ಶುಕ್ರನಿಂದ ಸೃಷ್ಟಿಯಾಗುವ ದಾನ ರಾಜಯೋಗ: ಮೇ 30 ರಿಂದ ಈ 3 ರಾಶಿಗಳಿಗೆ ಹಣ ಮಳೆ..!

ವೈದಿಕ ಜ್ಯೋತಿಷ್ಯದಲ್ಲಿ ಶುಕ್ರ ಗ್ರಹವನ್ನು ಸೌಂದರ್ಯ, ಐಷಾರಾಮಿ, ಪ್ರೀತಿ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಶುಕ್ರ ಗ್ರಹ ಸುಮಾರು 30 ರಿಂದ 36 ದಿನಗಳವರೆಗೆ ಒಂದು ರಾಶಿಯಲ್ಲಿ ಇರುತ್ತದೆ. ಹೀಗೆ ಪ್ರತಿ ತಿಂಗಳು ಶುಕ್ರ ಗ್ರಹ ರಾಶಿಯನ್ನು ಬದಲಾಯಿಸುತ್ತದೆ.

ಈ ಶುಕ್ರ ಗ್ರಹ ವೃಷಭ ಮತ್ತು ತುಲಾ ರಾಶಿಯ ಅಧಿಪತಿ. ಸದ್ಯ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದೆ. ಮೇ 30, 2023 ರಂದು ರಾತ್ರಿ 07.39 ಕ್ಕೆ ಶುಕ್ರ ಗ್ರಹ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರನು ಕರ್ಕಾಟಕಕ್ಕೆ ಪ್ರವೇಶಿಸುವುದರಿಂದ ರಾಜಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಗ್ರಹ 1, 4, 7 ಮತ್ತು 10 ನೇ ಮನೆಯಲ್ಲಿದ್ದಾಗ ಅಥವಾ ಜಾತಕದಲ್ಲಿ ತುಲಾ ಮತ್ತು ಮೀನದಲ್ಲಿದ್ದಾಗ ರಾಜಯೋಗವು ರೂಪುಗೊಳ್ಳುತ್ತದೆ.

ಶುಕ್ರ ಗ್ರಹ ಸೃಷ್ಟಿಸಿದ ದಾನ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, 3 ರಾಶಿಯ ಜನರು ಈ ರಾಜಯೋಗದಿಂದ ಅಪಾರ ಆರ್ಥಿಕ ಲಾಭ ಮತ್ತು ಅದೃಷ್ಟವನ್ನು ಪಡೆಯುತ್ತಾರೆ. ಈಗ ಆ ರಾಶಿಯವರು ಯಾರೆಂದು ನೋಡೋಣ.

Dhana Rajayoga: Dhana Rajayoga created by Venus

ಮೇಷ ರಾಶಿ

ಮೇ 30ರಂದು ಶುಕ್ರ ಗ್ರಹ ಮೇಷ ರಾಶಿಯ 4 ನೇ ಮನೆಗೆ ಸಾಗುತ್ತದೆ. ಇದುವರೆಗೆ ಅವ್ಯವಸ್ಥೆಯಿಂದ ಕೂಡಿದ್ದ ಮೇಷ ರಾಶಿಯ ಕುಟುಂಬಕ್ಕೆ ಇದರಿಂದ ಶಾಂತಿ ಸಿಗಲಿದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಈ ಮೇಷ ರಾಶಿಯವರು ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಿದರೆ, ಸಂಬಂಧಗಳು ಮಧುರವಾಗಿರುತ್ತದೆ.

Dhana Rajayoga: Dhana Rajayoga created by Venus

ಮಿಥುನ ರಾಶಿ

ಶುಕ್ರ ಗ್ರಹ ಮಿಥುನ ರಾಶಿಯ 2 ನೇ ಮನೆಗೆ ಸಾಗುತ್ತಾನೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ಆರ್ಥಿಕ ಪ್ರಯೋಜನಗಳು ಲಭಿಸಲಿವೆ. ವಂಶಪಾರಂಪರ್ಯವಾಗಿ ವ್ಯಾಪಾರ ಮಾಡುತ್ತಿರುವವರು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ನೀವು ಜಂಟಿ ವ್ಯವಹಾರವನ್ನು ಮಾಡಿದರೆ, ನಿಮ್ಮ ಪಾಲುದಾರರೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ. ವಿಶೇಷವಾಗಿ ಪ್ರಣಯ ಸಂಬಂಧಗಳಲ್ಲಿ ಅನ್ಯೋನ್ಯತೆ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ದುಡಿಯುವ ಜನರಿಗೆ ಈ ಅವಧಿಯಲ್ಲಿ ಗಳಿಕೆ ಹೆಚ್ಚಾಗುತ್ತದೆ.

Dhana Rajayoga: Dhana Rajayoga created by Venus

ಮಕರ ರಾಶಿ

ಶುಕ್ರ ಗ್ರಹ ಮೇ 30ರಂದು ಮಕರ ರಾಶಿಯ 7 ನೇ ಮನೆಗೆ ಸಾಗುತ್ತಾನೆ. ಇದರಿಂದ ಮಕರ ರಾಶಿಯವರ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಮತ್ತು ಪ್ರೀತಿ ಹೆಚ್ಚುತ್ತದೆ. ನಿಮ್ಮ ಸಂಗಾತಿಯೊಂದಿಗೆ ಇಲ್ಲಿಯವರೆಗೆ ನಿಮಗೆ ಸಮಸ್ಯೆ ಇದ್ದರೆ, ನಿಮ್ಮ ಸಂಬಂಧ ಇಂದಿನಿಂದ ಗಟ್ಟಿಯಾಗುತ್ತದೆ. ಶುಕ್ರನು ಕರ್ಕಾಟಕ ರಾಶಿಯ ಲಗ್ನ ಮನೆಯಲ್ಲಿ ಇರುವುದರಿಂದ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಉದ್ಯೋಗಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಕಚೇರಿಯಲ್ಲಿ ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ. ಇದರಿಂದ ಕೆಲಸದ ಸ್ಥಳದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+