Diwali 2024 Remedies: ಇಂದು ರಾಶಿಗನುಸಾರ ಈ ಒಂದು ಕೆಲಸ ಮಾಡಿ ನಿಮ್ಮ ಜೇಬು ಎಂದಿಗೂ ಖಾಲಿಯಾಗುವುದಿಲ್ಲ...

ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳನ್ನು ಒಲಿಸಿಕೊಳ್ಳಲು ದೀಪಾವಳಿ ಬಹಳ ಮುಖ್ಯ. ದೀಪಾವಳಿಯ ದಿನದಂದು ನಿಮ್ಮ ರಾಶಿಯ ಪ್ರಕಾರ ನೀವು ಕೆಲವು ವಿಶೇಷ ಕೆಲಸಗಳನ್ನು ಮಾಡಿದರೆ, ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಮಾತ್ರವಲ್ಲದೆ ಗ್ರಹದೋಷಗಳು ಸಹ ಶಮನವಾಗುತ್ತವೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು ರಾಶಿವಾರು ಪರಿಹಾರಗಳನ್ನು ತಿಳಿಯೋಣ.

Diwali 2024 Remedies Donate worship according to zodiac signs on October 31

ಮೇಷ ರಾಶಿ

ಮೇಷ ರಾಶಿಯವರು ದೀಪಾವಳಿಯಂದು ಅಕ್ಕಿ ಮತ್ತು ಸಕ್ಕರೆಯನ್ನು ದಾನ ಮಾಡಿ. ಒಣ ತೆಂಗಿನಕಾಯಿಗೆ ಒಣ ಹಣ್ಣುಗಳೊಂದಿಗೆ ಸಕ್ಕರೆ ಬೆರೆಸಿ ಪ್ರಸಾದವಾಗಿ ನೀಡಿ. ಇದರಿಂದ ಆರ್ಥಿಕ ಲಾಭವಾಗುತ್ತದೆ. ಲಕ್ಷ್ಮಿ ಪೂಜೆಯ ಸಮಯದಲ್ಲಿ ಮಲ್ಲಿಗೆ ಹೂವು, ಜೇನು, ಕುಂಕುಮ, ಬೆಲ್ಲ, ಕಮಲವನ್ನಿಟ್ಟು ಪೂಜಿಸಿ. ಇದರಿಂದಾಗಿ ಮನೆಯಲ್ಲಿ ಸದಾ ಸಂಪತ್ತು ನೆಲೆಸಲಿದೆ.

Diwali 2024 Remedies Donate worship according to zodiac signs on October 31

ವೃಷಭ ರಾಶಿ

ವೃಷಭ ರಾಶಿಯವರು ದೀಪಾವಳಿಯಂದು ಗೋಮತಿ ಚಕ್ರವನ್ನು ಕೆಂಪು ಮತ್ತು ಬಿಳಿ ಬಟ್ಟಲಿನಲ್ಲಿ ಇಡಬೇಕು. ಅದನ್ನು ಪೂಜಿಸುವಾಗಿ ಹಣದೊಂದಿಗೆ ಇಡಿ. ಲಕ್ಷ್ಮಿಯನ್ನು ಪೂಜಿಸುವಾಗ ಕಮಲದ ಹೂವುಗಳು, ಕಪ್ಪು ಎಳ್ಳು, ಗುಲಾಬಿ ಹೂವು, ಕಮಲದ ಎಲೆಗಳು, ಕೆಂಪು ಕಬ್ಬು ಮತ್ತು ಅಕ್ಕಿಯನ್ನು ಇಟ್ಟು ಪೂಜಿಸಿ. ಇದರಿಂದಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

Diwali 2024 Remedies Donate worship according to zodiac signs on October 31

ಮಿಥುನ ರಾಶಿ

ದೀಪಾವಳಿಯಂದು ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ಬೆಲ್ಲವನ್ನು ಇರುವೆಗಳಿಗೆ ಅರ್ಪಿಸಿ. ದೀಪಾವಳಿ ಲಕ್ಷ್ಮಿ ಪೂಜೆಯ ಸಮಯದಲ್ಲಿ ಬಿಳಿ ಬಟ್ಟೆ, ಕಮಲ ಮತ್ತು ಮಲ್ಲಿಗೆ ಹೂವುಗಳು, ಧೂಪ ಮತ್ತು ಕಪ್ಪು ಎಳ್ಳುಗಳು ಇಡುವುದು ಮಂಗಳಕರವಾಗಿದೆ. ಹೀಗಾಗಿ ಹಣದ ಸಮಸ್ಯೆಗಳೇನೇ ಇರಲಿ ನಿಮ್ಮಂದು ದೂರವಾಗುತ್ತವೆ.

Diwali 2024 Remedies Donate worship according to zodiac signs on October 31

ಕಟಕ ರಾಶಿ

ದೀಪಾವಳಿಯಂದು ಕರ್ಕ ರಾಶಿಯ ಜನರು ತಮ್ಮ ಹಣದ ಸಮಸ್ಯೆಗಳನ್ನು ನಿವಾರಿಸಲು ದೈಹಿಕವಾಗಿ ಅಂಗವಿಕಲರು ಮತ್ತು ವಯಸ್ಸಾದವರಿಗೆ ಆಹಾರವನ್ನು ನೀಡಬೇಕು. ಲಕ್ಷ್ಮಿ ಪೂಜೆಯಲ್ಲಿ ಲಕ್ಷ್ಮಿಯನ್ನು ಜೇನು, ಅರಿಶಿಣ, ಕುಂಕುಮ, ಬೆಲ್ಲ ಮತ್ತು ದವಸ ಧಾನ್ಯಗಳು ಹಾಗೂ ಕಮಲದಿಂದ ಪೂಜಿಸಿ. ಇದರಿಂದ ಮಂಗಳವಾಗಲಿದೆ.

Diwali 2024 Remedies Donate worship according to zodiac signs on October 31

ಸಿಂಹ ರಾಶಿ

ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು, ದೀಪಾವಳಿಯಂದು ಅಂಗವಿಕಲರಿಗೆ ಆಹಾರವನ್ನು ನೀಡಿ. ಇದರಿಂದ ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ. ಲಕ್ಷ್ಮಿ ಪೂಜೆಯಲ್ಲಿ ಗುಲಾಬಿ ಮತ್ತು ಕೆಂಪು ಹೂವುಗಳು ಇರಲಿ. ಇದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಹೆಚ್ಚಿಸುತ್ತದೆ.

Diwali 2024 Remedies Donate worship according to zodiac signs on October 31

ಕನ್ಯಾ ರಾಶಿ

ದೀಪಾವಳಿಯಂದು ಕನ್ಯಾ ರಾಶಿಯ ಜನರು ಬೆಂಕಿಗೆ ತುಪ್ಪವನ್ನು ಅರ್ಪಿಸಬೇಕು. ಅಲ್ಲದೆ ಕೆಂಪು ಮೆಣಸಿನ ಬೀಜಗಳನ್ನು ಹೊಂದಿರುವ ನೀರನ್ನು ಸೂರ್ಯನಿಗೆ ಅರ್ಪಿಸಬೇಕು. ಲಕ್ಷ್ಮಿ ಪೂಜೆಯಲ್ಲಿ ಲಕ್ಷ್ಮಿಯನ್ನು ಮಲ್ಲಿಗೆ, ಜೇನು, ಕಮಲ ಇವುಗಳಿಂದ ಪೂಜಿಸುವುದರಿಂದ ಸುಖ ಸಿಗುತ್ತದೆ. ಮನೆಯಲ್ಲಿ ಶಾಂತಿ ಹಾಗೂ ಸಂಪತ್ತಿನಿಂದ ಕೂಡಿರುತ್ತದೆ.

Diwali 2024 Remedies Donate worship according to zodiac signs on October 31

ತುಲಾ ರಾಶಿ

ದೀಪಾವಳಿಯಂದು ತುಲಾ ರಾಶಿಯವರಿಗೆ ವಿಶೇಷ ಪರಿಹಾರವೆಂದರೆ 27 ಬಾದಾಮಿಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟು ಕತ್ತಲೆಯ ಸ್ಥಳದಲ್ಲಿ ಇರಿಸಿ. ಇದು ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಲಕ್ಷ್ಮಿಯನ್ನು ಪೂಜಿಸುವಾಗ ಶುಂಠಿ, ಕುಂಕುಮ, ಬೆಲ್ಲ, ಜೇನು ಅರ್ಪಿಸಿ. ಇದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಗಳು ಎದುರಾಗುವುದಿಲ್ಲ.

Diwali 2024 Remedies Donate worship according to zodiac signs on October 31

ವೃಶ್ಚಿಕ ರಾಶಿ

ದೀಪಾವಳಿಯಂದು ಸಂಪತ್ತು ಮತ್ತು ಪ್ರಗತಿಯನ್ನು ಪಡೆಯಲು, ವೃಶ್ಚಿಕ ರಾಶಿಯ ಜನರು ಕಪ್ಪು ಬೆಲ್ಲದ ಪುಡಿಯನ್ನು ಒಂದು ತಿಂಗಳ ಕಾಲ ಪ್ರತಿದಿನ ನೀರಿನಲ್ಲಿ ಹರಿಸಬೇಕು. ಲಕ್ಷ್ಮಿಯನ್ನು ಪೂಜಿಸುವಾಗ ಪಶ್ಚಿಮಕ್ಕೆ ಮುಖ ಮಾಡಿ ಪೂಜಿಸಬೇಕು ಇದರಿಂದ ಹಿಂದೆಂದೂ ಕಾಣದ ರೀತಿ ನೀವು ಬೆಳೆಯುವಿರಿ. ಮನೆಯಲ್ಲಿ ಸಂಪತ್ತಿನ ದೇವತೆ ಸದಾ ನೆಲೆಸಿರುತ್ತಾಳೆ.

Diwali 2024 Remedies Donate worship according to zodiac signs on October 31

ಧನು ರಾಶಿ

ದೀಪಾವಳಿಯಂದು ಧನು ರಾಶಿಯವರು ಆಲದ ಮರದ ಬುಡಕ್ಕೆ ಹಾಲನ್ನು ಅರ್ಪಿಸಿದರೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾರೆ. ಲಕ್ಷ್ಮಿಯನ್ನು ಪೂಜಿಸುವಾಗ ಕಮಲದ ಹೂವು, ಗುಲಾಬಿ ಹೂವು, ದಾಳಿಂಬೆ ಮತ್ತು ಬಿಳಿ ಎಳ್ಳುಗಳಿಂದ ಪೂಜಿಸುವುದರಿಂದ ಸಂತೋಷ ಹೆಚ್ಚಾಗಲಿದೆ.

Diwali 2024 Remedies Donate worship according to zodiac signs on October 31

ಮಕರ ರಾಶಿ

ದೀಪಾವಳಿಯಂದು ಹಣವನ್ನು ಪಡೆಯಲು, ಖಾಲಿ ಮಡಕೆಯಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಹೂವು ಹಾಕಿ, ಬುಧವಾರದಂದು ವೃದ್ಧರಿಗೆ ಸೇವೆ ಸಲ್ಲಿಸುವುದರಿಂದ ನಿಮಗೆ ಲಾಭವಾಗುತ್ತದೆ. ಇದಲ್ಲದೆ ಲಕ್ಷ್ಮಿಯನ್ನು ಪೂಜಿಸುವಾಗ ಕಮಲದ ಹೂವು, ಗುಲಾಬಿ ಹೂವು, ದಾಳಿಂಬೆ ಮತ್ತು ಬಿಳಿ ಎಳ್ಳಿನೊಂದಿಗೆ ಪೂಜಿಸುವುದರಿಂದ ಸಂತೋಷ ಹೆಚ್ಚಾಗಲಿದೆ.

Diwali 2024 Remedies Donate worship according to zodiac signs on October 31

ಕುಂಭ ರಾಶಿ

ದೀಪಾವಳಿಯಂದು ಕುಂಭ ರಾಶಿಯವರು ತರಕಾರಿಗಳು ಮತ್ತು ಅಕ್ಕಿಯನ್ನು ದಾನ ಮಾಡಬೇಕು. ಆಲದ ಬೇರುಗಳಿಗೆ ಬೆಲ್ಲವನ್ನು ಬೆರೆಸಿದ ಹಾಲನ್ನು ಅರ್ಪಿಸಬೇಕು. ಇದರಿಂದ ನೀವು ಎಲ್ಲಾ ರೀತಿಯ ಲಾಭವನ್ನು ಪಡೆಯುತ್ತೀರಿ. ಲಕ್ಷ್ಮಿ ಪೂಜೆಯಲ್ಲಿ ಶಮಿ ಬೇರು, ದವಸ ಧಾನ್ಯಗಳು ಹಾಗೂ ಕಮಲದ ಹೂವಿನಿಂದ ಪೂಜಿಸಿ. ಇದರಿಂದ ಸಂತೋಷ ಹೆಚ್ಚಾಗಲಿದೆ.

Diwali 2024 Remedies Donate worship according to zodiac signs on October 31

ಮೀನ ರಾಶಿ

ದೀಪಾವಳಿಯಂದು ಬೆಳ್ಳಿಯ ಪೆಟ್ಟಿಗೆಯಲ್ಲಿ ಅರಿಶಿಣ, ಕುಂಕುಮವನ್ನು ಇರಿಸಿ. ಆದರೆ ವರ್ಷವಿಡೀ ಪೆಟ್ಟಿಗೆಯನ್ನು ತೆರೆಯಬೇಡಿ. ಲಕ್ಷ್ಮಿಯನ್ನು ಪೂಜಿಸುವಾಗ ಗುಲಾಬಿ ಹೂವುಗಳು, ಗುಲಾಬಿ ಹೂವು, ದಾಳಿಂಬೆ, ಕಮಲದ ಎಲೆಗಳು ಮತ್ತು ಅಕ್ಕಿಯನ್ನು ಬಳಸಿ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+