Gajakesari Rajayoga: ಅಕ್ಟೋಬರ್ ಆರಂಭದಲ್ಲೇ ಗಜಕೇಸರಿ ರಾಜಯೋಗ; ಈ ರಾಶಿಯವರಿಗೆ ಹರಿದು ಬರಲಿದೆ ಸಿರಿ-ಸಂಪತ್ತು!
Gajakesari Rajayoga: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಅಕ್ಟೋಬರ್ ಬಹಳ ವಿಶೇಷವಾಗಿರಲಿದೆ. ಅಕ್ಟೋಬರ್ ಆರಂಭದಲ್ಲಿಯೇ ಅಂದರೆ ಮೊದಲ ವಾರದಲ್ಲಿಯೇ ಶುಭ ಯೋಗವೊಂದು ನಿರ್ಮಾಣವಾಗಲಿದೆ. ಚಂದ್ರನು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕರ್ಕಾಟಕ ರಾಶಿಯಲ್ಲಿ ಈಗಾಗಲೇ ಗುರು ಸಂಚಾರ ಮಾಡುತ್ತಿದ್ದಾನೆ. ಹೀಗಾಗಿ ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಗವಾಗಲಿದೆ. ಈ ಎರಡೂ ಗ್ರಹಗಳ ಸಂಯೋಗ ಅತ್ಯಂತ ಶುಭಯೋಗವಾದ ಗಜಕೇಸರಿ ರಾಜಯೋಗ ರೂಪುಗೊಳ್ಳುವುದಕ್ಕೆ ಕಾರಣವಾಗಲಿದೆ.
ಅಕ್ಟೋಬರ್ 4ರ ಸಂಜೆ 6.31 ರಿಂದ ಈ ರಾಜಯೋಗವು ಪ್ರಾರಂಭವಾಗಲಿದೆ. ಜ್ಞಾನ, ಗೌರವ, ನಾಯಕತ್ವ ಹಾಗೂ ಸಂಪತ್ತಿನ ಸಂಕೇತವಾಗಿರುವ ಈ ಯೋಗವು ನಾಲ್ಕು ರಾಶಿಯವರ ಮೇಲೆ ಅತ್ಯಂತ ಧನಾತ್ಮಕ ಪರಿಣಾಮ ಬೀರಲಿದೆ.

Gajakesari Rajayoga: ಯಾವ ರಾಶಿಗೆ ಏನು ಲಾಭ ?
ಮೇಷ ರಾಶಿ (Aries)
ಅದೃಷ್ಟದ ಬಾಗಿಲು ತೆರೆಯುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವುದು. ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭವಾಗುವುದು. ಹೊಸ ಜವಾಬ್ದಾರಿ ಅಥವಾ ಬಡ್ತಿ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು. ವ್ಯವಹಾರ ಮಾಡುವವರಿಗೆ ಹೊಸ ಯೋಜನೆಗಳನ್ನು ಆರಂಭಿಸಲು ಅವಕಾಶ ಸಿಗುವುದು. ಹೊಸ ಕೆಲಸ ಶುರು ಮಾಡುವುದಕ್ಕೆ ಇದು ಸರಿಯಾದ ಸಮಯ. ಆದಾಯ ಹೆಚ್ಚಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಪ್ರಮುಖ ನಿರ್ಧಾರಗಳನ್ನು ಈ ಅವಧಿಯಲ್ಲಿ ತೆಗೆದುಕೊಳ್ಳಬಹುದು. ವಿದೇಶ ಪ್ರಯಾಣದ ಯೋಗವಿದೆ.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಧನ ಲಾಭವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಹಠಾತ್ ಆಗಿ ಹಣ ಹರಿದು ಬರುವುದು. ಹೊರಗೆ ಉಳಿದಿರುವ ಹಣ ಕೈ ಸೇರುವುದು. ಆರ್ಥಿಕವಾಗಿ ಈ ಸಮಯ ತುಂಬಾ ಅನುಕೂಲಕರವಾಗಿರಲಿದೆ. ಅರ್ಧಕ್ಕೆ ನಿಂತಿರುವ ಕೆಲಸ ಚುರುಕು ಪಡೆಯುವುದು. ಉಳಿತಾಯಕ್ಕೆ ಹೆಚ್ಚಿನ ಅವಕಾಶ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಮೂಲಕ ಆದಾಐ ಹೆಚ್ಚಾಗುವುದು. ವ್ಯಾಪಾರದಲ್ಲಿಯೂ ಲಾಭವಾಗುವುದು. ಹೊಸ ಸಂಪರ್ಕಗಳಿಂದ ಹೆಚ್ಚಿನ ಪ್ರಗತಿಗೆ ಅವಕಾಶ ಸಿಗುವುದು. ನಿಮ್ಮ ಮಾತಿಗೆ ಮನ್ನಣೆ ಸಿಗುವುದು.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯಲ್ಲಿಯೇ ಗಜ ಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಹಾಗಾಗಿ ಈ ರಾಶಿಯವರ ಆತ್ಮವಿಶ್ವಾಸ ದುಪ್ಪಟ್ಟಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಹೊಸ ಕೆಲಸ ಹುಡುಕುತ್ತಿರುವವರಿಗೆ ಮನಸ್ಸಿನ ಇಚ್ಛೆಯಂತೆ ಹೊಸ ಕೆಲಸ ಸಿಗುವುದು. ಜವಾಬ್ದಾರಿಗಳು ಹೆಚ್ಚಾಗುವುದು. ಮುಂದಿನ ದಿನಗಳಲ್ಲಿ ಇದು ದೊಡ್ಡ ಮಟ್ಟದ ಲಾಭಕ್ಕೆ ಕಾರಣವಾಗುವುದು. ಕುಟುಂಬದಲ್ಲಿ ಸುಖ-ಶಾಂತಿ ನೆಲೆಯಾಗುವುದು. ಆರ್ಥಿಕ ಸಮಸ್ಯೆ ದೂರವಾಗುವುದು. ಜಮೀನು ಅಥವಾ ಆಸ್ತಿ-ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಸಿಗುವುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತಸದ ಸಮಯ ಕಳೆಯುವ ಅವಕಾಶ ಸಿಗುವುದು. ಸಂಬಂಧಗಳಲ್ಲಿನ ಮನಸ್ತಾಪ ಕಡಿಮೆಯಾಗುವುದು.
Gajakesari Rajayoga: ಕುಂಭ ರಾಶಿ (Aquarius)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಸಮಯ ಅನುಕೂಲಕರವಾಗಿರಲಿದೆ. ಹೊಸ ಕೆಲಸ ಸಿಗುವುದು. ಒಳ್ಳೆಯ ಕಂಪನಿಯಿಂದ ಒಳ್ಲೆಯ ಆಫರ್ ಸಿಗುವುದು. ಹಣದ ಸಮಸ್ಯೆ ನೀಗುವುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಆರ್ಥಿಕ ಒತ್ತಡಗಳಿಂದ ಮುಕ್ತಿ ಸಿಗುವುದು. ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಬಹಳ ಸಮಯದಿಂದ ಕಾಡುತ್ತಿದ್ದ ಮಾನಸಿಕ ಒತ್ತಡ ಕಡಿಮೆಯಾಗುವುದು. ನೀವು ಮಾಡುವ ಪ್ರತೀ ಕೆಲಸಕ್ಕೂ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಯೋಜನೆಗಳತ್ತ ಗಮನ ಹರಿಸಿದರೆ ಉತ್ತಮ ಯಶಸ್ಸು ಸಿಗುವುದು.


Click it and Unblock the Notifications
