Daily Horoscope :ಶುಕ್ಷಯೋಗದಿಂದ ಹೆಚ್ಚುವುದು ಈ ರಾಶಿಯವರ ಅದೃಷ್ಟ; ಹೊಸ ಕೆಲಸ ಸಿಗುವುದು, ಧನಲಾಭ

ಇವತ್ತು ಅಶ್ವಿನಿ ಕೃಷ್ಣ ಪಕ್ಷದ ತ್ರಯೋದಶಿ ತಿಥಿ ರಾತ್ರಿ 10.17 ವರೆಗೆ ಇರುತ್ತದೆ. ನಂತರ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಪೂರ್ವಾಫಲ್ಗುಣಿ ನಕ್ಷತ್ರವು ರಾತ್ರಿ 9.20 ರವರೆಗೆ ಇರುವುದು. ನಂತರ ಉತ್ತರಾಫಲ್ಗುಣಿ ನಕ್ಷತ್ರವು ಪ್ರಾರಂಭವಾಗುತ್ತದೆ.ಇವತ್ತು ಶುಕ್ಲ ಯೋಗವು 12.57 ರವರೆಗೆ ಇರುತ್ತದೆ.

ಮೇಷ ರಾಶಿ (Aries)

ಹೊಸ ವ್ಯವಹಾರ ಶುರು ಮಾಡುವ ಯೋಚನೆ ಬರಬಹುದು. ಮಾಧ್ಯಮ ಮತ್ತು ಸಂವಹನ ವಲಯದಲ್ಲಿರುವವರಿಗೆ ಉತ್ತಮ ಅವಕಾಶ ಸಿಗುವುದು. ಯಾವುದೇ ವಿಚಾರವಿರಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹೊಸ ಅವಕಾಶ ಸಿಗುವುದು. ಸಂಗಾತಿಯಿಂದ ಪ್ರೀತಿ, ಗೌರವ ಸಿಗುವುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

Today Rashi Bhavishya October 8 Daily Horoscope Zodiac Predictions Lucky Number Colour of all signs

ವೃಷಭ ರಾಶಿ (Taurus)

ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವದು. ಕೆಲವು ಹೊಸ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು. ಅದೃಷ್ಟ ಬಾಗಿಲು ತೆರೆಯುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕುಟುಂಬ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುವುದು. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ.

ಮಿಥುನ ರಾಶಿ (Gemini)

ಆದಾಯದ ಮೂಲ ಹೆಚ್ಚಾಗುವುದು. ವ್ಯಾಪಾರ ಚಟುವಟಿಕೆ ಹೆಚ್ಚಾಗುವುದು. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಇವತ್ತು ಶುಭವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಆದಾಯ ಹೆಚ್ಚಾಗುವುದು. ಆರೋಗ್ಯ ಚೆನ್ನಾಗಿರುವುದು.

ಕಟಕ ರಾಶಿ (Cancer)

ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು. ನ್ಯಾಯಾಲಯದ ಪ್ರಕರಣ ಅಥವಾ ಕಾನೂನು ವಿವಾದದ ತೀರ್ಪು ನಿಮ್ಮ ಪರವಾಗಿ ಬರುವುದು. ಕೆಲಸದ ವಾತಾವರಣದಲ್ಲಿ ಸಂತೋಷ ಮನೆ ಮಾಡುವುದು. ಕುಟುಂಬದೊಂದಿಗೆ ಪ್ರವಾಸ ಹೋಗುವಿರಿ. ಹಣಕಾಸಿನ ಸ್ಥಿತಿ ಸುಧಾರಿಸುವುದು.

ಸಿಂಹ ರಾಶಿ (Leo)

ವ್ಯಾಪಾರಕ್ಕೆ ಉತ್ತಮ ದಿನ. ವ್ಯಾಪಾರ ಪ್ರಯಾಣದಿಂದ ಉತ್ತಮ ಲಾಭವಾಗುವುದು.
ಕಚೇರಿಯಲ್ಲಿ ಮಹತ್ವದ ಜವಾಬ್ದಾರಿ ಸಿಗುವುದು. ಸಾಮರ್ಥ್ಯ ಸಾಬೀತುಪಡಿಸಲು ಪೂರ್ಣ ಅವಕಾಶ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುವುದು. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದು. ಆರ್ಥಿಕ ಪರಿಸ್ಥಿತಿ ಸಾಕಷ್ಟು ಬಲವಾಗಿರುವುದು.

ಕನ್ಯಾರಾಶಿ (Virgo)

ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ತುಲಾ ರಾಶಿ (Libra)

ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭವಾಗುವುದು. ಇವತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಗೌರವ ಹೆಚ್ಚಾಗುತ್ತದೆ. ಅವಿವಾಹಿತರ ಮದುವೆ ಮಾತುಕತೆ ನಡೆಯುವುದು. ಇವತ್ತಿನ ಖರ್ಚು ಹೆಚ್ಚಾಗಬಹುದು. ಆರೋಗ್ಯ ಸಾಮಾನ್ಯವಾಗಿರಲಿದೆ.

ವೃಶ್ಚಿಕ ರಾಶಿ (Scorpio)

ಹಿಂದೆ ಮಾಡಿರುವ ಹೂಡಿಕೆ ಇವತ್ತು ಲಾಭ ತರುವುದು. ವ್ಯವಹಾರದಲ್ಲಿ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗುವುದು. ಕೆಲಸದ ಹೊರೆ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ವೈವಾಹಿಕ ಜೀವನದಲ್ಲಿನ ಸಂತೋಷ ಹೆಚ್ಚಾಗುವುದು. ಕುಟುಂಬದಲ್ಲಿ ಶಾಂತಿ ನೆಲೆಯಾಗುವುದು. ಹನದ ಲಾಭ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನು ರಾಶಿ (Sagittarius)

ಇವತ್ತು ವ್ಯವಹಾರದಲ್ಲಿ ಸ್ವಲ್ಪ ಹಿನ್ನೆಡೆಯಾಗಬಹುದು. ಆದಷ್ಟು ಜಾಗರೂಕರಾಗಿರಿ. ಹೂಡಿಕೆಗೆ ಇವತ್ತು ಸರಿಯಾದ ದಿನವಲ್ಲ. ಕೆಲಸದ ಒತ್ತಡ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಸಿಗುವುದು. ಕೌಟುಂಬಿಕ ಪರಿಸ್ಥಿತಿ ಉತ್ತಮವಾಗಿರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.

ಮಕರ ರಾಶಿ (Capricorn)

ವ್ಯವಹಾರದಲ್ಲಿರುವವರಿಗೆ ಹೆಚ್ಚಿನ ಲಾಭವಾಗುವುದು. ಹೂಡಿಕೆ ಮಾಡಿದ ಹಣದಿಂದ ಲಾಭವಾಗುವುದು. ಹೊಸ ಕೆಲಸ ಸಿಗುವುದು. ಇವತ್ತು ದಿನ ಸಂತೋಷದಿಂದ ಕೂಡಿರುವುದು. ಕುಟುಂಬ ಮತ್ತು ಸಂಗಾತಿ ಬೆಂಬಲ ಸಿಗುವುದು. ಬಂಪರ್ ಲಾಭವಾಗುವ ದಿನವಾಗುವುದು. ಹೂಡಿಕೆಗಳಿಂದ ಬರುವ ಆದಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು.

ಕುಂಭ ರಾಶಿ (Aquarius)

ಹಠಾತ್ ಆರ್ಥಿಕ ಲಾಭವಾಗುವುದು. ವಿದೇಶ ಪ್ರಯಾಣಕ್ಕೆ ಅವಕಾಶವಿರುವುದು.
ಸಂಗಾತಿಯೊಂದಿಗೆ ಸಂತೋಷಕರ ಸಮಯ ಕಳೆಯುವಿರಿ. ಮನೆಯ ಖರ್ಚು ಹೆಚ್ಚಾಗುವುದು. ದೇವಸ್ಥಾನಕ್ಕೆ ಹೋಗುವಿರಿ. ಹಣದ ಸಮಸ್ಯೆಗೆ ಪರಿಹಾರ ಸಿಗುವುದು.

ಮೀನ ರಾಶಿ (Pisces)

ವ್ಯವಹಾರ ವಿಸ್ತರಿಸುವ ಹೊಸ ಯೋಜನೆ ಯಶಸ್ವಿಯಾಗುವುದು. ವಿವಾದ ಅಥವಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸಿ. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಇಂದಿನ ದಿನ ನಿಮಗೆ ಹೆಚ್ಚು ಅನುಕೂಲಕರವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+