Daily Horoscope October 2: ಈ ರಾಶಿಯವರಿಗೆ ಒಲಿಯುವಳು ಲಕ್ಷ್ಮೀ, ವಿದೇಶ ಪ್ರಯಾಣ ಯೋಗ ದ್ವಾದಶ ರಾಶಿಗಳ ನಿತ್ಯ ಭವಿಷ್ಯ
Daily Horoscope October 2: ಇವತ್ತು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿ ಬೆಳಿಗ್ಗೆ 10.17 ರವರೆಗೆ ಇರುವುದು. ನಂತರ ಸಪ್ತಮಿ ತಿಥಿ ಪ್ರಾರಂಭವಾಗುವುದು. ಮೃಗಶಿರ ನಕ್ಷತ್ರ ಬೆಳಿಗ್ಗೆ 2.55 ರವರೆಗೆ ಇರುವುದು. ನಂತರ ಆರ್ದ್ರಾ ನಕ್ಷತ್ರ ಪ್ರಾರಂಭವಾಗುವುದು. ಇಂದಿನ ನಿತ್ಯ ಭವಿಷ್ಯ ಹೇಗಿದೆ ನೋಡೋಣ.
ಮೇಷ ರಾಶಿ (Aries)
ಕಚೇರಿಯಲ್ಲಿ ಪರಿಸ್ಥಿತಿ ಸ್ವಲ್ಪ ಪ್ರತಿಕೂಲವಾಗಿರಬಹುದು. ಸಹೋದ್ಯೋಗಿಗಳ ಜೊತೆ ಸಮಸ್ಯೆ ಉಂಟಾದರೆ ಕೋಪವನ್ನು ನಿಯಂತ್ರಿಸಿಕೊಳ್ಳಿ.ಅನುಭವಿ ವ್ಯಕ್ತಿಯ ಸಹಾಯದಿಂದ ಮಗನ ವೃತ್ತಿಜೀವನದ ಸಮಸ್ಯೆ ನಿವಾರಣೆಯಾಗುವುದು. ಕುಟುಂಬ ವಾತಾವರಣ ಶಾಂತವಾಗಿರುವುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.

ವೃಷಭ ರಾಶಿ (taurus)
ಯಾವುದೇ ಸಣ್ಣ ಅಥವಾ ದೊಡ್ಡ ವ್ಯವಹಾರದ ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿರಿ. ಕಷ್ಟಪಟ್ಟು ಕೆಲಸ ಮಾಡಿದರೆ ಲಾಭವಾಗುವುದು. ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಆರ್ಥಿಕ ನಿರ್ಧಾರಗಳು ಲಾಭ ತರುವುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಆರೋಗ್ಯ ಉತ್ತಮವಾಗಿರುವುದು.
ಮಿಥುನ ರಾಶಿ (Gemini)
ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ವ್ಯಾಪಾರ ವಿಸ್ತರಣೆಗೆ ಅವಕಾಶ ಸಿಗುವುದು. ಕಚೇರಿ ಕೆಲಸಗಳು ಸಾಮಾನ್ಯಕ್ಕಿಂತ ಉತ್ತಮವಾಗಿರುವುದು. ಮೇಲಧಿಕಾರಿಗಳು ಕೆಲಸದಿಂದ ತೃಪ್ತರಾಗುತ್ತಾರೆ. ಅತಿಥಿಗಳ ಆಗಮನ ಸಂತೋಷ ತರುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.
ಕಟಕ ರಾಶಿ (cancer)
ವ್ಯವಹಾರಕ್ಕಾಗಿ ವಿದೇಶ ಪ್ರಯಾಣ ಮಾಡುವಿರಿ. ಭವಿಷ್ಯಕ್ಕೆ ಇದು ಲಾಭದಾಯಕವಾಗಿರುವುದು. ಕೆಲಸದಲ್ಲಿ ಮಹತ್ವದ ಜವಾಬ್ದಾರಿ ಸಿಗುವುದು. ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಸಿಗುವುದು. ಆಸೆಗಳು ಈಡೇರುವುದು. ಮನಸ್ಸಿನ ಸಂತೋಷ ಹೆಚ್ಚುವುದು.
ಸಿಂಹ ರಾಶಿ (Leo)
ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಯೋಜನೆಗಳನ್ನು ಪರಿಗಣಿಸುವಾಗ ಎಚ್ಚರಿಕೆಯಿಂದ ಮುಂದುವರಿಯಿರಿ. ಕೆಲಸದ ಬಗ್ಗೆ ಆತಂಕ ಕಾಡುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು. ತಲೆನೋವಿನ ಸಮಸ್ಯೆ ಕಾಡಬಹುದು.
ಕನ್ಯಾರಾಶಿ (Virgo)
ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು. ಕೆಲಸವು ನಿಗದಿತ ಸಮಯಕ್ಕಿಂತ ಮೊದಲೇ ಮುಗಿಯುವುದು. ಕೆಲಸದ ವಾತಾವರಣ ಅನುಕೂಲಕರವಾಗಿರುವುದು. ಮನೆಯ ವಾತಾವರಣ ಸಂತೋಷದಿಂದ ಇರುವುದು.ಹಣ ಗಳಿಸಲು ಈ ದಿನ ಸೂಕ್ತವಾಗಿದೆ. ಆರೋಗ್ಯವು ಅತ್ಯುತ್ತಮವಾಗಿರುವುದು.
ತುಲಾ ರಾಶಿ (libra)
ಹಣಕಾಸಿನ ಸಮಸ್ಯೆ ಪರಿಹಾರವಾಗುವುದು. ಈ ದಿನ ಉತ್ಸಾಹದಿಂದ ಕೂಡಿರುವುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶ ಸಿಗುವುದು. ಹೊಸ ಜವಾಬ್ದಾರಿ ಸಿಗುವುದು. ಕುಟುಂಬ ಜೀವನ ಸಾಮಾನ್ಯವಾಗಿರುವುದು. ಹಣದ ಸ್ಥಿತಿ ಕೂಡಾ ಸಾಮಾನ್ಯವಾಗಿರುವುದು. ಆರೋಗ್ಯ ಚೆನ್ನಾಗಿರುವುದು.
ವೃಶ್ಚಿಕ ರಾಶಿ (Scorpio)
ಭಾವನೆಗಳಿಗೆ ಕಟ್ಟು ಬಿದ್ದು ಯಾವ ನಿರ್ಧಾರವ್ನೂ ತೆಗೆದುಕೊಳ್ಳಬೇಡಿ. ಸಮಯ , ಸಂದರ್ಭ ನಿಮ್ಮ ಪರವಾಗಿರುವುದು. ವ್ಯವಹಾರ ಮುನ್ನಡೆಸಲು ಹಿಂದಿನ ಅನುಭವ ಬಳಸಿಕೊಳ್ಳಿ. ಕಚೇರಿಯಲ್ಲಿ ಮನಸ್ಸಿಗೆ ನೋವುಂಟಾಗುವ ಘಟನೆ ನಡೆಯಬಹುದು. ಮನೆ ಮಂದಿಯ ಜೊತೆ ಸಂತೋಷದ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರುವುದು.
ಧನು ರಾಶಿ (Sagittarius)
ನಿಂತು ಹೋಗಿದ್ದ ಕೆಲಸ ಮತ್ತೆ ಆರಂಭವಾಗುವುದು. ಬೇರೆಯವರಿಗೆ ನೋವಾಗುವ ರೀತಿಯಲ್ಲಿ ಮಾತಾಡಬೇಡಿ. ಸಮಸ್ಯೆಗಳನ್ನು ಮಾತುಕತೆ ಮೂಲಕ ಕುಳಿತು ಬಗೆಹರಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಆರೋಗ್ಯ ಸಾಮಾನ್ಯವಾಗಿರುವುದು.
ಮಕರ ರಾಶಿ (Capricorn)
ವ್ಯಾಪಾರ ವಿಷಯಗಳಿಗೆ ಬಂದಾಗ ಹೊಸ, ಸೃಜನಶೀಲ ವಿಚಾರಗಳು ಮನಸ್ಸಿಗೆ ಖುಷಿ ತರುವುದು. ಹೊಸಬರ ಭೇಟಿಯಿಂದ ವ್ಯವಹಾರಕ್ಕೆ ಪ್ರಯೋಜನವಾಗುವುದು. ಸಂಕೀರ್ಣ ಸಮಸ್ಯೆಗೆ ಪರಿಹಾರ ಸಿಗುವುದು. ಮಾನಸಿಕ ನೆಮ್ಮದಿ ಹೆಚ್ಚಾಗುವುದು. ಈ ದಿನ ಆರ್ಥಿಕವಾಗಿ ಸಾಕಷ್ಟು ಲಾಭದಾಯಕವಾಗಿರುವುದು.
ಕುಂಭ ರಾಶಿ (Aquarius)
ಮಾಡಬೇಕು ಅಂದುಕೊಂಡಿರುವ ಕೆಲಸಗಳು ಸರಾಗವಾಗಿ ಮಾಡಿ ಮುಗಿಯುವುದು. ಸಹೋದ್ಯೋಗಿಗಳ ಬೆಂಬಲ ಸಿಗುವುದು. ವಹಿಸಿರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವಿರಿ. ಕುಟುಂಬದ ವಾತಾವರಣ ಸಂತೋಷದಿಂದ ತುಂಬಿರುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು.
ಮೀನ ರಾಶಿ (Pisces)
ಪ್ರಮುಖ ಕೆಲಸದ ಮೇಲೆ ಗಮನಹರಿಸಿ. ದಾರಿತಪ್ಪಿಸುವ ಮಾತುಗಳು ವದಂತಿಗಳಿಗೆ ಗಮನ ಕೊಡಬೇಡಿ. ದಿನ ಹೊಸ ಉತ್ಸಾಹದಿಂದ ಪ್ರಾರಂಭವಾಗುವುದು. ಕೆಲಸದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಕೆಲಸಗಳು ಸುಲಭವಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುವುದು.


Click it and Unblock the Notifications
