Ganesh Chaturthi 2026: ಗಣೇಶನ ಕೃಪೆಯಿಂದ ಈ ರಾಶಿಯವರಿಗೆ ರಾಜಯೋಗ; ಸಂಪತ್ತು ವೃದ್ಧಿ, ವೃತ್ತಿಯಲ್ಲಿ ಮಹತ್ವದ ಏರಿಕೆ!
Ganesh Chaturthi 2026 : ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ನಾವು ವಿನಾಯಕ ಚತುರ್ಥಿಯನ್ನು ಆಚರಿಸುತ್ತೇವೆ. ಈ ವರ್ಷ, ಗಣೇಶ ಚತುರ್ಥಿ ಸೆಪ್ಟೆಂಬರ್ 14 ರ ಸೋಮವಾರ ಬೀಳುತ್ತದೆ. ಸೋಮವಾರ ಶಿವನಿಗೆ ಅತ್ಯಂತ ಶುಭ ದಿನ ಎನ್ನುವುದು ಗೊತ್ತಿರುವುದೇ. ಇದೇ ದಿನ ಗಣೇಶ ಮತ್ತು ಶಿವನನ್ನು ಭಕ್ತಿಯಿಂದ ಪೂಜಿಸುವುದು ಇನ್ನೂ ವಿಶೇಷ ಎನ್ನುತ್ತದೆ ಜ್ಯೋತಿಷ್ಯ. ಈ ವರ್ಷ ಗಣೇಶ ಚತುರ್ಥಿಯ ಸಮಯದಲ್ಲಿ ಕೆಲವೊಂದು ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯಿಂದ ಶುಭ ಯೋಗಗಳು ರೂಪುಗೊಳ್ತಾ ಇದೆ. ಇದು ಕೆಲವು ರಾಶಿಯವರಿಗೆ ಅನುಕೂಲಕರ ಫಲಗಳನ್ನು ನೀಡುತ್ತದೆ.
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಬ್ರಹ್ಮ ಯೋಗ, ಇಂದ್ರ ಯೋಗ ಮತ್ತು ಕೆಲವು ರಾಜ ಯೋಗಗಳು ನಿರ್ಮಾಣವಾಗುತ್ತಿದೆ. ಹೀಗಾಗಿ ಗಣಪತಿಯ ಆಶೀರ್ವಾದದ ಜೊತೆಗೆ ಕೆಲವು ರಾಶಿಯವರ ಮೇಲೆ ಶಿವ ಮತ್ತು ಲಕ್ಷ್ಮೀಯ ಅನುಗ್ರಹ ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗ, ಆರ್ಥಿಕ ಪರಿಸ್ಥಿತಿ, ಕುಟುಂಬ ಜೀವನ ಮತ್ತು ವೃತ್ತಿಜೀವನದಂತಹ ವಿಷಯಗಳಲ್ಲಿ ಸಕಾರಾತ್ಮಕವಾಗಿ ಬದಲಾವಣೆಗಳಾಗುವುದು.

ಮೇಷ ರಾಶಿ (Aries)
ಈ ವರ್ಷದ ಗಣೇಶ ಚತುರ್ಥಿಯಿಂದ ಮೇಷ ರಾಶಿಯವರ ಜೀವನದ ದಿಕ್ಕು ಬದಲಾಗುವುದು. ಎಷ್ಟೇ ಪ್ರಯತ್ನಪಟ್ಟರೂ ಮುಗಿಸುವುದಕ್ಕೆ ಸಾಧ್ಯವಾಗದೇ ಉಳಿದಿರುವ ಕೆಲಸಗಳು ಈ ಅವಧಿಯಲ್ಲಿ ಒಂದೊಂದಾಗಿ ಫಲ ನೀಡುವುದು. ಉದ್ಯೋಗಿಗಳಿಗೆ ಬಡ್ತಿ ಸಿಗುವುದು ಅಥವಾ ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ಸಿಗಬಹುದು. ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದವರಿಗೆ ಪರಿಹಾರ ಸಿಗಬಹುದು. ಬಹಳ ದಿನಗಳಿಂದ ಕೈ ಸೇರದೆ ಹೊರಗೇ ಉಳಿದಿರುವ ಹಣ ಈ ಸಮಯದಲ್ಲಿ ಮತ್ತೆ ನಿಮ್ಮ ಕೈ ಸೇರುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಗಳಿವೆ.
ಮಿಥುನ ರಾಶಿ (Gemini)
ಗಣೇಶ ಚತುರ್ಥಿ ಅವಧಿಯು ಮಿಥುನ ರಾಶಿಯವರಿಗೂ ವಿಶೇಷವಾಗಿರುವುದು. ಉದ್ಯೋಗಿಗಳು ತಮ್ಮ ಇಷ್ಟದ ಊರಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ತಾವು ಮಾಡುತ್ತಿರುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವರು. ವೈಯಕ್ತಿಕ ಜೀವನದಲ್ಲೂ ಸಂತೋಷ ಹೆಚ್ಚುವುದು. ತಮ್ಮ ಸಂಗಾತಿಯಿಂದ ಉತ್ತಮ ಸಹಕಾರ ಮತ್ತು ಭಾವನಾತ್ಮಕ ಬೆಂಬಲ ಸಿಗುವುದು. ದೀರ್ಘಕಾಲದವರೆಗೆ ಅವರನ್ನು ಕಾಡುತ್ತಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ದೂರದ ಊರಿಗೆ ಪ್ರವಾಸ ಬೆಳೆಸುವ ಸಾಧ್ಯತೆ ಇದೆ. ಈ ಪ್ರವಾಸ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳಿಗೆ ಬಾಗಿಲು ತೆರೆಯುವುದು. ಗುರಿಗಳನ್ನು ಸಾಧಿಸುವತ್ತ ಹೆಜ್ಜೆ ಇಡುವಿರಿ. ಪ್ರವಾಸದ ಸಮಯದಲ್ಲಿ ಆಗುವ ಹೊಸ ಪರಿಚಯ ಲಾಭವನ್ನು ತಂದು ಕೊಡುವುದು. ಭವಿಷ್ಯದಲ್ಲಿಯೂ ಇದು ಪ್ರಯೋಜನಕಾರಿಯಾಗಿರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕುಟುಂಬದಲ್ಲಿಯೂ ಸಂತೋಷದ ವಾತಾವರಣವಿರುವುದು.
Ganesh Chaturthi 2026:ತುಲಾ ರಾಶಿ (Libra)
ಈ ಗಣೇಶ ಚತುರ್ಥಿಯ ನಂತರ ತುಲಾ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗುವುದು. ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಹೆಚ್ಚುವರಿ ಆದಾಯವನ್ನು ಗಳಿಸುವ ಮಾರ್ಗ ತೆರೆದುಕೊಳ್ಳುವುದು. ಸ್ವಂತ ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಸಮಯ ಅನುಕೂಲಕರವಾಗಿರುವುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ನಿರೀಕ್ಷಿತ ಲಾಭವಾಗುವ ಸಾಧ್ಯತೆಯಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಬಲಪಡಿಸುವುದು. ಬಾಕಿ ಇರುವ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯವಾಗುವುದು.
Ganesh Chaturthi 2026:ಧನು ರಾಶಿ (Sagitarius)
ಗಣಪತಿ ಆಶೀರ್ವಾದದಿಂದ ಧನು ರಾಶಿಯವರಿಗೆ ಶುಭಫಲವೇ ಸಿಗುವುದು. ಕಷ್ಟಪಟ್ಟು ದುಡಿದವರಿಗೆ ತಕ್ಕ ಪ್ರತಿಫಲ ಸಿಗುವುದು. ಉದ್ಯಮಿಗಳ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಆದಾಯದಲ್ಲಿಯೂ ಏರಿಕೆಯಾಗುವುದು. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಮತ್ತು ಮನ್ನಣೆ ಸಿಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವುದು.
ಒಟ್ಟಾರೆಯಾಗಿ, ವಿನಾಯಕ ಚತುರ್ಥಿಯ ನಂತರ ಈ ಐದು ರಾಶಿಯವರ ಸಮಯ ಅದ್ಭುತವಾಗಿರಲಿದೆ.


Click it and Unblock the Notifications
