್ಳಿಗಳು ಹರಿದಾಡಲು ಬಿಡುವುದು ಅಥವಾ ಮನೆಯೊಳಗೆ ಅವುಗಳನ್ನು ಬೆಳೆಸುವುದು ವಿವಿಧ ತೊಂದರೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಹಣವನ್ನು ಗಳಿಸುವುದಾಗಲಿ ಅಥವಾ ಕೈಯಲ್ಲಿ ಹಣ ಉಳಿಯದಿರುವುದು ಅಥವಾ ಅನಗತ್ಯ ವೆಚ್ಚಗಳು ಹೆಚ್ಚಾಗುವುದು ಮುಂತಾದ ಆರ್ಥಿಕ ತೊಂದರೆಗಳು ಉಂಟಾಗಬಹುದು.

ಶಾಂತಿ ಮತ್ತು ನೆಮ್ಮದಿ ಕೊರತೆ

ಕ್ಷುಲ್ಲಕ ವಿಷಯಗಳಿಗೆ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು ಮತ್ತು ಮನೆಯೊಳಗಿನ ಶಾಂತಿ ಮತ್ತು ನೆಮ್ಮದಿ ಕಡಿಮೆಯಾಗಬಹುದು. ಮನೆಯ ಸದಸ್ಯರು ಗೌರವ ಅಥವಾ ಘನತೆಯನ್ನು ಕಳೆದುಕೊಳ್ಳಬಹುದು ಅಥವಾ ಇತರರ ಸಮ್ಮುಖದಲ್ಲಿ ಮುಜುಗರದ ಸಂದರ್ಭಗಳನ್ನು ಎದುರಿಸಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ಪ್ರಕಾರ ಸರಿಯಾದ ದಿಕ್ಕು

ಆದಾಗ್ಯೂ, ಹಾಗಲಕಾಯಿ ಬಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸುವ ಅಗತ್ಯವಿಲ್ಲ. ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ಅದು ಯಾವುದೇ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುವುದಿಲ್ಲ. ಹಾಗಲಕಾಯಿ ಬಳ್ಳಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ನೆಡಬಾರದು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಈ ಸಸ್ಯವನ್ನು ಮನೆಯ ಹೊರ ಭಾಗದಲ್ಲಿ, ವಿಶೇಷವಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳಲ್ಲಿ ಬೆಳೆಸುವುದು ಹೆಚ್ಚು ಪ್ರಯೋಜನಕಾರಿ.

ಉತ್ತಮ ಆರೋಗ್ಯ ಮತ್ತು ಸಕಾರಾತ್ಮಕ ವಾಸ್ತು

ಬಳ್ಳಿಗಳು ಮನೆಯ ಮುಖ್ಯ ಗೋಡೆಗಳಿಗೆ ನೇರವಾಗಿ ಅಂಟಿಕೊಳ್ಳದಂತೆ, ಬದಲಿಗೆ ಸ್ವಲ್ಪ ದೂರದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ವಾಸ್ತು ತತ್ವಗಳನ್ನು ಪಾಲಿಸುವ ಮೂಲಕ ಮತ್ತು ಸೂಕ್ತ ಸ್ಥಳದಲ್ಲಿ ಹಾಗಲಕಾಯಿಯನ್ನು ಬೆಳೆಸುವ ಮೂಲಕ, ನಿಮ್ಮ ಮನೆಗೆ ಉತ್ತಮ ಆರೋಗ್ಯ ಮತ್ತು ಸಕಾರಾತ್ಮಕ ವಾಸ್ತು ಎರಡನ್ನೂ ಖಚಿತಪಡಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+