DK Shivakumar Astrology : ಕನಕಪುರದ ಬಂಡೆಗೆ ಸರಿಸಾಟಿ ಯಾರು? ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ಹೇಗಿದೆ ಗೊತ್ತಾ?

ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಮುಖರು. ಈ ಬಾರಿ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಜಯ ಸಾಧಿಸುವರೇ ಎನ್ನುವ ಪ್ರಶ್ನೆಗೆ ಅವರ ಜನ್ಮ ಕುಂಡಲಿ ಆಧಾರದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಹಾಗಾದರೆ ಡಿಕೆ ಶಿವಕುಮಾರ್ ಜನ್ಮ ಕುಂಡಲಿ ಏನು ಹೇಳುತ್ತದೆ?

ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ದೇಶದ ಚಿತ್ತ ಹರಿದಿದೆ. ರಾಜ್ಯದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಿದ್ಧವಾಗಿರುವ ಪಕ್ಷ ಹಾಗೂ ವ್ಯಕ್ತಿ ಅಂದರೆ ಸಿದ್ದರಾಮಯ್ಯ ಹೊರತುಪಡಿಸಿದರೆ ಡಿಕೆ ಶಿವಕುಮಾರ್ ಪ್ರಮುಖರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರ್ದೇಶನದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ ಕನಕಪುರದಲ್ಲೂ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.

DK Shivakumar Astrology Predictions for Karnataka Assembly Election 2023

ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ

ದೊಡ್ಡಾಅಲಹಳ್ಳಿಯಲ್ಲಿ 15 ಮೇ 1962ರಂದು ಡಿಕೆ ಶಿವಕುಮಾರ್ ಜನಿಸಿದರು. ಇವರು ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ಆಧಾರದ ಮೇಲೆ ರಾಜಕೀಯ ಭವಿಷ್ಯ ಹೇಗಿದೆ ನೋಡೋಣ.

ಮೇಷ ಡಿಕೆ ಶಿವಕುಮಾರ್ ಅವರ ರಾಶಿಯಾಗಿದೆ. ಮೇಷ ರಾಶಿಯ ಎರಡನೇ ಮನೆಯಲ್ಲಿ ಸೂರ್ಯ, ಚಂದ್ರ ಹಾಗೂ ಬುಧ ಗ್ರಹಗಳಿವೆ. ನಾಲ್ಕನೇ ಮನೆಯಲ್ಲಿ ಮಂಗಳ ಗ್ರಹ, ಐದನೇ ಮನೆಯಲ್ಲಿ ರಾಹು, ಹತ್ತನೇ ಮನೆಯಲ್ಲಿ ಗುರು ಹಾಗೂ ಶನಿ ಇದೆ. ಹನ್ನೊಂದನೆ ಮನೆಯಲ್ಲಿ ಕೇತು ಹಾಗೂ ಶುಕ್ರ ಗ್ರಹವಿದೆ.

DK Shivakumar Astrology Predictions for Karnataka Assembly Election 2023

ಕನಕಪುರದ ಬಂಡೆಗೆ ಸರಿಸಾಟಿ ಯಾರು?

ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ಪ್ರಕಾರ, ಪ್ರಸ್ತುತ ಶನಿಯ ಮಹಾದಶ ಶುಕ್ರ ಗ್ರಹದ ಅಂತರದಶ ನಡೆಯುತ್ತಿದೆ.

ಮೇಷ ರಾಶಿಯ ಹತ್ತನೇ ಮನೆಯಲ್ಲಿ ಶನಿ ನೆಲೆಸಿದೆ. ಶನಿಯ ಈ ಸ್ಥಾನ ತುಂಬಾ ಉತ್ತಮವಾಗಿದೆ. ಇದರೊಂದಿಗೆ ಹನ್ನೊಂದನೆ ಮನೆಯಲ್ಲಿ ಸ್ಥಾನ ಪಡೆದಿರುವ ಶುಕ್ರ ಗ್ರಹ ಉತ್ತಮ ಫಲಿತಾಂಶವನ್ನು ನೀಡಲಿದೆ. ಶನಿಯ ಮಹಾದಶ, ಶುಕ್ರ ಗ್ರಹದ ಅಂತರದಶ ನೋಡುವುದಾದರೆ ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಪ್ರಬಲವಾಗಿದೆ.

DK Shivakumar Astrology Predictions for Karnataka Assembly Election 2023

ಶನಿಯ ಸ್ಥಾನದಿಂದ ಡಿಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಲಾಭ ಸಿಗಲಿದೆ. ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಚೆನ್ನಾಗಿದೆ. ಮಾತ್ರವಲ್ಲದೆ ಡಿಕೆ ಶಿವಕುಮಾರ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ ನಡೆಸಲಿದ್ದಾರೆ. ಈ ಚುನಾವಣೆ ಮುಂಬರುವ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ಬಿಜೆಪಿಗೆ ಪ್ರಬಲ ಸ್ಪರ್ಧಿ ಡಿಕೆ ಶಿವಕುಮಾರ್

ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಜಯ ಗಳಿಸಲಿದೆ ಎಂದು ತಿಳಿಯಲು ಆಯಾ ಪಕ್ಷದ ನಾಯಕರ ಜನ್ಮ ಕುಂಡಲಿ ಪ್ರಮುಖವಾಗಿದೆ. ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಇವರೆಲ್ಲರ ಜನ್ಮ ಕುಂಡಲಿ ಕೂಡ ಪಕ್ಷ ಗೆಲುವಿಗೆ ಮುಖ್ಯವಾಗಿದೆ. ಪಕ್ಷದ ಸ್ಥಿತಿ ಕೂಡ ಇದೇ ರೀತಿ ರೂಪಗೊಳ್ಳುತ್ತದೆ. ನಾಯಕರ ಅಥವಾ ಪಕ್ಷದ ಇನ್ನಿತರ ಜನಪ್ರತಿನಿಧಿಗಳ ಜನ್ಮ ಕುಂಡಲಿ ದೋಷಗಳಿದ್ದರೆ ಪಕ್ಷ ಮುಂಬರಲು ಕಷ್ಟವಾಗುತ್ತದೆ. ಹೀಗಾಗಿ ಈ ಬಾರಿ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.

ಡಿಕೆ ಶಿವಕುಮಾರ್ ಅವರ ಜನ್ಮ ಕುಂಡಲಿ ತುಂಬಾ ಚೆನ್ನಾಗಿದ್ದು ಬಿಜೆಪಿ ವಿರುದ್ಧ ಅವರು ಪ್ರಬಲ ಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಚುನಾವಣೆಯ ಬಳಿಕ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಮಟ್ಟದಲ್ಲಿ ಹೆಚ್ಚಿನ ಜವಬ್ದಾರಿಯನ್ನೂ ನೀಡುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳು ಇವೆ.

ರಾಜ್ಯ ವಿಧಾನಸಭಾ ಚುನಾವಣೆ 2023

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+