Horoscope Today: ದಿನ ಭವಿಷ್ಯ ಜನವರಿ 22- ಈ ರಾಶಿಯವರು ಓದಿನಲ್ಲಿ ಟಾಪರ್
ಜನವರಿ 22ರಂದು ಗ್ರಹಗಳ ಶುಭ ಯೋಗದಿಂದಾಗಿ ಕೆಲ ರಾಶಿಗಳ ಅದೃಷ್ಟ ಹೊಳೆಯಲಿದೆ. ಈ ದಿನ ಗ್ರಹಗಳ ಸ್ಥಾನ ಕೆಲ ರಾಶಿಯವರಿಗೆ ಉದ್ಯೋಗ, ವ್ಯವಹಾರ, ವೃತ್ತಿ ಮುಂತಾದ ವಿಷಯಗಳಲ್ಲಿ ಪ್ರಯೋಜನ ನೀಡಲಿದೆ. ಕೆಲವು ರಾಶಿಗಳ ಜನರು ಶೀಘ್ರದಲ್ಲೇ ತಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯಲಿದ್ದಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ ಜನವರಿ 22ರಂದು ಯಾವ ರಾಶಿಗಳಿಗೆ ಗಣೇಶನ ಅನುಗ್ರಹ ಸಿಗಲಿದೆ ಹಾಗೂ ಯಾವ ರಾಶಿಯವರು ಈ ದಿನದ ಅದೃಷ್ಟ ರಾಶಿಯವರು ಎಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಜನವರಿ 22 ತುಂಬಾ ಒಳ್ಳೆಯ ದಿನವಾಗಲಿದೆ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಈ ದಿನ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಸುಧಾರಿಸುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಕುಟುಂಬ ಸದಸ್ಯರ ಅಭಿಪ್ರಾಯವನ್ನು ಪಡೆಯಿರಿ. ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರುತ್ತದೆ.

ವೃಷಭ ರಾಶಿ
ಜನವರಿ 22 ವೃಷಭ ರಾಶಿಯವರ ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ. ವ್ಯವಹಾರ ವಿಷಯಗಳಲ್ಲಿ ಜಾಗರೂಕರಾಗಿರಿ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಮಕ್ಕಳು ಅಥವಾ ಶಿಕ್ಷಣದ ಕಾರಣದಿಂದಾಗಿ ನೀವು ಚಿಂತಿತರಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅಲ್ಲದೆ ಈ ರಾಶಿಯವರು ಓದಿನಲ್ಲಿ ಟಾಪರ್ ಆಗಿರುತ್ತಾರೆ. ಈ ದಿನ ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಮಿಥುನ ರಾಶಿ
ಜನವರಿ 22 ಮಿಥುನ ರಾಶಿಯವರಿಗೆ ವಿಶೇಷ ದಿನವಾಗಿರುತ್ತದೆ. ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಭವಿಷ್ಯದಲ್ಲಿ ಯಶಸ್ಸನ್ನು ಸಾಧಿಸಲು ನೀವು ಮಾಡುವ ಯಾವುದೇ ಯೋಜನೆಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುವುದು.
ಕರ್ಕಾಟಕ ರಾಶಿ
ಕರ್ನಾಟಕ ರಾಶಿಯವರಿಗೆ ಈ ದಿನ ಶುಭವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ತಂದೆ ಅಥವಾ ಧಾರ್ಮಿಕ ಗುರುಗಳಿಂದ ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುವುದು. ಬಹುನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಬೆಳಿಗ್ಗೆ ಗಣೇಶ ಮಂತ್ರವನ್ನು ಪಠಿಸಿ. ಸೂರ್ಯನಿಗೆ ನೀರನ್ನು ಅರ್ಪಿಸಿ ಫೂಜಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸಮಯ ಚೆನ್ನಾಗಿರುತ್ತದೆ. ಜನವರಿ 22 ಅದೃಷ್ಟದ ದಿನವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನೀವಂದುಕೊಂಡ ಕೆಲಸಗಳು ಬೇಗ ಮುಗಿಯುತ್ತವೆ. ಮನಸ್ಸಿನಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಕನ್ಯಾ ರಾಶಿ
ಈ ದಿನ ಕನ್ಯಾ ರಾಶಿಯವರ ದಾಂಪತ್ಯ ಜೀವನದಲ್ಲಿ ಒತ್ತಡ ಉಂಟಾಗಬಹುದು. ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಹೆಚ್ಚಳವಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಮುಂದೆ ವಿರೋಧಿಗಳು ಸೋಲುತ್ತಾರೆ. ಮಹಿಳಾ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ನೀವು ಬಡವರಿಗೆ ಊಟ ಹಾಕಿದರೆ, ಈ ದಿನ ಚೆನ್ನಾಗಿರುತ್ತದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಸಮಯ ಅನುಕೂಲಕರವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಂಪತ್ತು ವೃದ್ಧಿಯಾಗಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ಧಾರ್ಮಿಕ ಕೆಲಸ ಮಾಡಲು ನಿಮಗೆ ಅವಕಾಶ ಸಿಗುವುದು. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವರು. ಅಲ್ಲದೆ ಈ ರಾಶಿಯವರು ಓದಿನಲ್ಲಿ ಟಾಪರ್ ಆಗಿರುತ್ತಾರೆ.
ವೃಶ್ಚಿಕ ರಾಶಿ
ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ಮಾಡಿದ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಜೀವನೋಪಾಯಕ್ಕಾಗಿ ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಸರ್ಕಾರದಿಂದ ಹಣದ ಬೆಂಬಲ ದೊರೆಯಲಿದೆ. ಅಲ್ಲದೆ ಈ ರಾಶಿಯವರು ಓದಿನಲ್ಲಿ ಟಾಪರ್ ಆಗಿರುತ್ತಾರೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ಪ್ರಯಾಣದ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತವೆ. ಈ ದಿನ ಗಣೇಶನ ಮಂತ್ರ ಪಠಿಸಿ.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಪ್ರಯೋಜನ ತರಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಬುದ್ಧಿಮತ್ತೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಸಂಬಂಧಗಳು ಉತ್ತಮವಾಗಿರುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯುವಿರಿ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ. ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಮಕರ ರಾಶಿ
ಕೆಲಸದ ಸ್ಥಳದಲ್ಲಿ ಒತ್ತಡದ ವಾತಾವರಣ ಉಂಟಾಗಬಹುದು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಮಗುವಿನ ನಡವಳಿಕೆಯ ಬಗ್ಗೆ ನೀವು ಚಿಂತಿತರಾಗುತ್ತೀರಿ. ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೈಹಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿರಬಹುದು. ಈ ದಿನ ವಿಘ್ನ ವಿನಾಯಕನ್ನು ಭಕ್ತಿಯಿಂದ ಪೂಜಿಸಿ.
ಕುಂಭ ರಾಶಿ
ನಿಮ್ಮ ಕುಟುಂಬದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಜಾಗೃತರಾಗಿರುವುದು ಅಗತ್ಯ. ನಿಮ್ಮ ನೆರೆಹೊರೆಯವರೊಂದಿಗೆ ಜಗಳವಾಡಬೇಡಿ ಅಥವಾ ವಾದ ಮಾಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ವಿಘ್ನ ವಿನಾಯಕನನ್ನು ಪೂಜಿಸಿ. ಹಸಿದವರಿಗೆ ಸನ್ನ ನೀಡಿ, ವಸ್ತ್ರ ದಾನ ಮಾಡಿ, ನೀವು ಮಾಡಿದ ಪೂಣ್ಯದ ಕೆಲಸಗಳು ನಿಮ್ಮನ್ನು ಕೊನೆಯವರೆಗೂ ಕೈ ಹಿಡಿಯುತ್ತವೆ.
ಮೀನ ರಾಶಿ
ಈ ದಿನ ಆಧ್ಯಾತ್ಮಿಕ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸರ್ಕಾರದಿಂದ ಬೆಂಬಲ ಸಿಗಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಪ್ರಯಾಣ ಅಥವಾ ಪ್ರವಾಸದ ಸಾಧ್ಯತೆ ಇದೆ. ನೀರಿಗೆ ಒಂದು ಚಿಟಿಕೆ ಅರಿಶಿನ ಸೇರಿಸಿ ಸ್ನಾನ ಮಾಡಿದರೆ, ನಿಮ್ಮ ದಿನ ಚೆನ್ನಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರು ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications