• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಸರಾ ವಿಶೇಷ: ಹನ್ನೆರಡು ರಾಶಿಗಳ ಶುಭ, ಅಶುಭಗಳ ಜ್ಯೋತಿಷ್ಯ ಫಲಾಫಲ

By ಸುದರ್ಶನ ರಾವ್
|
Google Oneindia Kannada News

ಇನ್ನೇನು ಎರಡು ದಿನಗಳಲ್ಲಿ ವಿಜಯದಶಮಿ ಹಬ್ಬದ ಮೂಲಕ ದಸರಾ ಸಂಪನ್ನಗೊಳ್ಳಲಿದೆ. ದಸರಾ ನಂತರದ ದಿನಗಳಲ್ಲಿ ಕೆಲವೊಂದು ರಾಶಿಗಳ ಗ್ರಹಗತಿ ಚೆನ್ನಾಗಿ ಇಲ್ಲದಿರುವುದರಿಂದ ಜಾಗ್ರತೆಯಿಂದ ಇರುವುದು ಉತ್ತಮ ಎಂದು ಖ್ಯಾತ ಜ್ಯೋತಿಷಿ ಸಚಿನ್ ಸಿಕ್ಕಾ ಹೇಳಿದ್ದಾರೆ.

ವಿಜಯದಶಮಿಯ ದಿನದಂದು ಹಲವು ರಾಶಿಗಳ ಸಂಯೋಗದಿಂದಾಗಿ ಕೆಲವು ರಾಶಿಗಳಿಗೆ ಶುಭ, ಇನ್ನಷ್ಟು ರಾಶಿಗಳಿಗೆ ಅಶುಭವಾಗಲಿದೆ. ವಿಜಯದಶಮಿಯ ದಿನ ಸತ್ಯಕ್ಕೆ ಜಯ ಸಿಕ್ಕ ದಿನ ಎಂದು ಹೇಳಲಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ.

 'ಸೂತ್ರಧಾರಿ ಪಟ್ಟ ಅಳಿಯುತ್ತದೆ': ಶಿವಮೊಗ್ಗದಲ್ಲಿ ಮತ್ತೆ ಕೋಡಿಶ್ರೀಗಳ ಭವಿಷ್ಯ 'ಸೂತ್ರಧಾರಿ ಪಟ್ಟ ಅಳಿಯುತ್ತದೆ': ಶಿವಮೊಗ್ಗದಲ್ಲಿ ಮತ್ತೆ ಕೋಡಿಶ್ರೀಗಳ ಭವಿಷ್ಯ

ವಿಜಯದಶಮಿ ದಿನದಂದು ಯಾವುದೇ ಒಳ್ಳೆಯ ಕೆಲಸವನ್ನು ಮಾಡಲು ದಿನ/ಮಹೂರ್ತ ನೋಡಬೇಕಾಗಿಲ್ಲ, ಯಾಕೆಂದರೆ ಈ ದಿನದಂದು ಯಾವುದೇ ಕೆಲಸ ಆರಂಭಿಸಿದರೆ ಅದಕ್ಕೆ ವಿಜಯ ಸಿಗುತ್ತದೆ ಎಂದೇ ಅರ್ಥ.

ಈ ದಸರಾ ವೇಳೆ ಹನ್ನೆರಡು ರಾಶಿಗಳ ಮೇಲೆ ಗ್ರಹಗಳ ಸಂಯೋಗ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದರ ಬಗ್ಗೆ ಜ್ಯೋತಿಷಿ ಸಚಿನ್ ಸಿಕ್ಕಾ ವಿವರಿಸಿದ್ದಾರೆ. ಅದರ ಸಂಕ್ಷಿಪ್ತ ವಿವರಣೆ ಹೀಗಿದೆ"

ಆಗಸ್ಟ್‌ 2021ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?ಆಗಸ್ಟ್‌ 2021ರ ಮಾಸ ಭವಿಷ್ಯ, ಯಾವ ರಾಶಿಗೆ ಏನು ಫಲ?

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಮೇಷ ಮತ್ತು ವೃಷಭ

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಮೇಷ ಮತ್ತು ವೃಷಭ

ಮೇಷ: ಗಜಕೇಸರಿ ಯೋಗ ಇರುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ. ಸಂಸಾರದಲ್ಲಿ ತಾಪತ್ರಯ ಇಲ್ಲದೇ ಇರುವುದು, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ನೌಕರಿಯಲ್ಲಿ ಇರುವವರಿಗೆ ಭಡ್ತಿ ಸಿಗಲಿದೆ. ದಸರಾ ಈ ರಾಶಿಯವರಿಗೆ ಶುಭ ಫಲವನ್ನು ನೀಡಲಿದೆ.

ವೃಷಭ: ಈ ರಾಶಿಯವರಿಗೂ ಶುಭ ಫಲ ಸಿಗಲಿದೆ, ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವುದು, ಉದ್ಯೋಗದಲ್ಲಿ ಇರುವ ಒತ್ತಡ ಕಮ್ಮಿಯಾಗಲಿದೆ. ಗುರುಗಳ ಪ್ರಾರ್ಥನೆಯಿಂದ ಇನ್ನಷ್ಟು ಮನೆಯಲ್ಲಿ ಮತ್ತು ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದ್ದು, ಮನಃಶಾಂತಿಯೂ ಇರಲಿದೆ.

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಮಿಥುನ ಮತ್ತು ಕರ್ಕಾಟಕ

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಮಿಥುನ ಮತ್ತು ಕರ್ಕಾಟಕ

ಮಿಥುನ: ಹಲವು ದಿನಗಳಿಂದ ನಿಂತು ಹೋಗಿರುವ ಕೆಲಸವು ಪೂರ್ಣಗೊಳ್ಳಲಿದೆ, ಧನಾಗಮನ ಆಗಲಿದೆ. ಕೆಲಸದ ಜಾಗದಲ್ಲೂ ನೆಮ್ಮದಿ ಇರಲಿದೆ. ಹೊಸ ಬದಲಾವಣೆಗೆ ಇದು ಸೂಕ್ತ ಸಮಯ. ಕೆಲಸದ ಮೇಲೆ ಗಮನಕೊಟ್ಟು, ಅನಾವಶ್ಯಕವಾಗಿ ಯಾವುದೇ ಕೆಲಸಕ್ಕೆ ಸುಮ್ಮನೆ ಮಧ್ಯಪ್ರವೇಶಿಸಬಾರದು. ಸಣ್ಣಸಣ್ಣ ತಪ್ಪುಗಳನ್ನು ಮಾಡದೇ ಇದ್ದರೆ, ವೈವಾಹಿಕ ಜೀವನವೂ ಉತ್ತಮವಾಗಿರಲಿದೆ.

ಕರ್ಕಾಟಕ: ಈ ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದೆ. ಆರ್ಥಿಕ ಸಂಕಷ್ಟ ನಿಧಾನವಾಗಿ ದೂರವಾಗಲಿದೆ. ಸಮಾಜದಲ್ಲಿ ಉತ್ತಮ ಹೆಸರನ್ನು ಪಡೆಯಲು ಸದಾವಕಾಶ ಸಿಗಲಿದೆ. ಹೊಸ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆಧ್ಯಾತ್ಮಕದತ್ತ ಒಲವು ಹೆಚ್ಚಾಗಲಿದೆ. ಹಣ ಸಂಪಾದಿಸಲು ಅತ್ಯಂತ ಸೂಕ್ತ ಸಮಯ ಇದಾಗಿದೆ. ವೈವಾಹಿಕ ಜೀವನದಲ್ಲೂ ಯಾವುದೇ ತೊಂದರೆಯಿರುವುದಿಲ್ಲ.

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಸಿಂಹ ಮತ್ತು ಕನ್ಯಾ

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಸಿಂಹ ಮತ್ತು ಕನ್ಯಾ

ಸಿಂಹ: ಬಹಳ ದಿನಗಳಿಂದ ಕಾಯುತ್ತಿರುವ ಹಣವು ಕೈಸೇರಲಿದೆ. ನೆಮ್ಮದಿ, ಸುಃಖವನ್ನು ಕಾಣಬಹುದಾಗಿದೆ. ಊಟದ ವಿಚಾರದಲ್ಲಿ ಜಾಗ್ರತೆ ವಹಿಸುವುದು ಸೂಕ್ತ. ಶಾರೀರಿಕವಾಗಿ ಕೆಲವೊಂದು ಕಷ್ಟವನ್ನು ಎದುರಿಸಬೇಕಾಗಿ ಬರಬಹುದು. ಇದರಿಂದಾಗಿ, ಊಟ ಮತ್ತು ನಿದ್ದೆಯ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇರಬೇಕಾಗಬಹುದು.

ಕನ್ಯಾ: ಹೊಸ ಕೆಲಸದ ಪ್ರಯತ್ನದಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ನೌಕರಿಯಲ್ಲಿ ಭಡ್ತಿ, ಆರ್ಥಿಕವಾಗಿಯೂ ಸುಧಾರಣೆ, ಪತಿ ಪತ್ನಿಯ ನಡುವೆ ಕೌಟುಂಬಿಕ ಹೊಂದಾಣಿಕೆ ಚೆನ್ನಾಗಿರಲಿದೆ. ಸಂತಾನ ಸಮಸ್ಯೆ ಇದ್ದವರಿಗೆ ಶುಭವಾಗಲಿದೆ. ನೆಮ್ಮದಿಯಿಂದ ಜೀವನ ನಡೆಯಲಿದೆ.

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ತುಲಾ ಮತ್ತು ಧನು

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ತುಲಾ ಮತ್ತು ಧನು

ತುಲಾ: ಅನಾವಶ್ಯಕವಾಗಿ ದುಡ್ಡು ಪೋಲಾಗಲಿದೆ, ಈ ಬಗ್ಗೆ ಜಾಗ್ರತೆಯಿಂದ ಇರುವುದು ಸೂಕ್ತ. ನೌಕರಿಯಲ್ಲಿ ಕಿರಿಕಿರಿ ಇರಲಿದೆ, ಹೆಚ್ಚಿನ ಒತ್ತಡದಿಂದಾಗಿ ಕೆಲಸದ ಅವಧಿಯೂ ಹೆಚ್ಚಾಗಲಿದೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಈ ಅವಧಿಯಲ್ಲಿ ಉತ್ತಮ.

ಧನು: ಈ ಅವಧಿಯಲ್ಲಿ ಉದ್ಯೋಗದಲ್ಲಿ ಪದೋನ್ನತಿ ಸಿಗಲಿದೆ, ನಿಂತು ಹೋಗಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಯಾವುದೇ ವ್ಯವಹಾರವನ್ನು ಶಾಂತ ಮನಸ್ಸಿನಿಂದ ಮಾಡುವುದು, ಸಿಟ್ಟಿನಿಂದ ಕೆಲಸ ಆರಂಭಿಸಿದರೆ, ಮಾತುಕತೆ ನಡೆಸಿದರೆ, ಎಲ್ಲವೂ ಉಲ್ಟಾ ಹೊಡೆಯಲಿದೆ. ಸಾವಧಾನದಿಂದ ಮುಂದುವರಿದರೆ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಲಾಭವಾಗಲಿದೆ.

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ವೃಶ್ಚಿಕ ಮತ್ತು ಮಕರ

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ವೃಶ್ಚಿಕ ಮತ್ತು ಮಕರ

ವೃಶ್ಚಿಕ: ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಆದರೂ, ಹೆಚ್ಚಿನ ಒತ್ತಡವಿರುವ ಕೆಲಸದಿಂದ ದೂರವಿರುವುದು ಸೂಕ್ತ. ಧನಲಾಭವಾಗಲಿದೆ, ಪ್ರಾಮಾಣಿಕತೆಗೆ ಬೆಲೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಏನೂ ತೊಂದರೆಯಿಲ್ಲ, ಅನಾವಶ್ಯಕವಾಗಿ ಮೂಗು ತೂರಿಸುವ ಕೆಲಸದಿಂದ ದೂರವಿರುವುದು ಉತ್ತಮ.

ಮಕರ: ಈ ರಾಶಿಯವರಿಗೆ ಅತ್ಯಂತ ಪ್ರಸಕ್ತವಾದ ಸಮಯ. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಹಾಗೇ ಎಲ್ಲಾ ಕಡೆಯಿಂದ ಲಾಭವಾಗಲಿದೆ. ಅನಾವಶ್ಯಕ ಚಿಂತೆಗೆ ಒಳಗಾಗದೇ, ನಿಶ್ಚಿಂತೆಯಿಂದ ಇರುವುದು ಸೂಕ್ತ. ಸಮಯಕ್ಕೆ ಬೆಲೆಕೊಟ್ಟು ಕೆಲಸ ನಿರ್ವಹಿಸಿದರೆ, ಎಲ್ಲಾ ಕಡೆಯಿಂದ ಶುಭ ಸುದ್ದಿ ಸಿಗಲಿದೆ. ತಂದೆತಾಯಿ ಆಶೀರ್ವಾದವನ್ನು ಪಡೆಯಲು ಮರೆಯದಿರಿ.

 ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಕುಂಭ ಮತ್ತು ಮೀನ

ಹನ್ನೆರಡು ರಾಶಿಗಳ ಶುಭ, ಅಶುಭ ಫಲಾಫಲ - ಕುಂಭ ಮತ್ತು ಮೀನ

ಕುಂಭ: ಹಣ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಖರ್ಚಾಗಲಿದೆ, ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಸೂಕ್ತ. ಯಾವುದೇ ಕೆಲಸಕ್ಕೆ ಕೈಹಾಕಿದರೂ, ಸೂಕ್ತವಾದ ಯೋಜನೆಯನ್ನು ಹಾಕಿ ಕೆಲಸ ಆರಂಭಿಸಿ, ಇಲ್ಲದಿದ್ದರೆ ಹಿನ್ನಡೆಯಾಗಲಿದೆ. ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಿಗಲಿದೆ.

ಮೀನ: ಆರ್ಥಿಕವಾಗಿ ಉತ್ತಮ ಲಾಭವನ್ನು ಈ ಅವಧಿ ತಂದು ಕೊಡಲಿದೆ. ಇತರ ರಾಶಿಯವರಿಗೆ ಹೋಲಿಸಿದರೆ ಮೀನ ರಾಶಿ ನಂಬರ್ ಒನ್ ರಾಶಿಯಾಗಿರಲಿದೆ. ನೌಕರಿಯಲ್ಲ ಬಡ್ತಿ, ಶಿಕ್ಷಣದಲ್ಲೂ ಶುಭ, ಮುಂದಿನ ಕೆಲವು ತಿಂಗಳು, ಪ್ರತೀದಿನವೂ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಸಾಂಸರಿಕವಾಗಿ ನೆಮ್ಮದಿಯನ್ನು ಕಾಣಬಹುದು.

English summary
Dasara 2021 Horoscope in Kannada: Read Vijayadashami Astrological Predictions for 12 zodiac signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X